ಬೈಕ್ ಟ್ಯಾಕ್ಸಿ ಪ್ರಯಾಣಿಸುವಾಗ ಚಾಲಕ ನೀಡುವ ಹೈಲ್ಮೆಟ್ ಹಾಗೇ ಧರಿಸುತ್ತೀರಾ? ವೈದ್ಯರ ಎಚ್ಚರಿಕೆ

Published : Nov 16, 2026, 12:26 PM IST
Bihar Bike Taxi Service

ಸಾರಾಂಶ

ಬೆಂಗಳೂರು ನಗರದಲ್ಲಿ ಬೈಕ್ ಟ್ಯಾಕ್ಸಿ ಕಡಿಮೆ ವೆಚ್ಚ ಮಾತ್ರವಲ್ಲ, ಕಡಿಮೆ ಸಮಯದಲ್ಲಿ ತಲುಪಲು ಸಾಧ್ಯವಿದೆ. ಆದರೆ ಬೈಕ್ ಟ್ಯಾಕ್ಸಿ ಪ್ರಯಾಣದ ವೇಳೆ ಚಾಲಕ ನೀಡುವ ಹೆಲ್ಮೆಟ್ ಹಾಗೇ ಧರಿಸುತ್ತೀರಾ? ಈ ಕುರಿತು ಬೆಂಗಳೂರಿನ ವೈದ್ಯ ಹೇಳಿದ್ದೇನು?

ಬೆಂಗಳೂರು (ನ.16) ಬೈಕ್ ಟ್ಯಾಕ್ಸಿ ನಗರದಲ್ಲಿ ಅತೀ ಹೆಚ್ಚು ಬಳಕೆಯಾಗುತ್ತಿರುವ ಸಾರಿಗೆ ವ್ಯವಸ್ಥೆ. ಕ್ಯಾಬ್, ಆಟೋಗಳಿಂತ ಕಡಿಮೆ ಬೆಲೆ ಮಾತ್ರವಲ್ಲ, ಕಡಿಮೆ ಅವಧಿಯಲ್ಲಿ ನಿಗದಿತ ಸ್ಥಳ ತಲುಪಲು ಸಾಧ್ಯವಿದೆ. ಬೈಕ್ ಟ್ಯಾಕ್ಸಿ ಪ್ರಯಾಣದ ವೇಳೆ ಪ್ರಮುಖವಾಗಿ ಎದುರಾಗುವ ಸಮಸ್ಯೆ ಹೆಲ್ಮೆಟ್. ಬೈಕ್ ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡುವಾಗ ಹೆಲ್ಮೆಟ್ ಕಡ್ಡಾಯ. ಆದರೆ ಎಲ್ಲಾ ಪ್ರಯಾಣಿಕರಿಗೆ ಚಾಲಕ ಒಂದೇ ಹಲ್ಮೆಟ್ ನೀಡುವ ಕಾರಣ ಇದರಿಂದ ಎದುರಾಗುವ ಅಪಾಯ ಹೆಚ್ಚು. ಪದೇ ಪದೇ ಈ ಹೆಲ್ಮೆಟ್ ಸ್ವಚ್ಚವಾಗಿಟ್ಟುಕೊಳ್ಳುವುದು ಚಾಲಕನಿಗೂ ಸುಲಭವಲ್ಲ.ಈ ಕುರಿತು ಬೆಂಗಳೂರಿನ ವೈದ್ಯೆ ಡಾ.ಪ್ರಿಯಾಂಕ ಕುರಿ ಮಹತ್ವದ ಸೂಚನೆ ನೀಡಿದ್ದಾರೆ.

ಬೈಕ್ ಟ್ಯಾಕ್ಸಿ ಪ್ರಯಾಣದ ಬಿಸಿಲು, ಧೂಳುಗಳ ನಡುವೆ ಸಾಗಲಿದೆ. ಪ್ರತಿ ಪ್ರಯಾಣಿಕರ ಭಿನ್ನವಾಗಿರುತ್ತಾರೆ. ಬೆವರುತ್ತಾರೆ, ಪ್ರತಿಯೊಬ್ಬರ ಚರ್ಮ, ಅವರ ಆರೋಗ್ಯ, ಸಮಸ್ಯೆಗಳು ಬೇರೆ ಬೇರೆ. ಸರಿಯಾಗಿ ಸ್ವಚ್ಚಗೊಳಿಸದ ಹೆಲ್ಮೆಟ್‌ನಿಂದ ಬ್ಯಾಕ್ಟಿರಿಯಾ, ಶೀಲಿಂಧ್ರಗಳು ಬೆಳೆಯುತ್ತವೆ. ಸೂಕ್ಷ್ಮ ಚಟುವಟಿಕೆಗಳು ಈ ಹೆಲ್ಮೆಟ್‌ನಲ್ಲಿ ನಿರಂತರವಾಗಿರುತ್ತದೆ. ಹೀಗಾಗಿ ಈ ಹೆಲ್ಮೆಟ್ ಧರಿಸುವ ಪ್ರತಿಯೊಬ್ಬರಿಗೂ ಸಮಸ್ಯೆ ಕಟ್ಟಿಟ್ಟ ಬುತ್ತಿ. ಹೆಲ್ಮೆಟ್ ಹಾಕಿದ ತಕ್ಷಣವೇ ಅಥವಾ ಮರುದಿನ ಸಮಸ್ಯೆ ಎದುರಾಗುವ ಸಾಧ್ಯತೆಗಳು ಕಡಿಮೆ. ಆದರೆ ದಿನ ಕಳೆಯುತ್ತಿದ್ದಂತೆ ಸಮಸ್ಯೆಗಳು ಗೋಚರವಾಗುತ್ತದೆ ಎಂದು ವೈದ್ಯೆ ಹೇಳಿದ್ದಾರೆ.

