ಬೆಂಗಳೂರಿಗೆ ಕರೆಂಟ್ ಶಾಕ್, ನಾಳೆಯೂ ನಗರದ ಹಲೆವೆಡೆ ಪವರ್ ಕಟ್

Published : Jun 23, 2025, 07:39 AM IST
electricity bill

ಸಾರಾಂಶ

ಕಳೆದ ಕೆಲ ದಿನಗಳಿಂದ ಬೆಂಗಳೂರಲ್ಲಿ ಹಂತ ಹಂತವಾಗಿ ವಿದ್ಯುತ್ ನಿರ್ವಹಣಾ ಕಾಮಗಾರಿಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಇದೀಗ ಇಂದು ಹಾಗೂ ನಾಳೆ ಎರಡು ದಿನ ಹಲವು ಏರಿಯಾಗಳಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ. 

ಬೆಂಗಳೂರು (ಜೂ.23) ಬೆಸ್ಕಾಂ ಮತ್ತೆ ಮಹತ್ವದ ಪ್ರಕಟಣೆ ಹೊರಡಿಸಿದೆ. ನಾಳೆ (ಜೂ.24) ಕೂಡ ಬೆಂಗಳೂರಿನ ಹಲೆವೆಡೆ ವಿದ್ಯುತ್ ವ್ಯತ್ಯಯವಾಗುತ್ತಿದೆ. ತುರ್ತು ನಿರ್ವಹಣಾ ಕಾಮಗಾರಿ ಹಿನ್ನಲೆಯಲ್ಲಿ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಬೆಳಗ್ಗೆ 10 ರಿಂದ ಸಂಜೆ 4 ಗಂಟೆ ವರೆಗೆ ವಿದ್ಯುತ್ ಕಡಿತಗೊಳ್ಳಲಿದೆ. ಈ ಕುರಿತು ಬೆಸ್ಕಾಂ ಪ್ರಕಟಣೆಯಲ್ಲಿ ಹೇಳಿದೆ. ಇದೇ ವೇಳೆ ಕಾಮಗಾರಿ ಕಾರಣದಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಹೀಗಾಗಿ ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿಸಿದೆ.

