“ಬ್ರೋ, ಹೊಸ ಕಾರನ್ನೇ ತಗೋ!” ಬೆಂಗಳೂರಿನಲ್ಲಿ ಬೆನ್ಜ್ ಕಾರು ಅಪಘಾತ; ರಿಪೇರಿ ಬಿಲ್ ಕೇಳಿ ಟೆಕ್ಕಿ ಕಂಗಾಲು!

Published : Oct 23, 2026, 02:20 PM IST
bengaluru techie mercedes benz crash rs 61 lakh repair bill

ಸಾರಾಂಶ

ಭಾರಿ ಮಳೆಯಲ್ಲಿ ಕಾರು ಚಲಾಯಿಸುವಾಗ ಸಂಭವಿಸಿದ ಅಪಘಾತದಿಂದ ಪಾರಾದ ಟೆಕ್ಕಿಯೊಬ್ಬರಿಗೆ, ನಂತರ ಕಾರಿನ ರಿಪೇರಿ ವೆಚ್ಚ ಕೇಳಿ ಶಾಕ್ ಆಗಿದೆ. ಸಾಫ್ಟ್‌ವೇರ್ ಎಂಜಿನಿಯರ್ ಆಡಂ ರಿಜ್ಕ್ (Adam Rizk) ಅವರ ಮರ್ಸಿಡಿಸ್ ಬೆನ್ಜ್ ಸರಿಪಡಿಸಲು ಅಧಿಕೃತ ಸರ್ವಿಸ್ ಸೆಂಟರ್ ನೀಡಿದ ಅಂದಾಜು ವೆಚ್ ಕೇಳಿ ಕಂಗಾಲು ಆಗಿದ್ದಾರೆ.

ಬೆಂಗಳೂರು: ಭಾರಿ ಮಳೆಯಲ್ಲಿ ಕಾರು ಚಲಾಯಿಸುವಾಗ ಸಂಭವಿಸಿದ ಅಪಘಾತದಿಂದ ಪಾರಾದ ಟೆಕ್ಕಿಯೊಬ್ಬರಿಗೆ, ನಂತರ ಕಾರಿನ ರಿಪೇರಿ ವೆಚ್ಚ ಕೇಳಿ ಶಾಕ್ ಆಗಿದೆ. ಬೆಂಗಳೂರಿನಲ್ಲಿ ವಾಸಿಸುವ ಅಮೆಜಾನ್ ಸಾಫ್ಟ್‌ವೇರ್ ಎಂಜಿನಿಯರ್ ಆಡಂ ರಿಜ್ಕ್ (Adam Rizk) ಅವರ ಮರ್ಸಿಡಿಸ್ ಬೆನ್ಜ್ ಕಾರು ಅಪಘಾತಕ್ಕೀಡಾಗಿದ್ದು, ಅದನ್ನು ಸರಿಪಡಿಸಲು ಅಧಿಕೃತ ಸರ್ವಿಸ್ ಸೆಂಟರ್ ನೀಡಿದ ಅಂದಾಜು ವೆಚ್ ಕೇಳಿದರೆ ಶಾಕ್‌ ಆಗ್ತಿರಾ.

ಭಾರಿ ಮಳೆಯಲ್ಲಿ ನಿಯಂತ್ರಣ ತಪ್ಪಿದ ಮರ್ಸಿಡಿಸ್ ಬೆನ್ಜ್

ಆಡಂ ರಿಜ್ಕ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಮಾಹಿತಿಯ ಪ್ರಕಾರ, ಬೆಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿದ್ದಾಗ ಅವರು ಕಾರು ಚಲಾಯಿಸುತ್ತಿದ್ದರು. ಈ ವೇಳೆ ರಸ್ತೆಯ ಮೇಲೆ ನೀರು ತುಂಬಿದ್ದರಿಂದ ಕಾರು ನಿಯಂತ್ರಣ ತಪ್ಪಿವೆ. ಇದರಿಂದ ಕಾರು ಹೈವೇ ಡಿವೈಡರ್‌ಗೆ ಡಿಕ್ಕಿ ಹೊಡೆದು, ಮತ್ತೊಂದು ಬದಿಯ ರಸ್ತೆಗೆ ಬಿದ್ದಿದೆ ಎಂದು ಹೇಳಿಕೊಂಡಿದ್ದಾರೆ.

ಕಾರಿನ ರಿಪೇರಿಗೆ ₹61 ಲಕ್ಷ ಬಿಲ್!

