Namma Metro ಸ್ಮಾರ್ಟ್ ಕಾರ್ಡ್ ಟು NCMC ಶಿಫ್ಟ್: ಕರಗುತ್ತಾ ಅಕೌಂಟ್‌ನಲ್ಲಿರೋ ಉಳಿಕೆ ಹಣ? ಬಿಎಂಆರ್‌ಸಿಎಲ್ ಶಾಕ್?

Published : Oct 26, 2026, 08:49 AM IST
namma metro

ಸಾರಾಂಶ

Namma Metro smart card balance transfer: ನಮ್ಮ ಮೆಟ್ರೋ ಸ್ಮಾರ್ಟ್ ಕಾರ್ಡ್‌ನಿಂದ ಎನ್‌ಸಿಎಂಸಿ ಕಾರ್ಡ್‌ಗೆ ಶಿಫ್ಟ್ ಆಗುವಾಗ ನಿಮ್ಮ ಅಕೌಂಟ್‌ನಲ್ಲಿರುವ ಉಳಿಕೆ ಹಣ ಏನಾಗಲಿದೆ? ಬಿಎಂಆರ್‍‌ಸಿಎಲ್‌ ನೀಡಿರುವ ಮಹತ್ವದ ಮಾಹಿತಿ ಇಲ್ಲಿದೆ.

ವರ್ಷಗಳಿಂದ ಸಾಂಪ್ರದಾಯಿಕ ನಮ್ಮ ಮೆಟ್ರೋ ಸ್ಮಾರ್ಟ್ ಕಾರ್ಡ್‌ಗಳನ್ನು ಬಳಸುತ್ತಿರುವ ಪ್ರಯಾಣಿಕರು, ತಮ್ಮ ಹಳೇ ಕಾರ್ಡ್‌ನಲ್ಲಿರುವ ಬಾಕಿ ಹಣವನ್ನು ಹೊಸ NCMC ಕಾರ್ಡ್‌ಗೆ ವರ್ಗಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ. ಹಳೇ ಸ್ಮಾರ್ಟ್ ಕಾರ್ಡ್‌ಗಳು ಇನ್ನು ಚಾಲ್ತಿಯಲ್ಲಿದ್ದರೂ ಮತ್ತು ಬಳಕೆಗೆ ಯೋಗ್ಯವಾಗಿದ್ದರೂ ಸಹ, ಅದರಲ್ಲಿರುವ ಉಳಿಕೆ ಹಣವನ್ನು ಮರಳಿ ಪಡೆಯಲು ಪ್ರಯಾಣಿಕರು ಕೇಳಿದರು, ಬಿಎಂಆರ್‌ಸಿಎಲ್ ಸಿಬ್ಬಂದಿ ನಿರಾಕರಿಸುತ್ತಿದ್ದಾರೆ.

ಕನಿಷ್ಠ ಬ್ಯಾಲೆನ್ಸ್ ನಿಯಮದ ಕಿರಿಕಿರಿ!

ಮೆಟ್ರೋ ಪ್ರಯಾಣಕ್ಕೆ ಕನಿಷ್ಠ ₹60 ಬ್ಯಾಲೆನ್ಸ್ ಇರಬೇಕಾಗುತ್ತದೆ. ಉದಾಹರಣೆಗೆ ಪ್ರಯಾಣಿಕರೊಬ್ಬರ ಕಾರ್ಡ್‌ನಲ್ಲಿ ₹67 ಇದ್ದು, ಅವರು ₹90 ರಷ್ಟು ಕನಿಷ್ಠ ಬ್ಯಾಲೆನ್ಸ್ ಹೊಂದಿರಬೇಕಾದ ನಿಯಮದಿಂದಾಗಿ ಆ ₹67 ಅನ್ನು ಬಳಸಲಾಗದೆ ಪರದಾಡುವಂತಾಗಿದೆ. ಮೆಟ್ರೋ ಕಾರ್ಡ್‌ಗೆ ಕನಿಷ್ಠ ₹50 ರೀಚಾರ್ಜ್ ಮಾಡಬೇಕಿರುವುದರಿಂದ, ನಿಖರವಾದ ಪ್ರಯಾಣದ ಮೊತ್ತವನ್ನು ಉಳಿಕೆ ಬ್ಯಾಲೆನ್ಸ್‌ನಿಂದಲೇ ಹೊಂದಿಸುವುದು ಕಷ್ಟವಾಗಿದೆ. ಇದರಿಂದಾಗಿ ಹೆಚ್ಚುವರಿ ರೀಚಾರ್ಜ್ ಮಾಡಬೇಕಾದ ಅನಿವಾರ್ಯತೆ ಇದೆ ಅಥವಾ ಹಣವನ್ನು ಕಾರ್ಡ್‌ನಲ್ಲೇ ಬಿಡಬೇಕಾಗುತ್ತದೆ.