ನಾಳೆ ಎಲ್ಲೆಲ್ಲಿ ಕರೆಂಟ್ ಇಲ್ಲ

ಬೆಂಗಳೂರಿನ ಪ್ರಮುಖ ವಲಯಗಳಲ್ಲಿ ನಾಳೆ ವಿದ್ಯುತ್ ಕಡಿತಗೊಳ್ಳಲಿದೆ. ರಾಮ ದೇವಸ್ಥಾನದ ರಸ್ತೆ, ರಾಮದೇವ್ ಗಾರ್ಡನ್, ಕೃಷ್ಣ ರೆಡ್ಡಿ ಲೇಔಟ್, ಶಿವರಾಮಯ್ಯ ಲೇಔಟ್, ರಿಂಗ್ ರಸ್ತೆ, ಸರ್ವೀಸ್ ರಸ್ತೆ, ಕೆ.ಕೆ. ಹಳ್ಳಿ, ಸಿಎಂಆರ್‌ರಸ್ತೆ, ಕಮ್ಮನಹಳ್ಳಿ ಮುಖ್ಯ ರಸ್ತೆ, ರಾಮಯ್ಯ ಲೇಔಟ್, ಲಿಂಗರಾಜಪುರ, ಜಾನಕೀರಾಮ್ ಲೇಔಟ್, ಕನಕದಾಸ ಲೇಔಟ್, ಗೋವಿಂದಪುರ ಮುಖ್ಯ ರಸ್ತೆ, ರಶದ್‌ನಗರ, ಫರೀದಾ ಶೂ ಫ್ಯಾಕ್ಟರಿ, ಅರೇಬಿಕ್ ಕಾಲೇಜ್, ಕೆ.ಜಿ.ಹಳ್ಳಿ, ಗೋವಿಂದಪುರ, ಕೆ.ಜಿ.ಹಳ್ಳಿ, ವಿನೋಬ ನಗರ, ಬಿ.ಎಂ.ಲೇಔಟ್, ಆರೋಗ್ಯಮ್ಮ ಲೇಔಟ್, ಕಾವೇರಿ ಗಾರ್ಡನ್, ಯಾಸಿನ್ ನಗರ, ನಾಗವಾರ ಮುಖ್ಯ ರಸ್ತೆ, ನಾಗವಾರ, ಎನ್.ಜೆ.ಕೆ. ಗಾರ್ಮೆಂಟ್ಸ್, ಬೈರನಕುಂಟೆ, ಕುಪ್ಪುಸ್ವಾಮಿ ಲೇಔಟ್, ಎಚ್.ಕೆ.ಬಿ.ಕೆ ಕಾಲೇಜ್, ವಿದ್ಯಾ ಸಾಗರ, ಥಣಿಸಂದ್ರ, ಆರ್. ಕೆ. ಹೆಗಡೆನಗರ, ಕೆ.ನಾರಾಯಣಪುರ, ಎನ್.ಎನ್. ಹಳ್ಳಿ, ಬಾಲಾಜಿಲೇಔಟ್, ಫೇಸ್ 1ರಿಂದ 3, ರೈಲ್ವೆ ಮೆನ್ಸ್ ಲೇಔಟ್, ಬಿ.ಡಿ.ಎಸ್. ಲೇಔಟ್, ಕೆ.ಕೆ. ಹಳ್ಳಿ, ಹೆಣ್ಣೂರು ಮುಖ್ಯ ರಸ್ತೆ, ಆಯಿಲ್ ಮಿಲ್ ರಸ್ತೆ, ಕಮ್ಮನಹಳ್ಳಿ ಮುಖ್ಯ ರಸ್ತೆ, ನಾಗೇನಹಳ್ಳಿ, ಭಾರತೀಯ ಸಿಟಿ, ಗಾಂಧಿನಗರ, , ಶಾಂಪುರ ಮೇನ್ ರೋಡ್, ಎಚ್ ಬಿಆರ್‌ಘಟಕ ವ್ಯಾಪ್ತಿಯ ಎಚ್ ಬಿಆರ್ ಲೇಔಟ್‌ನ 1,2,3,4 ಮತ್ತು 5ನೇ ಬ್ಲಾಕ್, ಯಾಸಿನ್ ನಗರ, ಸುಭಾಶ್ ಲೇಔಟ್ ಸುತ್ತಮುತ್ತಲಿನ ಪ್ರದೇಶ ದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಇಂದು ಕೂಡ ಬೆಂಗಳೂರಿನ ಹಲೆವೆಡೆ ವಿದ್ಯುತ್ ವ್ಯತ್ಯಯ

ಸೋಮವಾರ (ಜೂ.23) ಬೆಂಗಳೂರಿನ ಪ್ರಮುಖ ವಲಯದಲ್ಲಿ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಗಲಿದೆ. ಎಲಿಟ್ ಪ್ರೋಮೆನೇಡ್ ಅಪಾರ್ಟ್‌ಮೆಂಟ್, ಕೆ.ಆರ್. ಲೇಔಟ್, ಶಾರದನಗರ, ಚುಂಚಗಟ್ಟ, ಅರೇಹಳ್ಳಿ, ಇಟ್ಟಮಡು, ಏಜಿಎಸ್ ಲೇಔಟ್, ಚಿಕ್ಕಲಸಂದ್ರ, ಟಿ.ಜಿ.ಲೇಔಟ್, ಭುವನೇಶ್ವರಿನಗರ ಇಸ್ರೋ ಲೇಔಟ್, ಇಸ್ರೋ ಲೇಔಟ್ ಕೈಗಾರಿಕಾ ಪ್ರದೇಶ, ಕುಮಾರಸ್ವಾಮಿ ಬಡಾವಣೆ, ವಿಠಲನಗರ, ವಿಕ್ರಮ್ ನಗರ, ಯಲಚೇನಹಳ್ಳಿ, ಚಿಕ್ಕಲಸಂದ್ರ ವಿಲೇಜ್, ಕದಿರೇನಹಳ್ಳಿ, ಅಬ್ಬಯ್ಯ ನಾಯ್ಡು ಸ್ಟುಡಿಯೋ, ನಾಯ್ಡು ಲೇಔಟ್, ಎಜಿಎಸ್ ಲೇಔಟ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆಯಾಗಲಿದೆ ಎಂದು ಬೆಸ್ಕಾಂ ಹೇಳಿದೆ.

 

PREV
Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!