ನ್ಯಾಯಾಲಯದಲ್ಲಿ ಡ್ರೆಸ್ ಕೋಡ್ ಕಡ್ಡಾಯ

By Kannadaprabha News  |  First Published Nov 13, 2019, 8:35 AM IST

ಸಿಟಿ ಸಿವಿಲ್ ಕೋರ್ಟಲ್ಲಿ ಡ್ರೆಸ್ ಕೋಡ್ ಕಡ್ಡಾಯಗೊಳಿಸಲಾಗಿದೆ. ಮಹಿಳೆಯರು ಸೀರೆ ಅಥವಾ ಚೂಡಿದಾರ್ ಹಾಗೂ ಪುರುಷ ಅಧಿಕಾರಿಗಳು ಪ್ಯಾಂಟ್ ಹಾಗೂ ಶರ್ಟ್ ಅಥವಾ ಪೈಜಾಮ- ಖುರ್ತಾ ಮಾತ್ರ ಧರಿಸಬಹುದು.


ಬೆಂಗಳೂರು [ನ.13]: ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಕರ್ತವ್ಯದ ವೇಳೆ ಡ್ರೆಸ್ ಕೋಡ್ ಕಡ್ಡಾಯವಾಗಿ ಪಾಲಿಸುವಂತೆ ಸಿವಿಲ್ ನ್ಯಾಯಾಲಯದ ರಿಜಿಸ್ಟ್ರಾರ್ ಸುತ್ತೋಲೆ ಹೊರಡಿಸಿದ್ದಾರೆ.

ಈ ಸುತ್ತೋಲೆ ಪ್ರಕಾರ ಮಹಿಳೆಯರು ಸೀರೆ ಅಥವಾ ಚೂಡಿದಾರ್ ಹಾಗೂ ಪುರುಷ ಅಧಿಕಾರಿಗಳು ಪ್ಯಾಂಟ್ ಹಾಗೂ ಶರ್ಟ್ ಅಥವಾ ಪೈಜಾಮ- ಖುರ್ತಾ ಮಾತ್ರ ಧರಿಸಬಹುದು. 2013 ರಲ್ಲಿ ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆಯ ಸುತ್ತೋಲೆ ಆಧರಿಸಿ ರಿಜಿಸ್ಟ್ರಾರ್ ಅವರು ಈ ನೆನಪು ಸುತ್ತೋಲೆ ಹೊರಡಿಸಿದ್ದಾರೆ. ಈ ಆದೇಶ ಉಲ್ಲಂಘಿಸಿದರೆ ಶಿಸ್ತು ಕ್ರಮದ ಎಚ್ಚರಿಕೆಯನ್ನು ನೀಡಲಾಗಿದೆ. 

Tap to resize

Latest Videos

ಕಚೇರಿ ಅವಧಿಯಲ್ಲಿ ವಸ್ತ್ರ ಸಂಹಿತೆಯಶಿಸ್ತು ಪಾಲನೆಯಾಗಬೇಕು. ಈ ದಿಸೆಯಲ್ಲಿ ಎಲ್ಲ ಸಿಬ್ಬಂದಿ ಸರ್ಕಾರ ನಿಗಧಿ ಪಡಿಸಿರುವ ವಸ್ತ್ರ ಗಳನ್ನುಮಾತ್ರ ಧರಿಸಬೇಕು. ಕರ್ತವ್ಯ ನಿರ್ವಹಣೆ ಅವಧಿಯಲ್ಲಿ ಸರ್ಕಾರದ ಘನತೆಗೆ ಧಕ್ಕೆ ತರದ ಹಾಗೂ ಶೋಭೆ ತರುವ ಸಭ್ಯ ರೀತಿಯ ಉಡುಪುಗಳನ್ನು ಮಾತ್ರ ಧರಿಸಬೇಕು ಎಂಬ ನಿಯಮವಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ, ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯದ ಕೆಲ ಸಿಬ್ಬಂದಿ ಈ ನಿಯಮಗಳನ್ನು ಉಲ್ಲಂಘಿಸಿ ಸಭ್ಯವಲ್ಲದ ಉಡುಪು ಧರಿಸುತ್ತಿರುವ ಮಾಹಿತಿ ಬಂದಿದೆ ಎಂದು ತಿಳಿಸಿದರು. ಈ ಆದೇಶವು ಸಿಟಿ ಸಿವಿಲ್ ನ್ಯಾಯಾಲಯ, ಕೌಟುಂಬಿಕ ನ್ಯಾಯಾಲಯ, ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಮೆಯೋಹಾಲ್ ನ್ಯಾಯಾಲಯ , ಬೆಂಗಳೂರು ಮಹಾನಗರ ದಂಡಾಧಿಕಾರಿಗಳ ಕಚೇರಿ ಹಾಗೂ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಅನ್ವಯವಾಗಲಿದೆ.

click me!