KPSC ಹಗರಣದ ಎಫೆಕ್ಟ್‌: ತುಮಕೂರು ವಿವಿ ಸಿಂಡಿಕೇಟ್‌ನಿಂದ ಬಸವರಾಜ ಕನ್ನಾಳೆ ಕಿಕ್‌ಔಟ್‌, ಸಂದೀಪ್‌ಗೆ ಸ್ಥಾನ!

Published : Oct 26, 2026, 08:28 AM IST
Basavaraj Kannale

ಸಾರಾಂಶ

ಕೆಪಿಎಸ್ಸಿ ಹಗರಣದ ಬೆನ್ನಲ್ಲೇ ತುಮಕೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯತ್ವದಿಂದ ಬಸವರಾಜ ಕನ್ನಾಳೆ ಅವರನ್ನು ತೆಗೆದುಹಾಕಲಾಗಿದ್ದು, ಅವರ ಸ್ಥಾನಕ್ಕೆ ಸಂದೀಪ್ ಅವರನ್ನು ನೇಮಕ ಮಾಡಲಾಗಿದೆ. ಸಂಪೂರ್ಣ ವಿವರ ಇಲ್ಲಿದೆ.

ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸ್ಥಾನದಿಂದ ಬಸವರಾಜ ಕನ್ನಾಳೆ ಅವರನ್ನು ವಜಾಗೊಳಿಸಲಾಗಿದೆ. ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ಹಗರಣದ ಪ್ರಮುಖ ಆರೋಪಿಯಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯಪಾಲರ ಸೂಚನೆ ಮೇರೆಗೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿಯವರು ತುಮಕೂರು ವಿಶ್ವವಿದ್ಯಾಲಯದ ಕುಲಪತಿಗೆ ಪತ್ರ ಬರೆದು ಬಸವರಾಜ ಕನ್ನಾಳೆ ಅವರನ್ನು ವಜಾ ಮಾಡಿರುವ ಬಗ್ಗೆ ಉಲ್ಲೇಖಿಸಿದ್ದಾರೆ.

ತೆರವಾದ ಸ್ಥಾನಕ್ಕೆ ಆಯ್ಕೆ!

ಕನ್ನಾಳೆ ಅವರ ವಜಾದಿಂದ ಖಾಲಿಯಾದ ಸಿಂಡಿಕೇಟ್ ಸ್ಥಾನಕ್ಕೆ ಬೆಂಗಳೂರು ಮೂಲದ ಬಿ.ಸಂದೀಪ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಸ್ತುತ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಹಾಗಾಗಿ, ನೀತಿ ಸಂಹಿತೆ ಮುಗಿದ ಬಳಿಕ ಸಂದೀಪ್ ಅವರು ತುಮಕೂರು ವಿವಿಗೆ ನೇಮಕಗೊಳ್ಳಲಿದ್ದಾರೆ.

ವಜಾಗೊಳಿಸಲು ವಿವಿಧ ಸಂಟನೆಗಳ ಆಗ್ರಹ!

ಕೆಪಿಎಸ್‌ಸಿ ನೇಮಕಾತಿ ಅಕ್ರಮದಲ್ಲಿ ಬಸವರಾಜ ಕನ್ನಾಳೆ ಹೆಸರು ಕೇಳಿಬಂದ ತಕ್ಷಣ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ), ಆಕ್ಸಾ ಸೇರಿ ಇವನನ್ನು ಸಿಂಡಿಕೇಟ್ ಸದಸ್ಯತ್ವದಿಂದ ವಜಾಗೊಳಿಸಬೇಕೆಂದು ಪ್ರತಿಭಟನೆ ನಡೆಸಿದ್ದವು. ಈ ಹಿನ್ನೆಲೆ ಸೇರಿ ಆರೋಪಿ ಸ್ಥಾನದಲ್ಲಿರುವ ಕನ್ನಾಳೆಯನ್ನು ಆ ಸ್ಥಾನದಿಂದ ವಜಾಗೊಳಿಸಲಾಗಿದೆ.

ಕೂಡಲೇ ಜಾರಿಗೆ ಬಂದ ಆದೇಶ!

ರಾಜ್ಯಪಾಲರ ಕಚೇರಿಯಿಂದ ಪತ್ರ ತಲುಪಿದ ತಕ್ಷಣವೇ ಜಾರಿಗೆ ಬರುವಂತೆ ಬಸವರಾಜ ಕನ್ನಾಳೆ ಅವರನ್ನು ಸಿಂಡಿಕೇಟ್‌ ಸದಸ್ಯತ್ವದಿಂದ ಕಿಕ್‌ಔಟ್‌ ಮಾಡಲಾಗಿದೆ. ಅಲ್ಲದೇ ಕೆಪಿಎಸ್‌ಸಿ ಹಗರಣದ ಕಪ್ಪುಚುಕ್ಕೆ ವಿಶ್ವವಿದ್ಯಾಲಯದ ಆಡಳಿತಕ್ಕೆ ತಟ್ಟಬಾರದು ಎಂಬ ಕಾರಣಕ್ಕೆ ಅತ್ಯಂತ ವೇಗವಾಗಿ ಈ ಆಡಳಿತಾತ್ಮಕ ಬದಲಾವಣೆ ಮತ್ತು ಹೊಸ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿದೆ. ಎಬಿವಿಪಿ, ಆಕ್ಸಾ ಸೇರಿ ವಿವಿಧ ವಲಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ, ಉನ್ನತ ಶಿಕ್ಷಣ ಕ್ಷೇತ್ರದ ಪಾರದರ್ಶಕತೆ ಕಾಯ್ದುಕೊಳ್ಳಲು ರಾಜ್ಯಪಾಲರು ಈ ಕಡಕ್ ನಿರ್ಧಾರ ತೆಗೆದುಕೊಂಡಿದ್ದಾರೆ.

ಮುಂದುವರೆದ ತನಿಖೆ!

ಹೌದು ಸಾಲು-ಸಾಲು ಹಗರಣದಲ್ಲಿ ಸಿಲುಕಿಕೊಂಡಿರುವ ಕೆಪಿಎಸ್‌ಸಿ ಮಂಡಳಿ ಹಲವರ ಬಂಧನವೂ ಆಗಿದೆ. ತನಿಖೆಯೂ ಮುಂದುವರೆದಿದೆ. ಈ ನಿಟ್ಟಿನಲ್ಲಿ ಕನ್ನಾಳೆಯನ್ನು ಸಿಂಡಿಕೇಟ್‌ ಸ್ಥಾನದಿಂದ ಕಿಕ್‌ಔಟ್‌ ಮಾಡಲಾಗಿದೆ. ಆದ್ದರಿಂದ ಮುಂದಿನ ದಿನದಲ್ಲಿ ತನಿಖೆ ಯಾವ ಆಯಾಮ ಪಡೆದುಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

PREV
Read more Articles on
click me!

Recommended Stories

Namma Metro ಸ್ಮಾರ್ಟ್ ಕಾರ್ಡ್ ಟು NCMC ಶಿಫ್ಟ್: ಕರಗುತ್ತಾ ಅಕೌಂಟ್‌ನಲ್ಲಿರೋ ಉಳಿಕೆ ಹಣ? ಬಿಎಂಆರ್‌ಸಿಎಲ್ ಶಾಕ್?
Narendr Modi: ಪ್ರಧಾನಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಎಐಸಿಸಿ ಅಧ್ಯಕ್ಷ ಖರ್ಗೆ ವಿರುದ್ಧ ದೂರು ದಾಖಲು