Namma Metro Extension: ಆನೇಕಲ್‌ಗೆ ಮೆಟ್ರೋ ಭಾಗ್ಯ: ಯಾವೆಲ್ಲಾ ಭಾಗಕ್ಕೆ ಸಿಗಲಿದೆ ಸಂಪರ್ಕ?

Published : Jan 04, 2026, 09:45 AM IST
Namma metro connectivity to Anekal

ಸಾರಾಂಶ

Namma Metro Connectivity: ಆನೇಕಲ್‌ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕ್ರಿಕೆಟ್‌ ಕ್ರೀಡಾಂಗಣ ಸೇರಿದಂತೆ ಕ್ರೀಡಾ ಸಮುಚ್ಛಯಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಮುಂದಾಗಿದೆ. 

ಬೆಂಗಳೂರು: ಆನೇಕಲ್‌ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕ್ರಿಕೆಟ್‌ ಕ್ರೀಡಾಂಗಣ ಸೇರಿ ಕ್ರೀಡಾ ಸಮುಚ್ಛಯಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌ BMRCL) ಮುಂದಾಗಿದೆ.

ಕ್ರೀಡಾ ಸಂಕೀರ್ಣಕ್ಕೆ ತಲುಪಲು ಅನುಕೂಲ

ಬನ್ನೇರುಘಟ್ಟ ರಸ್ತೆಯಲ್ಲಿ ಹಾದು ಹೋಗುವ ಕಾಳೇನ ಅಗ್ರಹಾರ ಹಾಗೂ ಕಾಡುಗೋಡಿ ಸಂಪರ್ಕಿಸುವ 68 ಕಿ.ಮೀ ಮೆಟ್ರೋ ಮಾರ್ಗವನ್ನು ಜಿಗಣಿಯಿಂದ ಕವಲೊಡೆಸಿ 3-4 ಕಿ.ಮೀ ವರೆಗೆ ಆನೇಕಲ್ ಕಡೆಗೆ ಕೊಂಡೊಯ್ಯಲು ಉದ್ದೇಶಿಸಲಾಗಿದೆ. ಇದರಿಂದ ಬನ್ನೇರುಘಟ್ಟ ಮತ್ತು ಆನೇಕಲ್ ಕಡೆಯಿಂದ ಬರುವ ಜನರು ಆನೇಕಲ್‌ ಸೂರ್ಯ ಸಿಟಿಯಲ್ಲಿ ನಿರ್ಮಾಣ ಆಗಲಿರುವ ಕ್ರೀಡಾ ಸಂಕೀರ್ಣಕ್ಕೆ ತಲುಪಲು ಅನುಕೂಲ ಆಗಲಿದೆ. ಮುಖ್ಯ ಮಾರ್ಗವು ತನ್ನ ಹಾದಿಯಲ್ಲಿ ಮುಂದುವರಿಯಲಿದೆ. ಬನ್ನೇರುಘಟ್ಟ, ಜಿಗಣಿ, ಅತ್ತಿಬೆಲೆ, ಸರ್ಜಾಪುರ, ದೊಮ್ಮಸಂದ್ರ ಸರ್ಕಲ್ ಹಾಗೂ ವರ್ತೂರು ಕೋಡಿ ಸಂಪರ್ಕಿಸಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಜೂನ್‌ ತಿಂಗಳಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದ ನಂತರ ಗೃಹ ಮಂಡಳಿ, ಆನೇಕಲ್‌ ತಾಲೂಕಿನ ಸೂರ್ಯನಗರ 4 ನೇ ಹಂತದಲ್ಲಿ 75 ಎಕರೆ ಪ್ರದೇಶದಲ್ಲಿ ಸುಮಾರು ₹ 1650 ಕೋಟಿ ವೆಚ್ಚದಲ್ಲಿ ಕ್ರಿಕೆಟ್‌ ಸ್ಟೇಡಿಯಂ ಸೇರಿದಂತೆ ಬಹುಕ್ರೀಡಾ ಸಂಕೀರ್ಣ ನಿರ್ಮಿಸುವ ಯೋಜನೆ ರೂಪಿಸಲು ನಿರ್ಧರಿಸಿದೆ.

ಇದನ್ನೂ  ಓದಿ: ಇನ್ನೆರಡು ವರ್ಷದಲ್ಲಿ 175 ಕಿ.ಮೀ ಮೆಟ್ರೋ ಸೇವೆ ಜನರಿಗೆ ಲಭ್ಯ : ಡಿ.ಕೆ.ಶಿವಕುಮಾರ್

ಕಾರ್ಯಸಾಧ್ಯತಾ ವರದಿ

ಮೆಟ್ರೋ ಸಂಪರ್ಕದ ಸಂಬಂಧ ದೆಹಲಿ ಮೂಲದ ಇಟ್ರೋಸಾಫ್ಟ್‌ ಸಲ್ಯೂಶನ್ಸ್‌ ಪ್ರೈ.ಲಿ. ಈ ಸಂಬಂಧ ಕಾರ್ಯಸಾಧ್ಯತಾ ವರದಿ ರೂಪಿಸಿದೆ. ಮಾರ್ಗದ ವಿನ್ಯಾಸ, ಪ್ರಯಾಣಿಕರ ಬೇಡಿಕೆ, ಭೂಸ್ವಾಧೀನ, ಯೋಜನಾ ವೆಚ್ಚ, ಮಾರ್ಗದ ನಡುವಿನ ನಿಲ್ದಾಣಗಳು ಸೇರಿ ಇತರೆ ಅಂಶಗಳ ಕುರಿತ ವರದಿಯನ್ನು ಸಲ್ಲಿಸಲಾಗಿದೆ.

3.5 ಕಿ.ಮೀ ಇರಲಿರುವ ಈ ಮಾರ್ಗವನ್ನು ಕ್ರೀಡಾ ಸಮುಚ್ಛಯಕ್ಕೆ ಸಂಪರ್ಕಿಸಲಾಗುತ್ತಿದೆ. ಇದರಿಂದ ಒಟ್ಟಾರೆ ಈ ಮಾರ್ಗದ ಉದ್ದ 72 ಕಿ.ಮೀ ಆಗಲಿದೆ ಎಂದು ಬಿಎಂಆರ್‌ಸಿಎಲ್‌ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಇದನ್ನೂ ಓದಿ: ತುಮಕೂರಿಗೆ ಮೆಟ್ರೋ ವಿಸ್ತರಣೆಗೆ ಸಿದ್ಧತೆ : ಐದು ತಿಂಗಳಲ್ಲಿ ಡಿಪಿಆರ್‌ ಸಿದ್ಧ?

PREV
Read more Articles on
click me!

Recommended Stories

ಬೆಂಗಳೂರಿನ ಸರ್ಕಾರಿ ಸ್ವಾಮ್ಯದ 65 ಎಕರೆಯಲ್ಲಿ ವೃಕ್ಷೋದ್ಯಾನ ಅಭಿವೃದ್ಧಿ: ಎಂ.ಬಿ. ಪಾಟೀಲ್‌
ದುಡಿದ ಸಂಬಳ ಕೇಳಿದ್ದಕ್ಕೆ ಆಂಬ್ಯುಲೆನ್ಸ್ ಚಾಲಕನ ಮೇಲೆ ಮಾಲೀಕನಿಂದ ಭೀಕರ ಹಲ್ಲೆ!