'ಹಿಂದಿ ಕಲಿತು ಬನ್ನಿ, ಇಲ್ಲದಿದ್ದರೆ ಗೇಟ್‌ಪಾಸ್' ಕರ್ನಾಟಕದಲ್ಲೇ ಕನ್ನಡ ನೌಕರರಿಗೆ ಹಿಂದಿವಾಲಾ ಧಮ್ಕಿ

Published : Oct 04, 2026, 10:50 PM IST
Shocking Video Shows Non Kannadiga Official Threatening Kannadiga Workers

ಸಾರಾಂಶ

ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಹಿಂದಿ ಭಾಷಿಕನೊಬ್ಬ ಕನ್ನಡಿಗರಿಗೆ ಹಿಂದಿ ಕಲಿಯುವಂತೆ ಅಥವಾ ಕೆಲಸ ಬಿಡುವಂತೆ ಬೆದರಿಕೆ ಹಾಕಿರುವ ವಿಡಿಯೋ ವೈರಲ್ ಆಗಿದೆ. ಕನ್ನಡಿಗರ ಸ್ವಾಭಿಮಾನ ಕೆಣಕಿದ ಈತನ ದರ್ಪದ ವಿರುದ್ಧ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈತನನ್ನು ಕೂಡಲೇ ಕೆಲಸದಿಂದ ವಜಾಗೊಳಿಸುವಂತೆ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಆಗ್ರಹಿಸಿದ್ದಾರೆ.

ಬೆಂಗಳೂರು: ನಮ್ಮ ನಾಡಿಗೆ ಬಂದು.. ಕನ್ನಡಿಗರ ಅನ್ನ ತಿಂದು, ಇಲ್ಲಿಯೇ ಬದುಕಿ, ಕೊನೆಗೆ ಕನ್ನಡಿಗರ ಮೇಲೆಯೇ ದಬ್ಬಾಳಿಕೆ ನಡೆಸುವ ಪರಭಾಷಿಕರ ಸೊಕ್ಕು ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ!

'ನಮ್ಮಲ್ಲಿ ಕೆಲಸ ಮಾಡಬೇಕೆಂದರೆ ನೀವು ಹಿಂದಿ ಕಲಿತುಕೊಂಡು ಬರಬೇಕು.. ಕನ್ನಡ ಮಾತಾಡುವವರೆಲ್ಲಾ ಕೆಲಸ ಬಿಟ್ಟು ತೊಲಗಿ.. ಎಂದು ಖಾಸಗಿ ಕಂಪನಿಯ ವ್ಯಕ್ತಿಯೊಬ್ಬ ಕನ್ನಡಿಗರ ವಿರುದ್ಧವೇ ಉದ್ಧಟತನ ಮೆರೆದಿರುವ ಆಘಾತಕಾರಿ ವಿಡಿಯೋ ಒಂದು ಸೋಶಿಯ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಇದು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವಂತಿದ್ದು, ಆಕ್ರೋಶದ ಕಿಡಿ ಹೊತ್ತಿಸಿದೆ..

ವಿಡಿಯೋದಲ್ಲೇನಿದೆ?

ವೈರಲ್ ಆಗಿರುವ ವಿಡಿಯೋದಲ್ಲಿ ಆ ವ್ಯಕ್ತಿ ಕನ್ನಡದ ನೌಕರರನ್ನು ಅಕ್ಷರಶಃ ಅವಮಾನಿಸಿದ್ದಾನೆ. ಆತನ ಎದುರು ಕನ್ನಡಿಗರನ್ನು ನಿಲ್ಲಿಸಿ ಕೆಟ್ಟದಾಗಿ ಮಾತನ್ನಾಡಿದ್ದಾನೆ. ನಾನು ನಿಮಗೆ ನೇರವಾಗಿ ಹೇಳ್ತಿದ್ದೀನಿ.. ನೀವೆಲ್ಲರೂ ಹಿಂದಿ ಕಲಿತು ಬರಬೇಕು. ಕನ್ನಡ ಯಾರೆಲ್ಲಾ ಮಾತಾಡ್ತೀರಾ ಅವರೆಲ್ಲಾ ಕೆಲಸ ಬಿಟ್ಟು ಹೋಗಬಹುದು. ನನಗೆ ಯಾವುದೇ ಸಮಸ್ಯೆ ಇಲ್ಲ! ನನಗೆ ಕನ್ನಡ ಬರಲ್ಲ, ನಾನು ಹಿಂದಿಯಲ್ಲೇ ಮಾತಾಡೋದು. ಕರ್ನಾಟಕದಲ್ಲಿದ್ದರೆ ಏನಾಯ್ತು? ನಮ್ಮ ಬಳಿ ಕೆಲಸವಿದೆ, ಎಲ್ಲರೂ ಗಾಡಿ ಹತ್ತಿ ಜಾಗ ಖಾಲಿ ಮಾಡಿ! ಎಂದು ಕನ್ನಡಿಗರ ಸ್ವಾಭಿಮಾನವನ್ನೇ ಕೆಣಕಿದ್ದಾನೆ. 'ಕನ್ನಡದಲ್ಲಿ ಮಾತನಾಡು' ಎಂದು ಕೇಳಿದ ಕನ್ನಡಿಗರಿಗೆ ಮುಖಕ್ಕೆ ಹೊಡೆದಂತೆ ಆತ ತನ್ನ ದರ್ಪ ಪ್ರದರ್ಶಿಸಿದ್ದಾನೆ.

