
ಹವಾಮಾನ ವೈಪರಿತ್ಯದಿಂದ ಬದ್ರಿನಾಥ್ದಿಂದ ಡೆಹ್ರಾಡೂನ್ಗೆ ಹೋಗುತ್ತಿದೆ ಹೆಲಿಕ್ಯಾಪ್ಟರ್ ಪತನಗೊಂಡಿದೆ. ಇದರಲ್ಲಿ ಪೈಲಟ್ ಸೇರಿ 6 ಜನ ಸಜೀವ ದಹನಗೊಂಡ ಘಟನೆ ಉತ್ತರಾಖಂಡದ ಜೋಶಿಮಠದ ಮಾರ್ಗದಲ್ಲಿ ಎದುರಾಗಿದೆ. ಅಲ್ಲದೇ ಆರು ಜನರಲ್ಲಿದ್ದ ಒಬ್ಬರ ಹಿನ್ನೆಲೆಯಂತು ಮನಕಲಕುವಂತಿದೆ. ಅದು ಬೇರೆ ಯಾರೂ ಅಲ್ಲ, ಅವರೇ ಇನ್ಸ್ಪೆಕ್ಟರ್ ಅರುಣ್ ಸಾಲಂಕಿ. ಇಲ್ಲಿ ಇನ್ನೊಂದು ಹಿನ್ನೆಲೆಗೆ ಹೋದಂತೆ ಮತ್ತೊಂದು ಸನ್ನೀವೇಶ ತನ್ನಿಂದ ತಾನೇ ತೆರೆದುಕೊಳ್ಳುತ್ತಾ ಹೋಗುತ್ತದೆ. ಅದೇ ಈ ಹಿಂದೆ ಸ್ನೇಹಿತನ ದುರ್ಮರಣ. ಆ ಪೋಸ್ಟ್ ಈಗ ವೈರಲ್ ಆಗುತ್ತಿದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಕಳೆದ ಆಗಸ್ಟ್ ತಿಂಗಳಷ್ಟೇ ತಂಗಿದ್ದ ಗೆಳೆಯ ಇನ್ಸ್ಪೆಕ್ಟರ್ ರವಿ ಅವರ ಅಗಲಿಕೆಗೆ ಕಣ್ಣೀರಿಟ್ಟು, ಶ್ರದ್ಧಾಂಜಲಿ ಕೋರಿದ್ದ ಅರುಣ್, ಕೇವಲ ಕೆಲವೇ ತಿಂಗಳುಗಳಲ್ಲಿ ತಾವೂ ಅದೇ ಸಾವಿನ ಹಾದಿ ಹಿಡಿಯುತ್ತಾರೆಂದು ಯಾರೂ ಊಹಿಸಿರಲಿಲ್ಲ. ಭೂಮಿಯ ಮೇಲೆ ಆತ್ಮೀಯರಾಗಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳು, ಈಗ ವಿಧಿಯ ಆಟಕ್ಕೆ ಸಿಲುಕಿ ಪರಲೋಕದಲ್ಲೂ ಒಂದಾಗುವಂತಾಯಿತು ಎನ್ನುವ ನೋವಿನ ಕಲ್ಪನೆ. ಅರುಣ್ ಅವರು ಅಂದು ಗೆಳೆಯನಿಗಾಗಿ ಹಾಕಿದ್ದ ಆ ಕಂಬನಿಯ ಪೋಸ್ಟ್, ಇಂದು ಅವರದೇ ಸಾವಿಗೆ ಮುನ್ನುಡಿಯಂತೆ ಕಾಣುತ್ತಿರುವುದು ಸಾರ್ವಜನಿಕರ ಕಣ್ಣಾಲಿಗಳನ್ನು ಒದ್ದೆಯಾಗಿಸುತ್ತಿದೆ.
ಅಂದು ಗೆಳೆಯನ ಫೋಟೋ ನೋಡಿ ಮರುಗಿದ್ದ ಅರುಣ್ ಅವರ ಫೋಟೋವನ್ನೇ ಇಂದು ಇಡೀ ನಾಡು, ಅವರ ಕುಟುಂಬ ಕಣ್ಣೀರು ಹಾಕುತ್ತಾ ನೋಡುವಂತಾಗಿದೆ. ಬದ್ರಿನಾಥದಿಂದ ಮರಳುತ್ತಿದ್ದಾಗ ಹವಾಮಾನ ವೈಪರಿತ್ಯದ ಕತ್ತಲಲ್ಲಿ ಹೆಲಿಕ್ಯಾಪ್ಟರ್ ಪತನಗೊಂಡು, ಬೆಂಕಿಯ ಜ್ವಾಲೆಗೆ ಸಿಲುಕಿ ಆರು ಜೀವಗಳು ಉರಿದುಹೋದ ಆ ಭೀಕರ ಕ್ಷಣಗಳು ನೆನೆದರೆ ಎದೆಯುಬ್ಬಿ ಬರುತ್ತದೆ. ಸಿಸಿಬಿ ತಾಂತ್ರಿಕ ವಿಭಾಗ, ಗುಪ್ತಚರ ಇಲಾಖೆ, ಬಾಣಸವಾಡಿ, ಇಂದಿರಾನಗರ ಹೀಗೆ ಹಗಲಿರುಳು ಸಾರ್ವಜನಿಕ ಸೇವೆಗೆ ಮುಡಿಪಾಗಿದ್ದ ಒಬ್ಬ ದಕ್ಷ ಅಧಿಕಾರಿಯ ಪಯಣ ಈ ರೀತಿ ದಿಢೀರನೆ ಮುಕ್ತಾಯವಾಯಿತು.
