ಕಾವೇರಿ ನದಿಯಿಂದ ಸು. 450 ಮೀಟರ್ ಎತ್ತರದಲ್ಲಿರೋ ಬೆಂಗಳೂರಿಗೆ ನೀರು ಹೇಗೆ ಬರುತ್ತೆ?

Published : Nov 12, 2026, 11:12 AM IST
Cauvery Water

ಸಾರಾಂಶ

450 ಮೀಟರ್ ಎತ್ತರದಲ್ಲಿರುವ ಬೆಂಗಳೂರಿಗೆ ಕಾವೇರಿ ನೀರು ಕೆಆರ್‌ಎಸ್ ಡ್ಯಾಂನಿಂದ ಹಂತ ಹಂತವಾಗಿ ಬರುತ್ತದೆ. ಟಿಕೆ ಹಳ್ಳಿಯಲ್ಲಿ ಶುದ್ಧೀಕರಣಗೊಂಡು, ಹಾರೋಹಳ್ಳಿ ಮತ್ತು ತಾತಗುಣಿ ಮೂಲಕ ಪಂಪ್ ಮಾಡಲಾಗುತ್ತದೆ. ನಂತರ ನಗರದ ಟ್ಯಾಂಕ್‌ಗಳ ಮೂಲಕ ಮನೆ ಮನೆಗೆ ಸರಬರಾಜು ಮಾಡಲಾಗುತ್ತದೆ.

ಬೆಂಗಳೂರು: ನದಿಗಳು ಇಳಿಜಾರಿನತ್ತ ಮುಖ ಮಾಡಿ ಹರಿಯುತ್ತದೆ. ಆದ್ರೆ 450 ಮೀಟರ್ ಎತ್ತರದಲ್ಲಿರುವ ಬೆಂಗಳೂರು ಮಹಾನಗರ ಸಂಪೂರ್ಣವಾಗಿ ಕಾವೇರಿ ನೀರಿನ ಮೇಲೆ ಅವಲಂಬನೆಯಾಗಿದೆ. ಮಂಡ್ಯ ಕೆಆರ್‌ಎಸ್‌ ಆಣೆಕಟ್ಟೆಯಿಂದ 100 ಕಿಲೋ ಮೀಟರ್ ದೂರದಲ್ಲಿರುವ ರಾಜಧಾನಿ ಬೆಂಗಳೂರಿಗೆ ಕಾವೇರಿ ನೀರು ಹಂತ ಹಂತವಾಗಿ ಬರುತ್ತದೆ. ಮಂಡ್ಯದಿಂದ ಕೇವಲ ಒಂದು ಪೈಪ್ ಹಾಕಿದ್ರೆ ಸಾಕು ಅನ್ನೋ ಮಾತುಗಳಿವೆ. ಆದ್ರೆ ವೈಜ್ಞಾನಿಕವಾಗಿ ಕೇವಲ ಒಂದು ಪೈಪ್ ಹಾಕಿದ್ರೆ ಮಾತ್ರ ಸಾಲದು. ಈ ಲೇಖನವು ಬೆಂಗಳೂರಿಗೆ ಕಾವೇರಿ ನೀರು ಹೇಗೆ ಬರುತ್ತೆ ಎಂಬುದರ ಮಾಹಿತಿಯನ್ನು ಒಳಗೊಂಡಿದೆ.

ಕೃಷ್ಣರಾಜಸಾಗರ (KRS) ಜಲಾಶಯದಿಂದ ಹರಿದು ಬರುವ ಕಾವೇರಿ ನೀರನ್ನು ಮಳವಳ್ಳಿ ತಾಲ್ಲೂಕಿನ ಶಿವ ಬ್ಯಾಲೆನ್ಸಿಂಗ್ ರಿಸರ್ವಾಯರ್ (ಶಿವ ಅಣೆಕಟ್ಟು) ಬಳಿ ತಡೆಹಿಡಿಯಲಾಗುತ್ತದೆ. ಬೆಂಗಳೂರು ನಗರವು ಸರಾಸರಿ ಸಮುದ್ರ ಮಟ್ಟದಿಂದ 920 ಮೀಟರ್ ಎತ್ತರದಲ್ಲಿದೆ.

