ಬಾಲಕಿ ಮೇಲೆ ಅತ್ಯಾ*ಚಾರ,15 ವರ್ಷಕ್ಕೆ ಮಗುವನ್ನ ಹೆತ್ತ ಹುಡುಗಿ!

Published : Oct 17, 2025, 07:28 PM IST
Rape on 15 Year old Girl In Bengaluru

ಸಾರಾಂಶ

15-Year-Old Girl Raped Gives Birth to Dead Child ಬೆಂಗಳೂರಿನಲ್ಲಿ, ಐಸ್‌ಕ್ರೀಮ್ ಕೊಡಿಸುವ ನೆಪದಲ್ಲಿ 15 ವರ್ಷದ ಬಾಲಕಿಯ ಮೇಲೆ ಅರ್ಜುನ್ ಎಂಬಾತ ನಿರಂತರ ಅತ್ಯಾಚಾರ ಎಸಗಿದ್ದಾನೆ. ಗರ್ಭಿಣಿಯಾಗಿದ್ದ ಬಾಲಕಿ ಮನೆಯಲ್ಲಿ ಸತ್ತ ಮಗುವಿಗೆ ಜನ್ಮ ನೀಡಿದಾಗ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 

ಬೆಂಗಳೂರು (ಅ.17): ಬಾಲಕಿ ಮೇಲೆ ನಿರಂತರ ಅತ್ಯಾ*ಚಾರ ಮಾಡಿ ಆಕೆಯನ್ನು ಗರ್ಭಿಣಿ ಮಾಡಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಗರ್ಭಣಿ ಆಗಿದ್ದ 15 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಿದ್ದು, ಮಗು ಸಾವು ಕಂಡಿದೆ. ಸತ್ತ ಮಗುವಿನೊಂದಿಗೆ ಆಸ್ಪತ್ರೆಗೆ ಹೋದಾಗ ಗೊತ್ತಾಯ್ತು ಬಾಲಕಿಯ ತಾಯಿಗೆ ಈ ವಿಚಾರ ಗೊತ್ತಾಗಿದೆ. ನೇಪಾಳ ಮೂಲದ ಬಾಲಕಿ ಮೇಲೆ ಕಾಮುಕ ಅತ್ಯಾ*ಚಾರ ಮಾಡಿದ್ದಾನೆ. ಐಸ್‌ಕ್ರೀಮ್‌ ಕೊಡಿಸೋ ನೆಪದಲ್ಲಿ ಆಕೆಗೆ ಹತ್ತಿರವಾಗಿ ಅತ್ಯಾ*ಚಾರ ಮಾಡಿದ್ದಾನೆ. ಶಂಕರಪುರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಬಾಲಕಿಯ ತಾಯಿಯ ಜೊತೆ ಆರೋಪಿ ನಿರಂತರ ಸಂಪರ್ಕದಲ್ಲಿದ್ದ. ನಂತರ ಮಗಳಿಗೆ ಗಾಳ ಹಾಕಿದ್ದ. ಪ್ರತಿ ದಿನ ಐಸ್ ಕ್ರೀಮ್ ಕೊಡಿಸಿ ಬಾಲಕಿಗೆ ಆರೋಪಿ ಹತ್ತಿರವಾಗಿದ್ದ. ನಂತರ ಮನೆಗೆ ಕರೆ ತಂದು ನಿರಂತರ ಅತ್ಯಾ*ಚಾರ ನಡೆಸಿದ್ದ ಎನ್ನಲಾಗಿದೆ.

ಆರೋಪಿಯನ್ನು ಅರ್ಜುನ್‌ ಎಂದು ಗುರುತಿಸಲಾಗಿದೆ. ತಂದೆ ತಾಯಿ ಇದ್ದರೂ ಮಗಳ ಬಗ್ಗೆ ಅವರು ಹೆಚ್ಚಿನ ಗಮನ ನೀಡಿರಲಿಲ್ಲ. ಮಗು ಗರ್ಭಿಣಿ ಎಂಬ ವಿಚಾರವೂ ಗೊತ್ತಿರದ ಮಟ್ಟಿಗೆ ಪೋಷಕರು ನಿರ್ಲಕ್ಷ್ಯ ತೋರಿದ್ದಾರೆ.

