ರೇಣುಕಾಸ್ವಾಮಿ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆ, ಪ್ರದೋಷ್ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್

Published : Oct 23, 2026, 06:40 PM IST
darshan case in pradosh

ಸಾರಾಂಶ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಸೇರಿದಂತೆ ಪ್ರಮುಖ ಆರೋಪಿಗಳ ಪೈಕಿ ಪ್ರದೋಷ್ ಜಾಮೀನು ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರದೋಷ್ ಅರ್ಜಿಯನ್ನು ಕೋರ್ಟ್ ವಿಚಾರಣೆ ನಡೆಸಿದೆ.

ಬೆಂಗಳೂರು (ಅ.23) ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಜೈಲಿನಲ್ಲಿ ಆರೋಪಿಗಳು ಜಾಮೀನಿಗಾಗಿ ಹರಸಾಹಸ ಪಡುತ್ತಿದ್ದಾರೆ. ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಪ್ರಮುಖರು ಸಲ್ಲಿಸಿದ್ದ ಜಾಮೀನು ಅರ್ಜಿಗಳು ತಿರಸ್ಕೃತಗೊಂಡಿದೆ. ಇದರ ಬೆನ್ನಲ್ಲೇ ಇದೀಗ ಆರೋಪಿ ಪ್ರದೋಷ್ ಸಲ್ಲಿಸಿರುವ ಮಧ್ಯಂತರ ಜಾಮೀನು ಅರ್ಜಿಯನ್ನು ಕೋರ್ಟ್ ವಿಚಾರಣೆ ನಡೆಸಿದೆ. 59ನೇ ಸೆಷನ್ ಕೋರ್ಟ್ ಅರ್ಜಿ ವಿಚಾರಣೆ ನಡೆಸಿ ಅಕ್ಟೋಬರ್ 27 ಅರ್ಜಿ ಆದೇಶ ಕಾಯ್ದಿರಿಸಿದೆ.

ತಂದೆಯ ಒಂದು ವರ್ಷದ ತಿಥಿ ಕಾರ್ಯಕ್ಕೆ ಜಾಮೀನು ಕೋರಿಕೆ

ಆರೋಪಿ ಪ್ರದೋಷ್ ಇತ್ತೀಚೆಗೆ ಮಾಫಿ ಸಾಕ್ಷಿಯಾಗಿ ಬದಲಾಗಿದ್ದಾರೆ. ಇದರ ನಡುವೆ ತಮ್ಮ ತಂದೆಯ ಒಂದು ವರ್ಷದ ತಿಥಿ ಕಾರ್ಯಕ್ಕೆ ಜಾಮೀನು ಕೋರಿ 59 ನೇ ಸೇಷನ್ಸ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಕನಿಷ್ಠ ಮೂರು ವಾರಗಳ ಕಾಲ ಜಾಮೀನು ನೀಡುವಂತೆ ಪ್ರದೋಷ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಪ್ರಮುಖ ವಿಚಾರ ಮುಂದಿಟ್ಟು ಜಾಮೀನು ಅರ್ಜಿ ಸಲ್ಲಿಕೆ ಕಾರಣ ಕೋರ್ಟ್, ಈ ಅರ್ಜಿಯ ವಿಚಾರಣೆ ನಡೆಸಿದೆ.

ಪ್ರದೋಷ್ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್, ವಾದ ಪ್ರತಿವಾದ ಆಲಿಸಿದೆ. ಸಂಪೂರ್ಣ ವಾದ ಆಲಿಸಿದ ಕೋರ್ಟ್ ಆದೇಶ ಕಾಯ್ದಿರಿಸಿತು. ಅಕ್ಟೋಬರ್ 27ಕ್ಕೆ ಪ್ರದೋಷ್ ಮಧ್ಯಂತರ ಜಾಮೀನು ಅರ್ಜಿ ಆದೇಶ ನೀಡುವುದಾಗಿ ಕೋರ್ಟ್ ಪ್ರಕಟಿಸಿದೆ.

