ಪಾಕಿಸ್ತಾನದ ಜಿಡಿಪಿ ಬೆಂಗಳೂರು ರಸ್ತೆಯಲ್ಲಿ, 10ಕ್ಕೂ ಹೆಚ್ಚು ರೋಲ್ಸ್ ರಾಯ್ಸ್ ಕಾನ್ವೊಯ್ ವಿಡಿಯೋ

Published : Nov 18, 2025, 02:50 PM IST
Rolls Royce in Bengaluru

ಸಾರಾಂಶ

ಪಾಕಿಸ್ತಾನದ ಜಿಡಿಪಿ ಬೆಂಗಳೂರು ರಸ್ತೆಯಲ್ಲಿ, 10ಕ್ಕೂ ಹೆಚ್ಚು ರೋಲ್ಸ್ ರಾಯ್ಸ್ ಕಾನ್ವೊಯ್ ವಿಡಿಯೋ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಭಾರತದ ರಸ್ತೆಯಲ್ಲಿ ನೋಡಿದ ಅತ್ಯಂತ ರಾಯಲ್ ಸಂಚಾರ ಇದು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ನ.18) ಐಟಿ ಕ್ಯಾಪಿಟಲ್ ಎಂದೇ ಹೆಸರಾಗಿರುವ ಬೆಂಗಳೂರಿನಲ್ಲಿ ಐಷಾರಾಮಿತನ, ಶ್ರೀಮಂತಿಕೆಗೆ ಯಾವುದೇ ಕೊರತೆ ಇಲ್ಲ. ಹಲವು ಬಿಲೇನಿಯರ್ ಇದೇ ಬೆಂಗಳೂರಿನವರು. ಮತ್ತೊಂದು ವಿಶೇಷ ಅಂದರೆ ಭಾರತದ ಇತರ ಎಲ್ಲಾ ನಗರಗಳಿಗೆ ಹೋಲಿಸಿದರೆ ಅತೀ ಹೆಚ್ಚು ಸೂಪರ್ ಕಾರುಗಳು ಮಾರಾಟವಾಗುತ್ತಿರುವುದು, ಅತೀ ಹಚ್ಚು ಸೂಪರ್ ಕಾರು ಇರುವ ನಗರ ಬೆಂಗಳೂರು. ಬೆಂಗಳೂರಿನ ಪ್ರತಿ ಬೀದಿಗಳಲ್ಲಿ ಐಷಾರಾಮಿ ಕಾರುಗಳು ಕಾಣ ಸಿಗುತ್ತದ. ಹಲವೆಡೆ ರಸ್ತೆಯಲ್ಲಿ ಕಾರು ಪಾರ್ಕ್ ಮಾಡಿ ದೂಳು ಹಿಡಿದ ಸ್ಥಿತಿಯಲ್ಲೂ ಕಾಣಸಿಗುತ್ತದೆ. ಇದರಲ್ಲಿ ವಿಶೇಷತೆ ಇಲ್ಲ, ಆದರೆ ಇದೀಗ ಬೆಂಗಳೂರಿನ ವಿಡಿಯೋ ಒಂದು ದೇಶ-ವಿದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಸಮಾರು 10ಕ್ಕೂ ಹೆಚ್ಚು ರೋಲ್ಸ್ ರಾಯ್ಸ್ ಕಾರುಗಳು ಪ್ರಮು ವ್ಯಕ್ತಿಯೊಬ್ಬರ ಕಾನ್ವೋಯ್ ರೂಪದಲ್ಲಿ ತೆರಳಿದ ವಿಡಿಯೋ ಇದು. ಮುಕೇಶ್ ಅಂಬಾನಿ ಕಾನ್ವೋಯ್‌ನಲ್ಲಿ ಪೊಲೀಸರು ರೇಂಜ್ ರೋವರ್ ಕಾರು ಬಳಕೆ ಮಾಡಿದ್ದಾರೆ. ಆದರೆ ಇದು ಎಲ್ಲಾ ರೋಲ್ಸ್ ರಾಯ್ಸ್ ಕಾರು. ಹೀಗಾಗಿ ಹಲವರು ಪಾಕಿಸ್ತಾನದ ದೇಶದ ಜಿಡಿಪಿ ಮೌಲ್ಯ ಬೆಂಗಳೂರಿನ ರಸ್ತೆಯಲ್ಲಿದೆ ಎಂದು ಕಮೆಂಟ್ ಮಾಡಿದ್ದಾರೆ.

