ಸೇಮ್ ಸೇಮ್ ಬಟ್ ಡಿಫರೆಂಟ್; ಬೆಂಗಳೂರಿನ ಪ್ರಸಿದ್ಧ ಏರಿಯಾದ ವೀಕೆಂಡ್‌ನ ರಾತ್ರಿ ಕತೆ

Published : Jul 05, 2026, 12:16 PM IST
Koramangala

ಸಾರಾಂಶ

ಬೆಂಗಳೂರಿನ ಈ  ಪ್ರದೇಶಗಳು ವೀಕೆಂಡ್‌ಗಳಲ್ಲಿ ರಾತ್ರಿಯಾಗುತ್ತಿದ್ದಂತೆ ಪಬ್‌ಗಳು ಮತ್ತು ಬಣ್ಣಬಣ್ಣದ ಲೈಟ್‌ಗಳಿಂದ ಕಂಗೊಳಿಸುತ್ತವೆ. ಈ ನೈಟ್‌ಲೈಫ್, ಸ್ಟ್ರೀಟ್ ಫುಡ್ ಮತ್ತು ಜನಜಂಗುಳಿಯಿಂದಾಗಿ, ಸಾಮಾಜಿಕ ಮಾಧ್ಯಮಗಳಲ್ಲಿ ಈ ಪ್ರದೇಶವನ್ನು 'ಮಿನಿ ಥೈಲ್ಯಾಂಡ್' ಎಂದು ಕರೆಯಲಾಗುತ್ತಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನ ಕೆಲವು ಪ್ರಮುಖ ಏರಿಯಾಗಳು ಉತ್ತರ ಭಾರತೀಯರು ಮತ್ತು ವಿದೇಶಿಗರಿಂದ ತುಂಬಿ ತುಳುಕುತ್ತಿರುತ್ತವೆ. ಹೊಸ ವರ್ಷ ಆಚರಣೆಗೆ ಬೆಂಗಳೂರಿನ ಬ್ರಿಗೇಡ್ ರೋಡ್, ಎಂಜಿ ರೋಡ್ ಬಳಿ ಸೇರುವ ಕೆಲವು ಜನರು ಕುಡಿದು ತೂರಾಡುತ್ತಾ ಕೆಂಪೇಗೌಡರು ಕಟ್ಟಿದ ಬೆಂಗಳೂರಿನ ಮರ್ಯಾದೆಯನ್ನು ಅಂತರಾಷ್ಟ್ರೀಯಮಟ್ಟದಲ್ಲಿ ಹರಾಜು ಹಾಕುತ್ತಾರೆ. ಇನ್ನು ವೀಕೆಂಡ್‌ಗಳಲ್ಲಿ ಬೆಂಗಳೂರಿನ ಕೆಲವು ಏರಿಯಾಗಳು ಥೈಲ್ಯಾಂಡ್ ರೀತಿ ಬದಲಾಗುತ್ತೆ ಎಂಬ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ.

ಬಣ್ಣ ಬಣ್ಣದ ಲೈಟುಗಳಿಂದ ರಾರಾಜಿಸುವ ರಸ್ತೆಗಳು 

ಬೆಂಗಳೂರಿನ ಕೋರಮಂಗಲದ ಪ್ರಮುಖ ರಸ್ತೆಗಳು ರಾತ್ರಿಯಾಗುತ್ತಿದ್ದಂತೆ ಬಣ್ಣ ಬಣ್ಣದ ಲೈಟುಗಳಿಂದ ರಾರಾಜಿಸುತ್ತಿರುತ್ತವೆ. ಈ ಏರಿಯಾಗಳನ್ನು ನೋಡಿದ ಜನರು, ಇದು ಬೆಂಗಳೂರು ಅಲ್ಲ, ಥೈಲ್ಯಾಂಡ್ ಎಂದು ಕಮೆಂಟ್ ಮಾಡುತ್ತಾರೆ. ಕೋರಮಂಗಲ ಭಾಗದಲ್ಲಿ ಅತಿಹೆಚ್ಚು ಐಟಿ-ಬಿಟಿ ಕಂಪನಿಗಳು ನೆಲೆಸಿವೆ. ಈ ಕಂಪನಿಗಳಲ್ಲಿ ಕೆಲಸ ಮಾಡುವ ಅನ್ಯರಾಜ್ಯದ ಯುವ ಜನತೆ ವೀಕೆಂಡ್ ಎಂಜಾಯ್ ಮಾಡಲು ಇಂದಿರಾ ನಗರ, ಕಮರ್ಷಿಯಲ್ ಸ್ಟ್ರೀಟ್, ಕೋರಮಂಗಲ, ಬ್ರಿಗೇಡ್ ರೇಡ್ ಸೇರಿದಂತೆ ಐಷಾರಾಮಿ ಮಾಲ್‌ಗಳತ್ತ ಮುಖ ಮಾಡುತ್ತಾರೆ.

