ಹಾಸನಾಂಬೆ ದರ್ಶನಕ್ಕೆ ಜನಸಾಗರ, ಬೆಂಗಳೂರು-ಹಾಸನ ಬಸ್ ಸಂಚಾರ ಸ್ಥಗಿತ

Published : Oct 17, 2025, 09:47 PM IST
Hasanamba Temple

ಸಾರಾಂಶ

ಹಾಸನಾಂಬೆ ದರ್ಶನಕ್ಕೆ ಜನಸಾಗರ, ಬೆಂಗಳೂರು-ಹಾಸನ ಬಸ್ ಸಂಚಾರ ಸ್ಥಗಿತ ಮಾಡಲಾಗಿದೆ. ವಾರಾಂತ್ಯ ರಜೆ ಹಾಗೂ ದೀಪಾವಳಿ ರಜೆ ಕಾರಣ ಭಾರಿ ಸಂಖ್ಯೆಯಲ್ಲಿ ಭಕ್ತರು ಹಾಸನಾಂಬ ದರ್ಸನಕ್ಕೆ ತೆರಳಿದ್ದಾರೆ.

ಬೆಂಗಳೂರು (ಅ.17) ಹಾಸನಾಂಬೆ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಭಾರಿ ಸಂಖ್ಯೆಯಲ್ಲಿ ಭಕ್ತರು ತೆರಳುತ್ತಿದ್ದಾರೆ. ವಾರಾಂತ್ಯ ಹಾಗೂ ದೀಪಾವಳಿ ರಜೆ ಕಾರಣದಿಂದ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಪವಿತ್ರ ದಿನದಲ್ಲಿ ಹಾಸನಾಂಬೆ ದರ್ಶನ ಪಡೆಯಲು ಭಕ್ಕರು ಮುಂದಾಗಿದ್ದು, ಜನಸಾಗರವೇ ಹರಿದು ಬಂದಿದೆ. ಹಾಸನಾಂಬೆ ದರ್ಶನಕ್ಕೆ ಜನಸಾಗರವೇ ಹರಿದುಬಂದಿರುವ ಕಾರಣ ಬೆಂಗಳೂರಿನಿಂದ ಹಾಸನಕ್ಕೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಭಕ್ತರ ನಿಯಂತ್ರಣ ಕಷ್ಟವಾಗಿರುವ ಹಿನ್ನಲೆಯಲ್ಲಿ ದಿಢೀರ್ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.

ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸ್ಥಗಿತ

ಹಾಸನಾಂಬೆ ದೇಗುಲ ಹಾಗೂ ಸುತ್ತ ಮುತ್ತ ಬಾರಿ ಜನಸ್ತೋಮ ನೆರೆದಿದೆ. ಭಕ್ತರು ಹಾಸನಾಂಬೆ ದರ್ಶನಕ್ಕೆ ಸರದಿ ಸಾಲಿನಲ್ಲಿ ಕಾಯುತ್ತದ್ದಾರೆ. ಇತ್ತ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಭಕ್ತರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ. ಭಕ್ತರನ್ನು ನಿಯಂತ್ರಸು ಅಸಾಧ್ಯ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದಂತೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ತಾತ್ಕಾಲಿಕವಾಗಿ ಬಸ್ ಸಂಚಾರ ಸ್ಥಗಿತಗೊಂಡಿದೆ.

ಬಸ್ ಸಂಚಾರ ತಾತ್ಕಾಲಿಕ ಸ್ಥಗಿತಗೊಳಿಸಲು ಸೂಚನೆ

ಬೆಂಗಳೂರಿನಿಂದ ಅತೀ ಹೆಚ್ಚು ಭಕ್ತರು ಹಾಸನಾಂಬೆ ದರ್ಶನಕ್ಕೆೆ ಪ್ರಯಾಣಿಸುತ್ತಿದ್ದಾರೆ. ಹೀಗಾಗಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ತಾತ್ಕಾಲಿಕ ಸ್ಥಗಿತಕ್ಕೆ ಸೂಚನೆ ನೀಡಲಾಗಿದೆ. ಇದರಿಂದ ಬೆಂಗಳೂರಿನಿಂದ ಹಾಸನಕ್ಕೆ ತೆರಳುವ ಎಲ್ಲಾ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಈ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಕೆಎಸ್ ಆರ್ ಟಿಸಿ ಅಧಿಕಾರಿಗಳ‌ ಮಾಹಿತಿ ನೀಡಿದ್ದಾರೆ.

