Bengaluru: ದ್ವಿಚಕ್ರ ವಾಹನ ಸವಾರರಿಗೆ ಗುಡ್‌ನ್ಯೂಸ್; ಇನ್ಮೇಲೆ ಈ ರಸ್ತೆ ಟೋಲ್ ಫ್ರೀ, ಶೀಘ್ರವೇ ಆದೇಶ

Published : Sep 23, 2026, 11:34 AM IST
Toll free

ಸಾರಾಂಶ

ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನ 20 ವರ್ಷಗಳ ನಿರ್ವಹಣಾ ಒಪ್ಪಂದ ಮುಕ್ತಾಯವಾಗುತ್ತಿದ್ದು, ಇದನ್ನು ಎನ್‌ಎಚ್ಎಐ ತನ್ನ ವಶಕ್ಕೆ ಪಡೆಯಲಿದೆ. ಇದರಿಂದಾಗಿ ಶೀಘ್ರದಲ್ಲೇ ದ್ವಿಚಕ್ರ ವಾಹನಗಳಿಗೆ ಟೋಲ್ ಶುಲ್ಕ ಸಂಪೂರ್ಣ ಉಚಿತವಾಗುವ ನಿರೀಕ್ಷೆಯಿದೆ. ಅಲ್ಲದೆ, ಇತರ ವಾಹನಗಳ ಟೋಲ್ ದರವೂ ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆಯಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನ ವಾಹನ ಸವಾರರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಸಿಲಿಕಾನ್ ಸಿಟಿಯ ಪ್ರಮುಖ ಮಾರ್ಗವಾಗಿರುವ ಎಲೆಕ್ಟ್ರಾನಿಕ್ ಸಿಟಿ ಟೋಲ್ ನಲ್ಲಿ ಬೈಕ್ ಗಳಿಗೆ ಇನ್ಮುಂದೆ ಶುಲ್ಕ ಇರೋದಿಲ್ಲ. ಈ ಕುರಿತಂತೆ ಶೀಘ್ರವೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸುವ ನಿರೀಕ್ಷೆ ಇದೆ.

ಎಲೆಕ್ಟ್ರಾನಿಕ್ ಸಿಟಿ ಟೋಲ್‌ನಲ್ಲಿ ವಾಹನ ಸವಾರರಿಗೆ ಕಾದಿದೆ ಅಚ್ಚರಿ!

ಶೀಘ್ರದಲ್ಲೇ ಎಲೆಕ್ಟ್ರಾನಿಕ್ ಸಿಟಿ ಟೋಲ್ ನಲ್ಲಿ ದ್ವಿಚಕ್ರ ವಾಹನಗಳಿಗೆ ಉಚಿತವಾಗಿ ತೆರೆದುಕೊಳ್ಳುವ ಬಗ್ಗೆ ಏಷ್ಯಾನೆಟ್ ಸುವರ್ಣನ್ಯೂಸ್ ಗೆ NHAI ಅಧಿಕಾರಿಗಳ ಮಾಹಿತಿ ನೀಡಿದ್ದು, ಎಲೆಕ್ಟ್ರಾನಿಕ್ ಸಿಟಿ ಪ್ರೈಓವರ್‌ನ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ಮತ್ತು ನಿರ್ವಹಣೆಯ ಒಪ್ಪಂದದ ಅವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ NHAI ಮಹತ್ವ ನಿರ್ಧಾರ ಕೈಗೊಳ್ಳಿದೆ.

ಟೋಲ್ ಇರಲಿದೆ ಆದರೆ..

ಹಿಂದೆ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ಮತ್ತು ನಿರ್ವಹಣೆಯ ಕುರಿತಂತೆ ಮಾಡಿಕೊಂಡಿದ್ದ 20 ವರ್ಷಗಳ ಒಪ್ಪಂದದ ಅವಧಿ ಮುಕ್ತಾಯಗೊಂಡ ಹಿನ್ನಲೆ, ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಹಾಗೂ ಟೋಲ್ ಅನ್ನು ಎನ್‌ಎಚ್ಎಐ ತನ್ನ ವಶಕ್ಕೆ ಪಡೆದುಕೊಳ್ಳಲಿದೆ.

