7.5 ಕಿ.ಮೀ ಉದ್ದದ ಗುಲಾಬಿ ಮಾರ್ಗದ ಉದ್ಘಾಟನೆ: ಪ್ರಧಾನಿಗಳಿಗೆ ಪತ್ರ ಬರೆದ ಸಿಎಂ ಡಿಕೆಶಿ

Published : Oct 14, 2026, 09:20 AM IST
Namma Metro Pink Line

ಸಾರಾಂಶ

ಬೆಂಗಳೂರಿನ ನಮ್ಮ ಮೆಟ್ರೋದ 7.5 ಕಿ.ಮೀ ಉದ್ದದ ಗುಲಾಬಿ ಮಾರ್ಗದ ಉದ್ಘಾಟನೆಗೆ ಸಿದ್ಧತೆಗಳು ನಡೆದಿವೆ. ಈ ಮಾರ್ಗಕ್ಕೆ ಚಾಲನೆ ನೀಡಲು ಪ್ರಧಾನಿ ಮೋದಿಯವರಿಗೆ ಸಿಎಂ ಡಿ.ಕೆ. ಶಿವಕುಮಾರ್ ಪತ್ರ ಬರೆದಿದ್ದಾರೆ. ಇದು ಕಾರ್ಯಾರಂಭ ಮಾಡಿದರೆ ಬೆಂಗಳೂರು ದೇಶದ ಎರಡನೇ ಅತಿ ಉದ್ದದ ಮೆಟ್ರೋ ಜಾಲವಾಗಲಿದೆ.

ಬೆಂಗಳೂರು: ಸಿಲಿಕಾನ್ ಸಿಟಿಯ ಜನತೆಗೆ ಮತ್ತೊಂದು ಶುಭ ಸುದ್ದಿ ಸಿಕ್ಕಿದ್ದು, 'ನಮ್ಮ ಮೆಟ್ರೊ' (Bengaluru Namma Metro) ಗುಲಾಬಿ (ಪಿಂಕ್) ಕಾರಿಡಾರ್‌ನ 7.5 ಕಿ.ಮೀ. ಉದ್ದದ ಎತ್ತರಿಸಿದ (Elevated) ಮಾರ್ಗದ ಉದ್ಘಾಟನೆಗೆ ಸಜ್ಜಾಗಿದೆ. ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಿಂದ ತಾವರೆಕೆರೆಯವರೆಗೆ ಸಂಪರ್ಕ ಕಲ್ಪಿಸುವ ಈ ಮಾರ್ಗದ ಸುರಕ್ಷತಾ ತಪಾಸಣೆಯನ್ನು ಮೆಟ್ರೊ ರೈಲ್ವೆ ಸುರಕ್ಷತಾ ಆಯುಕ್ತರು (CMRS) ಈಗಾಗಲೇ ಪೂರ್ಣಗೊಳಿಸಿದ್ದಾರೆ.

ಪ್ರಧಾನಿಗಳಿಗೆ ಪತ್ರ ಬರೆದ ಸಿಎಂ ಡಿಕೆ ಶಿವಕುಮಾರ್

ಈ ನೂತನ ಮಾರ್ಗವನ್ನು ಉದ್ಘಾಟಿಸಲು ದಿನಾಂಕ ನಿಗದಿಪಡಿಸುವಂತೆ ಕೋರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳೆದ ವಾರವೇ ಪತ್ರ ಬರೆದಿದ್ದು, ಅಕ್ಟೋಬರ್ ತಿಂಗಳ ಸೂಕ್ತ ದಿನಾಂಕವನ್ನು ನಿಗದಿಪಡಿಸಲು ಮನವಿ ಮಾಡಿದ್ದಾರೆ.

103.6 ಕಿಮೀ ಉದ್ದದ ಮೆಟ್ರೋ ಮಾರ್ಗ

ಈ 7.5 ಕಿ.ಮೀ. ಮಾರ್ಗವು ಕಾರ್ಯಾರಂಭ ಮಾಡಿದರೆ ಬೆಂಗಳೂರಿನ ಮೆಟ್ರೊ ಜಾಲದ ಒಟ್ಟು ಉದ್ದವು 103.6 ಕಿ.ಮೀ.ಗೆ ತಲುಪಲಿದ್ದು, ದೇಶದಲ್ಲೇ ಎರಡನೇ ಅತಿ ಉದ್ದದ ಮೆಟ್ರೊ ಜಾಲ ಹೊಂದಿದ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಲಿದೆ.