ಟಿಕೆ ಹಳ್ಳಿಯಲ್ಲಿ ನೀರು ಶುದ್ಧೀಕರಣ

ನದಿ ನೀರನ್ನು ಶುದ್ಧೀಕರಣ ಮಾಡಿದ ನಂತರವೇ ನಲ್ಲಿಗಳ ಮೂಲಕ ಹರಿಸಲಾಗುತ್ತದೆ. ಅದೇ ರೀತಿಯ ಕಾವೇರಿ ನೀರನ್ನು ಮೊದಲು ಟಿಕೆ ಹಳ್ಳಿಯ (ತೊರೆಕಾಡನಹಳ್ಳಿ) ಶುದ್ಧೀಕರಣ ಮಾಡಲಾಗುತ್ತದೆ. ಆಣೆಕಟ್ಟೆಯಿಂದ ಕಾವೇರಿ ನೀರನ್ನು ಟಿಕೆ ಹಳ್ಳಿಗೆ ತೆಗೆದುಕೊಂಡು ಬರಲಾಗುತ್ತದೆ. ಇಲ್ಲಿ ವೈಜ್ಞಾನಿಕ ವಿಧಾನಗಳಲ್ಲಿ ನೀರನ್ನು ಶುದ್ಧೀಕರಣ ಮಾಡುತ್ತಾರೆ.

ಟಿ.ಕೆ.ಹಳ್ಳಿ To ಹಾರೋಹಳ್ಳಿ To ತಾತಾಗುಣಿ

ಟಿ.ಕೆ.ಹಳ್ಳಿಯಲ್ಲಿ ಶುದ್ಧೀಕರಣಗೊಂಡ ನೀರನ್ನು ಬೃಹತ್ ಪಂಪ್‌ಗಳ ಮೂಲಕ ಲಿಫ್ಟ್ ಮಾಡಲಾಗುತ್ತದೆ. ಆದ್ರೆ ಟಿಕೆ ಹಳ್ಳಿಯಿಂದ ಬೆಂಗಳೂರು ಸುಮಾರು 90 ಕಿ.ಮೀ. ದೂರದಲ್ಲಿದೆ. ಹಾಗಾಗಿ ಇಲ್ಲಿಂದ ನೇರವಾಗಿ ಒಂದೇ ಪೈಪ್ ಮೂಲಕ ನೀರು ಕಳುಹಿಸಲು ಆಗಲ್ಲ. ಹಾಗಾಗಿ ಟಿ.ಕೆ.ಹಳ್ಳಿಯಿಂದ ಹಾರೋಹಳ್ಳಿಯುಲ್ಲಿ (ಸುಮಾರು 49 ಕಿ.ಮೀ) ಕಾವೇರಿ ನೀರು ಸಂಗ್ರಹಿಸಲಾಗುತ್ತದೆ. ನಂತರ ಹಾರೋಹಳ್ಳಿಯಿಂದ ತಾತಗುಣಿಗೆ (ಸುಮಾರು 60 ಕಿ.ಮೀ) ಕಾವೇರಿ ನೀರು ಬರುತ್ತದೆ.

ಬೆಂಗಳೂರಿಗೆ ವಿವಿಧ ಹಂತಗಳಲ್ಲಿ ನೀರು ಸರಬರಾಜು

ತಾತಗುಣಿಯಲ್ಲಿ ಸಂಗ್ರಹವಾದ ನೀರನ್ನು ಬೆಂಗಳೂರಿನಲ್ಲಿರುವ ದೊಡ್ಡ ಟ್ಯಾಂಕ್‌ಗಳಿಗೆ ಬರುತ್ತದೆ. ಈ ಟ್ಯಾಂಕ್‌ಗಳಿಂದ ನಿಮ್ಮ ಏರಿಯಾ, ನಂತರ ನಿಮ್ಮ ಗಲ್ಲಿ ಹಾಗೂ ಅಂತಿಮವಾಗಿನ ನಿಮ್ಮ ಮನೆಯ ನಲ್ಲಿಯೊಳಗೆ ಕಾವೇರಿ ನೀರು ಬರುತ್ತದೆ.

ಕಾವೇರಿಯ ಐದನೇ ಹಂತವೊಂದು ಬೆಂಗಳೂರಿನ 110 ಹಳ್ಳಿಗಳಿಗೆ ಬೇಕಾದ 77.5 ಸಾವಿರ ಕೋಟಿ ನೀರನ್ನು ಸಂಗ್ರಹಣೆ ಮಾಡುತ್ತದೆ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರವೂ ಕಾವೇರಿ ನೀರಿನ ಮೇಲೆ ಅವಲಂಬಿತವಾಗಿದೆ.

ಇದನ್ನೂ ಓದಿ:

PREV
Read more Articles on
click me!

Recommended Stories

ಪ್ರಧಾನಿ ಮೋದಿ ಭೇಟಿ: ನ.13ರಂದು ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ಬದಲು! ಪರ್ಯಾಯ ಮಾರ್ಗಗಳು ಇಲ್ಲಿವೆ
Namma Metro: ಉದ್ಘಾಟನೆಗೂ ಮುನ್ನ ಪಿಂಕ್ ಲೈನ್ ಮೆಟ್ರೋ ಕುರಿತಂತೆ ಮಹತ್ವದ ಅಪ್‌ಡೇಟ್!