ಬೆಂಗಳೂರಿಗರೇ ಗಮನಿಸಿ, ಇಂದು ನಗರದ ಹಲವೆಡೆ 7 ಗಂಟೆ ಪವರ್ ಕಟ್!; ನಿಮ್ಮ ಏರಿಯಾ ಲಿಸ್ಟಲ್ಲಿದ್ಯಾ ಚೆಕ್ ಮಾಡಿ

Published : Jun 20, 2026, 09:56 AM IST
power cut

ಸಾರಾಂಶ

KPTCL ಮತ್ತು BESCOM ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಪವರ್ ಕಟ್ ಇರಲಿದ್ದು, ಮಧ್ಯ, ಪೂರ್ವ, ಈಶಾನ್ಯ ಮತ್ತು ಉತ್ತರ ಬೆಂಗಳೂರಿನ ಪ್ರಮುಖ ಪ್ರದೇಶಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ಬೆಂಗಳೂರು (ಜೂ.20): ಕರ್ನಾಟಕ ಪ್ರಸರಣ ನಿಗಮ ನಿಯಮಿತ (KPTCL) ಹಾಗೂ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ವ್ಯಾಪ್ತಿಯಲ್ಲಿ ತ್ರೈಮಾಸಿಕ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವುದರಿಂದ ನಗರದ ಹಲವೆಡೆ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಸತತ 7 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಬೆಸ್ಕಾಂ ಮಾಹಿತಿ ನೀಡಿದೆ. 66/11Kv ಅಮರಜ್ಯೋತಿ ಎಂಯುಎಸ್ಎಸ್ (MUSS), 220/66/11kV ಇಪಿಐಪಿ (EPIP) ಎಂಯುಎಸ್ಎಸ್‌ನ 31.5MVA ಪವರ್ ಟ್ರಾನ್ಸ್‌ಫಾರ್ಮರ್-1 ಮತ್ತು 2, 66/11kV ಮಾನ್ಯತಾ ಟೆಕ್ ಪಾರ್ಕ್ ಎಂಯುಎಸ್ಎಸ್ ಹಾಗೂ ಸರ್ ಎಂ.ವಿ 220/66/11ಕೆವಿ ಜಿಐಎಸ್ ಇಡಿಸಿ ಸ್ಟೇಷನ್ ವ್ಯಾಪ್ತಿಯಲ್ಲಿ ಈ ತಾಂತ್ರಿಕ ಸುಧಾರಣಾ ಕಾಮಗಾರಿಗಳು ನಡೆಯಲಿವೆ. ನಿರ್ವಹಣಾ ಕಾಮಗಾರಿಗಳು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪೂರ್ಣಗೊಂಡಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ವಿದ್ಯುತ್ ಸಂಪರ್ಕವನ್ನು ಮರುಸ್ಥಾಪಿಸಲಾಗುವುದು ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.

ವಿದ್ಯುತ್ ವ್ಯತ್ಯಯವಾಗಲಿರುವ ಪ್ರಮುಖ ಪ್ರದೇಶಗಳ ಪಟ್ಟಿ

ಮಧ್ಯ ಬೆಂಗಳೂರು ಮತ್ತು ಕಮರ್ಷಿಯಲ್ ಏರಿಯಾ: ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಲ್ಯಾವೆಲ್ಲೆ ರಸ್ತೆ, ರೆಸಿಡೆನ್ಸಿ ರಸ್ತೆ ಮತ್ತು ರೆಸಿಡೆನ್ಸಿ ರಸ್ತೆ ಕ್ರಾಸ್, ವಿಠ್ಠಲ್ ಮಲ್ಯ ರಸ್ತೆ, ವಾಲ್ಟನ್ ರಸ್ತೆ, ಚರ್ಚ್ ಸ್ಟ್ರೀಟ್, ಕಸ್ತೂರಬಾ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಕ್ವೀನ್ಸ್ ವೃತ್ತ, ಹೊಂಡೈ ಆರ್‌ಎಂಯು (RMU), ಐಟಿಸಿ (ITC) ಹೋಟೆಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಐಟಿ ಕಾರಿಡಾರ್ ಮತ್ತು ಟೆಕ್ ಪಾರ್ಕ್‌ಗಳು: ಮಾನ್ಯತಾ ಟೆಕ್ ಪಾರ್ಕ್ ಮತ್ತು ಮಾನ್ಯತಾ ರೆಸಿಡೆನ್ಸಿ, ಇಪಿಐಪಿ ಲೇಔಟ್ ಮತ್ತು ಇಪಿಐಪಿ ಇಂಡಸ್ಟ್ರಿಯಲ್ ಏರಿಯಾ, ಸಾಲಾರ್‌ಪುರಿಯಾ ಟೆಕ್ ಪಾರ್ಕ್, ಬಾಗ್ಮನೆ ನಿಯಾನ್ ಬಿಲ್ಡಿಂಗ್ ಮತ್ತು ಬಾಗ್ಮನೆ ನಿಯಾನ್ ಬ್ಲಾಕ್, ಎಸ್‌ಜೆಆರ್ ಟೆಕ್ ಪಾರ್ಕ್, ಟಿಸಿಎಸ್ ಸಾಫ್ಟ್‌ವೇರ್ ಸಂಸ್ಥೆ, ಕಾರ್ಲೆ ಟೌನ್ ಸೆಂಟರ್, ಗೋಪಾಲನ್ ಗ್ಲೋಬಲ್ ಆಕ್ಸೆಸ್ ಮತ್ತು ಗೋಪಾಲನ್ ಎಂಟರ್‌ಪ್ರೈಸಸ್ ಆವರಣ.

