
ಬೆಂಗಳೂರು(ಏ.25): ರಾಜ್ಯ ಶಕ್ತಿಸೌಧವಾದ ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಇಫ್ತಾರ್ ಕೂಟ ನಡೆಸದಂತೆ ಶನಿವಾರ ರಾಷ್ಟ್ರ ರಕ್ಷಣಾ ಪಡೆ ಕಾರ್ಯಕರ್ತರು ಪ್ರತಿಭಟನಾ ರಾರಯಲಿ ನಡೆಸಿದರು.
ಹಿಂದೂಪರ ಹೋರಾಟಗಾರ ಪ್ರಶಾಂತ್ ಸಂಬರಗಿ, ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ನಡೆದ ಪ್ರತಿಭಟನಾ ರಾರಯಲಿಯು ಸ್ವಾತಂತ್ರ್ಯ ಉದ್ಯಾನದಿಂದ ಆರಂಭವಾಗಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಿತ್ತು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡರು.
ಇದಕ್ಕೂ ಮುನ್ನ ಮಾತನಾಡಿದ ಪ್ರಶಾಂತ್ ಸಂಬರಗಿ, ‘ಒಂದು ಧರ್ಮ, ಜಾತಿ ಹಬ್ಬಕ್ಕೆ ವಿಧಾನ ಸೌಧದಲ್ಲಿ ಅವಕಾಶವಿಲ್ಲ. ಈ ನಿಟ್ಟಿನಲ್ಲಿ ಇಫ್ತಾರ್ ಕೂಟವನ್ನು ವಿಧಾನಸೌಧದಲ್ಲಿ ಮಾಡಬಾರದು. ಕಾಂಗ್ರೆಸ್‌ನವರು ಹುಟ್ಟು ಹಾಕಿರುವ ಈ ಕೆಟ್ಟಸಂಸ್ಕೃತಿಯನ್ನು ಕಿತ್ತು ಹಾಕಬೇಕು. ಶೀಘ್ರದಲ್ಲಿಯೇ ವಿಧಾನಸೌಧ ಹಾಗೂ ವಿಕಾಸ ಸೌಧದಲ್ಲಿ ಯಾವುದೇ ಕಾರಣಕ್ಕೂ ಇಫ್ತಾರ್ ಕೂಟಕ್ಕೆ ಅನುಮತಿ ಇಲ್ಲ ಎಂದು ರಾಜ್ಯ ಸರ್ಕಾರ ಕೂಡಲೇ ಆದೇಶ ಮಾಡಬೇಕು’ ಎಂದು ಒತ್ತಾಯಿಸಿದರು.
ಸರ್ಕಾರ ರಚನೆಗೆ ನಿತೀಶ್ ಕುಮಾರ್ ಜೊತೆ ರಹಸ್ಯ ಮಾತುಕತೆ ಎಂದ ಆರ್ ಜೆಡಿಯ ತೇಜ್ ಪ್ರತಾಪ್!
ವಿಧಾನಸೌಧದಲ್ಲಿ ಹಲಾಲ್ ಆಹಾರ ಸೇವನೆ ಮಾಡಲು ಅವಕಾಶ ನೀಡಬಾರದು. ಒಂದು ಧರ್ಮದ ಹಬ್ಬಕ್ಕೆ ಊಟ ಹಾಕುವುದಾದರೆ ಎಲ್ಲ ಧರ್ಮದವರ ಹಬ್ಬಕ್ಕೆ ಊಟ ಹಾಕಲಿ. ವಿಧಾನಸೌಧದಲ್ಲಿ ತಿಂಗಳುಗಟ್ಟಲೆ ಹಬ್ಬ ಮಾಡಲಿ. ಮೊದಲನೇ ಹಂತದಲ್ಲಿ ಎಚ್ಚರಿಕೆಯ ಹೋರಾಟ ಮಾಡುತ್ತಿದ್ದು, ಇಫ್ತಾರ್ ಕೂಟ ನಡೆದರೆ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ತೊಡೆ ಮೇಲೆ ಕೂರಿಸಿಕೊಂಡ ಕಾಂಗ್ರೆಸ್:
