ಮತದಾರರ ಪಟ್ಟಿಯಿಂದ KGF ಬಾಬು ಹೆಸರು ಡಿಲೀಟ್‌? SIR ಪ್ರಕ್ರಿಯೆ ವಿರುದ್ಧ ಆಕ್ರೋಶ

Published : Sep 09, 2026, 07:21 PM ISTUpdated : Sep 09, 2026, 07:40 PM IST
kgf babu

ಸಾರಾಂಶ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಯ ಎಸ್‌ಐಆರ್‌ (SIR) ಪ್ರಕ್ರಿಯೆ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಬೆಂಗಳೂರಿನ ಪ್ರಭಾವಿ ಉದ್ಯಮಿ ಹಾಗೂ ರಾಜಕಾರಣಿ ಕೆ.ಜಿ.ಎಫ್‌ ಬಾಬು (ಯೂಸುಫ್ ಷರೀಫ್) ಅವರ ಹೆಸರೇ ಮತದಾರರ ಪಟ್ಟಿಯಿಂದ ಡಿಲೀಟ್ ಆಗಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

ಬೆಂಗಳೂರು: ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಯ ಎಸ್‌ಐಆರ್‌ (SIR) ಪ್ರಕ್ರಿಯೆ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಬೆಂಗಳೂರಿನ ಪ್ರಭಾವಿ ಉದ್ಯಮಿ ಹಾಗೂ ರಾಜಕಾರಣಿ ಕೆ.ಜಿ.ಎಫ್‌ ಬಾಬು (ಯೂಸುಫ್ ಷರೀಫ್) ಅವರ ಹೆಸರೇ ಮತದಾರರ ಪಟ್ಟಿಯಿಂದ ಡಿಲೀಟ್ ಆಗಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

ದಶಕಗಳಿಂದ ರಾಜಧಾನಿಯಲ್ಲಿ ನೆಲೆಸಿರುವ ತಮ್ಮ ಹೆಸರನ್ನೇ ವೋಟರ್ ಲಿಸ್ಟ್‌ನಿಂದ ಕೈಬಿಟ್ಟಿರುವುದಕ್ಕೆ ಕೆ.ಜಿ.ಎಫ್‌ ಬಾಬು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸುವಂತೆ ಚುನಾವಣಾ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಬೂತ್‌ ನಂ. 49ರಲ್ಲಿ ಮತದಾನದ ಹಕ್ಕು ಹೊಂದಿದ್ದ ಬಾಬು

ಕೆ.ಜಿ.ಎಫ್‌ ಬಾಬು ಅವರು ಕಳೆದ 1993ರಿಂದಲೂ ಬೆಂಗಳೂರಿನಲ್ಲೇ ಖಾಯಂ ಆಗಿ ವಾಸವಾಗಿದ್ದಾರೆ. ಅವರು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಮತದಾರರಾಗಿದ್ದು, ಕ್ಷೇತ್ರದ ವ್ಯಾಪ್ತಿಗೆ ಬರುವ ಬೂತ್‌ ನಂಬರ್‌ 49 (ಯುನೈಟೆಡ್‌ ಮಿಷನ್‌ ಸ್ಕೂಲ್‌) ಮತಗಟ್ಟೆಯಲ್ಲಿ ಹಲವು ವರ್ಷಗಳಿಂದ ಮತದಾನದ ಹಕ್ಕು ಹೊಂದಿದ್ದಾರೆ. ಇತ್ತೀಚೆಗೆ ಅಧಿಕಾರಿಗಳು ಕೈಗೊಂಡಿರುವ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಿಹಾಕಲಾಗಿದೆ (ಡಿಲೀಟ್ ಮಾಡಲಾಗಿದೆ) ಎಂದು ತಿಳಿದುಬಂದಿದೆ.

ನೋಟಿಸ್‌ಗೆ ಕೆ.ಜಿ.ಎಫ್‌ ಬಾಬು ಆಕ್ಷೇಪ

ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಚುನಾವಣಾ ಅಧಿಕಾರಿಗಳು ಅವರಿಗೆ ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆ.ಜಿ.ಎಫ್‌ ಬಾಬು, ಅಧಿಕಾರಿಗಳ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾನು 1993ರಿಂದಲೂ ಇದೇ ನಗರದಲ್ಲಿ ವಾಸವಿದ್ದೇನೆ. ಎಲ್ಲಾ ಅಗತ್ಯ ದಾಖಲೆಗಳಿದ್ದರೂ ನನ್ನ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದು ಆಘಾತ ತಂದಿದೆ.

