
ಬೆಂಗಳೂರು: ಮನೆಯಲ್ಲಿ ತನ್ನ ಮಗಳ ಜೊತೆ ಏಕಾಂತದಲ್ಲಿದ್ದ ಕೆಲಸಗಾರನನ್ನು ಕೂಡಿ ಹಾಕಿ ಹತ್ಯೆಗೆೈದ ಬೀದಿಬದಿ ವ್ಯಾಪಾರಿಯೊಬ್ಬನನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೊಂಗಲುವಿನ ಕಿರನ್ (21) ಕೊಲೆಯಾದ ದುರ್ದೈವಿಯಾಗಿದ್ದಾನೆ. ಈ ಹತ್ಯೆ ಸಂಬಂಧ ಆನಂದ್ ಬಂಧನವಾಗಿದೆ. 2 ದಿನಗಳಿಂದ ಮನೆಯಲ್ಲಿ ಕೂಡಿ ಹಾಕಿ ಹತ್ಯೆಗೈದಿದ್ದ ಆರೋಪಿಯಾಗಿದ್ದ ಕಿರನ್ನನ್ನು ಮಂಗಳವಾರ ರಾತ್ರಿ ಖಾಸಗಿ ಆಸ್ಪತ್ರೆಗೆ ಆನಂದ್ ಕರೆತಂದು ದಾಖಲಿಸಿದ್ದ. ಆದರೆ ಆತನನ್ನು ತಪಾಸಣೆ ನಡೆಸಿದ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಕೂಡಲೇ ಈ ಘಟನೆ ಬಗ್ಗೆ ಪೊಲೀಸರಿಗೆ ಆಸ್ಪತ್ರೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಈ ವಿಷಯ ತಿಳಿದು ಆಸ್ಪತ್ರೆಗೆ ತೆರಳಿದ ಪೊಲೀಸರು, ಅಲ್ಲೇ ಇದ್ದ ಆನಂದ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಕೃತ್ಯ ಬಯಲಾಗಿದೆ.
ಆರೋಪಿ ಆನಂದ್ ಮೂಲತಃ ತಮಿಳುನಾಡಿನವನಾಗಿದ್ದು, ಕೊಂಗಲು ಸಮೀಪ ತನ್ನ ಪತ್ನಿ ಹಾಗೂ ಮಕ್ಕಳ ಜೊತೆ ಆತನ ನೆಲೆಸಿದ್ದ. ಅಲ್ಲಿಯೇ ರಸ್ತೆ ಬದಿಯಲ್ಲಿ ಸಿಹಿ ಜೋಳ (ಸ್ವೀಟ್ ಕಾರ್ನ್) ಮಾರಾಟ ಮಾಡುತ್ತಾ ಆನಂದ್ ಜೀವನ ಸಾಗಿಸುತ್ತಿದ್ದ. ಈತನ ಬಳಿ ಕಿರನ್ ಮೂಲದ ಕಿರನ್ ಕೆಲಸ ಮಾಡುತ್ತಿದ್ದ. ಸ್ವಂತ ಸಹೋದರನಂತೆ ಮಾಲೀಕನ ಕುಟುಂಬದ ವಿಶ್ವಾಸವನ್ನು ಕಿರನ್ ಗಳಿಸಿದ್ದ. ಈ ಒಡನಾಟದಲ್ಲೇ ಆನಂದ್ ಪುತ್ರಿ ಜೊತೆ ಆತನಿಗೆ ಪ್ರೇಮವಾಯಿತು. ಮೈಸೂರಿನಲ್ಲಿ ಆಕೆ ವ್ಯಾಸಂಗ ಮಾಡುತ್ತಿದ್ದಳು. ಇತ್ತೀಚೆಗೆ ಈ ಪ್ರೇಮದ ವಿಷಯವು ಆನಂದ್ ಗಮನಕ್ಕೆ ಬಂದಿತು. ಆದರೆ ಬಹಿರಂಗವಾಗಿ ಹೇಳದೆ ಗೌಪ್ಯವಾಗಿ ಮಗಳು ಹಾಗೂ ಕೆಲಸಗಾರನ ಮೇಲೆ ಆತ ನಿಗಾ ವಹಿಸಿದ್ದ.