NHAI ವಶಕ್ಕೆ ರಸ್ತೆ ಮಾರ್ಗ ಬರುತ್ತಿದ್ದಂತೆ ಟೋಲ್ ದರ ಪರಿಷ್ಕರಣೆ ಆಗಲಿದ್ದು, ಟೋಲ್ ದರ ವಾಹನಗಳಿಗೆ ಕಡಿಮೆಯಾಗುವ ನಿರೀಕ್ಷೆ ಇದೆ. ಇದೇ ಸಂದರ್ಭದಲ್ಲಿ ಬೈಕ್ ಗಳಿಗೆ ಟೋಲ್ ಫ್ರೀ ಆಗಲಿದೆ. ಈಗಾಗಲೇ ಟೋಲ್ ದರ ಪರಿಷ್ಕರಣೆ ಪ್ರಕ್ರಿಯೆ ಆರಂಭವಾಗಿದ್ದು, ಕೆಲವೇ ದಿನಗಳಲ್ಲಿ ಬೈಕ್ ಗಳಿಗೆ ಟೋಲ್ ಫ್ರೀ ಆದೇಶ ಹೊರಬರುವ ನಿರೀಕ್ಷೆ ಇದೆ.

ಅಂದಹಾಗೇ, ಹೊಸೂರು ರಸ್ತೆ ಮಾರ್ಗದಲ್ಲಿ ಕೇಂದ್ರ ಸಿಲ್ಕ್ ಬೋರ್ಡ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಬಳಿಯ ಬೊಮ್ಮನಹಳ್ಳಿಯ ನಡುವೆ ಸುಮಾರು 10 ಕಿಲೋ ಮೀಟರ್ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ ನಿರ್ಮಾಣ 2006ರಲ್ಲಿ ಆರಂಭವಾಗಿತ್ತು. 2010 ಜನವರಿ 22 ರಂದು ಫ್ಲೈಓವರ್ ಉದ್ಘಾಟನೆ ಮಾಡಲಾಗಿತ್ತು. ಬೆಂಗಳೂರು ಎಲಿವೇಟೆಡ್ ಟೋಲ್ ವೇ ಲಿಮಿಟೆಡ್ ಸುಮಾರು ಒಂದು ಸಾವಿರ ಕೋಟಿ ಅಂದಾಜು ವೆಚ್ಚದಲ್ಲಿ ಬಿಲ್ಡ್ ಆಪರೇಟ್ ಟ್ರಾನ್ಸ್ಫರ್ ಮಾದರಿಯಲ್ಲಿ ಮೇಲ್ಸೇತುವೆಯನ್ನು ನಿರ್ಮಾಣ ಮಾಡಿತ್ತು.

ಎಲೆಕ್ಟ್ರಾನಿಕ್ಸ್ ಸಿಟಿ ಟೋಲ್ ಪ್ಲಾಜಾದಲ್ಲಿ ಸದ್ಯ ಕಾರುಗಳು, ಜೀಪ್ ಮತ್ತು ವ್ಯಾನ್‌ಗಳಿಗೆ ಒಂದೇ ಶುಲ್ಕ ವಿಧಿಸಲಾಗುತ್ತಿದೆ. ಸುಮಾರು 65 ರೂಪಾಯಿ ಶುಲ್ಕ ನಿಗದಿ ಪಡಿಸಲಾಗಿದ್ದು, 25 ರೂಪಾಯಿಯಿಂದ 365 ರೂಪಾಯಿ ವರೆಗೂ ವಿವಿಧ ವಾಹನಗಳಿಗೆ ಶುಲ್ಕ ವಿಧಿಸಲಾಗುತ್ತಿದೆ. ಶುಲ್ಕ ಪರಿಕ್ಷರಣೆಯಾದ ಬಳಿಕ ಈ ದರ ಕಡಿಮೆಯಾಗುವ ನಿರೀಕ್ಷೆ ಇದೆ.

PREV
Read more Articles on
click me!

Recommended Stories

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸರ್ಪ್ರೈಸ್: ದೋಸೆ ಮಾಡಿ, ಫಿಲ್ಟರ್‌ ಕಾಫಿ ಸವಿದ ಟೆಲಿಕಾಂ ಮಿನಿಸ್ಟರ್‌
ವಿಮಾನದಲ್ಲಿ ಬಂದು ಕಳ್ಳತನ ಮಾಡಿ ಫ್ಲೈಟ್‌ನಲ್ಲೇ ಎಸ್ಕೇಪ್, ಬೆಂಗಳೂರಲ್ಲಿ ಸಿಕ್ಕಿಬಿದ್ದ ಕಳ್ಳ ಅಂತಿಥವನಲ್ಲ