ಯಾವ ಕಾರಣಕ್ಕಾಗಿ ಹೆಸರನ್ನು ಡಿಲೀಟ್ ಮಾಡಲಾಗಿದೆ ಎಂಬುದಕ್ಕೆ ಚುನಾವಣಾ ಅಧಿಕಾರಿಗಳು ಸ್ಪಷ್ಟತೆ ನೀಡಬೇಕು. ಎಸ್‌ಐಆರ್‌ ಪ್ರಕ್ರಿಯೆಯ ಹೆಸರಿನಲ್ಲಿ ಯಾವುದೇ ಅರ್ಹ ನಾಗರಿಕರ ಮತದಾನದ ಹಕ್ಕನ್ನು ಕಸಿಯಬಾರದು. ನನ್ನ ದಾಖಲೆಗಳನ್ನು ಮರುಪರಿಶೀಲಿಸಿ, ಮತದಾರರ ಪಟ್ಟಿಯಲ್ಲಿ ನನ್ನ ಹೆಸರನ್ನು ಮರುಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯಾದ್ಯಂತ ನಡೆಯುತ್ತಿರುವ ಎಸ್‌ಐಆರ್‌ ಪ್ರಕ್ರಿಯೆಯ ಕುರಿತು ಈಗಾಗಲೇ ಸಾರ್ವಜನಿಕ ವಲಯದಲ್ಲಿ ಹಾಗೂ ವಿವಿಧ ರಾಜಕೀಯ ಪಕ್ಷಗಳಿಂದ ವ್ಯಾಪಕ ಆಕ್ಷೇಪಗಳು ಕೇಳಿಬರುತ್ತಿವೆ. ನಿಯಮಬದ್ಧವಾಗಿ ಪರಿಶೀಲನೆ ನಡೆಸದೆ, ನೈಜ ಮತದಾರರ ಹೆಸರುಗಳನ್ನು ಅಳಿಸಿಹಾಕಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಈಗ ಕೆ.ಜಿ.ಎಫ್‌ ಬಾಬು ಅವರಂತಹ ಪ್ರಮುಖ ವ್ಯಕ್ತಿಯ ಹೆಸರೇ ಪಟ್ಟಿಯಿಂದ ಮಾಯವಾಗಿರುವುದು ಚರ್ಚೆಯನ್ನು ಮತ್ತಷ್ಟು ಕಾವೇರಿಸಿದೆ. ಚುನಾವಣಾ ಆಯೋಗ ಹಾಗೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಕೂಡಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಾಂತ್ರಿಕ ಅಥವಾ ಮಾನವ ದೋಷಗಳಿಂದಾಗಿರುವ ತಪ್ಪನ್ನು ಸರಿಪಡಿಸಿ ಅರ್ಹ ಮತದಾರರ ಹಕ್ಕುಗಳನ್ನು ರಕ್ಷಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.

PREV
Read more Articles on
click me!

Recommended Stories

ನೈಸ್ ರಸ್ತೆಗೆ ಪರ್ಯಾಯವಾಗಿ ಬಿಡಿಎಯಿಂದ 'PRR-2' ಯೋಜನೆಗೆ ಮರುಜೀವ: 1,126 ಭೂಮಾಲೀಕರಿಗೆ ಆಸ್ತಿ ಕಳೆದುಕೊಳ್ಳುವ ಭೀತಿ!
Belagavi: ಸಾಹುಕಾರ್ ಕುಟುಂಬಕ್ಕೆ ಆಫ್ರಿಕಾ ಲಿಂಕ್: ಕೊನೆಗೂ ಇಡಿ ದಾಖಲಿಸಿದ ಆ ಬಿಗ್ ಕೇಸ್ ಯಾವುದು? ಬಯಲಾಗುತ್ತಾ ಅಸಲಿ ಸತ್ಯ?