
ಬೆಂಗಳೂರು (ಅ.10): ರಾಜಧಾನಿಯ ಯಲಹಂಕ ನ್ಯೂ ಟೌನ್ ಲಾಡ್ಜ್‌ನಲ್ಲಿ ಬೆಂಕಿ ಅವಗಢ ಪ್ರಕರಣದ ತನಿಖೆಯ ವೇಳೆ ಆಶ್ಚರ್ಯಕರ ಸಂಗತಿ ಬೆಳಕಿಗೆ ಬಂದಿದೆ. ಮೃತ ಮಹಿಳೆ ಕಾವೇರಿ ಬಡಿಗೇರ್‌ಗೆ ಮದುವೆಯಾಗಿ ಮೂರು ಮಕ್ಕಳಿದ್ದರು ಎನ್ನುವ ವಿಚಾರ ಗೊತ್ತಾಗಿದೆ. ಪತಿ ಹಾಗೂ ಮಕ್ಕಳನ್ನ ಬಿಟ್ಟು ಕೆಲಸ ಮಾಡುತ್ತೇನೆಂದು ಬೆಂಗಳೂರಿಗೆ ಕಾವೇರಿ ಬಂದಿದ್ದಳು.
ಗದಗ ಮೂಲದ ರಮೇಶ್ ಹಾಗೂ ಹನಗುಂದ ಮೂಲದ ಕಾವೇರಿ ಬಡಿಗೇರ್ ನಡುವೆ ಅನೈತಿಕ ಸಂಬಂಧವಿತ್ತು. ಮದುವೆ ವಿಚಾರಕ್ಕೆ ರಮೇಶ್ ಒತ್ತಡ ಹಾಕಿದ್ದ ಎಂದು ತಿಳಿದುಬಂದಿದೆ. ಆದರೆ, ಇದಕ್ಕೆ ಕಾವೇರಿ ಒಪ್ಪಿರಲಿಲ್ಲ. ಇದಕ್ಕಾಗಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆದರಿಕೆ ಹಾಕಲು ಹೋಗಿ ಬೆಂಕಿಗೆ ಆಹುತಿಯಾಗಿದ್ದಾನೆ.
ರಮೇಶ್ ಮೈಗೆ ಬೆಂಕಿಹೊತ್ತಿಕೊಂಡ ಬಳಿಕ. ಕಾವೇರಿ ಬಾತ್‌ರೋಮ್ ಬಾಗಿಲು ಮುಚ್ಚಿ ಬದುಕುಳಿಯುವ ಪ್ರಯತ್ನ ಮಾಡಿದ್ದರು. ಆದರೆ, ಉಸಿರುಗಟ್ಟಿ ಅವರು ಕೂಡ ಸಾವು ಕಂಡಿದ್ದಾರೆ. ಬಾತ್ ರೂಮ್ ಕ್ಲೋಸ್ ಮಾಡಿ ಮೊದಲು ಸ್ಪಾ ಮಾಲೀಕನಿಗೆ ಯುವತಿ ಕರೆ ಮಾಡಿದ್ದಳು. ಸ್ಪಾ ಮಾಲೀಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ, ಸ್ಥಳಕ್ಕೆ ಬರುವಷ್ಟರಲ್ಲಿ ಇಬ್ಬರೂ ಕೂಡ ಸಾವು ಕಂಡಿದ್ದಾರೆ.
ಇಬ್ಬರ ಮೊಬೈಲ್‌ಗಳನ್ನು ವಶಕ್ಕೆ ಪಡೆದು ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಮೃತ ರಮೇಶ್ ಮೊಬೈಲ್ ನೀರಲ್ಲಿ ಮುಳಗಿದ್ದು,ಆನ್ ಆಗ್ತಿಲ್ಲ. ಯಲಹಂಕ ನ್ಯೂ ಟೌನ್ ಪೊಲೀಸರು ಯುವತಿ ಮೊಬೈಲ್ ಪರಿಶೀಲನೆ ಮಾಡುತ್ತಿದ್ದು, ಶವಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.
