BMTCಯಿಂದ ಪ್ರಯಾಣಿಕರಿಗೆ ಗುಡ್ ನ್ಯೂಸ್, ನೂತನ ಮಾರ್ಗದಲ್ಲಿ ಸಂಚರಿಸಲಿದೆ ಬಸ್

Published : Sep 13, 2025, 10:13 AM IST
BMTC

ಸಾರಾಂಶ

BMTCಯಿಂದ ಪ್ರಯಾಣಿಕರಿಗೆ ಗುಡ್ ನ್ಯೂಸ್, ನೂತನ ಮಾರ್ಗದಲ್ಲಿ ಸಂಚರಿಸಲಿದೆ ಬಸ್. ಬಿಎಂಟಿಸಿ ಪ್ರಯಾಣಿಕರ ಅನುಕೂಲಕ್ಕಾಗಿ ಇದೀಗ ಬಿಎಂಟಿಸಿ ಹೊಸ ಮಾರ್ಗದಲ್ಲಿ ಸಂಚಾರ ಆರಂಭಿಸುತ್ತಿದೆ.ಈ ಕುರಿತ ಬಸ್ ಸಂಚಾರ ವೇಳಾಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದೆ.

ಬೆಂಗಳೂರು (ಸೆ.13) ಬೆಂಗಳೂರಿನಲ್ಲಿ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲಾಗುತ್ತಿದೆ. ಬಿಎಂಟಿಸಿ, ಮೆಟ್ರೋ ಸೇರಿದಂತೆ ಸಾರಿಗೆ ಸಂಪರ್ಕ ಅಭಿವೃದ್ಧಿಪಡಿಸವು ಮೂಲಕ ಸಂಚಾರ ದಟ್ಟಣೆ ಕಡಿಮೆ ಮಾಡುವು ಪ್ರಯತ್ನಗಳು ನಡೆಯುತ್ತಿದೆ. ಈ ಪೈಕಿ ಬಿಎಂಟಿಸಿ ಮಹತ್ವದ ಘೋಷಣೆ ಮಾಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಇದೀಗ ಬಿಎಂಟಿಸಿ ಹೊಸ ಮಾರ್ಗದಲ್ಲಿ ಸಂಚಾರ ಆರಂಭಿಸುತ್ತಿದೆ. ಜಾಲಹಳ್ಳಿ ಕ್ರಾಸ್‌ನಿಂದ ಮದಾನಾಯಕನಹಳ್ಳಿಗೆ ಬಿಎಂಟಿಸಿ ಸೇವೆ ವಿಸ್ತರಣೆಯಾಗುತ್ತಿದೆ. ಇದರಿಂದ ಈ ಭಾಗದಲ್ಲಿ ಓಡಾಡುವ ಜನರರಿಗೆ ಸಾರಿಗೆ ಸಂಪರ್ಕ ಸುಲಭವಾಗಲಿದೆ.

ಯಾವ ಮಾರ್ಗದಲ್ಲಿ ಬಿಎಂಟಿಸಿ ಸಂಚಾರ?

ಬಿಎಂಟಿಸಿ ಆರಂಭಿಸಿದ ನೂತನ ಮಾರ್ಗ ಸಂಚಾರ ಜಾಲಹಳ್ಳಿ ಕ್ರಾಸ್ ಹಾಗೂ ಮಾದನಾಯಕನ ಹಳ್ಳಿ ಜನರಿಗೆ ಅನುಕೂಲವಾಗಲಿದೆ. ಈ ಬಸ್ ಮಾದನಾಯಕನಹಳ್ಳಿ,ರಾವುತನಹಳ್ಳಿ ಕ್ರಾಸ್, ವಡ್ಡರಹಳ್ಳಿ, ಕಡಬಗೆರೆ ಕ್ರಾಸ್, ಸುಂಕದಕಟ್ಟೆ ಹಾಗೂ ಗೊರಗುಂಟೆಪಾಳ್ಯ ಮಾರ್ಗದಲ್ಲಿ ಬಿಎಂಟಿಸಿ ಬಸ್ ಸಂಚಾರ ನಡೆಸಲಿದೆ. ಆರಂಬಿಕ ಹಂತದಲ್ಲಿ ಹವಾನಿಯಂತ್ರಣ ರಹಿತ ಸೇವೆ ಆರಂಭಿಸಲಾಗಿದೆ. ಪ್ರಯಾಣಿಕರು ಈ ಸೇವೆಯ ಲಾಭವನ್ನು ಪಡೆಯುವಂತೆ ಬಿಎಂಟಿಸಿ ಮನವಿ ಮಾಡಿದೆ.

