ಅಮೆಜಾನ್‌ನಲ್ಲಿ ತರಿಸಿದ ಪ್ರೋಟೀನ್ ಬಾರ್ ಚಾಕೋಲೇಟ್‌ನಲ್ಲಿ ಜೀವಂತ ಹುಳು; ಈಗಾಗಲೆ 6 ತಿಂದಿದ್ದ ಟೆಕ್ಕಿ!

Sathish Kumar KH   | Kannada Prabha
Published : Oct 23, 2026, 09:48 AM IST
Bengaluru Amazon protein Bar

ಸಾರಾಂಶ

ಬೆಂಗಳೂರಿನ ನಿವಾಸಿಯೊಬ್ಬರು ಆನ್‌ಲೈನ್‌ ಮೂಲಕ ಖರೀದಿಸಿದ್ದ ಪ್ರೋಟೀನ್ ಬಾರ್‌ನಲ್ಲಿ ಜೀವಂತ ಹುಳು ಪತ್ತೆಯಾಗಿದೆ. ಈಗಾಗಲೇ ಆರು ಬಾರ್‌ಗಳನ್ನು ಸೇವಿಸಿದ್ದ ಇವರು, ಏಳನೇ ಕವರ್ ತೆರೆದಾಗ ಈ ಆಘಾತಕಾರಿ ದೃಶ್ಯ ಕಂಡಿದ್ದಾರೆ. ಈ ಬಗ್ಗೆ ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಆರೋಗ್ಯ ಇಲಾಖೆಯ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಬೆಂಗಳೂರು (ಅ.23): ನಗರದ ನಿವಾಸಿಯೊಬ್ಬರು ಇ-ಕಾಮರ್ಸ್‌ ವೆಬ್‌ಸೈಟ್‌ ಮೂಲಕ ಖರೀದಿಸಿದ್ದ ಪ್ರೋಟೀನ್ ಬಾರ್‌ನಲ್ಲಿ ಜೀವಂತ ಹುಳು ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ.

ಕೊಮ್ಮಘಟ್ಟ ನಿವಾಸಿ ಶಿವನಾಗ್ ಅವರು, ಅಮೆಜಾನ್ ಮೂಲಕ ಆರ್ಡರ್ ಮಾಡಿ ಅ.7ರಂದು ತರಿಸಿಕೊಂಡಿದ್ದ ರೈಟ್‌ ಬೈಟ್ ಹೆಸರಿನ ಪ್ರೊಟೀನ್ ಬಾರ್‌ನಲ್ಲಿ ಬಿಳಿ ಬಣ್ಣದ ಹುಳು ಕಾಣಿಸಿಕೊಂಡಿದೆ. ಈ ಕುರಿತು ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಸಹಿತ ಪೋಸ್ಟ್ ಮಾಡಿರುವ ಶಿವನಾಗ್, ಆರೋಗ್ಯ ಇಲಾಖೆ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.

ಈಗಾಗಲೇ 6 ಪ್ರೊಟೀನ್ ಬಾರ್ ಸೇವಿಸಿದ್ದ ವ್ಯಕ್ತಿ

ಒಟ್ಟು 12 ಪ್ರೊಟೀನ್ ಬಾರ್‌ಗಳನ್ನು ಖರೀದಿಸಿದ್ದೆ. ಅದರಲ್ಲಿ ಆರು ಸೇವಿಸಿದ್ದೇನೆ. ಗುರುವಾರ ಮತ್ತೊಂದು ಬಾರ್ ತಿನ್ನಲೆಂದು ಕವರ್ ತೆರೆದ ಕೂಡಲೇ ಬಿಳಿ ಹುಳು ಕಾಣಿಸಿಕೊಂಡಿತು. ಈ ಕುರಿತು ಪ್ರೋಟೀನ್ ಬಾರ್ ಕಂಪನಿಗೆ ದೂರು ನೀಡಿದ್ದೇನೆ. ಅಲ್ಲದೇ, ನನ್ನಂತೆಯೇ ಬೇರೆಯವರು ಕೂಡ ಹುಳು ಬಂದಿರುವ ಕುರಿತು ಪೋಸ್ಟ್ ಮಾಡಿದ್ದಾರೆ. ಹುಳು ಬಂದಿರುವ ಪ್ರೋಟೀನ್ ಬಾರ್ ಆಗಸ್ಟ್‌ನಲ್ಲಿ ಮ್ಯಾನುಫ್ಯಾಕ್ಚರಿಂಗ್ ಆಗಿದ್ದು, 2027ರ ಆಗಸ್ಟ್‌ವರೆಗೂ ಅವಧಿ ಇದೆ ಶಿವನಾಗ್ ತಿಳಿಸಿದರು.

PREV
Read more Articles on
click me!

Recommended Stories

ಬಾಕಿ ಬಿಲ್ ಕೊಟ್ಟಿಲ್ಲವೆಂದು ಮೃತದೇಹ ತಡೆಹಿಡಿಯುವಂತಿಲ್ಲ; ಖಾಸಗಿ ಆಸ್ಪತ್ರೆಗಳಿಗೆ ಸಚಿವ ಖಾದರ್ ಖಡಕ್ ಎಚ್ಚರಿಕೆ!
ಮೆಟ್ರೋ ಗುಲಾಬಿ ಮಾರ್ಗ ಆರಂಭಕ್ಕೆ ಕೇಂದ್ರದ ಉತ್ತರ ಬರಬೇಕು, 2027ರ ಜುಲೈನಲ್ಲಿ ಸಿಲ್ಕ್‌ಬೋರ್ಡ್-ಕೆ.ಆರ್.ಪುರ ಓಪನ್