ಅಪಘಾತದ ಬಳಿಕ ಕಾರನ್ನು ಮರ್ಸಿಡಿಸ್ ಬೆನ್ಜ್‌ನ ಅಧಿಕೃತ ಸರ್ವಿಸ್ ಸೆಂಟರ್‌ಗೆ ಕೊಂಡೊಯ್ದಿದ್ದಾರೆ. ಅಲ್ಲಿ ಕಾರನ್ನು ಸರಿಮಾಡಲು ಕೊಟ್ಟಾಗ ಅದರ ಬಿಲ್‌ ನೋಡಿ ಅವರಿಗೆ ಆಘಾತವಾಗಿದೆ. ರಿಪೇರಿಗೆ ಬರೋಬ್ಬರಿ ₹61 ಲಕ್ಷ ಬೇಕಾಗುತ್ತದೆ ಎಂದು ಸರ್ವಿಸ್ ಸೆಂಟರ್ ತಿಳಿಸಿದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. “ಕಾರಿನ ರಿಪೇರಿ ದುಬಾರಿಯಾಗಬಹುದು ಎಂದು ನನಗೆ ಗೊತ್ತಿತ್ತು. ಆದರೆ ಇಷ್ಟು ದುಬಾರಿಯಾಗಿರುತ್ತದೆ ಎಂದು ನಿರೀಕ್ಷಿಸಿರಲಿಲ್ಲ” ಎಂಬುದು ಅವರ ಅಳಲು.

ವಿಶೇಷವೆಂದರೆ, ಈ ರಿಪೇರಿ ವೆಚ್ಚ ಅವರು ಕಾರು ಖರೀದಿಸಲು ಪಾವತಿಸಿದ್ದ ಮೊತ್ತಕ್ಕೆ ಸರಿಸಮನಾಗಿದೆ ಎಂದು ವರದಿಯಾಗಿದೆ. ಅಂದರೆ, ಕಾರನ್ನು ಸರಿಪಡಿಸಲು ಮತ್ತೆ ಹೊಸ ಕಾರು ಖರೀದಿಸುವಷ್ಟು ಹಣ ಖರ್ಚು ಮಾಡುವ ಪರಿಸ್ಥಿತಿ ಎದುರಾಗಿದೆ.

ವಿಮೆ ಹಣ ಸಿಗುತ್ತದೆಯೇ?

ಕಾರಿನ ರಿಪೇರಿ ವೆಚ್ಚದ ಬಗ್ಗೆ ಚರ್ಚೆ ಆರಂಭವಾಗುತ್ತಿದ್ದಂತೆ, ವಿಮೆಯ ಮೂಲಕ ಈ ಮೊತ್ತವನ್ನು ಭರಿಸಬಹುದೇ ಎಂಬ ಪ್ರಶ್ನೆಯೂ ಎದುರಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಆಡಂ, ಕಾರು ಸಂಪೂರ್ಣ ನಷ್ಟಕ್ಕೆ (Total Loss) ಒಳಗಾಗಿದೆ ಎಂದು ಪರಿಗಣಿಸುವ ಸಾಧ್ಯತೆಯಿದ್ದು, ರಿಪೇರಿ ವೆಚ್ಚವನ್ನು ಭರಿಸುವ ಬದಲು ವಿಮಾ ಕಂಪನಿಯಿಂದ ನಗದು ಪರಿಹಾರ ಸಿಗಲಿದೆ ಎಂದು ತಿಳಿಸಿದ್ದಾರೆ. ಆದರೆ, ವಿಮೆಯಿಂದ ಸಿಗುವ ನಿಖರ ಮೊತ್ತ ಎಷ್ಟು ಎಂಬ ವಿವರವನ್ನು ಅವರು ಹಂಚಿಕೊಂಡಿರುವ ಮಾಹಿತಿಯಲ್ಲಿ ಸ್ಪಷ್ಟಪಡಿಸಿಲ್ಲ.