ವಿವಿಧ ರೋಲ್ಸ್ ರಾಯ್ಸ್ ಕಾರಿನ ಝಲಕ್

ಕರ್ನಾಟಕ ಪೋರ್ಟ್‌ಫೋಲಿಯೋ ಎಕ್ಸ್ ಖಾತೆ ಈ ವಿಡಿಯೋ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಆರಂಭದಲ್ಲಿ ಒಂದು BMW ಕಾರು ತೆರಳಿದರೆ ಬಳಿಕ ಬಂದ ಎಲ್ಲಾ ಕಾರುಗಳು ರೋಲ್ಸ್ ರಾಯ್ಸ್ ಬ್ರ್ಯಾಂಡ್. ಅದರಲ್ಲೂ ರೋಲ್ಸ್ ರಾಯ್ಸ್ ಘೋಸ್ಟ್, ಫ್ಯಾಂಟಮ್, ಕಲ್ಲಿನಾನ್ ಸೇರಿಂತೆ 6 ರಿಂದ 10 ಕೋಟಿ ರೂಪಾಯಿ ಕಾರುಗಳೇ ಇವೆ. ಒಂದರ ಹಿಂದೆ ಒಂದರಂತೆ, ಕಾನ್ವೋಯ್ ತೆರಳುವ ವಿಶೇಷ ರೀತಿಯ ಶೈಲಿಯಲ್ಲಿ ಈ ಕಾರುಗಳು ತೆರಳಿದೆ.

ದುಬಾರಿ ಕಾನ್ವೋಯ್ ವೇಳೆ ಝಿರೋ ಟ್ರಾಫಿಕ್

ಬೆಂಗಳೂರಿನ ಪ್ರಮುಖ ರಸ್ತೆಯಲ್ಲಿ ಈ ಕಾರುಗಳು ಸಾಗಿದೆ. ಈ ವೇಳೆ ಝಿರೋ ಟ್ರಾಫಿಕ್ ಮಾಡಲಾಗಿತ್ತು. ದೃಶ್ಯದಲ್ಲಿ ಕಾರು ಹಾಗೂ ಕಾನ್ವೋಯ್ ತೆರಳುವವರೆಗೆ ಪೊಲೀಸರು ಇತರ ವಾಹನಗಳನ್ನು ತಡೆ ಹಡಿದಿದ್ದರು. ಸುಮಾರು 10ಕ್ಕೂ ಹೆಚ್ಚು ರೋಲ್ಸ್ ರಾಯ್ಸ್ ಕಾರುಗಳು ಅದೇ ಗತ್ತಿನಲ್ಲಿ ತೆರಳಿದೆ.

ಕೇವಲ ಬೆಂಗಳೂರಿನಲ್ಲಿ ಮಾತ್ರ

ಹಲವರು ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ವಾರಾಂತ್ಯದಲ್ಲಿ ಬೆಂಗಳೂರು ಈ ರೀತಿ ಹಲವು ಅಚ್ಚರಿಗಳನ್ನು ನೀಡಲಿದೆ. ಸೂಪರ್ ಕಾರುಗಳ ಸವಾರಿ, ಐಷಾರಾಮಿ ಕಾರುಗಳ ಸವಾರಿ ಮೂಲಕ ದೇಶಾದ್ಯಂತ ಸದ್ದು ಮಾಡುತ್ತದೆ ಎಂದು ಕಮೆಂಟ್ ಮಾಡಿದ್ದಾರೆ. ಸಿನಿಮಾಗಳಲ್ಲಿ ಈ ರೀತಿಯ ಸೀನ್ ಇತ್ತು, ಆದರೆ ರಿಯಲ್ ಲೈಫ್‌ನಲ್ಲಿ ಈ ರೀತಿಯ ಸೀನ್ ನೋಡಿರಲಿಲ್ಲ. ಇದೀಗ ಈ ವಿಡಿಯೋ ನಿಜಕ್ಕೂ ಐಷಾರಾಮಿನತಕ್ಕೆ ಕಿರೀಟ ಇದ್ದಂತೆ ಎಂದು ಕಮೆಂಟ್ ಮಾಡಿದ್ದಾರೆ.

 

 

 

PREV
Read more Articles on
click me!

Recommended Stories

ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ ಟ್ರ್ಯಾಕ್‌ಗೆ ಹಾರಿ ವ್ಯಕ್ತಿ ಆತ್ಮ೧ಹತ್ಯೆ; ನೇರಳೆ ಮಾರ್ಗದಲ್ಲಿ ರೈಲು ಸಂಚಾರಕ್ಕೆ ವ್ಯತ್ಯಯ!
ಬೆಳಗಾವಿ ಅಧಿವೇಶನ: ವಿರೋಧ ಪಕ್ಷಗಳು ಅವಿಶ್ವಾಸ ಮಂಡಿಸಿದರೆ ಕಾಂಗ್ರೆಸ್ ಒಗ್ಗಟ್ಟಿನ ಹೋರಾಟ