ನವರಾತ್ರಿ ಹಬ್ಬದ ಸಂಭ್ರಮ, ಲೋಕಭವನದಲ್ಲಿ ಕನ್ಯಾಪೂಜೆ ನೆರವೇರಿಸಿದ ರಾಜ್ಯಪಾಲ ಡಾ.ಸುಧಾ ಯಾದವ್

Published : Oct 18, 2026, 02:53 PM IST
Dr Sudha Yadav Celebrates Navratri

ಸಾರಾಂಶ

ಬೆಂಗಳೂರಿನ ಗಾಂಧಿನಗರದ ನಾಗಮ್ಮನಗರ ಕೊಳಗೇರಿ ಪ್ರದೇಶದ ಬಾಲಕಿಯರನ್ನು ಲೋಕಭವನಕ್ಕೆ ವಿಶೇಷವಾಗಿ ಆಹ್ವಾನಿಸಿ ರಾಜ್ಯಪಾಲರಾದ ಸುಧಾ ಯಾದವ್, ಮಕ್ಕಳ ಜೊತೆ ಕನ್ಯಾಪೂಜೆ ನೆರವೇರಿಸಿದ್ದಾರೆ.

ಬೆಂಗಳೂರು (ಅ.18) ನವರಾತ್ರಿ ಹಬ್ಬದ ಅಂಗವಾಗಿ, ಬಡ ಹಾಗೂ ನಿರ್ಗತಿಕ ಮಕ್ಕಳೊಂದಿಗೆ ಕನ್ಯಾಪೂಜೆಯನ್ನು ನೆರವೇರಿಸಿದ್ದಾರೆ. ಬಡ ಮಕ್ಕಳ ಜೊತೆ ಕನ್ಯಾಪೂಜೆ ಆಚರಿಸುವ ಇಚ್ಛೆ ವ್ಯಕ್ತಪಡಿಸಿದ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಡಾ. ಸುಧಾ ಯಾದವ್, ಇಂದು ಬೆಂಗಳೂರಿನ ಗಾಂಧಿನಗರದ ನಾಗಮ್ಮನಗರ ಕೊಳಗೇರಿ ಪ್ರದೇಶದ ಬಾಲಕಿಯರನ್ನು ಲೋಕಭವನಕ್ಕೆ ವಿಶೇಷವಾಗಿ ಆಹ್ವಾನಿಸಿ, ಸಾಂಪ್ರದಾಯಿಕವಾಗಿ ಕನ್ಯಾಪೂಜೆಯನ್ನು ನೆರವೇರಿಸಿದರು.

ಮಕ್ಕಳೊಂದಿಗೆ ವಿಶೇಷ ಭೋಜನ

ಈ ಸಂದರ್ಭದಲ್ಲಿ ರಾಜ್ಯಪಾಲರು ಬಾಲಕಿಯರ ಹಣೆಗೆ ತಿಲಕವಿಟ್ಟು, ಭಕ್ತಿಭಾವದಿಂದ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಮಕ್ಕಳೊಂದಿಗೆ ವಿಶೇಷ ಭೋಜನವನ್ನು ಸ್ವೀಕರಿಸಿದ ಅವರು, ಮಕ್ಕಳೊಂದಿಗೆ ಮಗುವಿನಂತೆಯೇ ಬೆರೆತು, ಹರ್ಷದಿಂದ ಸಂವಾದ ನಡೆಸಿದರು. ಇದರಿಂದ ಕಾರ್ಯಕ್ರಮದಲ್ಲಿ ಸಂತೋಷ ಮತ್ತು ಆತ್ಮೀಯತೆಯ ವಾತಾವರಣ ಮೂಡಿತು. ಅಲ್ಲದೆ, ಮಕ್ಕಳಿಗೆ ಶಾಲಾ ಬ್ಯಾಗ್‌ಗಳು, ಪುಸ್ತಕಗಳು ಹಾಗೂ ಇತರ ಲೇಖನ ಸಾಮಗ್ರಿಗಳನ್ನು ಉಡುಗೊರೆಯಾಗಿ ನೀಡಿ, ಅವರ ಉಜ್ವಲ ಭವಿಷ್ಯಕ್ಕಾಗಿ ಆಶೀರ್ವದಿಸಿದರು.

ಮಕ್ಕಳ ಶಿಕ್ಷಣಕ್ಕೆ ಒತ್ತು

ನವರಾತ್ರಿಯ ಪವಿತ್ರ ಸಂದರ್ಭದಲ್ಲಿ ಮಕ್ಕಳೊಂದಿಗೆ ಕನ್ಯಾಪೂಜೆಯನ್ನು ಆಚರಿಸುವ ಮೂಲಕ ರಾಜ್ಯಪಾಲರು ಮಕ್ಕಳ ಮೇಲಿನ ಪ್ರೀತಿ, ಕರುಣೆ ಮತ್ತು ಕಾಳಜಿಯ ಸಂದೇಶವನ್ನು ಸಾರಿದರು. ಮಕ್ಕಳ ಶಿಕ್ಷಣಕ್ಕೆ ಬೆಂಬಲ ನೀಡುವುದು ಹಾಗೂ ಅವರ ಉಜ್ವಲ ಭವಿಷ್ಯಕ್ಕೆ ಪೂರಕ ವಾತಾವರಣ ಕಲ್ಪಿಸುವ ಮಹತ್ವವನ್ನು ಅವರು ಈ ಸಂದರ್ಭದಲ್ಲಿ ಎತ್ತಿಹಿಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಮುಖ್ಯ ಇಂಜಿನಿಯರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹಾಗೂ ರಾಜ್ಯಪಾಲರ ಆಪ್ತ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

PREV
Read more Articles on
click me!

Recommended Stories

ಬೆಂಗಳೂರಲ್ಲಿ ಹೈಟೆನ್ಶನ್ ವಿದ್ಯುತ್ ವೈರ್ ತಗುಲಿ ಇಬ್ಬರು ಮಕ್ಕಳು ಗಂಭೀರ, ಐಸಿಯುವಿನಲ್ಲಿ ಚಿಕಿತ್ಸೆ
Bengaluru: ಕಂಪನಿ ಸೆಕ್ರೆಟರಿ ಕೋರ್ಸ್‌ನಲ್ಲಿ ವೀಣಾಗೆ 16 ಚಿನ್ನ, ಪ್ರಶಸ್ತಿ ಪತ್ರ ವಿತರಿಸಿದ ಅರುಂಧತಿ ನಾಗ್