ಬೆಳಗಾವಿಯಿಂದ ಬೆಂಗಳೂರಿಗೆ, ಅಲ್ಲಿಂದ ಮುಗಿಯದ ಲೋಕಕ್ಕೆ ಸಾಲಂಕಿ. ಬೆಳಗಾವಿ ಮೂಲದವರಾಗಿ, ಬೆಂಗಳೂರಿನ ರಾಮಮೂರ್ತಿನಗರದಲ್ಲಿ ನೆಲೆಸಿ, ದೇಶದ ರಾಜಧಾನಿ ದೆಹಲಿಯಲ್ಲೂ ಸೇವೆ ಸಲ್ಲಿಸಿ ಭರವಸೆ ಮೂಡಿಸಿದ್ದ ಯುವ ಅಧಿಕಾರಿಯ ಸಾವು ಆತನ ಕುಟುಂಬಕ್ಕೆ ಭರಿಸಲಾಗದ ಶೂನ್ಯವನ್ನು ತಂದಿದೆ. ಮನೆಯ ಯಜಮಾನ ಅಥವಾ ಮಗ ಇನ್ನು ಎಂದಿಗೂ ಮರಳಿ ಬರಲಾರದ ದೂರದ ಲೋಕಕ್ಕೆ ತೆರಳಿದ್ದಾನೆಂಬ ಸತ್ಯ ಅರಗಿಸಿಕೊಳ್ಳಲಾಗದ ಕುಟುಂಬದ ಆಕ್ರಂದನ.
ಒಬ್ಬ ಸ್ನೇಹಿತನ ದುರ್ಮರಣದ ಬೆನ್ನಲ್ಲೇ ಮತ್ತೊಬ್ಬ ಸ್ನೇಹಿತನೂ ಹೆಲಿಕ್ಯಾಪ್ಟರ್ ಪತನದಂತಹ ಭೀಕರ ಅಪಘಾತಕ್ಕೆ ಬಲಿಯಾಗಿದ್ದು, ಕೇವಲ ಕಾಕತಾಳೀಯವಲ್ಲ, ಇದು ನಂಬಲಾರದಷ್ಟು ಮನಕಲಕುವ ಸನ್ನಿವೇಶವಾಗಿದೆ. ಸಾಮಾನ್ಯವಾಗಿ ಕಠಿಣವಾಗಿ ಕಾಣುವ ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರ ಒಳಗಿದ್ದ ಸ್ನೇಹದ ಆಳ ಮತ್ತು ಗೆಳೆಯನಿಗಾಗಿ ಮಿಡಿದ ಕರುಣಾಮಯಿ ಹೃದಯದ ಪರಿಚಯ ಈ ಘಟನೆಯಿಂದ ಜಗತ್ತಿಗೆ ತಿಳಿಯುತ್ತಿದೆ. ಕೇವಲ ಕುಟುಂಬ ಮಾತ್ರವಲ್ಲದೆ, ಇನ್ಸ್ಪೆಕ್ಟರ್ ಅರುಣ್ ಸೋಲಂಕಿ ಅವರ ಜತೆ ಕೆಲಸ ಮಾಡಿದ್ದ ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳು ಒಬ್ಬ ಉತ್ತಮ ಒಡನಾಡಿ ಹಾಗೂ ದಕ್ಷ ಅಧಿಕಾರಿಯನ್ನು ಕಳೆದುಕೊಂಡು ಮೂಕವೇದನೆ ಅನುಭವಿಸುತ್ತಿದ್ದಾರೆ.
ದೇವಭೂಮಿಯಲ್ಲಿ ಒಲಿದ ಸಾವು: ಪುಣ್ಯಕ್ಷೇತ್ರ ಬದ್ರಿನಾಥದ ದರ್ಶನ ಮುಗಿಸಿ ಹೆಲಿಕ್ಯಾಪ್ಟರ್ ಹತ್ತಿದಾಗ, ಅದು ತಮ್ಮ ಬದುಕಿನ ಕೊನೆಯ ಪಯಣವಾಗುತ್ತದೆ ಎಂದು ಅವರು ಭಾವಿಸಿರಲಿಲ್ಲ. ಭಗವಂತನ ದರ್ಶನದ ಬೆನ್ನಲ್ಲೇ ವಿಧಿ ಕಣ್ಣು ಮುಚ್ಚಿಸಿದ ರೀತಿ ಅತ್ಯಂತ ಕ್ರೂರವಾಗಿದೆ. ಪ್ರಕೃತಿಯ ವಿಕೋಪಕ್ಕೆ ಸಿಲುಕಿ, ಹಿಮಾಲಯದ ಕಂದಕಗಳ ನಡುವೆ ಹೆಲಿಕ್ಯಾಪ್ಟರ್ ಸುಟ್ಟು ಬೂದಿಯಾಗುತ್ತಿದ್ದಾಗ, ಒಳಗಿದ್ದವರು ಅನುಭವಿಸಿದ ಆ ಕೊನೆಯ ಕ್ಷಣಗಳ ತಲ್ಲಣ ಮತ್ತು ಅಸಹಾಯಕತೆ ಇಡೀ ನಾಡಿನ ಜನರಲ್ಲಿ ತಡೆಯಲಾಗದ ಕರುಣೆಯನ್ನು ಹುಟ್ಟಿಸುತ್ತಿದೆ.