
ಬೆಂಗಳೂರು: ಕಾಮಗಾರಿಗಳ ಅನುಷ್ಠಾನ ವಿಚಾರದಲ್ಲಿ ಗುತ್ತಿಗೆದಾರರು ಮತ್ತು ಎಂಜಿನಿಯರ್‌ಗಳ ನಡುವೆ ಏನೇನಿದೆಯೋ ಗೊತ್ತಿಲ್ಲ. ಆದರೆ, ನೀವು ಮಾಡುವ ತಪ್ಪುಗಳಿಂದ ನಾವು, ಸರ್ಕಾರ ತಲೆ ತಗ್ಗಿಸಬೇಕು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಸೋಮವಾರ ಹೆಣ್ಣೂರು-ಬಾಗಲೂರು ಮುಖ್ಯ ರಸ್ತೆಯ ಜಂಕ್ಷನ್‌ನಿಂದ ಗೆದ್ದಲಹಳ್ಳಿವರೆಗಿನ ರಸ್ತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ಸಚಿವರು, ಕಾಮಗಾರಿ ವಿಳಂಬದ ಕುರಿತು ಅಧಿಕಾರಿಗಳು, ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.
ನಿಮ್ಮಿಂದ ನಾವು ತಲೆ ತಗ್ಗಿಸಬೇಕು. ಸರ್ಕಾರ ತಲೆ ತಗ್ಗಿಸಬೇಕು. ಅಧಿಕಾರಿಗಳು ನಿಮ್ಮನ್ನು ಡಿಫೆಂಡ್ ಮಾಡಿಕೊಳ್ಳುತ್ತಾರೆ. ಏಕೆಂದರೆ, ನಿಮ್ಮ ಮತ್ತು ಅವರ ನಡುವೆ ಏನೇನಿದೆಯೋ ಗೊತ್ತಿಲ್ಲ. ಆದರೆ ಜನರ ಎಲ್ಲಾ ಬೈಗುಳ ನಮ್ಮ ಮೇಲೆಯೇ ಬರುತ್ತವೆ. ಇಲ್ಲಿ 40 ರಿಂದ 50 ಮಹಡಿಗಳ ಕಟ್ಟಡಗಳು ಬರುತ್ತಿವೆ. ಇನ್ನೂ ಇಂತಹ ಎಷ್ಟು ಯೋಜನೆ ಇವೆಯೋ ಗೊತ್ತಿಲ್ಲ. ಆ ಮನೆಗಳಿಂದ ಎಲ್ಲರೂ ರಸ್ತೆಗೆ ಬಂದರೆ ವಾಹನ ಸಂಚಾರ ಮತ್ತು ಜನ ಸಂಚಾರ ಹೇಗೆ ಸಾಧ್ಯ? ಟ್ರಾಫಿಕ್ ಜಾಮ್‌ನಿಂದ ನಮಗೇ ಬೈಯ್ಯುತ್ತಾರೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕ ಬೈರತಿ ಬಸವರಾಜ್, ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
#BetterBengaluru ಗಾಗಿ ಗುಣಮಟ್ಟದ ಮೂಲಸೌಕರ್ಯ ನಿರ್ಮಿಸಲು ನಿರಂತರ ಪರಿಶೀಲನೆ ಹಾಗೂ ಸಮಯೋಚಿತ ಸಮನ್ವಯ ಅತ್ಯಗತ್ಯ.
ಶಾಸಕ ಶ್ರೀ ಬೈರತಿ ಬಸವರಾಜ್ ಹಾಗೂ ಅಧಿಕಾರಿಗಳೊಂದಿಗೆ ಹೆಣ್ಣೂರು–ಬಾಗಲೂರು ರಸ್ತೆಯ ವೈಟ್ಟಾಪಿಂಗ್ ಕಾಮಗಾರಿಗಳನ್ನು ಸ್ಥಳದಲ್ಲೇ ಪರಿಶೀಲಿಸಿ, ಪ್ರಗತಿಯನ್ನು ಅವಲೋಕಿಸಿದೆ.
Regular reviews and timely coordination are essential to ensure quality infrastructure for a #BetterBengaluru.
Along with officials and MLA Shri Byrathi Basavaraj, I inspected the ongoing white-topping works along the Hennur-Bagalur stretch and reviewed its progress.
— Krishna Byre Gowda (@krishnabgowda) October 26, 2026