ದಿನಕ್ಕೊಂದು ಬಲಿ ಪಡೆಯುತ್ತಿರುವ ಬಿಎಂಟಿಸಿ, 10 ವರ್ಷದ ಶಾಲಾ ಬಾಲಕಿಯ ತಲೆ ಮೇಲೆ ಹರಿದ ಬಸ್‌!

Published : Aug 21, 2025, 11:34 AM IST
BMTC

ಸಾರಾಂಶ

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಚಾಲಕರ ನಿರ್ಲಕ್ಷ್ಯದಿಂದ ಮತ್ತೊಂದು ಪ್ರಾಣಹಾನಿ. ಯಲಹಂಕದಲ್ಲಿ ಬಸ್ಸಿನಡಿಗೆ ಸಿಲುಕಿ 10 ವರ್ಷದ ಬಾಲಕಿ ಸಾವು. ಕಳೆದ ವಾರದಲ್ಲಿ ಇದು ನಾಲ್ಕನೇ ಘಟನೆ.

ಬೆಂಗಳೂರು (ಆ.21): ಒಂದೆಡೆ ಗುಂಡಿಗಳಿಂದ ಬೆಂಗಳೂರಿನ ರಸ್ತೆಗಳು ತುಂಬಿ ಹೋಗಿದ್ದರೆ, ಬಿಎಂಟಿಸಿ ಬಸ್‌ಗಳ ಡ್ರೈವರ್‌ಗಳು ಗುಂಡಿ ತುಂಬಿದ ರಸ್ತೆಗಳಲ್ಲಿ ತನ್ನ ಬೇಜವಾಬ್ದಾರಿ ಚಾಲನೆಯನ್ನು ಮುಂದುವರಿಸಿದ್ದಾರೆ. ಇದರಿಂದಾಗಿ ರಾಜಧಾನಿಯಲ್ಲಿ ದಿನಕ್ಕೊಂದರಂತೆ ಬಿಎಂಟಿಸಿ ಅಡಿಗೆ ಬಿದ್ದು ಜನರು ಪ್ರಾಣ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಕಳೆದೊಂದು ವಾರದಲ್ಲಿ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಒಟ್ಟು ನಾಲ್ಕು ಇಂಥ ಘಟನೆಗಳು ನಡೆದಿದ್ದವು. ಗುರುವಾರ ಬೆಳಗ್ಗೆ ಬಿಎಂಟಿಸಿ ಬಸ್‌ಗೆ 10 ವರ್ಷ ಮಗು ಬಲಿಯಾಗಿದೆ. ಯಲಹಂಕ ಕೋಗಿಲು ಕ್ರಾಸ್ ಬಳಿ ಘಟನೆ ನಡೆದಿದ್ದು, KA57 F:5375 ಬಸ್ ನಿಂದ ಅಪಘಾತ ಸಂಭವಿಸಿದೆ. ಮಾರುತಿನಗರ ಹತ್ತಿರ ಹೋಗುವಾಗ ಎಡಗಡೆ ದ್ವಿಚಕ್ರ ವಾಹನ ಬಂದಿದೆ. ಈ ವೇಳೆ ಬೈಕ್‌ ಸ್ಕಿಡ್‌ ಆಗಿದ್ದರಿಂದ ಬಸ್‌ನ ಚಕ್ರದಡಿ ಮಗು ಸಿಲುಕಿ ಸಾವು ಕಂಡಿದೆ. ಬೆಳಿಗ್ಗೆ 8.20 ರ ಸುಮಾರಿಗೆ ಈ ಘಟನೆ ನಡೆದಿದ. ಈ ಸಂಬಂಧ N E S ಪೊಲೀಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಾಗಿದೆ.

ತಾಯಿ ಜೊತೆ ಶಾಲೆಗೆ ಹೋಗುವಾಗ ಈ ಘಟನೆ ನಡೆದಿದೆ. ಬಿಎಂಟಿಸಿಗೆ ಬಸ್‌ಗೆ ಬಲಿಯಾದ ಮಗುವನ್ನು ತನ್ವಿ ಕೃಷ್ಣ ಎಂದು ಗುರುತಿಸಲಾಗಿದ್ದು, ಮಿಲಿನಿಯಮ್ ಶಾಲೆಯಲ್ಲಿ 5 ನೇ ತರಗತಿ ಓದುತ್ತಿತ್ತು ಎನ್ನಲಾಗಿದೆ. ತಾಯಿ ಹರ್ಷಿತಾ ಜೊತೆ ತೆರಳುವಾಗ ಬೈಕ್‌ ಸ್ಕಿಡ್‌ ಆಗಿ ಅಪಘಾತ ಸಂಭವಿಸಿದೆ.

