
ಬೆಂಗಳೂರು (ಆ.02) ಉದ್ಯಾನ ನಗರಿ ಬೆಂಗಳೂರು ಕುರಿತು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರಾಫಿಕ್, ಭಾಷೆ ಸೇರಿದಂತೆ ಹಲವು ವಿಚಾರಗಳಲ್ಲಿ ವಿವಾದಾತ್ಮಕವಾಗಿ ಬೆಂಬಿಸಲಾಗಿದೆ. ಅಸಲಿ ಬೆಂಗಳೂರಿನ ಸ್ವಾದ ಅನುಭವಿಸಿದರಿಗೆ ಗೊತ್ತು ಅನ್ನೋ ಮಾತಿದೆ. ಇದೀಗ ವಿದೇಶಿ ಮಹಿಳೆ ಬೆಂಗಳೂರಿಗೆ ಆಗಮಿಸಿ ಈ ನಗರ, ಇಲ್ಲಿನ ಜನರ ಪ್ರೀತಿಗೆ ಮಾರು ಹೋಗಿದ್ದಾರೆ. ತನ್ನ ಪ್ರವಾಸ ಮುಗಿಸಿ ತನ್ನ ದೇಶಕ್ಕೆ ಮರಳುವಾಗ ಭಾವುಕಳಾದ ಘಟನೆ ನಡೆದಿದೆ. ಈ ಕುರಿತು ವಿದೇಶಿ ಮಹಿಳೆ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಭಾರಿ ವೈರಲ್ ಆಗಿದೆ.
ಮಾಧ್ಯಮದಲ್ಲಿ ಸಿಗಲ್ಲ, ಇಲ್ಲಿ ಬಂದು ನೋಡಬೇಕು
ವಿದೇಶಿ ಮಹಿಳೆ ಅರಿನಾ ಬೆಂಗಳೂರಿಗೆ ಆಗಮಿಸಿದ್ದಾರೆ. ಮರಳಿ ತಮ್ಮ ದೇಶಕ್ಕೆ ತೆರಳುವಾಗ ಸುಂದರ ನೆನಪುಗಳು, ಅತ್ಯಂತ ಸುಂದರ ಅನುಭಗಳೊಂದಿಗೆ ತೆರಳಿದ್ದಾರೆ. ಬೆಂಗಳೂರು ನಗರ, ಜನ, ಇಲ್ಲಿನ ರಸ್ತೆ, ಸಂಸ್ಕೃತಿ ಇವೆಲ್ಲೂ ಅತ್ಯುತ್ತಮವಾಗಿದೆ. ಇದು ಮಾಧ್ಯಮಗಳಲ್ಲಿ ನೋಡಲು ಸಿಗುವುದಿಲ್ಲ ಎಂದು ಅರಿನಾ ಹೇಳಿದ್ದಾರೆ. ಹೀಗೆ ಹೇಳುತ್ತಾ ಭಾವುಕರಾಗಿ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ 15 ದಿನ, ಯಾವತ್ತೂ ಅತ್ತಿಲ್ಲ, ಆದರೆ ಇವತ್ತು..
ಅರಿನಾ ಬೆಂಗಳೂರನಲ್ಲಿ 15 ದಿನ ಕಳೆದಿದ್ದಾರೆ. ಈ ವೇಳೆ ಬೆಂಗಳೂರಿನ ಹಲವು ಪ್ರೇಕ್ಷಣಿಯ ಸ್ಥಳ, ಪಾರಂಪರಿಕ ತಾಣ, ಉದ್ಯಾನವನ, ಫುಡ್ ಸ್ಟ್ರೀಟ್, ಶಾಪಿಂಗ್ ಸೇರಿದಂತೆ ಹಲೆವೆಡೆ ಪ್ರಯಾಣಿಸಿದ್ದಾರೆ. ಈ ಕುರಿತು ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ನಾನು ಭೇಟಿ ಮಾಡಿದ ದೇಶದಿಂದ ತೆರಳುವಾದ ಯಾವತ್ತೂ ಅತ್ತಿಲ್ಲ. ಆದರೆ ಕಳೆದ 15 ದಿನಗಳಿಂದ ಬೆಂಗಳೂರಿನಲ್ಲಿ ತಂಗಿದ್ದೇನೆ. ಇದೀಗ ಮೂರನೇ ಭೇಟಿ ಮತ್ತೆ ಭಾರತಕ್ಕೆ ಮರಳಬೇಕು ಎಂದು ನಿರ್ಧರಿಸಿದ್ದೇನೆ ಎಂದು ಅರಿನಾ ಹೇಳಿದ್ದಾರೆ.
