ಹೆಬ್ಬಾಳ ಕೆಂಪಾಪುರ ವಿದ್ಯುತ್ ಚಿತಾಗಾರದ ಕುಲುಮೆ-1 ತಾತ್ಕಾಲಿಕ ಸ್ಥಗಿತ; 5 ದಿನ ಶವಸಂಸ್ಕಾರ ಸೇವೆಯಲ್ಲಿ ವಿಳಂಬ!

Published : Oct 08, 2026, 03:58 PM IST
Hebbal Kempapura

ಸಾರಾಂಶ

ಬೆಂಗಳೂರಿನ ಹೆಬ್ಬಾಳ ಕೆಂಪಾಪುರ ವಿದ್ಯುತ್ ಚಿತಾಗಾರದಲ್ಲಿ ಕುಲುಮೆ-1ರ ನಿರ್ವಹಣಾ ಕಾಮಗಾರಿ ನಡೆಯಲಿದೆ. ಇದರಿಂದ ಅಕ್ಟೋಬರ್ 9 ರಿಂದ 13ರವರೆಗೆ ಶವಸಂಸ್ಕಾರಕ್ಕೆ ವಿಳಂಬವಾಗಲಿದ್ದು, ಕುಲುಮೆ-2 ಮಾತ್ರ ಲಭ್ಯವಿರುತ್ತದೆ. ಸಾರ್ವಜನಿಕರು ಪರ್ಯಾಯ ಚಿತಾಗಾರ ಬಳಸಲು ಮನವಿ ಮಾಡಲಾಗಿದೆ.

ಬೆಂಗಳೂರು (ಅ.08): ಬೆಂಗಳೂರಿನ ಪ್ರಮುಖ ಚಿತಾಗಾರಗಳಲ್ಲಿ ಒಂದಾದ ಹೆಬ್ಬಾಳ ಕೆಂಪಾಪುರ ವಿದ್ಯುತ್ ಚಿತಾಗಾರದಲ್ಲಿ ಶವಸಂಸ್ಕಾರಕ್ಕೆ ಮುಂದಿನ ಐದು ದಿನಗಳ ಕಾಲ ತುಸು ವಿಳಂಬವಾಗುವ ಸಾಧ್ಯತೆಯಿದೆ. ಇಲ್ಲಿನ ಕುಲುಮೆ-1 (Furnace-1) ರ ತುರ್ತು ನಿರ್ವಹಣಾ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಅಕ್ಟೋಬರ್ 9 ರಿಂದ ಅಕ್ಟೋಬರ್ 13 ರವರೆಗೆ ಸದರಿ ಕುಲುಮೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ ಎಂದು ಬೆಂಗಳೂರು ಉತ್ತರ ನಗರ ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ.

ಕುಲುಮೆ-2 ಮಾತ್ರ ಕಾರ್ಯನಿರ್ವಹಣೆ:

ಹೆಬ್ಬಾಳ ಕೆಂಪಾಪುರ ವಿದ್ಯುತ್ ಚಿತಾಗಾರದಲ್ಲಿ ಸದ್ಯ ಒಟ್ಟು ಎರಡು ಕುಲುಮೆಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ಕುಲುಮೆ-1 ರ ಯಾಂತ್ರಿಕ ದುರಸ್ತಿ ಹಾಗೂ ಅಗತ್ಯ ನಿರ್ವಹಣಾ ಕಾರ್ಯಗಳು ನಡೆಯಲಿವೆ. ಈ ಅವಧಿಯಲ್ಲಿ ಕೇವಲ ಕುಲುಮೆ-2 ಮಾತ್ರ ಸಾರ್ವಜನಿಕ ಬಳಕೆಗೆ ಲಭ್ಯವಿರಲಿದೆ.

ಅಂತ್ಯಕ್ರಿಯೆಗೆ ಕಾಯುವಿಕೆ ಅನಿವಾರ್ಯ – ಪರ್ಯಾಯ ಚಿತಾಗಾರ ಬಳಸಲು ಮನವಿ:

ಒಂದು ಕುಲುಮೆ ಮಾತ್ರ ಕಾರ್ಯಾಚರಣೆಯಲ್ಲಿರುವುದರಿಂದ ಪ್ರತಿದಿನ ಬರುವ ಮೃತದೇಹಗಳ ಅಂತ್ಯಕ್ರಿಯೆ ಸೇವೆಯಲ್ಲಿ ಸಹಜವಾಗಿಯೇ ಕಾಲಾವಕಾಶ ಹಾಗೂ ವಿಳಂಬ ಉಂಟಾಗಬಹುದು. ಇದರಿಂದಾಗಿ ಮೃತರ ಕುಟುಂಬಸ್ಥರಿಗೆ ತೊಂದರೆಯಾಗದಂತೆ ತಡೆಯಲು, ಸಾರ್ವಜನಿಕರು ಸಮೀಪದ ಇತರ ವಿದ್ಯುತ್ ಚಿತಾಗಾರಗಳ ಸೇವೆಯನ್ನು ಪರ್ಯಾಯವಾಗಿ ಬಳಸಿಕೊಳ್ಳುವಂತೆ ನಗರ ಪಾಲಿಕೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಅಕ್ಟೋಬರ್ 14 ರಿಂದ ಪೂರ್ಣ ಸೇವೆ ಆರಂಭ:

ಕುಲುಮೆ-1 ರ ನಿರ್ವಹಣಾ ಕಾಮಗಾರಿಗಳು ಅಕ್ಟೋಬರ್ 13 ರೊಳಗೆ ಪೂರ್ಣಗೊಳ್ಳಲಿದ್ದು, ಅಕ್ಟೋಬರ್ 14, 2026 ರಿಂದ ಎಂದಿನಂತೆ ಎರಡೂ ಕುಲುಮೆಗಳು ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿವೆ. ಈ 5 ದಿನಗಳ ಕಾಲ ಸಾರ್ವಜನಿಕರು ಪಾಲಿಕೆಯೊಂದಿಗೆ ಸಹಕರಿಸಬೇಕಾಗಿ ಕೋರಲಾಗಿದೆ.

PREV
Read more Articles on
click me!

Recommended Stories

ನಮ್ಮ ಮೆಟ್ರೋ ಗುಲಾಬಿ ಮಾರ್ಗ: ಕಾಳೇನ ಅಗ್ರಹಾರ-ತಾವರೆಕೆರೆ ಸುರಕ್ಷತಾ ತಪಾಸಣೆ ಪೂರ್ಣ, ಶೀಘ್ರ ರೈಲು ಸಂಚಾರ ಆರಂಭ!
Viral; ಇದು ಸಾಮಾನ್ಯ ಅನಿಸಬಾರದು; ಬೆಂಗಳೂರಿನ ರಸ್ತೆಗಳಲ್ಲಿ ಕಸದ ಬೆಟ್ಟ; ಜಾಲತಾಣದಲ್ಲಿ ಐಟಿ ಸಿಟಿ ಮಾನ ಹರಾಜು