ಮಾಫಿ ಸಾಕ್ಷಿಯಾಗಿ ಬದಲಾಗಿರುವ ಪ್ರದೋಷ್

ಜೈಲಿನಲ್ಲಿ ಆರೋಪಿ ಪ್ರದೋಷ್ ನಟ ದರ್ಶನ್ ಆಪ್ತನಾಗಿದ್ದ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಷ್ ಮೇಲೆ ಗಂಭೀರ ಆರೋಪಗಳಿವೆ. ದರ್ಶನ್ ಆಪ್ತನಾಗಿದ್ದ ಪ್ರದೋಷ್ ಇತ್ತೀಚೆಗೆ ಇದೇ ರೇಣುಕಾಸ್ವಾಮಿ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ದರ್ಶನ್ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಪ್ರದೋಷ್ ಮಾಫಿ ಸಾಕ್ಷಿ ಅರ್ಜಿಯನ್ನು ಕೋರ್ಟ್ ಪರಿಗಣಿಸಿ ಹೇಳಿಕೆ ದಾಖಲು ಮಾಡಲು ಅನುಮತಿ ನೀಡಿತ್ತು. ಪ್ರದೋಷ್ ಮಾಫಿ ಸಾಕ್ಷಿಯಾಗಿ ಪರಿಗಣಿಸಬಾರದು ಅನ್ನೋ ನಟ ದರ್ಶನ್ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತ್ತು. ಈ ಮೂಲಕ ನಟ ದರ್ಶನ್ ಹಾಗೂ ಪ್ರದೋಷ್ ನಡುವಿನ ಸ್ನೇಹ ಸಂಬಂಧ ಇದೀಗ ಪ್ರಕರಣದಿಂದ ಹೇಗಾದರೂ ಮಾಡಿ ಹೊರಬರುವ ಪರಿಸ್ಥಿತಿಗೆ ತಲುಪಿದೆ.

ಇತ್ತ ನಟ ದರ್ಶನ್ ಶಿಷ್ಯ ಎಂದೇ ಕುರುತಿಸಿಕೊಂಡಿರುವ ನಟ ಧನ್ವೀರ್ ವಿರುದ್ದ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮ್ಯಾನೇಜರ್ ನಾಗರಾಜ್ ದೂರು ನೀಡಿದ್ದಾರೆ. ವಿಜಯಲಕ್ಷ್ಮಿ ಮ್ಯಾನೇಜರ್ ವಿರುದ್ದ ನಟ ಧನ್ವೀರ್ ನೀಡಿದ್ದ ಕೆಲ ಹೇಳಿಕೆಗಳು ವಿವಾದ ಸೃಷ್ಟಿಸಿತ್ತು. ಈ ಹೇಳಿಕೆ ವಿರುದ್ದ ವಿಜಯಲಕ್ಷ್ಮಿ ಮ್ಯಾನೇಜರ್ ದೂರು ನೀಡಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಆಪ್ತರೆ ತಿರುಗಿ ಬೀಳುತ್ತಿದ್ದಾರೆ. ಮ್ಯಾನೇಜರ್ ನಾಗರಾಜ್‌ಗೆ ಅವಾಚ್ ಪದಗಳಿಂದ ನಿಂದನೆ ಮಾಡಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ. ನಾಗರಾಜ್ ವಿರುದ್ದ ಅವಾಚ್ಯ ಶಬ್ದ ಪ್ರಯೋಗ, ಬೈಗುಗಳ ಆಡಿಯೋ ದಾಖಲೆಯನ್ನು ಪೊಲೀಸರಿಗೆ ನೀಡಲಾಗಿದೆ. ನಾಗರಾಜ್ ನೀಡಿದ ದೂರಿನ ಆಧಾರದ ಮೇಲೆ ಆರ್‌ಆರ್ ನಗರ ಪೊಲೀಸರು ಎನ್‌ಸಿಆರ್ ದಾಖಲು ಮಾಡಿದ್ದಾರೆ.

PREV
Read more Articles on
click me!

Recommended Stories

ದರ್ಶನ್‌ಗೆ ಅನ್ಯಾಯ ಮಾಡ್ತಿದ್ದಾರೆ, ಅದಕ್ಕಾಗಿಯೇ ವಿಜಯಲಕ್ಷ್ಮೀ ಮ್ಯಾನೇಜರ್‌ಗೆ ಬೈದಿದ್ದೇನೆ: ಕೇಸ್‌ ಬೆನ್ನಲ್ಲೇ ಕಿಡಿಕಿಡಿಯಾದ ಧನ್ವೀರ್‌
ನಮ್ಮ ಮೆಟ್ರೋ ಆರೆಂಜ್ ಲೈನ್ ಡಬಲ್ ಡೆಕ್ಕರ್ ಕಾನ್ಸೆಪ್ಟ್ ರದ್ದು, 4 ಫ್ಲೈಓವರ್, ಗೊರಗುಂಟೆಪಾಳ್ಯದಲ್ಲಿ 2 ಕಿ.ಮೀ ಸುರಂಗ ರಸ್ತೆಯ ಹೊಸ ಪ್ಲ್ಯಾನ್‌!