
ಬೆಂಗಳೂರು ಅಂದ್ರೆ ನಮಗೆ ತಕ್ಕ ಮಟ್ಟಿಗೆ ನೆನಪಾಗೋದು ಐಟಿ ಕಂಪನಿಗಳು, ಟ್ರಾಫಿಕ್ ಮತ್ತು ತಂಪಾದ ಕ್ಲೈಮೇಟ್. ಆದ್ರೆ, ಇಲ್ಲೊಂದು ಶಾಕಿಂಗ್ ವಿಷಯ ಇದೆ. ಸಿಲಿಕಾನ್ ಸಿಟಿಯ ಕಸದ ಗಲಾಟೆ ಈಗ ಇಂಟರ್ನೆಟ್‌ನಲ್ಲಿ ಫುಲ್ ಟ್ರೆಂಡಿಂಗ್‌ನಲ್ಲಿದೆ. ಪ್ರತಿದಿನ ಸಾವಿರಾರು ಜನ್ರು ಓಡಾಡೋ ರೋಡ್‌ನಲ್ಲೇ ಗಬ್ಬು ವಾಸನೆ, ಕಸದ ಬೆಟ್ಟ ಬಿದ್ದಿದ್ರೆ ಹೆಂಗೆ ಇರುತ್ತೆ ಹೇಳಿ? ಪ್ರಿಯಾ ಝಾ ಅನ್ನೋ ಮಹಿಳೆ ದಿನಾ ತಮ್ಮ ಆಫೀಸ್‌ಗೆ ಇಂದಿರಾನಗರ ಮತ್ತು ಎಚ್‌ಎಎಲ್ ಹತ್ತಿರವಿರೋ 'ವಿಂಡ್ ಟನಲ್ ರಸ್ತೆ'ಯಲ್ಲೇ ಟ್ರಾವೆಲ್ ಮಾಡ್ತಾರೆ. ಕರ್ನಾಟಕ ಗಾಲ್ಫ್ ಅಸೋಸಿಯೇಷನ್ ಮತ್ತು ಎಚ್‌ಎಎಲ್ ಬೌಂಡ್ರಿ ಪಕ್ಕದಲ್ಲೇ ಇರೋ ಈ ರೋಡ್‌ನಲ್ಲಿ ಪ್ರತಿದಿನ ಕಸ, ಕೆಸರು, ಶಿಲಾಖಂಡರಾಶಿಗಳ ದೊಡ್ಡ ರಾಶಿಯೇ ಇರುತ್ತಂತೆ. ಈ ಪೋಟೋ ಹಾಗೂ ವಿಡಿಯೋ ವೈರಲ್ ಆಗಿದೆ.
ಇದನ್ನ ನೋಡಿ ಬೇಸತ್ತ ಪ್ರಿಯಾ, ವಿಡಿಯೋ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿ ಆಕ್ರೋಶ ಹೊರಹಾಕಿದ್ದಾರೆ. ದಿನಾ ನಾನು ಈ ರೋಡ್‌ನಲ್ಲೇ ಹೋಗಬೇಕು, ಅಬ್ಬಾ ಏನ್ ವಾಸನೆ ಗೊತ್ತಾ, ಸಣ್ಣ ಮಳೆ ಬಂದ್ರೂ ಸಾಕು ರೋಡ್ ಪೂರ್ತಿ ಚರಂಡಿ ನೀರು ತುಂಬಿಡುತ್ತೆ, ಸಾವಿರಾರು ಜನ್ರು ಓಡಾಡೋ ರೋಡ್ ಹೀಗಿದ್ರೆ ಹೆಂಗೆ, ಇದು ನಾರ್ಮಲ್ ಅಂತ ನಾವ್ಯಾರೂ ಒಪ್ಕೊಬಾರದು ಅಂತ ಪ್ರಿಯಾ ಗರಂ ಆಗಿದ್ದಾರೆ. ಈ ವಿಡಿಯೋ ವೈರಲ್ ಆಗ್ತಿದ್ದಂತೆಯೇ, ಕೆನಡಾದ ಫೇಮಸ್ ಕಂಟೆಂಟ್ ಕ್ರಿಯೇಟರ್ ಕ್ಯಾಲೆಬ್ ಫ್ರೈಸೆನ್ ಕೂಡ ಇದಕ್ಕೆ ಸಪೋರ್ಟ್ ಮಾಡಿದ್ದಾರೆ. ಮೊನ್ನೆಯಷ್ಟೇ ಇಂದಿರಾನಗರದ ಹಾಳಾದ ಫುಟ್‌ಪಾತ್‌ಗಳ ಬಗ್ಗೆ ವಿಡಿಯೋ ಮಾಡಿ ಇವ್ರು ಸೌಂಡ್ ಮಾಡಿದ್ದಾರೆ. ನಾನು 2019 ರಿಂದ 2024 ರವರೆಗೆ ದಿನಾ ನನ್ ವೈಫ್‌ನ ಡ್ರಾಪ್ ಮಾಡೋಕೆ ಇದೇ ರೋಡ್‌ನಲ್ಲಿ ಹೋಗ್ತಿದ್ದೆ, ಬಟ್ ಈ ರೋಡ್ ಯಾವತ್ತೂ ಇಷ್ಟೊಂದು ಕೆಟ್ಟದಾಗಿ ಇರಲಿಲ್ಲ, ಬೆಂಗಳೂರಿನ ವೇಸ್ಟ್ ಮ್ಯಾನೇಜ್‌ಮೆಂಟ್‌ನಲ್ಲಿ ಏನೋ ದೊಡ್ಡ ಯಡವಟ್ಟು ಆಗಿದೆ, ಇಲ್ಲಾಂದ್ರೆ ಕಸ ಹಾಕೋರನ್ನ ಕೇಳೋರೇ ಇಲ್ಲದಂಗೆ ಆಗಿದೆ ಅಂತ 'X' ನಲ್ಲೂ ಬೇಸರ ವ್ಯಕ್ತಪಡಿಸಿದ್ದಾರೆ.
