ಬೆಸ್ಕಾಂ ಆನ್‌ಲೈನ್ ಸೇವೆ ಸ್ಥಗಿತ: ಮುಂದಿನ 2 ದಿನ ಈ 20 ಪಟ್ಟಣಗಳಲ್ಲಿ ಕರೆಂಟ್ ಬಿಲ್, ಹೊಸ ಸಂಪರ್ಕ ಸಿಗಲ್ಲ

Published : Sep 15, 2026, 05:56 PM IST
BESCOM Online Service down

ಸಾರಾಂಶ

ಬೆಸ್ಕಾಂ ವ್ಯಾಪ್ತಿಯ 20 ಪಟ್ಟಣಗಳಲ್ಲಿ ತಂತ್ರಾಂಶ ಉನ್ನತೀಕರಣ ಕಾಮಗಾರಿಯಿಂದಾಗಿ ಆನ್‌ಲೈನ್ ಸೇವೆಗಳು ಸ್ಥಗಿತಗೊಳ್ಳಲಿವೆ. ಸೆಪ್ಟೆಂಬರ್ 15ರ ಮಧ್ಯರಾತ್ರಿಯಿಂದ ಸೆಪ್ಟೆಂಬರ್ 17ರ ಮಧ್ಯರಾತ್ರಿಯವರೆಗೆ ಆನ್‌ಲೈನ್ ಬಿಲ್ ಪಾವತಿ ಸೇರಿದಂತೆ ಎಲ್ಲಾ ಡಿಜಿಟಲ್ ಸೇವೆಗಳು ಲಭ್ಯವಿರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.

ಬೆಂಗಳೂರು (ಸೆ.15): ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ - BESCOM) ವ್ಯಾಪ್ತಿಯ ಗ್ರಾಹಕರಿಗೆ ಪ್ರಮುಖ ಸೂಚನೆಯೊಂದು ಹೊರಬಿದ್ದಿದೆ. ಬೆಸ್ಕಾಂ ವ್ಯಾಪ್ತಿಗೆ ಒಳಪಡುವ ಒಟ್ಟು 20 ಪಟ್ಟಣಗಳಲ್ಲಿ ತಂತ್ರಾಂಶ (ಸಾಫ್ಟ್‌ವೇರ್) ಉನ್ನತೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ಮುಂದಿನ ಎರಡು ದಿನಗಳ ಕಾಲ ಎಲ್ಲಾ ರೀತಿಯ ಆನ್‌ಲೈನ್ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿವೆ.

ಇಂದು (ಸೆಪ್ಟೆಂಬರ್ 15) ಮಧ್ಯರಾತ್ರಿಯಿಂದಲೇ ಈ ನಿರ್ಬಂಧ ಜಾರಿಗೆ ಬರಲಿದ್ದು, ಸೆಪ್ಟೆಂಬರ್ 17ರ ಮಧ್ಯರಾತ್ರಿಯವರೆಗೆ ಆನ್‌ಲೈನ್ ಸೇವೆಗಳು ಸಾರ್ವಜನಿಕರಿಗೆ ಲಭ್ಯವಿರುವುದಿಲ್ಲ ಎಂದು ಬೆಸ್ಕಾಂ ತನ್ನ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ಯಾವೆಲ್ಲಾ ಸೇವೆಗಳು ಸ್ಥಗಿತಗೊಳ್ಳಲಿವೆ?

ಈ ಎರಡು ದಿನಗಳ ಅವಧಿಯಲ್ಲಿ ಗ್ರಾಹಕರಿಗೆ ಕೆಳಕಂಡ ಪ್ರಮುಖ ಆನ್‌ಲೈನ್ ಸೇವೆಗಳು ಲಭ್ಯವಿರುವುದಿಲ್ಲ:

ಆನ್‌ಲೈನ್ ಬಿಲ್ ಪಾವತಿ: ವೆಬ್‌ಸೈಟ್ ಅಥವಾ ಯುಪಿಐ ಆ್ಯಪ್‌ಗಳ ಮೂಲಕ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗುವುದಿಲ್ಲ.

ಹೊಸ ವಿದ್ಯುತ್ ಸಂಪರ್ಕ: ನೂತನ ಗೃಹ ಅಥವಾ ವಾಣಿಜ್ಯ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಕೆ.

ಹೆಸರು ವರ್ಗಾವಣೆ (Name Transfer): ಮೀಟರ್ ಮಾಲೀಕತ್ವ ಬದಲಾವಣೆ ಪ್ರಕ್ರಿಯೆ.