ಪ್ರಯಾಣಿಕರ ಹಣಕ್ಕೆ ಕುತ್ತು?

ಕಾರ್ಡ್ ಖರೀದಿಸುವಾಗ ನೀಡುವ ₹50 ಸೆಕ್ಯೂರಿಟಿ ಡೆಪಾಸಿಟ್ ಜೊತೆಗೆ, ಸರಿಸುಮಾರು ₹30 ರಷ್ಟು ಹಣ ಪ್ರತಿಯೊಬ್ಬ ಪ್ರಯಾಣಿಕರ ಹಳೇ ಕಾರ್ಡ್‌ನಲ್ಲಿ ಬಳಕೆಯಾಗದೆ ಉಳಿದುಕೊಳ್ಳುತ್ತಿದೆ. ಒಟ್ಟಾರೆಯಾಗಿ ಇದು ಪ್ರಯಾಣಿಕರ ಹಕ್ಕಿನ ಹಣವನ್ನು ಬಿಎಂಆರ್‌ಸಿಎಲ್ ತನ್ನಲ್ಲೇ ಉಳಿಸಿಕೊಂಡಂತಾಗುತ್ತದೆ ಎಂಬುದು ಸಾರ್ವಜನಿಕರ ವಾದ. ಈ ಗೊಂದಲ ಹಾಗೂ ತಾಂತ್ರಿಕ ಸಮಸ್ಯೆಯ ಬಗ್ಗೆ ಪ್ರತಿಕ್ರಿಯಿಸಿರುವ ಬಿಎಂಆರ್‌ಸಿಎಲ್ ಅಧಿಕಾರಿಗಳು, ವಿಷಯವನ್ನು ಪರಿಶೀಲಿಸಿ ಶೀಘ್ರದಲ್ಲೇ ಸೂಕ್ತ ಪರಿಹಾರ ಕಂಡುಕೊಳ್ಳುವುದಾಗಿ ತಿಳಿಸಿದ್ದಾರೆ.

ಏನಿದು ಎನ್‌ಸಿಎಂಸಿ?

NCMC ಎಂದರೆ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್. ಇದು ಭಾರತ ಸರ್ಕಾರದ 'ಒಂದು ದೇಶ, ಒಂದು ಕಾರ್ಡ್' ಯೋಜನೆಯಡಿ ಪರಿಚಯಿಸಲಾದ ಒಂದು ಅತ್ಯಾಧುನಿಕ ಇಂಟರ್-ಆಪರೇಬಲ್ ಸಾರಿಗೆ ಕಾರ್ಡ್ ಆಗಿದೆ. ಇದರ ಪ್ರಮುಖ ವೈಶಿಷ್ಟ್ಯಗಳು ಮತ್ತು ಲಾಭಗಳನ್ನು ನೋಡುವುದಾದರೆ, ಈ ಒಂದೇ ಕಾರ್ಡ್ ಬಳಸಿ ನೀವು ಮೆಟ್ರೋ, ಬಿಎಂಟಿಸಿ ಸೇರಿ ದೇಶದ ಯಾವುದೇ ಭಾಗದ ನಗರ ಸಾರಿಗೆ ಬಸ್‌ಗಳು, ಉಪನಗರ ರೈಲುಗಳು ಮತ್ತು ಟೋಲ್ ಪ್ಲಾಜಾಗಳಲ್ಲಿ ಪ್ರಯಾಣದ ದರ ಪಾವತಿಸಬಹುದು.

ಬ್ಯಾಂಕಿಂಗ್ ವ್ಯವಸ್ಥೆ!