ರೂಪೇಶ್ ರಾಜಣ್ಣ ಕಿಡಿ

ಕನ್ನಡಿಗರ ಅನ್ನ ತಿಂದು ಕನ್ನಡಿಗರ ನೆಲದಲ್ಲೇ ದರ್ಪ ತೋರಿದ ಈತನ ನಡೆಗೆ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಭೀಮಾರುವಿನ ದುರಹಂಕಾರ

ಹಿಂದಿ ಕಲಿತು ಬರ್ಬೇಕಂತೆ

ಕರ್ನಾಟಕ ಆದ್ರೆ ಏನು ಅಂತೇ.

ತನ್ನುರಿನಿಂದ ಕೆಲಸ ಇಲ್ಲದೇ ಕರ್ನಾಟಕಕ್ಕೆ ಬಂದು ಇಲ್ಲೇ ಬದುಕಿ

ಕನ್ನಡಿಗರ ಮೇಲೆಯೇ ದಬ್ಬಾಳಿಕೆ.

ಕನ್ನಡಿಗರು ಕೆಲಸದಲ್ಲೇ ಇರಬಾರದಂತೆ.

ಇದು ಯಾವುದೊ ಖಾಸಗಿ ಕಂಪನಿ ಅಂತೇ

ಇವ ಕೂಡಲೇ ಅಲ್ಲಿಂದ ಕೆಲಸದಿಂದ ವಜಾ ಆಗಬೇಕು ಎಂದು ರೂಪೇಶ್ ರಾಜಣ್ಣ ಆಕ್ರೋಶ ಗುಡುಗಿದ್ದಾರೆ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಭಾರೀ ವೈರಲ್ ಆಗ್ತಿದೆ.. ಕನ್ನಡಗರ ಹೃದಯವನ್ನ ಕೆಣಕಿದ್ದಾರೆ. ಕನ್ನಡಿಗರ ಅನ್ನ ತಿಂದು ಕನ್ನಡಿಗರ ನೆಲದಲ್ಲಿಯೇ ಇದ್ದುಕೊಂಡು ಈ ರೀತಿ ಕನ್ನಡಿಗರ ಮೇಲೆ ದರ್ಪ ತೋರಿಸುವ ವ್ಯಕ್ತಿ ವಿರುದ್ಧ ಕಠಿಣ ಶಿಕ್ಷೆ ಆಗಬೇಕು ಎಂಬ ಆಗ್ರಹ ಕೇಳಿಬಂದಿದೆ. ಪೊಲೀಸರು ತಕ್ಷಣವೇ ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಸಂಬಂಧಪಟ್ಟ ಕಂಪನಿ ಈತನಿಗೆ ತಕ್ಷಣ ಗೇಟ್‌ಪಾಸ್ ಕೊಟ್ಟು ಮನೆಗೆ ಕಳುಹಿಸಬೇಕು ಎಂದು ಕನ್ನಡಿಗರು ಒಕ್ಕೊರಲಿನಿಂದ ಎಚ್ಚರಿಕೆ ನೀಡಿದ್ದಾರೆ.

PREV
Read more Articles on
click me!

Recommended Stories

Election; ವಿದ್ಯಾರ್ಥಿ ಚುನಾವಣೆ ಬಂದ್: ಇದು ಗಲಾಟೆ ತಡೆಯುವ ತಂತ್ರವೋ, ಹೊಸ ಧ್ವನಿ ಅಡಗಿಸುವ ಸೈಲೆಂಟ್ ಆಪರೇಷನ್?
Rain Alert; ರಾಜ್ಯದಲ್ಲಿ ಆರ್ಭಟಿಸಲಿದೆ ಗಂಟೆಗೆ 60 ಕಿ.ಮೀ ವೇಗದ ಬಿರುಗಾಳಿ ಸಹಿತ ಮಳೆ; 12ಕ್ಕೂ ಹೆಚ್ಚು ರಾಜ್ಯಗಳಿಗೆ ಸೈಕ್ಲೋನ್ ಅಲರ್ಟ್!