ಲೋಡ್ ಹೆಚ್ಚಳ/ಕಡಿತ: ಹೆಚ್ಚುವರಿ ಲೋಡ್ ಮಂಜೂರಾತಿ ಅಥವಾ ಲೋಡ್ ಬದಲಾವಣೆ ಸೇವೆಗಳು.

ಬೆಸ್ಕಾಂ ಪೋರ್ಟಲ್ ಮೂಲಕ ಸಿಗುವ ಇತರ ನಾಗರಿಕ ಆನ್‌ಲೈನ್ ಸೇವೆಗಳು.

ಸೇವೆ ಸ್ಥಗಿತಗೊಳ್ಳಲಿರುವ 20 ಪಟ್ಟಣಗಳ ಪಟ್ಟಿ ಇಲ್ಲಿದೆ:

ಬೆಸ್ಕಾಂ ವ್ಯಾಪ್ತಿಯ ಈ ಕೆಳಗಿನ ಪಟ್ಟಣಗಳಲ್ಲಿ ಆನ್‌ಲೈನ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ:

  1. ಬಾಗೇಪಲ್ಲಿ
  2. ದೇವನಹಳ್ಳಿ
  3. ಗುಡಿಬಂಡೆ
  4. ಮಾಗಡಿ
  5. ಮಾಲೂರು
  6. ನೆಲಮಂಗಲ
  7. ಶ್ರೀನಿವಾಸಪುರ
  8. ವಿಜಯಪುರ
  9. ಚನ್ನಗಿರಿ
  10. ಚಿಕ್ಕನಾಯಕನಹಳ್ಳಿ
  11. ಗುಬ್ಬಿ
  12. ಹೊಳಲ್ಕೆರೆ
  13. ಹೊನ್ನಾಳಿ
  14. ಹೊಸದುರ್ಗ
  15. ಜಗಳೂರು
  16. ಕೊರಟಗೆರೆ
  17. ಮಧುಗಿರಿ
  18. ಮೊಳಕಾಲ್ಮೂರು
  19. ಪಾವಗಡ
  20. ತುರುವೇಕೆರೆ

ಸ್ಥಗಿತಕ್ಕೆ ಕಾರಣವೇನು?

ಕೇಂದ್ರ ಸರ್ಕಾರದ ನೆರವಿನ ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆ (IPDS - ಹಂತ-2) ಅಡಿಯಲ್ಲಿ ಗ್ರಾಹಕರಿಗೆ ಮತ್ತಷ್ಟು ವೇಗದ ಮತ್ತು ಅತ್ಯಾಧುನಿಕ ಡಿಜಿಟಲ್ ಸೇವೆಗಳನ್ನು ಒದಗಿಸಲು ಹೊಸ ಐಟಿ ಅಪ್ಲಿಕೇಶನ್ ಅನ್ನು ಅಳವಡಿಸಲಾಗುತ್ತಿದೆ. ಪ್ರಸ್ತುತ ಬಳಕೆಯಲ್ಲಿರುವ ಸಾಫ್ಟ್‌ವೇರ್ ಅನ್ನು ಅಪ್‌ಗ್ರೇಡ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಸರ್ವರ್ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗ್ರಾಹಕರು ಈ ತಾಂತ್ರಿಕ ಅಡಚಣೆಯನ್ನು ಗಮನದಲ್ಲಿಟ್ಟುಕೊಂಡು ಸಹಕರಿಸಬೇಕು ಹಾಗೂ ಆನ್‌ಲೈನ್ ಸೇವೆಗಳಿಗಾಗಿ ಸೆಪ್ಟೆಂಬರ್ 18ರ ನಂತರ ಪ್ರಯತ್ನಿಸಬೇಕು ಎಂದು ಬೆಸ್ಕಾಂ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

PREV
Read more Articles on
click me!

Recommended Stories

Cabinet Meeting Today: ಹಾಲಿನ ದರ ಮತ್ತೆ ಏರಿಕೆ ಆಗುತ್ತಾ? ಇಂದಿನ ಸಂಪುಟ ಸಭೆಯಲ್ಲಿ ಫೈನಲ್?
12:03AM ಮಧ್ಯರಾತ್ರಿ ಭಾರೀ ಸ್ಫೋಟದ ಸದ್ದಿಗೆ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ! ಯಾವುದು ಈ ಸದ್ದು?