Bengaluru Rains: ಮಕ್ಕಳಿಗೆ ಮತ್ತೆ ಆನ್‌ಲೈನ್‌ ಕ್ಲಾಸ್‌; ನೌಕರರಿಗೂ ವರ್ಕ್‌ ಫ್ರಂ ಹೋಮ್..!

By BK AshwinFirst Published Sep 6, 2022, 11:04 AM IST
Highlights

ಬೆಂಗಳೂರಿನಲ್ಲಿ ತೀವ್ರ ಮಳೆಯಾಗಿದ್ದು, ಹಲವು ಪ್ರದೇಶಗಳು ಮುಳುಗಡೆಯಾಗಿವೆ. ಈ ಹಿನ್ನೆಲೆ ಹಲವು ಕಂಪನಿಗಳು ವರ್ಕ್‌ ಫ್ರಂ ಹೋಮ್‌ ಆರಂಭಿಸಿದ್ದರೆ, ಹಲವು ಶಾಲೆಗಳು ಮತ್ತೆ ಆನ್‌ಲೈನ್‌ ಕ್ಲಾಸ್‌ ನಡೆಸಲು ಮುಂದಾಗಿವೆ. 

ಬೆಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿದ್ದು, (Heavy Rains in Bengaluru) ಇದರಿಂದ ಜನ ಸಾಮಾನ್ಯರ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು, ಜನ ಸಾಮಾನ್ಯರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಬೆಂಗಳೂರಿನ ಹಲವು ಪ್ರದೇಶಗಳು ತೀವ್ರ ಮುಳುಗಡೆಯಾಗುತ್ತಿರುವುದರಿಂದ, ನಗರದ ಹಲವಾರು ಕಂಪನಿಗಳು ಮತ್ತು ಕಚೇರಿಗಳು (Offices) ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಿವೆ. ನಗರದ ಹಲವೆಡೆ ಜಲಾವೃತವಾಗಿದ್ದು, ಪ್ರಮುಖ ರಸ್ತೆಗಳು ಕೆರೆಗಳಾಗಿವೆ. ಬೆಂಗಳೂರು ಸಂಚಾರಿ ಪೊಲೀಸರು (Bengaluru Traffic Police) ಸಹ ನಿವಾಸಿಗಳು ಮನೆಯಿಂದ ಹೊರಬರದಂತೆ ಮನವಿ ಮಾಡಿದರು. ಆಹಾರ-ತಂತ್ರಜ್ಞಾನ ಸೇವೆ ಸ್ವಿಗ್ಗಿ (Swiggy) ಮತ್ತು ಗೋಲ್ಡ್‌ಮನ್ ಸ್ಯಾಚ್ಸ್ (Goldman Sachs) ಹೂಡಿಕೆ ಬ್ಯಾಂಕ್‌ ಸೇರಿದಂತೆ ಹಲವು ದೊಡ್ಡ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಮನವಿ ಮಾಡಿವೆ. ಸಣ್ಣ ಕಂಪನಿಗಳು ಮತ್ತು ಕಚೇರಿಗಳು ತಮ್ಮ ಸಿಬ್ಬಂದಿಗೆ ಮನೆಯಿಂದ ಕೆಲಸ ಮಾಡುವಂತೆ (Work From Home) ಸೂಚಿಸಿವೆ.

ಈ ಮಧ್ಯೆ, ಪ್ರವಾಹ ಮತ್ತು ಹಾನಿಗೊಳಗಾದ ರಸ್ತೆಗಳಿಂದಾಗಿ ನಗರದ ಹಲವಾರು ಶಾಲೆಗಳು ಮತ್ತೆ ಆನ್‌ಲೈನ್‌ (Online) ಕ್ಲಾಸ್‌ ನಡೆಸಲು ನಿರ್ಧರಿಸಿವೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಶಾಲೆಗಳು ಇದೇ ರೀತಿ ಆನ್‌ಲೈನ್‌ನಲ್ಲೇ ನಡೆಯುವ ನಿರೀಕ್ಷೆಯಿದೆ. “ಮುಂಗಾರು ಮಳೆಯು ನಗರದ ಹೊರೆ ಮತ್ತು ದುರ್ಬಲ ಮೂಲಸೌಕರ್ಯಗಳ ಕಾರಣದಿಂದ, ನಾವು ಈ ವಾರ ಶಾಲೆಯನ್ನು ಆನ್‌ಲೈನ್‌ನಲ್ಲೇ ನಡೆಸುತ್ತಿದ್ದೇವೆ. ಇಂಟರ್ನೆಟ್ ಮತ್ತು ವಿದ್ಯುತ್ ಕೊರತೆ, ಹೊಂಡಗಳಿಂದ ಕೂಡಿದ ರಸ್ತೆಗಳು ಮತ್ತು ಸಂಚಾರ ದಟ್ಟಣೆಗಳು ನಮ್ಮ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಮನೆಯಲ್ಲಿಯೇ ಇರಿಸುತ್ತಿವೆ. ಆದರೆ ಕಲಿಕೆ ಅಗತ್ಯವಾಗಿದೆ” ಎಂದು ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಇನ್ವೆಂಚರ್ ಅಕಾಡೆಮಿ ಮಾಹಿತಿ ನೀಡಿದೆ.