15 ವರ್ಷದ ಬಾಲಕಿ ತನ್ನ ತಂದೆ ತಾಯಿಯ ಜೊತೆ ನೇಪಾಳದಿಂದ ನಗರಕ್ಕೆ ಬಂದು ವಿವಿಪುರದಲ್ಲಿ ನೆಲೆಸಿದ್ದರು. ಪೋಷಕರು ಕೆಲಸಕ್ಕೆ ಹೋಗುತ್ತಿದ್ದರೆ, ಬಾಲಕಿ 10ನೇ ಕ್ಲಾಸ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಈ ವೇಳೆ ದಿನೇಶ್ ಎಂಬಾತನ ಮಗ ಅರ್ಜುನ್ ಪರಿಚಯವಾಗಿದ್ದ. ಮೊದಲು ಬಾಲಕಿಯ ತಾಯಿಯ ಜೊತೆ ಕೂಡ ಆರೋಪಿ ನಿರಂತರ ಫೋನ್ ಸಂಪರ್ಕದಲ್ಲಿದ್ದ. ಇದೇ ರೀತಿ ಬಾಲಕಿಯನ್ನ ಐಸ್ ಕ್ರೀಂ ಕೊಡಿಸುವ ನೆಪದಲ್ಲಿ ಪರಿಚಯ ಮಾಡಿಕೊಂಡಿದ್ದ. ಒಂದು ದಿನ ಯಾರೂ ಇಲ್ಲದ ವೇಳೆ ಮೊದಲ ಬಾರಿಗೆ ಅತ್ಯಾ*ಚಾರ ಮಾಡಿದ್ದ. ಅದಾದ ನಂತರವೂ ಎರಡು ಬಾರಿ ಅತ್ಯಾ*ಚಾರ ಮಾಡಿದ್ದ.

ಇದರಿಂದಾಗಿ ಬಾಲಕಿ ಗರ್ಭಿಣಿಯಾಗಿದ್ದಳು. ಆದರೆ, ಪೋಷಕರು ಮಾತ್ರ ಮಗಳು ಗರ್ಭಿಣಿಯಾಗಿರುವ ವಿಚಾರ ನಮಗೆ ಗೊತ್ತೇ ಇರಲಿಲ್ಲ ಎಂದಿದ್ದಾರೆ. ಇದು ನಿರ್ಲಕ್ಷ್ಯವೋ ಅಥವಾ ವಿಚಾರ ಗೊತ್ತಿದ್ದೂ ಮುಚ್ಚಿಟ್ಟಿದ್ದಾರೋ ಎಂಬ ಅನುಮಾನ ವ್ಯಕ್ತವಾಗಿದೆ.

ಅಪ್ಪ-ಅಮ್ಮ ಕೆಲಸಕ್ಕೆ ಹೋಗಿದ್ದ ವೇಳೆ ಡೆಲಿವರಿ!

ಅಪ್ಪ ಅಮ್ಮ ಕೆಲಸಕ್ಕೆ ಹೋಗಿದ್ದ ವೇಳೆ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಮಗು ಹೊಟ್ಟೆಯಲ್ಲಿಟ್ಟುಕೊಂಡು ಬಾಲಕಿ ಅತೀವ ನೋವು ಅನುಭವಿಸಿದ್ದಳು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ, ಡೆಲಿವರಿ ಆದ ಬಳಿಕ ಮಗು ಸತ್ತು ಹೋಗಿತ್ತು. ನಂತರ ತಾಯಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಳು. ಸತ್ತ ಮಗುವನ್ನ ತೆಗೆದುಕೊಂಡು ಕ್ಲೌಡ್ 9 ಆಸ್ಪತ್ರೆಗೆ ಬಾಲಕಿ ದಾಖಲಿಸಿದ್ದಳು. ಈ ವೇಳೆ ಸಂಪೂರ್ಣ ಅತ್ಯಾ*ಚಾರ ಘಟನೆ ಬಯಲಿಗೆ ಬಂದಿದೆ. ಸದ್ಯ ಶಂಕರಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾದ್ದು, ಪ್ರಕರಣ ದಾಖಲಿಸಿ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

 

PREV
Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
'63% ಭ್ರಷ್ಟಾಚಾರ' ಹೇಳಿಕೆ ವಿವಾದ: 'ನನ್ನ ಹೇಳಿಕೆ ತಿರುಚಲಾಗಿದೆ' ಉಪಲೋಕಾಯುಕ್ತ ನ್ಯಾ. ವೀರಪ್ಪ ಸ್ಪಷ್ಟನೆ