ದರ್ಶನಕ್ಕೆ ಕೀಲೋಮೀಟರ್ ಉದ್ದದ ಸಾಲು

ಹಾಸನಾಂಬೆ ದರ್ಶನಕ್ಕೆ ಭಕ್ತರ ಸಾಗರ ಹೆಚ್ಚಾಗಿರುವ ಕಾರಣ ದರ್ಶನಕ್ಕೆ ಕಿಲೋಮೀಟರ್‌ಗಟ್ಟಲೇ ಸಾಲು ದೊಡ್ಡದಾಗಿದೆ. ಈ ಸಾಲಿನಲಲಿ ಭಕ್ತರು ಹಾಸನಾಂಬೆ ದರ್ಶನಕ್ಕೆ ಕಾಯುತ್ತಿದ್ದಾರೆ. 300 ರೂಪಾಯಿ ಟಿಕೆಟ್ ಸಾಲು 5 ಕಿಲೋಮೀಟರ್‌ ಅಧಿಕವಾಗಿದೆ. ದೇವಾಲಯದಿಂದ ನಗರ ಬಸ್ ನಿಲ್ದಾಣದ ವರೆಗೆ ಈ ಸಾಲು ನಿಂತಿದೆ. ಇನ್ನು 1,000 ರೂಪಾಯಿ ಸಾಲು 4 ಕಿಲೋಮೀಟರ್‌ಗೂ ಅಧಿಕವಾಗಿದೆ. ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಹೀಗಾಗಿ ಭಕ್ತರಿಗೆ ದರ್ಶನ ಅವಕಾಶ ಮಾಡಿಕೊಡಲು ಹಾಸನ ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ.

ಒಂದೆಡೆ ಭಕ್ತರ ಸಾಗರ ಹರಿದು ಬಂದರೆ ಮತ್ತೊಂದೆಡೆ ನಾಯಕರು, ಸೆಲೆಬ್ರೆಟಿಗಳು ಹಾಸನಾಂಬೆ ದರ್ಶನಕ್ಕೆ ತೆರಳುತ್ತಿದ್ದಾರೆ. ಇಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಹಾಸನಾಂಬೆ ದರ್ಶನ ಪಡೆದಿದ್ದರು. ಪತ್ನಿ ಅನಿತಾ ಕುಮಾರಸ್ವಾಮಿ, ಸೊಸೆ ರೇವತಿ, ಮೊಮ್ಮಗ ಅವ್ಯಾನ್ ದೇವ್ ಜೊತೆ ತೆರಳಿದ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಪೂಜೆ ಸಲ್ಲಿಸಿದ್ದರು. ಹೆಚ್‌ಡಿ ಕುಮಾರಸ್ವಾಮಿ

ಜೊತೆಗೆ ಜೆಡಿಎಸ್ ಶಾಸಕರುಗಳು ಆಗಮಿಸಿದ್ದರು. ಶಾಸಕರಾದ ಸುರೇಶ್ ಬಾಬು,‌ ಬಾಲಕೃಷ್ಣ, ಕೃಷ್ಣಪ್ಪ ,ಬೋಜೇಗೌಡ ಸೇರಿದಂತೆ ಹಲವು ಆಗಮಿಸಿ ಹಾಸನಾಂಬೆ ದರ್ಶನ ಪಡೆದಿದ್ದರು.

 

PREV
Read more Articles on
click me!

Recommended Stories

Bengaluru: ಬೆ*ತ್ತಲೆ ವಿಡಿಯೋ ಮುಂದಿಟ್ಟು ಬ್ಲ್ಯಾಕ್‌ಮೇಲ್‌ ಮಾಡಿ ಯುವಕನಿಂದ 1.5 ಲಕ್ಷ ರು. ಸುಲಿಗೆ
ರಾತ್ರಿ ಮನೆ ಮುಂದೆ ಬೈಕ್ ನಿಲ್ಲಿಸುವ ಬೆಂಗಳೂರಿಗರೇ ಎಚ್ಚರ! ನೀವು ಮಲಗೋದನ್ನ ಕಾಯ್ತಾರೆ ಕಳ್ಳರು!