ಹೆಲ್ಮೆಟ್ ಧರಿಸುವಾಗ ಏನು ಮಾಡಬೇಕು

ತಲೆಯ ಚರ್ಮದ ಸಮಸ್ಯೆ, ಕೂದಲು ಉದುರುವಿಕೆ, ಚರ್ಮದ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ. ಕೊಳಗಾದ ಅಥಾವ ಶುಚಿ ಮಾಡದ ಹೆಲ್ಮೆಟ್ ಧರಿಸುವುದು ಅಪಾಯಕಾರಿ. ಹಾಗಂತ ಬೈಕ್ ಟ್ಯಾಕ್ಸಿಯಲ್ಲಿ ಹೆಲ್ಮೆಟ್ ಧರಿಸದೆ ಪ್ರಯಾಣಿಸುವಂತಿಲ್ಲ. ಧರಿಸುವ ಮೊದಲು ಸ್ವಚ್ಚ ಬಟ್ಟೆಯನ್ನು ತಲೆಗೆ ಕಟ್ಟಿ ಬಳಸುವುದು ಉತ್ತಮ. ಬಳಸುವ ಬಟ್ಟೆ ಸ್ವಚ್ಚವಾಗಿರಬೇಕು.

ಇನ್ನು ಪ್ರತಿ ದಿನ ಬೈಕ್ ಟ್ಯಾಕ್ಸಿ ಬಳಸುವ ಮಂದಿ ಅಥವಾ ಹೆಚ್ಚಾಗಿ ಬೈಕ್ ಟ್ಯಾಕ್ಸಿ ಬಳಸುವ ಮಂದಿ ತಮ್ಮದೇ ಹೆಲ್ಮೆಟ್ ಇಟ್ಟುಕೊಳ್ಳುವುದು ಉತ್ತಮ. ಇದರಿಂದ ಬಹುತೇಕ ಸಮಸ್ಯೆಗಳಿಂದ ದೂರವಾಗಬಹುದು. ಮುನ್ನಚ್ಚರಿಕೆ ವಹಿಸಿದರೆ ಸಮಸ್ಯೆ ತಪ್ಪಿಸಿಕೊಳ್ಳಬಹುದು ಎಂದಿದ್ದಾರೆ.

ಬೈಕ್ ಟ್ಯಾಕ್ಸಿ ನಿಯಮದಂತೆ ಹೆಲ್ಮೆಟ್ ಸ್ವಚ್ಚವಾಗಿಟ್ಟಿಕೊಳ್ಳಬೇಕು. ಆದರೆ ಪ್ರತಿ ಸವಾರಿ ಬಳಿಕ ಹೆಲ್ಮೆಟ್ ಸ್ವಚ್ಚಗೊಳಿಸುವುದ ಚಾಲಕನಿಗ ಪ್ರಯಾಸದ ಕೆಲಸ. ಹೀಗಾಗಿ ಪ್ರಯಾಣಿಕರೇ ಈ ಕುರಿತು ಹೆಚ್ಚು ಗಮನಹರಿಸಬೇಕು.

PREV
Read more Articles on
click me!

Recommended Stories

ಕುಮಾರ ಕೃಪಾ ಈ ಹೆಸರು ಬಂದಿದ್ದು ಹೇಗೆ? ಡಿಕೆ ಶಿವಕುಮಾರ್‌ 'ಗಂಗಾ' ನಿವಾಸದ ಹಿಂದಿನ 125 ವರ್ಷಗಳ ರೋಚಕ ಇತಿಹಾಸ
ಲಾಲ್‌ಬಾಗ್ ಸುರಂಗ ಮಾರ್ಗಕ್ಕೆ ಸಿದ್ಧತೆ; ಯಾವುದೇ ಮಾಹಿತಿ ನೀಡದೇ ಸರ್ಕಾರದ ಗೌಪ್ಯತೆ