ಇದನ್ನು ಓದಿ: Bengaluru Rains: ವಿದ್ಯುತ್ ಸ್ಪರ್ಶಿಸಿ ಯುವತಿ ಬಲಿ; ಬೆಸ್ಕಾಂ, ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಸಾವು..?

ಕೋವಿಡ್‌ ಸಾಂಕ್ರಾಮಿಕದ ಕಾರಣಕ್ಕೆ ಕೆಲ ವರ್ಷಗಳ ಕಾಲ ಆನ್‌ಲೈನ್‌ ಶಿಕ್ಷಣವೇ ನಡೆದಿದ್ದು, ಕೆಲವು ತಿಂಗಳಿನಿಂದ ಅಷ್ಟೇ ಮಕ್ಕಳು ಶಾಲೆಗೆ ಹೋಗಲು ಆರಂಭಿಸಿದ್ದರು. ಈ ಹಿನ್ನೆಲೆ, ಈಗ ಮತ್ತೆ ಆನ್‌ಲೈನ್‌ ಸ್ಕೂಲ್‌ಗೆ ಕೆಲ ಪೋಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ, ಹಾಗೆ ವರ್ಕ್‌ ಫ್ರಂ ಹೋಮ್‌ ಬಗ್ಗೆಯೂ ಕಳವಳ ವ್ಯಕ್ತವಾಗಿದೆ. ಐಟಿ ಸಿಟಿಯಲ್ಲಿ ಆಗಾಗ್ಗೆ ವಿದ್ಯುತ್ ಕಡಿತ ಮತ್ತು ಸಂಪರ್ಕ ಕಡಿತಕ್ಕೆ ಸಾಕ್ಷಿಯಾಗುತ್ತಿರುವುದರಿಂದ ವರ್ಕ್‌ ಫ್ರಮ್‌ ಹೋಂ ಮೋಡ್ ಮತ್ತು ಆನ್‌ಲೈನ್ ಕಲಿಕೆಯು ಉತ್ತಮವಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ಉದ್ಯೋಗಿಗಳು ಮತ್ತು ಪೋಷಕರು ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ. ಒಂದು ವಾರದಲ್ಲಿ ಬೆಂಗಳೂರು ಇಂತಹ ತೀವ್ರ ಜಲಾವೃತಕ್ಕೆ ಸಾಕ್ಷಿಯಾಗುತ್ತಿರುವುದು ಇದು ಎರಡನೇ ಬಾರಿ. 

ಐಟಿ, ಬ್ಯಾಂಕಿಂಗ್ ಕಂಪನಿಗಳಿಗೆ 225 ಕೊಟಿ ರೂ. ನಷ್ಟ..!
ಕಳೆದ ವಾರ ಸಂಭವಿಸಿದ ತೀವ್ರ ಮಳೆ ಮತ್ತು ನಂತರದ ಪ್ರವಾಹದಿಂದಾಗಿ ಒಂದೇ ದಿನದಲ್ಲಿ ಕಂಪನಿಗಳು ಮತ್ತು ಸಂಸ್ಥೆಗಳು 225 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿವೆ ಎಂದು ಐಟಿ ಮತ್ತು ಬ್ಯಾಂಕಿಂಗ್ ಕಂಪನಿಗಳ ಸಂಘಟನೆಯು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದೆ. ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂಪನಿಗಳು ವ್ಯಕ್ತಪಡಿಸಿರುವ ಕಳವಳವನ್ನು ಸರ್ಕಾರ ಪರಿಹರಿಸುತ್ತದೆ ಮತ್ತು ಮಳೆಯಿಂದ ಉಂಟಾದ ಪರಿಹಾರ ಹಾಗೂ ಇತರ ಸಂಬಂಧಿತ ಹಾನಿಗಳ ಬಗ್ಗೆ ಚರ್ಚಿಸುತ್ತದೆ.

ಇದನ್ನೂ ಓದಿ: BENGALURU FLOODS: ಕೆರೆಗಳ ಕೋಡಿ; ಐಟಿ ಸಿಟಿಗೆ ಕಣ್ಣೀರ ಕೋಡಿ!

click me!