ಬೊಮ್ಮಸಂದ್ರ-ಹೊಸೂರು ಮೆಟ್ರೋ ಜೋಡಣೆ ಬಗ್ಗೆ ಮೋದಿಗೆ ವಿಜಯ್‌ ಮನವಿ

ಚೆನ್ನೈ: ತಮಿಳುನಾಡು ಗಡಿಯಲ್ಲಿರುವ ಬೆಂಗಳೂರಿನ ಗಡಿಭಾಗದ ಬೊಮ್ಮಸಂದ್ರದಿಂದ ತಮಿಳುನಾಡಿನ ಹೊಸೂರಿಗೆ ಸಂಪರ್ಕ ಕಲ್ಪಿಸುವ ಅಂತಾರಾಜ್ಯ ಮೆಟ್ರೋ ರೈಲು ಯೋಜನೆ ಜಾರಿಯ ಪ್ರಸ್ತಾಪವನ್ನು ತಮಿಳುನಾಡಿನ ಮುಖ್ಯಮಂತ್ರಿ ವಿಜಯ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮುಂದಿಟ್ಟಿದ್ದಾರೆ.

ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ವಿಜಯ್‌, ‘ವಿಮಾನ ನಿಲ್ದಾಣ-ಕಿಲಂಬಕ್ಕಂ ಮತ್ತು ಪೂನಮಲ್ಲಿ-ಸುಂಗುವರ್ಚತ್ರಂ ನಡುವೆ ಸಂಪರ್ಕ ಕಲ್ಪಿಸುವ ಚೆನ್ನೈ ಮೆಟ್ರೋದ 3ನೇ ಹಂತಕ್ಕೆ ಆದಷ್ಟು ಬೇಗ ಅನುಮತಿಸಬೇಕು.

ನದಿಗಳ ಜೋಡಣೆ

ಅಂತೆಯೇ, ಬೊಮ್ಮಸಂದ್ರ ಮತ್ತು ಹೊಸೂರು ಮೆಟ್ರೋಗಳನ್ನು ಜೋಡಿಸುವ ಅಂತಾರಾಜ್ಯ ಯೋಜನೆಗೂ ಪರವಾನಗಿ ನೀಡಬೇಕು’ ಎಂದು ಕೋರಿದರು. ಜತೆಗೆ, ರಾಜ್ಯಗಳ ನಡುವೆ ನೀರಿನ ಸಮಾನತೆಯನ್ನು ತರುವಲ್ಲಿ ನದಿಗಳ ಜೋಡಣೆಯು ಅತ್ಯಗತ್ಯ ಎಂದು ಪ್ರತಿಪಾದಿಸುತ್ತಾ, ಗೋದಾವರಿ-ಕಾವೇರಿ ನದಿ ಜೋಡಣೆ ಯೋಜನೆಯು ರಾಷ್ಟ್ರೀಯ ಆದ್ಯತೆಯ ವಿಷಯವಾಗಿದೆ ಎಂದು ಹೇಳಿದರು.

PREV
Read more Articles on
click me!

Recommended Stories

Sting Operation in Karnataka: ಸ್ಟಿಂಗ್ ಆಪರೇಷನ್ ನಡೆಸಿದವರು ಯಾರು? ಈಗ ಎಲ್ಲಿದ್ದಾರೆ? ಆರ್ ಅಶೋಕ್ ಹೇಳಿಕೆ ಸಂಚಲನ!
ಬೆಂಗಳೂರು ಪೊಲೀಸರ ಮೇಲೆ ಆಂಧ್ರ ಐಎಎಸ್‌ ಅಧಿಕಾರಿ ಹಲ್ಲೆ; FIR ದಾಖಲು, ಏನಿದು ಪ್ರಕರಣ?