ಹೆಸರು ಪ್ರಿಯಾಂಕಾ ಅಲ್ವಾ, ಅವರು ಯಾವಾಗಲು ಕ್ಯಾತೆ ಸಚಿವ, ಒಕೆ ಅಲ್ಲ; ಆರ್ ಅಶೋಕ್ ಟಾಂಗ್

Published : Oct 24, 2026, 04:31 PM IST
R Ashoka Jibe at Priyank Kharge

ಸಾರಾಂಶ

ಆರ್‌ಎಸ್ಎಸ್ ಪಥಸಂಚಲನಕ್ಕೆ ಅನುಮತಿ ಪಡಯಬೇಕು ಅನ್ನೋ ಗೃಹ ಸಚಿವರ ಸೂಚನೆ ಕುರಿತು ಆರ್ ಅಶೋಕ್ ಪ್ರತಿಕ್ರಿಯಿಸಿದ್ದಾರೆ. ಅವನ ಹೆಸರು ಪ್ರಿಯಾಂಕ ಅಲ್ವಾ, ಅವರು ಯಾವಾಗಲು ಖ್ಯಾತೆ, ಒಕೆ ಅಲ್ಲ ಎಂದು ಟಾಂಗ್ ನೀಡಿದ್ದಾರೆ

ಬೆಂಗಳೂರು (ಅ.24) ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಯಾವಗಲೂ ಕ್ಯಾತೆ ಸಚಿವ, ಅವರು ಯಾವತ್ತೂ ಒಕೆ ಅಲ್ಲ ಎಂದು ವಿರೋಧ ಪಕ್ಷ ನಾಯಕ ಆರ್ ಅಶೋಕ್ ಲೇವಡಿ ಮಾಡಿದ್ದಾರೆ. ಆರ್‌ಎಸ್ಎಸ್ ಪಥ ಸಂಚಲನಕ್ಕೆ ಅನುಮತಿ ಪಡೆಯಬೇಕು ಎಂದು ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ಕುರಿತು ವಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯಿಸಿದ್ದಾರೆ. ಅವನ ಹೆಸರು ಪ್ರಿಯಾಂಕಾ ಅಲ್ವಾ ಎಂದು ಪಕ್ಕದಲ್ಲಿದ್ದ ಸಂಸದ ಸುಧಾಕರ್‌ಗೆ ಅಶೋಕ್ ಪ್ರಶ್ನೆ ಮಾಡಿದ್ದಾರೆ. ಬಳಿಕ ಪ್ರಿಯಾಂಕಾ ಯಾವಾಗಲೂ ಕ್ಯಾತೆ, ಯಾವೂದೂ ಒಕೆ ಅಲ್ಲ ಎಂದು ಅಶೋಕ್ ಹೇಳಿದ್ದಾರೆ.

ಬಾಂಗ್ಲಾ ಬಂಧುಗಳ ಉತ್ಸವ ಹಬ್ಬಕ್ಕೆ ಅನುಮತಿ ಪಡೆದಿದ್ರಾ?

ಪ್ರಿಯಾಂಕ್ ಖರ್ಗೆ ತಂದೆ ಗೃಹ ಸಚಿವರಾಗಿದ್ದರೂ ಆರ್‌ಎಸ್ಎಸ್ ಪಥಸಂಚಲನ ಮಾಡಿದೆ. ಆದರೆ ಪ್ರಿಯಾಂಕ್ ಖರ್ಗೆಕ್ಯಾತೆ ತೆಗೆಯದೇ ಯಾವುದೇ ಕೆಲಸ ಮಾಡಿಲ್ಲ ಎಂದು ಆರ್ ಅಶೋಕ್ ಹೇಳಿದ್ದಾರೆ. ನಿಮ್ಮ ಬಾಂಗ್ಲಾದೇಶ ಬಂಧುಗಳಿಗೆ ಉತ್ಸವ ಹಬ್ಬಗಳಿಗೆ ಅನುಮತಿ ಪಡೆದಿದ್ದೀರಾ ಎಂದು ಆರ್ ಅಶೋಕ್ ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ 25 ಸಾವಿರಕ್ಕೂ ಹೆಚ್ಚು ಬಾಂಗ್ಲಾದೇಶಿ ಅಕ್ರಮ ಪ್ರಜೆಗಳಿದ್ದಾರೆ. ಈ ಪೈಕಿ ಎಷ್ಟು ಜರನ್ನು ಕಳುಹಿಸಿದ್ರಿ ಎಂದು ಪ್ರಿಯಾಂಕ್ ಖರ್ಗೆಯನ್ನು ಪ್ರಶ್ನಿಸಿದ್ದಾರೆ. ಆರ್‌ಎಸ್ಎಸ್ 175 ದೇಶದಲ್ಲಿದೆ. ಪ್ರಿಯಾಂಕ್ ಖರ್ಗೆ ಕಲಬುರಗಿ ಬಿಟ್ಟರೆ ಬೇರೆ ಇನ್ನೆಲ್ಲಿದ್ದಾರೆ ಎಂದು ಆರ್ ಅಶೋಕ್ ಪ್ರಶ್ನಿಸಿದ್ದಾರೆ.