ವಿಡಿಯೋ ನೋಡಿದ ನೆಟ್ಟಿಗರಂತೂ ಬಿಬಿಎಂಪಿ ಮತ್ತು ಸಿಟಿ ಆಡಳಿತಕ್ಕೆ ಫುಲ್ ಕ್ಲಾಸ್ ತಗೊಂಡಿದ್ದಾರೆ. ಒಬ್ಬರು ಇತ್ತೀಚೆಗಷ್ಟೇ ಓಪನ್ ಆದ ಬಿಟಿಎಂ ಲೇಕ್ ರೋಡ್‌ನಲ್ಲೂ ಈಗ ಕಸ ಸುರಿಯೋಕೆ ಶುರು ಮಾಡಿದ್ದಾರೆ ಎಂದು ಬೇಸರ ಹಂಚಿಕೊಂಡರೆ, ಇನ್ನೊಬ್ಬರು ಬೆಂಗಳೂರಿನ 90% ಜಾಗ ಹೀಗೆಯೇ ಇದೆ, ಕಸ ಹಾಕೋರಿಗೆ ಸರಿಯಾಗಿ ದಂಡ ಹಾಕೋ ಪವರ್ ಯಾರ ಬಳಿಯೂ ಇಲ್ಲ ಅಂತ ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ರೋಡ್‌ನಲ್ಲಿ ಕಸ ಹಾಕಬೇಡಿ ಅಂತ ಬೋರ್ಡ್ ಇದ್ರೂ ನಮ್ ಜನ ತಂದಿಟ್ಟು ಹೋಗ್ತಾರೆ, ಜನರಲ್ಲೂ ಸಿವಿಕ್ ಸೆನ್ಸ್ ಇರ್ಬೇಕು ಅಲ್ವಾ ಅಂತ ಜನರ ಮೇಲೂ ಕಾಂಪೌಂಡ್ ಹಾಕಿದ್ದಾರೆ.
ಇಂಟರ್ನೆಟ್‌ನಲ್ಲಿ ಈ ರಂಪಾಟ ನೋಡಿ ಬೆಂಗಳೂರು ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಲಿಮಿಟೆಡ್ (BWSML) ಅಧಿಕಾರಿಗಳು ತಕ್ಷಣ ರಿಯಾಕ್ಟ್ ಮಾಡಿದ್ದಾರೆ. BWSML ನ ಉಪ ಪ್ರಧಾನ ವ್ಯವಸ್ಥಾಪಕರಾದ ಭೀಮೇಶ್ ಅವರ ಗಮನಕ್ಕೆ ಈ ಮ್ಯಾಟರ್ ತರಲಾಗಿದ್ದು, ಕಸ ಸಂಗ್ರಹಿಸೋ ಕಾರ್ಮಿಕರು ಮಧ್ಯಾಹ್ನದವರೆಗೆ ಕೆಲಸ ಮಾಡಿರೋದ್ರಿಂದ, ನಾಳೆ ಬೆಳಿಗ್ಗೆಯೇ ಆ ಜಾಗದಲ್ಲಿರೋ ಕಸವನ್ನೆಲ್ಲಾ ಕಂಪ್ಲೀಟ್ ಆಗಿ ಕ್ಲೀನ್ ಮಾಡಿಸ್ತೀವಿ ಮತ್ತು ಕ್ಲೀನ್ ಆದಮೇಲೆ ವಿಡಿಯೋ ಫೋಟೋ ಕಳಿಸ್ತೀವಿ ಅಂತ ಪ್ರಾಮಿಸ್ ಮಾಡಿದ್ದಾರೆ. ಭರವಸೆ ಏನೋ ಸಿಕ್ಕಿದೆ, ಬಟ್ ನಾಳೆ ಬೆಳಿಗ್ಗೆ ರೋಡ್ ನಿಜವಾಗ್ಲೂ ನೀಟ್ ಆಗುತ್ತಾ ಅಥವಾ ಮತ್ತೆ ಅದೇ ಕಸದ ಪಾರ್ಕಿಂಗ್ ಯಾರ್ಡ್ ಆಗುತ್ತಾ ಅನ್ನೋದನ್ನ ಕಾದು ನೋಡಬೇಕು.