Bengaluru: ಮರದ ಕೊಂಬೆ ಬಿದ್ದು ಗಾಯಗೊಂಡ ವ್ಯಕ್ತಿಗೆ ₹2.77 ಕೋಟಿ ಪರಿಹಾರ, GBAಗೆ ಹೈಕೋರ್ಟ್ ಆದೇಶ

Published : Sep 29, 2026, 10:01 AM IST
Karnataka High court

ಸಾರಾಂಶ

ಬೆಂಗಳೂರಿನಲ್ಲಿ ರಸ್ತೆಯಲ್ಲಿ ಹೋಗುವಾಗ ಮರದ ಕೊಂಬೆ ಬಿದ್ದು ಪಾರ್ಶ್ವವಾಯುವಿಗೆ ತುತ್ತಾದ ಜಿ.ಚಂದನ್ ಎಂಬುವವರ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ನಿರ್ಲಕ್ಷ್ಯ ವಹಿಸಿದ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಬರೋಬ್ಬರಿ 2.77 ಕೋಟಿ ರೂ. ಪರಿಹಾರ ನೀಡುವಂತೆ ಸೂಚಿಸಿದೆ. ಸಾರ್ವಜನಿಕರ ಸುರಕ್ಷತೆ ಬಗ್ಗೆಯೂ ನ್ಯಾಯಾಲಯ ಎಚ್ಚರಿಕೆ ನೀಡಿದೆ.

ಬೆಂಗಳೂರು: ರಸ್ತೆಯಲ್ಲಿ ಸಂಚರಿಸುತ್ತಿರುವ ವೇಳೆ ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡ ಜಿ.ಚಂದನ್ ಎಂಬುವವರಿಗೆ ಬರೋಬ್ಬರಿ 2.77 ಕೋಟಿ ರು. ಪರಿಹಾರ ಒದಗಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ನಿರ್ದೇಶಿಸಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

ಘಟನೆಯಿಂದ ಟ್ರೌಮ್ಯಾಟಿಕ್ ಪ್ಯಾರಾಪ್ಲೀಜಿಯಾ (ಆಘಾತದಿಂದ ಉಂಟಾಗುವ ಪಾರ್ಶ್ವವಾಯು) ಸಮಸ್ಯೆಗೆ ಒಳಗಾಗಿರುವ ತನಗೆ ವೈದ್ಯಕೀಯ ಹಾಗೂ ಕೌಟುಂಬಿಕ ಖರ್ಚು ಹಾಗೂ ಪುತ್ರಿಯರ ಶಿಕ್ಷಣ ವೆಚ್ಚಕ್ಕಾಗಿ 5 ಕೋಟಿ ರು. ಪರಿಹಾರ ಒದಗಿಸಲು ಸರ್ಕಾರ ಮತ್ತು ಜಿಬಿಎಗೆ ಆದೇಶಿಸುವಂತೆ ಕೋರಿ ಜಿ.ಚಂದನ್ ಹೈಕೋರ್ಟ್‌ಗೆ ಈ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠ, ಅರ್ಜಿದಾರರಿಗೆ 2,77,29,695 ರು. ಪರಿಹಾರ ವಾರ್ಷಿಕ ಶೇ.6ರ ಬಡ್ಡಿಯೊಂದಿಗೆ ಪಾವತಿಸಬೇಕು ಎಂದು ಜಿಬಿಎಗೆ ನಿರ್ದೇಶಿಸಿದೆ.

ಅಲ್ಲದೆ, ಸಾರ್ವಜನಿಕ ರಸ್ತೆ ಮತ್ತು ಜನರ ಸುರಕ್ಷತೆಯ ಬಗ್ಗೆ ಕ್ರಮ ಕೈಗೊಳ್ಳುವುದು ಜಿಜಿಎ ಕಾನೂನು ಬದ್ಧ ಕರ್ತವ್ಯವಾಗಿದೆ. ಮರದ ಕೊಂಬೆ ರಸ್ತೆ ಮೇಲೆ ಬೀಳುವ ಸಾಧ್ಯತೆಯ ಬಗ್ಗೆ ಮುಂಚಿತವಾಗಿ ಮಾಹಿತಿ ಇದ್ದರೂ ತುರ್ತು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವುದಕ್ಕೆ ಕಿಡಿ ಕಾರಿದೆ. ಹಾಗೆಯೇ, ಇಂತಹ ಘಟನೆಗಳನ್ನು ತಡೆಗಟ್ಟಲು ಹಲವು ನಿರ್ದೇಶನಗಳನ್ನು ನೀಡಿದೆ.

ಟ್ರಾಫಿಕಲ್ಲಿ ನಿತ್ಯ 2 ತಾಸು ಕಳೆವ ಶಾಲಾ ಮಕ್ಕಳು!