ಬಿಜೆಪಿ ಆಡಳಿತವಿರುವ ಬೇರೆ ರಾಜ್ಯಗಳಲ್ಲಿ ಸರ್ಕಾರದಿಂದ ಇಫ್ತಾರ್ ಕೂಟ ಹಮ್ಮಿಕೊಳ್ಳುವುದನ್ನು ನಿಲ್ಲಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದಾಗ ಕರೆದು ತೊಡೆಮೇಲೆ ಕೂರಿಸಿಕೊಂಡು ಇಫ್ತಾರ್ ಕೂಟ ಮಾಡುತ್ತಿದ್ದಾರೆ. ಇಂದಿಗೂ ಹಲವೆಡೆ ಕಾಂಗ್ರೆಸ್‌ನಿಂದ ಆಯೋಜಿಸಲಾಗುತ್ತಿದೆ. ಈ ಬಾರಿ ಯಾವುದೇ ಕಾರಣಕ್ಕೂ ವಿಧಾನಸೌಧವನ್ನು ಧರ್ಮದ ಕಾರ್ಯಕ್ರಮಕ್ಕೆ ದುರುಪಯೋಗ ಮಾಡಿಕೊಳ್ಳಬಾರದು ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಸ್ನೇಹಕೂಟ ಕೇವಲ ನಾಟಕ:
ಕಳೆದ ವಾರ ಭರತ್ ಶೆಟ್ಟಿಮತ್ತು ಸಂತೋಷ್ ಭಾರತೀ ಗುರುಜೀ ನೇತೃತ್ವದಲ್ಲಿ ಕೆಲ ಹಿಂದೂ ಸಂಘಟನೆಗಳು ಮುಸ್ಲಿಂ ಮುಖಂಡರೊಂದಿಗೆ ಸ್ನೇಹ ಸಮ್ಮಿಲನ ಮಾಡಿಕೊಂಡಿದ್ದಾರೆ. ಆ ಕಾರ್ಯಕ್ರಮಕ್ಕೆ ತಮಗೂ ಆಹ್ವಾನ ಇತ್ತು. ಆದರೆ, ನಾವು ಎಂಟು ಷರತ್ತುಗಳನ್ನು ಹಾಕಿದ್ದು, ಅವುಗಳನ್ನು ಮುಸ್ಲಿಂ ಮುಖಂಡರು ಒಪ್ಪಿಲ್ಲ, ಹೀಗಾಗಿಯೇ ಹಲವು ಹಿಂದೂ ಸಂಘಟನೆಗಳು ಭಾಗಿಯಾಗಿರಲಿಲ್ಲ. ಸ್ನೇಹಕೂಟ ಅನ್ನೋದು ಕೇವಲ ನಾಟಕವಾಗಿದ್ದು, ಹಿಂದೂ ಮುಸ್ಲಿಂ ಬಾಂಧವರಾಗಲು ಸಾಧ್ಯವಿಲ್ಲ ಎಂದರು.
Shahrukh Khan ಹೇಗಾಗಿದ್ದಾರೆ ನೋಡಿ; ಕಿಂಗ್ ಖಾನ್ ಗುರುತೇ ಸಿಗೋಲ್ಲ!
ಇಂದು ಜೆಡಿಎಸ್‌ನಿಂದ ಇಫ್ತಾರ್ ಕೂಟ- ಕುಮಾರಸ್ವಾಮಿ, ಇಬ್ರಾಹಿಂ ಭಾಗಿ
ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ರಂಜಾನ್ ಭಾಗವಾದ ಇಫ್ತಾರ್ ಕೂಟವನ್ನು ಜೆಡಿಎಸ್ ಪಕ್ಷದಿಂದ ಭಾವೈಕ್ಯತೆಯ ಹಿನ್ನೆಲೆಯಲ್ಲಿ ಮೈಸೂರಿನ ಬನ್ನಿಮಂಟಪದ ಮಿಲನ್ ಫಂಕ್ಷನ್ ಹಾಲ್‌ನಲ್ಲಿ ಏ.24ರ ಸಂಜೆ 6ಕ್ಕೆ ಏರ್ಪಡಿಸಲಾಗಿದೆ ಎಂದು ನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್ ತಿಳಿಸಿದ್ದಾರೆ.
ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಬ್ದುಲ್ ಅಜೀಜ್ ನೇತೃತ್ವದಲ್ಲಿ ಆಯೋಜಿಸುತ್ತಿರುವ ಈ ಇಫ್ತಾರ್ ಕೂಟಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಅಲ್ಪಸಂಖ್ಯಾತರ ಮುಖಂಡರಾದ ಜಫ್ರುಲ್ಲಾ ಖಾನ್, ಜಿಲ್ಲೆಯ ಜೆಡಿಎಸ್ ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು, ಮಾಜಿ ಮೇಯರ್‌ಗಳು, ವಿಧಾನಪರಿಷತ್ ಮಾಜಿ ಸದಸ್ಯರು, ಪಕ್ಷದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.