“ರಿಪೇರಿ ಮಾಡಿಸುವ ಬದಲು ಹೊಸ ಕಾರು ಖರೀದಿಸಿ”

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಅನೇಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ₹61 ಲಕ್ಷ ವೆಚ್ಚದಲ್ಲಿ ಕಾರನ್ನು ದುರಸ್ತಿ ಮಾಡಿಸುವ ಬದಲು ಹೊಸ ಕಾರು ಖರೀದಿಸುವುದೇ ಉತ್ತಮ ಎಂದು ಸಲಹೆ ನೀಡಿದ್ದಾರೆ. “ಬ್ರೋ, ಈ ಹಂತದಲ್ಲಿ ಹೊಸ ಕಾರನ್ನೇ ಖರೀದಿಸಿ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬರು, “ದುರಸ್ತಿ ಮಾಡಿದ ಬಳಿಕವೂ ಕಾರು ಮೊದಲಿನಂತೆಯೇ ಇರಬೇಕು ಎಂಬ ಖಾತರಿ ಇಲ್ಲ. ಒಂದೊಂದೇ ಭಾಗ ಬದಲಿಸಿದರೂ ಚಾಲನೆಯ ಅನುಭವ ಮೊದಲಿನಂತಿರುವುದಿಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನೊಬ್ಬ ನೆಟ್ಟಿಗರು, “ಸುಮಾರು ₹70 ಲಕ್ಷಕ್ಕೆ ಹೊಸ ಮರ್ಸಿಡಿಸ್ ಬೆನ್ಜ್ ಸಿ-ಕ್ಲಾಸ್ ಕಾರು ಸಿಗುವಾಗ, ಹಳೆಯ ಕಾರಿನ ರಿಪೇರಿಗೆ ₹61 ಲಕ್ಷ ಬೇಕೆಂದು ಹೇಳಿದರೆ ಹೇಗಿರುತ್ತದೆ ಎಂದು ಊಹಿಸಿ” ಎಂದು ಬರೆದಿದ್ದಾರೆ.

ಏರ್‌ಬ್ಯಾಗ್ ತೆರೆದರೆ ಕಾರು ಸಂಪೂರ್ಣ ನಷ್ಟವೇ?

ಅಪಘಾತದ ಬಳಿಕ ಏರ್‌ಬ್ಯಾಗ್‌ಗಳು ತೆರೆದಿದ್ದರೆ ಕಾರನ್ನು ದುರಸ್ತಿ ಮಾಡಿಸುವುದು ಸೂಕ್ತವೇ ಅಥವಾ ಹೊಸ ಕಾರು ಖರೀದಿಸುವುದೇ ಉತ್ತಮ ಎಂಬ ಚರ್ಚೆಯೂ ನಡೆದಿದೆ. ಕೆಲವು ನೆಟ್ಟಿಗರು ಏರ್‌ಬ್ಯಾಗ್‌ಗಳು ತೆರೆದಿರುವ ಕಾರುಗಳನ್ನು ದುರಸ್ತಿ ಮಾಡಿದರೂ ಮೊದಲಿನ ಸುರಕ್ಷತೆ ಮತ್ತು ಚಾಲನೆಯ ಅನುಭವ ಮರಳುವುದು ಖಚಿತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಏರ್‌ಬ್ಯಾಗ್ ತೆರೆದಿದೆ ಎಂಬ ಒಂದೇ ಕಾರಣಕ್ಕೆ ಪ್ರತಿಯೊಂದು ಕಾರನ್ನೂ ಹಾಳದದ್ದು ಎಂದು ಪರಿಗಣಿಸಲಾಗುವುದಿಲ್ಲ. ಕಾರಿನ ಚಾಸಿಸ್‌ಗೆ ಆಗಿರುವ ಹಾನಿ, ಸುರಕ್ಷತಾ ವ್ಯವಸ್ಥೆಗಳ ಸ್ಥಿತಿ, ದುರಸ್ತಿ ವೆಚ್ಚ ಮತ್ತು ವಿಮಾ ಪಾಲಿಸಿಯ ನಿಯಮಗಳನ್ನು ಆಧರಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.

PREV
Read more Articles on
click me!

Recommended Stories

Darshan: ಶೋಕ್ದಾರ್‌ ಧನ್ವೀರ್‌ ಬುಡಕ್ಕೆ ಬೆಂಕಿ ಇಟ್ಟ ವಿಜಯಲಕ್ಷ್ಮೀ, ಆರ್‌ಆರ್‌ ನಗರ ಪೊಲೀಸ್‌ ಠಾಣೆಗೆ ದೂರು!
ಬೆಂಗಳೂರಿನ ಕೆರೆ, ರಾಜಕಾಲುವೆಗಳ ಮೇಲೆಯೇ ರಸ್ತೆ ನಿರ್ಮಾಣ: ಜಿಬಿಎ-ಬಿಡಿಎ ನೂತನ ಪ್ರಸ್ತಾವನೆಗೆ ಭಾರಿ ವಿರೋಧ!