ಪೂರ್ವ ವಲಯದ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಈ ಬಗ್ಗೆ ಮಾತನಾಡಿದ್ದಾರೆ. ಗುರುವಾರ ಘಟನೆ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಬೆಂಕಿ ಹೊತ್ತಿಕೊಂಡಾಗ ಮಹಿಳೆ ಬಾತ್ ರೂಮ್ ಒಳಗಡೆ ಹೋಗಿದ್ದಾಳೆ. ರೂಮಿನಲ್ಲಿದ್ದ ವ್ಯಕ್ತಿ ಬೆಂಕಿಗೆ ಸುಟ್ಟು ಮೃತನಾಗಿದ್ದಾನೆ. ಬಾತ್ ರೂಮ್‌ನಲ್ಲಿ ಲಾಕ್ ಆಗಿದ್ದ ಮಹಿಳೆ ಕೂಡ ಉಸಿರಾಟದ ತೊಂದರೆಯಿಂದ ಸಾವು ಕಂಡಿದ್ದಾರೆ. ಘಟನೆಗೆ ಕಾರಣ ಏನು..? ಹೇಗೆ ಬೆಂಕಿ ಹೊತ್ತಿಕೊಂಡಿತ್ತು..? ಅವರ ಮಧ್ಯೆ ಜಗಳ ಆಗಿತ್ತಾ ಅನ್ನೋ ಬಗ್ಗೆ ತನಿಖೆ ನಡಸಲಾಗುತ್ತಿದೆ ಎಂದರು.
ಮಹಿಳೆ ಬಾಗಲಕೋಟೆ ಮೂಲದವರು. ಮದುವೆಯಾಗಿ ಮೂವರು ಮಕ್ಕಳಿದ್ದರು. ನಂತರ ಆಕೆ ಬೆಂಗಳೂರಿಗೆ ಬಂದಿದ್ದಳು. ಯುವಕ ಗದಗ ಮೂಲದವ, ಇಬ್ಬರ ಮಧ್ಯೆ ಪರಿಚಯ ಇತ್ತು ಅನ್ನೋದು ಗೊತ್ತಾಗಿದೆ. ಮಹಿಳೆ ಸ್ಪಾನಲ್ಲಿ ಕೆಲಸ ಮಾಡಿಕೊಂಡಿದ್ದಳು. ಯುವಕ ಗಾರೆ ಕೆಲಸ ಮಾಡಿಕೊಂಡಿದ್ದ. ಇಬ್ಬರೂ ಲಾಡ್ಜ್ ನಲ್ಲಿ ಇದ್ದಾಗ ಈ ರೀತಿ ಘಟನೆ ಆಗಿದೆ. ಅವರಿಬ್ಬರ ಮಧ್ಯೆ ಏನು ಸಂಬಂಧ ಇತ್ತು, ಜಗಳ ಏನಾಗಿದೆ? ಬೆಂಕಿ ಹೇಗೆ ಹೊತ್ತಿಕೊಂಡಿತ್ತು ಅಂತಾ ಪರಿಶೀಲನೆ ಮಾಡಲಾಗುತ್ತಿದೆ. ಮೃತ ಯುವಕ ಬರುವ ಮುನ್ನ ಬೇರೊಬ್ಬ ವ್ಯಕ್ತಿ ಅಲ್ಲಿಗೆ ಬಂದು ಹೋಗಿದ್ದ ಅನ್ನೋ ಮಾಹಿತಿ ಇದೆ. ಆಕೆಯ ಸಹೋದರ ಅಂತಾ ಹೇಳಿ ಬಂದು ಹೋಗಿದ್ದ. ಈ ಯುವಕ ಬಂದು ಹೋದ ಮೇಲೆ ಜಗಳ ಆಗಿ ಈ ರೀತಿ ಆಗಿರುವ ಶಂಕೆ ಇದೆ. ಅಲ್ಲಿ exactly ಏನಾಗಿದೆ ಅನ್ನೋ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.