ನಾವು ವಿದೇಶ ಯುನಿವರ್ಸಿಟಿಗಳಲ್ಲಿ ಓದಲಿಲ್ಲ. ನಾವು ಜಾಲಹಳ್ಳಿ ಶಾಲೆಯಲ್ಲಿ ಓದಿಕೊಂಡು ಬಂದಿದ್ದೇವೆ. ಹೀಗಾಗಿ ಪ್ರಿಯಾಂಕ್ ಖರ್ಗೆ ನನಗೆ ಹೇಳಿಕೊಡಲಿ, ಯಾವ ರೀತಿ ಅನುಮತಿ ಪತ್ರ ಬರೆಯಬೇಕು ಎಂದು ಹೇಳಿಕೊಡಲಿ. ನಮ್ಮ ರೀತಿಯೇ ನಮ್ಮ ರಾಜ್ಯದ ಜನ ಇದ್ದಾರೆ. ಹೀಗಾಗಿ ಪ್ರಿಯಾಂಕ್ ಖರ್ಗೆ ಹೇಳಿಕೊಡಲಿ ಎಂದು ಆರ್ ಅಶೋಕ್ ಹೇಳಿದ್ದಾರೆ.

ಸುದ್ದಿಗೋಷ್ಠಿ ನಡೆಸಿದ ಆರ್ ಅಶೋಕ್ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ. ಈ ಪೈಕಿ ಕಸದ ಟೆಂಡರ್‌ನಲ್ಲಿ ಅಕ್ರಮ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಆರಂಭದಲ್ಲಿ ಖಾಲಿ ಸೈಟ್ ಮೇಲೆ ತೆರಿಗೆ ಹಾಕಿದ್ದಾರೆ. ಕಸದಿಂದ ಮುಕ್ತಿ ಎಂದು ಘೋಷಣೆ ಮಾಡಿದರು. ಆದರೆ ಇವೆಲ್ಲವೂ ಕಸದಿಂದ ಹಣ ಮಾಡುವ ಸ್ಕೀಮ್ ಆಗಿತ್ತು. 133 ಕೋಟಿ ರೂಪಾಯಿ ಕಸದ ಟೆಂಡರ್ ಮಾಡಲಾಗಿದೆ. ಮುನಿಯಪ್ಪ ಎಂಟರ್‌ಪ್ರೈಸಸ್ ಕಂಪನಿಯನ್ನು ಇದಕ್ಕಾಗಿ ಮಾಡಲಾಗಿದೆ. ಈ ಕಂಪನಿ ಹೆಚ್ಚುವರಿ ಭದ್ರತಾ ಠೇವಣಿ ಹಣ ಪಾವತಿ ಮಾಡಿಲ್ಲ. ಆದರೂ 22-05-2025ರಲ್ಲಿ LOA ಕೊಡಲಾಗಿದೆ ಎಂದು ಆರ್ ಅಶೋಕ್ ಆರೋಪಿಸಿದ್ದಾರೆ.

40 ಪರ್ಸೆಂಟ್ ಕಮಿಷನ್ ಆರೋಪ

12.99 ಕೋಟಿ ರೂಪಾಯಿ ಭದ್ರತಾ ಠೇವಣಿ ಕೊಟಬೇಕಾದ ಕಂಪನಿ ಯಾವುದೇ ಹಣ ನೀಡದೆ ಟೆಂಡರ್ ಪಡೆದುಕೊಂಡಿದೆ. ಹಣಕಾಸು ಇಲಾಖೆ ಈ ಪ್ರಕ್ರಿಯೆಗೆ ಆಕ್ಷೇಪ ವ್ಯಕ್ತಪಡಿಸಿದೆ. ಆದರೂ ಕಂಪನಿ ಪರವಾಗಿ ಹಿತಾಸಕ್ತಿ ವಹಿಸಲಾಗಿದೆ. ನಿಯಮ ಉಲ್ಲಂಘಿಸಿ ಟೆಂಡರ್ ನೀಡಲಾಗಿದೆ. ಟೆಂಡರ್ ಪಡೆಯುವಾಗ ಕಂಪನಿ 10 ಕೋಟಿ ವಾರ್ಷಿಕ ವಹಿವಾಟು ಮಾಡಬೇಕು. ಆದರೆ ಈ‌ಕಂಪನಿ 3.34 ಕೋಟಿ ಮಾತ್ರ ವಹಿವಾಟು ಮಾಡಿದೆ.ಆದರೂ ಆ ಕಂಪನಿಗೆ ಟೆಂಡರ್ ಕೊಡಲಾಗಿದೆ..ಕನಿಷ್ಠ ವಹಿವಾಟು ಮಾಡದ ಕಂಪನಿಗೆ ಹೇಗೆ ಟೆಂಡರ್ ನೀಡಿದ್ರಿ..? ಕಂಪನಿ ಪರವಾಗಿ ಕೆಲಸ ಮಾಡಲಾಗಿದೆ. 40% ಕಮೀಷನ್ ಪಡೆಯಲು ಈ ಟೆಂಡರ್ ಕೊಡಲಾಗಿದೆ ಎಂದು ಆರ್ ಅಶೋಕ್ ಆರೋಪಿಸಿದ್ದಾರೆ.

PREV
Read more Articles on
click me!

Recommended Stories

ಭಾರತದ ವಿದ್ಯುತ್ ಭವಿಷ್ಯದಲ್ಲಿ ಕರ್ನಾಟಕವೇ ಹೈಲೈಟ್‌: ಬೆಂಗಳೂರಿನಲ್ಲಿ Elecrama 2027 ಮೊದಲ ರೋಡ್‌ಶೋ ನಡೆಸಿದ IEEMA
ದರ್ಶನ್ ರಿಲೀಸ್‌ಗೆ ಕೆಲವರು ನಾಟಕ ಮಾಡ್ತಿದ್ದಾರೆ, ವಿಜಯಲಕ್ಷ್ಮಿ ವಿರುದ್ಧವೇ ದೂರು ನೀಡಿದ ನಟ ಧನ್ವೀರ್