ಬೆಂಗಳೂರು ಟ್ರಾಫಿಕ್‌ ಪೊಲೀಸ್‌ ಮಾಹಿತಿ, 2024ರಿಂದ ಬಿಎಂಟಿಸಿಗೆ ಬಲಿಯಾಗಿದ್ದಾರೆ 80 ಜನ!

ಜಾಲಹಳ್ಳಿ ಕ್ರಾಸ್ ಬಿಡುವ ವೇಳೆ:

06:30, 08:00, 08:30, 10:30, 11:15, 13:00, 13:35, 15:25, 16:00, 18:25

ಮಾರ್ಗ ಸಂಖ್ಯೆ 2ಎ

ಜಾಲಹಳ್ಳಿ ಕ್ರಾಸ್ ಬಿಡುವ ವೇಳೆ:

07:30, 09:00, 09:40, 11:50, 12:25, 14:10, 14:45, 16:35, 17:10, 19:30

ಬೊಮ್ಮಸಂದ್ರ ಮೆಟ್ರೋ ನಿಲ್ದಾಣಂದ ಆನೇಕಲ್ ಮಾರ್ಗ

ಇತ್ತೀಚೆಗೆ ನಮ್ಮ ಮೆಟ್ರೋ ಸೇವೆ ವಿಸ್ತರಣೆಗೊಂಡಿತ್ತು. ಹಳದಿ ಮಾರ್ಗ ಸಂಚಾರ ಆರಂಭಗೊಂಡಿದೆ. ಇದರಿಂದ ಪ್ರತಿ ದಿನ ಹಲವರ ಸಂಚಾರ ಸುಗಮಗೊಂಡಿದೆ. ಇದರ ಬೆನ್ನಲ್ಲೇ ಬಿಎಂಟಿಸಿ ಹೊಸ ಮಾರ್ಗದಲ್ಲಿ ಸಂಚಾರ ಸೇವೆ ಆರಂಭಿಸಿತ್ತು. ಬೊಮ್ಮಸಂದ್ರ ಮೆಟ್ರೋ ನಿಲ್ದಾಣದಿಂದ ಆನೇಕಲ್ ಮಾರ್ಗವಾಗಿ ಬಿಎಂಟಿಸಿ ಮೆಟ್ರೋ ಸಂಚಾರ ಆರಂಭಿಸಲಾಗಿದೆ.

ಪ್ರತಿದಿನ ಬೊಮ್ಮಸಂದ್ರ ಮೆಟ್ರೋ ನಿಲ್ದಾಣದಿಂದ 8:55AM , 10:55Am, 12:50PM, 14:45PMಕ್ಕೆ ಬಸ್ಸುಗಳು ಹೊರಡಲಿವೆ. ಅನೇಕಲ್ ನಿಂದ MF 22D ಬೆಳಗ್ಗೆ 10:05, 12:05PM, 2:00PM, 15:50ಕ್ಕೆ ಹೊರಡಲಿದೆ. ಬೊಮ್ಮಸಂದ್ರ, ಚಂದಾಪುರ, ಇಗ್ಗಲೂರು, ಮರಸೂರು ಕ್ರಾಸ್‌, ಕರ್ಪೂರ ಗೇಟ್, ಆನೇಕಲ್‌ ಮಾರ್ಗವಾಗಿ ಈ ಬಸ್ ಪ್ರಯಾಣಿಸಲಿದೆ.

ದಿನಕ್ಕೊಂದು ಬಲಿ ಪಡೆಯುತ್ತಿರುವ ಬಿಎಂಟಿಸಿ, 10 ವರ್ಷದ ಶಾಲಾ ಬಾಲಕಿಯ ತಲೆ ಮೇಲೆ ಹರಿದ ಬಸ್‌!

ಬಿಎಂಟಿಸಿ ಸೇವೆ ವಿರುದ್ದ ಹಲವು ಆಕ್ರೋಶಗಳಿವೆ. ಇದರ ನಡುವೆ ಬಿಎಂಟಿಸಿ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸಲು ಪ್ರಯತ್ನಿಸುತ್ತಿದೆ. ಪ್ರಮುಖವಾಗಿ ಬಿಎಂಟಿಸಿ ಬಸ್ ಚಾಲಕರ ನಿರ್ಲಕ್ಷ್ಯ, ಅಪಘಾತ ಪ್ರಕರಣಗಳ ವಿರುದ್ದ ಪ್ರಯಾಣಿಕರು ಹಲವು ಭಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪೂರಕವಾಗಿ ಹಲವು ಘಟನೆಗಳು ನಡೆದಿದೆ.

 

PREV
Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!