ಚಾಲಕರ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯೇ ಅಪಘಾತಗಳಿಗೆ ಕಾರಣ ಎಂದು ಆರೋಪಿಸಲಾಗಿದೆ. ಕಳೆದೊಂದು ವಾರದಲ್ಲಿ ನಡೆದ ಮೂರು ಘಟನೆಯಲ್ಲಿ ಇಬ್ಬರು ವ್ಯಕ್ತಿ ಬೈಕ್‌ ಸವಾರರಾಗಿದ್ದರೆ, ಇನ್ನೊಬ್ಬ ಬಿಎಂಟಿಸಿ ಪ್ರಯಾಣಿಕನಾಗಿದ್ದ.

1. ರೂಪೇನ ಅಗ್ರಹಾರ ಅಪಘಾತ: ಆಗಸ್ಟ್ 13 ರಂದು ರೂಪೇನ ಅಗ್ರಹಾರದ ಬಳಿ ನಡೆದ ಘಟನೆಯಲ್ಲಿ, ಆಟೋಗೆ ಡಿಕ್ಕಿ ಹೊಡೆದ ಬೈಕ್ ಸವಾರ ಸೈಯದ್ ಜಾಫರ್ ನಿಯಂತ್ರಣ ತಪ್ಪಿ ಬಿದ್ದಾಗ ಬಿಎಂಟಿಸಿ ಬಸ್‌ನ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರಂಭದಲ್ಲಿ ಬಿಎಂಟಿಸಿ ಚಾಲಕನ ನಿರ್ಲಕ್ಷ್ಯವೆಂದು ಎಫ್‌ಐಆರ್ ದಾಖಲಿಸಲಾಗಿದ್ದರೂ, ಸಿಸಿಟಿವಿ ದೃಶ್ಯಾವಳಿಯಲ್ಲಿ ಬೈಕ್ ಮತ್ತು ಆಟೋ ಚಾಲಕರ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವಾಗಿರುವುದು ಕಂಡುಬಂದಿದೆ.

2. ಸಂಜಯನಗರ ದುರಂತ: ಸಂಜಯನಗರದಲ್ಲಿ ಟೆಕ್ಕಿ ರೋಷನ್ ಎಂಬುವವರು ತಮ್ಮ ಬೈಕ್‌ನಲ್ಲಿ ಬಿಎಂಟಿಸಿ ಬಸ್ ಓವರ್‌ಟೇಕ್ ಮಾಡುವಾಗ ಬಸ್‌ಗೆ ಡಿಕ್ಕಿ ಹೊಡೆದು ಹಿಂಬದಿ ಚಕ್ರದಡಿ ಸಿಲುಕಿ ಸಾವನ್ನಪ್ಪಿದ್ದಾರೆ.

3. ಜಯನಗರದಲ್ಲಿ ಪ್ರಯಾಣಿಕನ ಸಾವು: ಆಗಸ್ಟ್ 21 ರಂದು ಜಯನಗರ ಬಸ್ ನಿಲ್ದಾಣದಲ್ಲಿ ಬಸ್‌ ಹತ್ತುವ ವೇಳೆ ಚಾಲಕ ಏಕಾಏಕಿ ಬಾಗಿಲು ಮುಚ್ಚಿ ಬಸ್‌ ಚಲಾಯಿಸಿದ್ದರಿಂದ ಪ್ರಯಾಣಿಕ ಸಂಪಂಗಿ ಬಸ್ಸಿನ ಹಿಂಬದಿ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.

ಈ ಸರಣಿ ದುರಂತಗಳು ಬಿಎಂಟಿಸಿ ಚಾಲಕರ ಅಜಾಗರೂಕ ಚಾಲನೆಯ ವಿರುದ್ಧ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

 

PREV
Read more Articles on
click me!

Recommended Stories

ಮಿರ್ಜಾ ಇಸ್ಮಾಯಿಲ್ ಮೊಮ್ಮಗಳ ಹಂತಕನಿಗೆ ಜೈಲೇ ಗತಿ, ಏನಿದು ಪ್ರಕರಣ?
ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ರಾಜ್ಯ ಮೊದಲ ಸ್ಥಾನ: ಗೃಹಸಚಿವ ಪರಮೇಶ್ವರ್