3 ದಿನಗಳ ಹಿಂದೆ ದಸರಾ ರಜೆಗೆ ಮೈಸೂರಿನಿಂದ ಮಗಳು ಮನೆಗೆ ಮರಳಿದ ಬಳಿಕ ಆನಂದ್ ಸೂಕ್ತವಾಗಿ ಕೆಲಸಗಾರನ ಎಚ್ಚರಿಕೆ ವಹಿಸಿದ್ದು, 2 ದಿನಗಳ ಹಿಂದೆ ಪತ್ನಿ ಹಾಗೂ ಇನ್ನೊಬ್ಬ ಮಗಳ ಜೊತೆ ತಮಿಳುನಾಡಿನ ಸಂಬಂಧಿಕರ ಮನೆಗೆ ಹೋಗುವುದಾಗಿ ಸುಳ್ಳು ಹೇಳಿ ಆನಂದ್ ಮನೆಯಿಂದ ಹೊರಟಿದ್ದ. ಇತ್ತ ತನ್ನ ತಂದೆ-ತಾಯಿ ಮನೆಯಿಂದ ತೆರಳಿದ ಕೂಡಲೇ ಪ್ರಿಯಕರನನ್ನು ಆಕೆ ಮನೆಗೆ ಕರೆಸಿಕೊಂಡಿದ್ದಳು. ಕೆಲ ಹೊತ್ತಿನಲ್ಲಿ ದಿಢೀರನೆ ಮನೆಗೆ ಮರಳಿದ ಕೊಂಗಲುವಿನಲ್ಲಿ ಮಗಳನ್ನು ಕೆಲಸಗಾರನ ಜೊತೆ ಏಕಾಂತದಲ್ಲಿದ್ದನ್ನು ನೋಡಿ ಆನಂದ್ ಕಂದಮಂಡಲನಾಗಿದ್ದ.
ತಕ್ಷಣವೇ ಮಗಳನ್ನು ಪಕ್ಕಿ ಜೊತೆ ಚಿಕ್ಕಮ್ಮಲವಾರ ಸಂಬಂಧಿಕರ ಮನೆಗೆ ಕಳುಹಿಸಿದ ಆತನ, ತನ್ನ ಮನೆಯಲ್ಲೇ ಕೆಲಸಗಾರನನ್ನು ಕೂಡಿ ಹಾಕಿ ಮರದ ಬ್ಯಾಟ್ ಹಾಗೂ ವೈಪ್ಗಳಿಂದ ಆತನ ಚಚ್ಚಿದ್ದಾನೆ. 2 ದಿನಗಳ ನಿರಂತರ ಹಲ್ಲೆಯಿಂದ ಕಿರನ್ ಅಸ್ವಸ್ಥಗೊಂಡಿದ್ದಾನೆ. ಆಗ ಮಂಗಳವಾರ ರಾತ್ರಿ, ಆತನ ಕಿಬ್ಬೊಟ್ಟೆಗೆ ಆನಂದ್ ಒದ್ದಿದ್ದಾನೆ. ಈ ಹೊಡೆತಕ್ಕೆ ಕಿರನ್ ಅರೆಜೀವನಾಗಿ ಕುಸಿದಿದ್ದಾನೆ.
ಇದರಿಂದ ಕಂಗಾಲಾದ ಆನಂದ್, ತಕ್ಷಣವೇ ಆಟೋದಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದನೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರು ತಪಾಸಣೆ ನಡೆಸುವ ಹೊತ್ತಿಗೆ ಆತನ ಕೊನೆಯುಸಿರೆಳೆದಿದ್ದಾನೆ. ಹಲ್ಲೆಯಿಂದ ಯುವಕ ಮೃತಪಟ್ಟಿದ್ದಾನೆ ಎಂದು ಯಲಹಂಕ ಠಾಣೆಗೆ ಆಸ್ಪತ್ರೆ ಸಿಬ್ಬಂದಿ ವರದಿ ಮಾಡಿದ್ದಾರೆ. ಮಾಹಿತಿ ತಿಳಿದ ತಕ್ಷಣವೇ ಆಸ್ಪತ್ರೆಗೆ ತೆರಳಿದ ಪೊಲೀಸರು, ಅಲ್ಲೇ ಇದ್ದ ಆನಂದ್ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಹತ್ಯೆ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.