ಪೂರ್ವ ಮತ್ತು ಈಶಾನ್ಯ ಭಾಗದ ಬಡಾವಣೆಗಳು: ದೊಮ್ಮಲೂರು 2ನೇ ಹಂತ, ದೊಮ್ಮಲೂರು ಗ್ರಾಮ, ಕೋಡಿಹಳ್ಳಿ, ಯೋಗಾನಂದ ಲೇಔಟ್, ಪರಮಹಂಸ ರಸ್ತೆ, ಧೂಪನಹಳ್ಳಿ, ಎಚ್‌ಎಎಲ್ (HAL) 2ನೇ ಹಂತ, ಇಎಸ್‌ಐ (ESI) ಆಸ್ಪತ್ರೆ ಪರಿಸರ, ಜೆಆರ್‌ಆರ್ ಲೇಔಟ್, ಕುಂದಲಹಳ್ಳಿ ಮುಖ್ಯ ರಸ್ತೆ, ಗ್ರಾಫೈಟ್ ವೃತ್ತ, ಚೆನ್ನಮ್ಮ ಲೇಔಟ್, ಆರ್‌ಜಿ ಹಳ್ಳಿ–ಸಿದ್ದಾಪುರ ಗೇಟ್.

ಉತ್ತರ ಬೆಂಗಳೂರು ಮತ್ತು ಅಪಾರ್ಟ್‌ಮೆಂಟ್‌ಗಳು: ಹೆಬ್ಬಾಳ ಅಪಾರ್ಟ್ಮೆಂಟ್ ಲೇಔಟ್, ವೆಂಕಟೇಗೌಡ ಲೇಔಟ್, ಬಿ.ಟಿ.ಎಸ್. ಲೇಔಟ್, ಗೋದ್ರೇಜ್ ಅಪಾರ್ಟ್ಮೆಂಟ್, ವಿಕಾನಯ ಅಪಾರ್ಟ್ಮೆಂಟ್, ಎಸ್‌ಎನ್‌ಎನ್ ಅಪಾರ್ಟ್‌ಮೆಂಟ್ಸ್, ಜೆಎನ್‌ಸಿ, ಮಧುವನ ಎಂ 2 ಬ್ಲಾಕ್, ರಾಚೇನಹಳ್ಳಿ, ಶ್ರೀರಾಂಪುರ, ಚಾಮುಂಡೇಶ್ವರಿ ಲೇಔಟ್, ರಾಯಲ್ ಎನ್‌ಕ್ಲೇವ್, ಮೇಸ್ತ್ರಿ ಪಾಳ್ಯ, ಥಣಿಸಂದ್ರ, ಬಿ. ನಾರಾಯಣಪುರ ಕ್ರಾಸ್, ಬಿಡಿಎಸ್ ಲೇಔಟ್, ಅಮರಜ್ಯೋತಿ ಲೇಔಟ್ ಹಾಗೂ ಮರಿಯಣ್ಣಪಾಳ್ಯ.

 

PREV
Read more Articles on
click me!

Recommended Stories

Karnataka HC: ಆರೋಪ ಇರೋದು ಎಸ್‌ಐ ಮೇಲೆ, ಬಂಧಿಸಿದ್ದು ಸಹೋದರನನ್ನ: ಪೊಲೀಸರಿಗೆ ಹೈಕೋರ್ಟ್ ತರಾಟೆ! ಏನಿದು ಪ್ರಕರಣ?
ಬೆಂಗಳೂರು ನಗರದಲ್ಲಿ ಶವ ಸಂಸ್ಕಾರಕ್ಕೆ ನೋಂದಣಿ, 250 ರು. ಕಡ್ಡಾಯ