ರಾಜಧಾನಿಯ ಪೂರ್ವ ಭಾಗದ ಹೊಸಕೋಟೆ, ವೈಟ್‌ಫೀಲ್ಡ್, ವರ್ತೂರು, ಗುಂಜೂರು, ಆನೇಕಲ್ ಸಂಪರ್ಕಿಸುವ ರಾಜ್ಯ ಹೆದ್ದಾರಿ-35ರಲ್ಲಿ ಹದಗೆಟ್ಟ ರಸ್ತೆ, ಗುಂಡಿಗಳು, ಸವಾರರ ಅಶಿಸ್ತು, ಟ್ರಾಫಿಕ್ ಜಾಮ್‌ನಿಂದಾಗಿ ಶಾಲೆಗೆ ಹೋಗುವ ಮಕ್ಕಳು ನಿತ್ಯ 2 ತಾಸು ಬರೀ ಟ್ರಾಫಿಕ್‌ನಲ್ಲೇ ಕಳೆಯುವಂತಾಗಿದೆ.

ಅದರಲ್ಲೂ ಕಳೆದ 2 ವರ್ಷಗಳಲ್ಲಿ ಶಾಲೆಗೆ ಹೋಗುವ ಮಕ್ಕಳು ಶಾಲಾ ವಾಹನದಲ್ಲಿ ಕಳೆಯುವ ಸಮಯ ಶೇ.22ರಷ್ಟು ಏರಿಕೆಯಾಗಿದೆ. ವ್ಯಾಸಂಗ, ಕ್ರೀಡೆ ಮತ್ತಿತರ ಸದುದ್ದೇಶಗಳಿಗೆ ಬಳಕೆಯಾಗಬೇಕಿದ್ದ ಅಮೂಲ್ಯ ಸಮಯ ರಸ್ತೆಯಲ್ಲೇ ವ್ಯರ್ಥವಾಗುತ್ತಿದೆ. ಇದು ಕೇವಲ ನಗರ ಪೂರ್ವದ ಭಾಗಕ್ಕೆ ಸೀಮಿತವಾಗಿಲ್ಲ. ಹೆಚ್ಚು ಟ್ರಾಫಿಕ್ ದಟ್ಟಣೆ ಇರುವ ನಗರದ ಬಹುತೇಕ ಪ್ರದೇಶಗಳಲ್ಲಿನ ಶಾಲೆಗಳಿಗೆ ತೆರಳುವ ಎಲ್ಲಾ ಮಕ್ಕಳ ಪರಿಸ್ಥಿತಿಯು ಇದೆ ಆಗಿದೆ.

ರಾಜ್ಯ ಹೆದ್ದಾರಿ-35ರಲ್ಲಿನ ಶಾಲೆಗಳು, ಟ್ರಾಫಿಕ್ ಜಾಮ್‌ನಲ್ಲಿ ಕಳೆಯುವ ಸಮಯದ ಕುರಿತು ಇನ್ವೆಂಚರಿ ಅಕಾಡೆಮಿಯಿಂದ ನಡೆಸಿದ ಸರ್ವೇಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

ನಗರದ ಪೂರ್ವ ಭಾಗದ ಪ್ರಮುಖ ರಸ್ತೆಯಾಗಿರುವ ರಾಜ್ಯ ಹೆದ್ದಾರಿ-35ರಲ್ಲಿ 42 ಶಾಲೆಗಳು ಇವೆ. ಸರಾಸರಿ 40,000 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈ ರಸ್ತೆಯು ಐಟಿಬಿಟಿ ಕಂಪನಿಗಳು ಹಾಗೂ ಅವುಗಳ ಉದ್ಯೋಗಿಗಳು ಹೆಚ್ಚು ನೆಲೆಸಿರುವ ಪ್ರದೇಶವಾಗಿದೆ. ಹೀಗಾಗಿ, ಬಹುಮಹಡಿ ವಸತಿ ಕಟ್ಟಡಗಳಿಗೆ ಬೇಡಿಕೆ ತೀವ್ರವಾಗಿದೆ. ಅಲ್ಲದೇ, ಖಾಸಗಿ ಶಾಲೆಗಳ ಸಂಖ್ಯೆಯು ಹೆಚ್ಚಾಗಿದೆ.

PREV
Read more Articles on
click me!

Recommended Stories

AC ಆಫೀಸ್‌ ಬಿಟ್ಟು ಆಟೋ ಸ್ಟೇರಿಂಗ್ ಹಿಡಿದಿದ್ದೇಕೆ ಸಾಫ್ಟ್‌ವೇರ್ ಎಂಜಿನಿಯರ್? ಕಾರಣ ಕೇಳಿದ್ರೆ ಮನಸ್ಸು ಭಾರವಾಗುತ್ತೆ!
Gandhi Jayanti: ಗಾಂಧೀಜಿ ಮೊದಲ ಬಾರಿಗೆ ಬೆಂಗಳೂರಿಗೆ ಬಂದಾಗ ಆನಂದ್ ರಾವ್ ಸರ್ಕಲ್‌ನ ಈ ಮನೆಯಲ್ಲಿದ್ರು! ಆ ಘಟನೆ ಇಂದಿಗೂ ರೋಚಕ!