Money ಇದ್ರೆ ಮಾತ್ರ ಇಲ್ಲಿ Honey

ಈ ಭಾಗದಲ್ಲಿ ಪಬ್‌ಗಳು ಸೇರಿದಂತೆ ಬಾರ್ ಆಂಡ್ ರೆಸ್ಟೊರೆಂಟ್‌ಗಳಿದ್ದು, ವೀಕೆಂಡ್‌ನಲ್ಲಿ ಗ್ರಾಹಕರಿಂದ ತುಂಬಿ ತುಳುಕುತ್ತಿರುತ್ತವೆ. ಥೈಲ್ಯಾಂಡ್‌ನ ರಸ್ತೆಬದಿಯ ಶಾಪಿಂಗ್, ನೈಟ್‌ಲೈಫ್, ಸ್ಟ್ರೀಟ್ ಫುಡ್ ರೀತಿಯಲ್ಲಿ ಇಲ್ಲಿಯ ಬೀದಿಗಳು ಅಲಂಕೃತಗೊಂಡಿರುತ್ತವೆ. ಕೋರಮಂಗಲ ಏರಿಯಾವನ್ನು ಮಿನಿ ಥೈಲ್ಯಾಂಡ್ ಎಂದು ಕರೆಯಲಾಗುತ್ತದೆ. ವೈರಲ್ ಆಗಿರುವ ವಿಡಿಯೋಗಳಿಗೆ ಕಮೆಂಟ್ ಮಾಡಿರುವ ಬಳಕೆದಾರು, Money ಇದ್ರೆ ಮಾತ್ರ ಇಲ್ಲಿ Honey ಸಿಗುತ್ತೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಸಾಮಾನ್ಯವಾಗಿ ವೀಕೆಂಡ್ ದಿನಗಳಲ್ಲಿ ಕೋರಮಂಗಲಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಜನಜಂಗುಳಿಯಿಂದ ಕೂಡಿದ ಪಬ್‌ಗಳು ಮತ್ತು ಜನದಟ್ಟಣೆಯಿಂದ ಇಲ್ಲಿಯ ರಸ್ತೆಗಳು ತುಂಬಿರುತ್ತವೆ. ಲೈವ್ ಮ್ಯೂಸಿಕ್, ಥಾಯ್ ಆಹಾರ, ಫುಡ್‌ ಕೆಫೆ, ರೆಸ್ಟೋರೆಂಟ್‌ಗಳು, ಪಬ್‌ಗಳು ಬ್ಯುಸಿಯಾಗಿರುತ್ತವೆ. ಸೂರ್ಯಾಸ್ತದ ನಂತರ ಕೋರಮಂಗಲದಲ್ಲಿ ಹೊಸ ಲೋಕವೇ ತೆರೆದುಕೊಳ್ಳುತ್ತದೆ.

ಪ್ರತಿಬಾರಿಯೂ ಭಿನ್ನವಾಗಿ ಕಾಣಿಸಿಕೊಳ್ಳುವ ಕೋರಮಂಗಲ

ನೀವು ಎಷ್ಟೇ ಬಾರಿ ಭೇಟಿ ನೀಡಿದರೂ, ಕೋರಮಂಗಲದಲ್ಲಿ ಕಳೆಯುವ ವೀಕೆಂಡ್ ಸಮಯ ಯಾವಾಗಲೂ ಭಿನ್ನವಾಗಿರುತ್ತೆ ಎಂಬುವುದು ಇಲ್ಲಿಗೆ ಬರುವ ಜನರ ಅಭಿಪ್ರಾಯವಾಗಿದೆ. ಆದ್ರೆ ಹಣವಿದ್ದವರಿಗೆ ಮಾತ್ರ ಇಲ್ಲಿ ಎಂಜಾಯ್ ಮಾಡಲು ಸಾಧ್ಯ ಎಂಬುವುದು ಹಲವರ ಮಾತಾಗಿದೆ.

PREV
Read more Articles on
click me!

Recommended Stories

ಅತಿ ಹೆಚ್ಚು ವಾರ್ಷಿಕ ಕೌಟುಂಬಿಕ ಆದಾಯದಲ್ಲಿ ಬೆಂಗಳೂರು ನಂಬರ್ 1: ಖರ್ಚಿನ ಕಥೆಯೇನು?
ಕುಡಿಯುವ ಗುಟುಕು ನೀರಿಗೆ ಕಠಿಣ ನಿಯಮ ಜಾರಿ! ಬೆಂಗಳೂರು ಜನರು ಓದಲೇಬೇಕಾದ ಸ್ಟೋರಿ