
ಬೆಂಗಳೂರು: ಹರಿದ ಹಳೆಯ ಬಟ್ಟೆ, ಸಾಮಾನ್ಯ ವೇಷಭೂಷಣ ತೊಟ್ಟ ವ್ಯಕ್ತಿಯನ್ನು ಕಂಡರೆ ಬಡವ ಎಂದು ನಿರ್ಧರಿಸಿಬಿಡುತ್ತೇವೆ. ಆದರೆ ಈ ವೃದ್ಧನ ವಿಷಯದಲ್ಲಿ ಅದು ಸಂಪೂರ್ಣ ಸುಳ್ಳು. ಕರ್ನಾಟಕ ಮೂಲದ ಈ ವ್ಯಕ್ತಿ ನೋಡಲು ಅತ್ಯಂತ ಸಾಧಾರಣವಾಗಿ ಕಂಡರೂ ಶೇರು ಮಾರುಕಟ್ಟೆಯಲ್ಲಿ ಇವರ ಆಸ್ತಿಯ ಮೌಲ್ಯ ಕೇಳಿದ್ರೆ ನಿಮ್ಮ ತಲೆ ತಿರುಗೋದು ಗ್ಯಾರಂಟಿ! ಬರೋಬ್ಬರಿ 100 ಕೋಟಿ ರೂಪಾಯಿ ಮೌಲ್ಯದ ಶೇರುಗಳನ್ನು ಇವರು ಹೊಂದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ವ್ಲಾಗರ್ ಒಬ್ಬರು ವೃದ್ಧನ ಜೊತೆ ಸಂವಾದ ನಡೆಸುತ್ತಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಆ ವೃದ್ಧ ತಾವು ಹೊಂದಿರುವ ಶೇರುಗಳ ಪಟ್ಟಿಯನ್ನು ಬಿಚ್ಚಿಟ್ಟಿದ್ದಾರೆ. ಇದನ್ನು ಕೇಳಿದ ನೆಟ್ಟಿಗರು ದಂಗಾಗಿ ಹೋಗಿದ್ದಾರೆ. ಇಷ್ಟು ದೊಡ್ಡ ಆಸ್ತಿ ಇದ್ದರೂ ಇಷ್ಟೊಂದು ನಿರಾಡಂಬರವಾಗಿ ಬದುಕಲು ಹೇಗೆ ಸಾಧ್ಯ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಆತ ನೀಡಿರುವ ಮಾಹಿತಿ ಪ್ರಕಾರ, ಅವರ ಬಳಿ ಇರುವ ಪ್ರಮುಖ ಕಂಪನಿಗಳ ಶೇರುಗಳ ವಿವರ ಹೀಗಿದೆ. ಲಾರ್ಸೆನ್ ಅಂಡ್ ಟೂಬ್ರೊ (L&T): 27,855 ಶೇರುಗಳು (ಇದರ ಇಂದಿನ ಮಾರುಕಟ್ಟೆ ಮೌಲ್ಯ ಸುಮಾರು 80 ಕೋಟಿ ರೂ. ಎಂದು ಅಂದಾಜಿಸಲಾಗಿದೆ). ಅಲ್ಟ್ರಾಟೆಕ್ ಸಿಮೆಂಟ್‌ನಲ್ಲಿ ಸುಮಾರು 2,475 ಶೇರುಗಳು (ಇದರ ಮೌಲ್ಯ ಸುಮಾರು 21 ಕೋಟಿ ರೂ.). ಕರ್ನಾಟಕ ಬ್ಯಾಂಕ್‌ನಲ್ಲಿ 4,000 ಶೇರುಗಳು (ಮೌಲ್ಯ ಸುಮಾರು 1 ಕೋಟಿ ರೂ.).
ಒಟ್ಟಾರೆಯಾಗಿ ಇವರ ಪೋರ್ಟ್‌ಫೋಲಿಯೋ ಮೌಲ್ಯ 100 ಕೋಟಿ ರೂಪಾಯಿ ದಾಟುತ್ತದೆ. ಇಷ್ಟೇ ಅಲ್ಲದೆ, ಈ ಶೇರುಗಳಿಂದ ಇವರಿಗೆ ವಾರ್ಷಿಕವಾಗಿ ಡಿವಿಡೆಂಡ್ (ಲಾಭಾಂಶ) ರೂಪದಲ್ಲೇ ಸುಮಾರು 6.5 ಲಕ್ಷ ರೂಪಾಯಿ ಆದಾಯ ಬರುತ್ತದೆ. ಈ ಡಿವಿಡೆಂಡ್ ಹಣದಲ್ಲೇ ನಾನು ಆರಾಮವಾಗಿ ಬದುಕುತ್ತಿದ್ದೇನೆ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಇಷ್ಟೊಂದು ಹಣವಿದ್ದರೂ ಅಷ್ಟೊಂದು ಸಾಧಾರಣವಾಗಿ ಬದುಕುತ್ತಿರುವ ಇವರ ಸರಳತೆ ಅದ್ಭುತ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಇಷ್ಟು ಸಂಪತ್ತು ಇದ್ದು ಅನುಭವಿಸದಿದ್ದರೆ ಏನು ಪ್ರಯೋಜನ? ಸಾಯುವಾಗ ಇವನ್ನೆಲ್ಲಾ ಜೊತೆಗೆ ತಗೊಂಡು ಹೋಗಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ಒಟ್ಟಿನಲ್ಲಿ ಈ ವೃದ್ಧ ವ್ಯಕ್ತಿ ಶ್ರೀಮಂತಿಕೆ ಇರುವುದು ಬ್ಯಾಂಕ್ ಬ್ಯಾಲೆನ್ಸ್‌ನಲ್ಲಿಯೇ ಹೊರತು ಬಟ್ಟೆಯಲ್ಲಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಕರ್ನಾಟಕದ ಈ ಗುಪ್ತ ಕೋಟ್ಯಾಧಿಪತಿಯ ಹೂಡಿಕೆಯ ಜಾಣ್ಮೆ ಈಗ ಎಲ್ಲರಿಗೂ ಸ್ಫೂರ್ತಿಯಾಗಿದೆ.
Never judge a book by its cover.
An elderly man in a rural village, dressed in the most modest attire, No cars, No fancy houses.
His portfolio is worth Rs 100 Crore :
• Rs 80 Cr in L&T
• Rs 1 Cr in Karnataka Bank
• Rs 21 Cr in Ultratech Cement pic.twitter.com/0qGBaFhcmb— R (@AlphaWizarDD) July 23, 2026