ಬೆಂಗಳೂರು ವಿವಿಧ ಸಂಸ್ಕೃತಿಗಳ ತವರಾಗಿದೆ. ಇಲ್ಲಿ ಹಿಂದೂ, ಕ್ರಿಶ್ಚಿಯನ್, ಇಸ್ಲಾಂ ಧರ್ಮಗಳು ಮಿಳಿತಗೊಂಡಿದೆ. ಇಲ್ಲಿ ರಸ್ತೆಗಳಲ್ಲಿ ನಡೆದು ಸಾಗಿದರೆ ಎರಡೂ ಬದಿಯಲ್ಲಿ ನಿವಾಸಗಳು, ಸುಂದರ ಚಿತ್ರಣ ಕಾಣಸಿಗುತ್ತದೆ. ಮನೆ ವಿಚಾರದಲ್ಲಿ ಭಾರತೀಯರ ಮುತುವರ್ಜಿ ವಹಿಸುತ್ತಾರೆ. ಸುಂದರ ಮನೆಗಳು, ಚೊಕ್ಕವಾಗಿಟ್ಟುಕೊಂಡ ಪರಿಸರ ಕಾಣಲು ಸಾಧ್ಯ. ಇಲ್ಲಿನ ಕಲರ್‌ಫುಲ್ ರಸ್ತೆಗಳು ನಮ್ಮನ್ನು ಆಕರ್ಷಿಸುತ್ತದೆ. ನೈಸರ್ಗಿಕವಾಗಿ ಈ ನಗರ ಅತೀ ಸುಂದರವಾಗಿದೆ. ಇಲ್ಲಿನ ವಾತಾವರಣ, ರಸ್ತೆ, ಮಾರುಕಟ್ಟೆ ಸೇರಿದಂತೆ ಎಲ್ಲವೂ ಸುಂದರ ಎಂದು ಅರಿನಾ ಹೇಳಿದ್ದಾರೆ.
ಪೂಜೆ, ದೇವಸ್ಥಾನಕ್ಕೆ ಭೇಟಿ ನೀಡಿದ ವಿದೇಶಿ ಮಹಿಳೆ
ಬೆಂಗಳೂರಿನ ಕೊನೆಯ ದಿನದಲ್ಲಿ ಇಲ್ಲಿನ ಸಂಸ್ಕೃತಿಯ ಉಡುಪು ಖರೀದಿಸಿದ್ದೇನೆ. ಇಷ್ಟೇ ಅಲ್ಲ ಧಾರ್ಮಿಕ ಕಾರ್ಯದಲ್ಲೂ ಪಾಲ್ಗೊಂಡಿದ್ದೇನೆ. ಪೂಜೆಯಲ್ಲೂ ಪಾಲ್ಗೊಂಡ ಅನುಭವ ಅದ್ಭುತವಾಗಿತ್ತು. ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದುಕೊಂಡಿದ್ದೇನೆ. ನಾನು ಬೆಂಗಳೂರಿನ ತೆರಳಲು ಇಷ್ಟಪಡುವುದಿಲ್ಲ. ಕಾರಣ ನಾನು ಬೆಂಗಳೂರು ಪ್ರೀತಿಯಲ್ಲಿ ಮುಳುಗಿ ಹೋಗಿದ್ದೇನೆ. ಇಲ್ಲಿನ ಜನರ ಮೇಲೆ ಪ್ರೀತಿ, ಭಾರತದ ನೈಜತೆಯ ನಗರದ ಮೇಲೆ ನನಗೆ ಪ್ರೀತಿ ಶುರುವಾಗಿದೆ. ಇಲ್ಲಿಂದ ತೆರಳಲು ಸಾಧ್ಯವಾಗುತ್ತಿಲ್ಲ. ಆದರೆ ಹೋಗಲೇಬೇಕಿದೆ ಎಂದು ಅರಿನಾ ಭಾವುಕರಾದ ಘಟನೆ ನಡೆದಿದೆ.