ಎನ್‌ಸಿಎಂಸಿ ರೂಪೇ ತಂತ್ರಜ್ಞಾನದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಇದನ್ನು ಪ್ರಮುಖ ಬ್ಯಾಂಕ್‌ಗಳ ಮೂಲಕ ವಿತರಿಸಲಾಗುತ್ತದೆ. ಹಾಗಾಗಿ ಇದು ಕೇವಲ ಸಾರಿಗೆ ಕಾರ್ಡ್ ಮಾತ್ರವಲ್ಲದೆ, ದಿನಸಿ ಅಂಗಡಿ ಅಥವಾ ಶಾಪಿಂಗ್ ಮಾಲ್‌ಗಳಲ್ಲಿ ಡೆಬಿಟ್ ಕಾರ್ಡ್‌ನಂತೆಯೂ ಬಳಕೆಯಾಗಬಲ್ಲದು. ಸಾರ್ವಜನಿಕ ಸಾರಿಗೆಗಳಲ್ಲಿ ಪದೇ ಪದೇ ನಗದು ನೀಡುವುದು ಅಥವಾ ಬೇರೆ ಬೇರೆ ಸಂಸ್ಥೆಗಳಿಗೆ ಪ್ರತ್ಯೇಕ ಸ್ಮಾರ್ಟ್ ಕಾರ್ಡ್‌ಗಳನ್ನು ಇಟ್ಟುಕೊಳ್ಳುವ ಜಂಜಾಟವನ್ನು ಇದು ತಪ್ಪಿಸುತ್ತದೆ. ಆದರೆ ಬಿಎಂಆರ್‍‌ಸಿಎಲ್‌ನಲ್ಲಿ ತಾಂತ್ರಿಕ ಸಮಸ್ಯೆ ಹೇಗೆ ಸರಿ ಪಡಿಸಿಕೊಳ್ಳುತ್ತೋ ನೋಡ ಬೇಕಿದೆ.

ವರದಿಗಳು ಹೇಳುವುದೇನು?

ದಿ ಹಿಂದೂ ವರದಿಯ ಪ್ರಕಾರ, ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಬಿಎಂಟಿಸಿ ಬಸ್ ಮತ್ತು ಮೆಟ್ರೋ ಎರಡರಲ್ಲೂ ಸುಲಭವಾಗಿ ಪ್ರಯಾಣಿಸಲು ಈ ಹೊಸ NCMC ವ್ಯವಸ್ಥೆಗೆ ಬದಲಾಗುತ್ತಿದ್ದಾರೆ. ಆದರೆ, ಈ ಬದಲಾವಣೆಯ ನಡುವೆ ನಮ್ಮ ಮೆಟ್ರೋದ ಹಳೇ ಸ್ಮಾರ್ಟ್ ಕಾರ್ಡ್‌ನಲ್ಲಿರುವ ಹಣವನ್ನು ಹೊಸ NCMC ಕಾರ್ಡ್‌ಗೆ ವರ್ಗಾಯಿಸಲು ಅಥವಾ ರಿಫಂಡ್ ಪಡೆಯಲು ಬಿಎಂಆರ್‌ಸಿಎಲ್ ಅವಕಾಶ ನೀಡದಿರುವುದು ಪ್ರಯಾಣಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಕೆಲ ವರದಿಗಳು ಹೇಳಿವೆ.

PREV
Read more Articles on
click me!

Recommended Stories

ಶಿಳ್ಳೆ, ಚಪ್ಪಾಳೆ, ಅಭಿಮಾನಿಗಳ ಅಬ್ಬರ: ಬೆಂಗಳೂರಿನಲ್ಲಿ ಇಂದಿಗೂ ಸದ್ದು ಮಾಡುತ್ತಿವೆ ನರಸಿಂಹರಾಜು ಕಾಲದ ಚಿತ್ರಮಂದಿರಗಳು!
KPSC ಹಗರಣದ ಎಫೆಕ್ಟ್‌: ತುಮಕೂರು ವಿವಿ ಸಿಂಡಿಕೇಟ್‌ನಿಂದ ಬಸವರಾಜ ಕನ್ನಾಳೆ ಕಿಕ್‌ಔಟ್‌, ಸಂದೀಪ್‌ಗೆ ಸ್ಥಾನ!