
ದಸರಾ ಮತ್ತು ದೀಪಾವಳಿ ಹಬ್ಬ ಹತ್ತಿರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೆಟ್ರೋ ನಗರಗಳಿಂದ ಜನರು ಸ್ವತಃ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಈ ಹಿನ್ನೆಯಲ್ಲಿ ಭಾರತೀ ರೈಲ್ವೆ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಅಕ್ಟೋಬರ್, ನವೆಂಬರ್ ತಿಂಗಳಿನಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ಮತ್ತು ಮುಂಬೈ ನಡುವೆ ವಿಶೇಷ ರೈಲುಗಳನ್ನು ಪ್ರಕಟಿಸಿದೆ.
ಅಷ್ಟೇ ಅಲ್ಲದೆ, ವಿಶಾಖಪಟ್ಟಣ ಮತ್ತು ಬೆಂಗಳೂರು ನಡುವೆ ವಿಶೇಷ ರೈಲುಗಳ ಸಂಚಾರಕ್ಕೆ ಅವಕಾಶ ನೀಡಿದೆ. ರೈಲು ನಂಬರ್ 01013 ಅಕ್ಟೋಬರ್ 10ರಿಂದ ನವೆಂಬರ್ 21ರ ವರೆಗೂ ಪ್ರತಿ ಶನಿವಾರ ನಡುರಾತ್ರಿ 12:35ಕ್ಕೆ CSMT ಮುಂಬೈನಿಂದ ಪ್ರಾರಂಭವಾಗಿ, ಸುಮಾರು 24 ಗಂಟೆಗಳ ಪ್ರಯಾಣದ ನಂತರ ರಾತ್ರಿ 11:55ಕ್ಕೆ ಗಂಟೆಗೆ SMVT ಬೆಂಗಳೂರಿಗೆ ಆಗಮಿಸಲಿದೆ.
ಮತ್ತೆ ಪ್ರಯಾಣಿಸಲು ರೈಲು ನಂಬರ್ 01014, ಅಕ್ಟೋಬರ್ 11ರಿಂದ ನವಂಬರ್ 22ರ ವರೆಗೂ ಪ್ರತಿ ಭಾನುವಾರ 4:30ಕ್ಕೆ SMVT ಬೆಂಗಳೂರಿನಿಂದ ಆರಂಭವಾಗ, ಬೆಳಗ್ಗೆ 4:05ಕ್ಕೆ CSMT ಮುಂಬೈಗೆ ತಲುಪಲಿದೆ. ಈ ಎರಡು ರೈಲುಗಳು ಪ್ರತಿ ಮಾರ್ಗದಲ್ಲಿ ಏಳು ಬಾರಿ ಪ್ರಯಾಣಿಸಲಿದೆ. ಈ ಎರಡು ರೈಲುಗಳು ದಾದರ್. ಥಾಣೆ, ಕಳ್ಯಾಣ್, ಲೋನಾವಾಲಾ, ಪುಣೆ, ಲೋನಂದ್, ಸತರಾ, ಕರಾಡ್, ಸಾಂಗ್ಲಿ, ಮಿರಾಜ್, ಕುಡಾಚಿ, ರಾಯಭಾಗ್, ಘಟಪ್ರಭ, ಬೆಳಗಾವಿ, ಲೋಂಡಾ, ಧಾರವಾಡ, ಹುಬ್ಬಳ್ಳಿ, ಹಾವೇರಿ, ರಾಣಿಬೆನ್ನೂರ್, ಹರಿಹರ, ದಾವಣಗೆರೆ, ರಾಯಭಾಗ, ಬೆಳಗಾವಿ, ಅರಿಸಿಕರೆ, ತುಮಕೂರು ಮಾರ್ಗದಲ್ಲಿ ಸಂಚರಿಸಲಿದೆ.
ರೈಲು ನಂ. 08583 ಅಕ್ಟೋಬರ್ 06ರಿಂದ ನವೆಂಬರ್ 24 ರ ವರೆಗೂ ಪ್ತತಿ ಮಂಗಳವಾರ ಸಂಜೆ 7 ಗಂಟೆಗೆ ವಿಶಾಖಪಟ್ಟಣದಿಂದ ಹೊರಟು, ಮಧ್ಯಾಹ್ನ 12:45ಕ್ಕೆ ಬೆಂಳೂರಿಗೆ ಆಗಮಿಸಲಿದೆ. ಮತ್ತೆ ಬೆಂಗಳೂರಿನಿಂದ ಹೊರಟು, ಮರುದಿನ ಮಧ್ಯಾಹ್ನ 1:30ಕ್ಕೆ ವಿಶಾಖಪಟ್ಟಣಕ್ಕೆ ಆಗಮಿಸಲಿದೆ. ಈ ರೈಲು ದುವ್ವಾಡ, ಅಮಕಾಪಲ್ಲಿ, ಸೋಮರ್ಲಕೋಟ, ಎಲೂರು, ವಿಜಯವಾಡ, ಖಂಗೋಲು, ನೆಲ್ಲೂರು, ರೇಣುಗುಂಟ, ಜೋಲಾರ್ ಪೇಟ, ಬಂಗಾರ ಪೇಟೆ, ಕೆಆರ್ ಮೂಲಕ ಬೆಂಗಳೂರಿಗೆ ಆಗಮಿಸಲಿದೆ.
ವಿಶೇಷ ರೈಲುಗಳಿಗೆ ಸಂಬಂಧಿಸಿದ ಸುಧಾರಣೆಯನ್ನು ಶೀಘ್ರವೇ ಅಡ್ವಾನ್ಸ್ ಡೇ ರಿಜರ್ವೇಷನ್ ಕೂಡ ಏರ್ಪಾಡು ಮಾಡುತ್ತೆವೆ ಎಂದು ದಕ್ಷಿಣ ಮಧ್ಯ ರೈಲೆ ಮಾಹಿತಿ ನೀಡಿದೆ.