ಜ.22ಕ್ಕೆ ಬಂದ್‌ಗೆ ಕರೆ ನೀಡಿದ ಬೆಂಗಳೂರು ಮುಸ್ಲಿಂ ಸಂಘಟನೆ!

By Suvarna NewsFirst Published Jan 15, 2021, 7:24 PM IST
Highlights

ಹಲವು ಕಾರಣ ಹಾಗೂ ಬೇಡಿಕೆಗಳನ್ನಿಟ್ಟುಕೊಂಡು ಮುಸ್ಲಿಂ ಸಂಘಟನೆ ಬೆಂಗಳೂರಿನಲ್ಲಿ ಬಂದ್‌ಗೆ ಕರೆ ಕೊಟ್ಟಿದೆ.  ಮರಾಠಾ ಪ್ರಾಧಿಕಾರ ವಿರೋಧಿಸಿ ಬಂದ್, ಸಾರಿಗೆ ನೌಕರರ ಮುಷ್ಕರ ಸೇರಿದಂತೆ ಹಲವು ಪ್ರತಿಭಟನೆಗಳ ಬಳಿಕ ತಣ್ಣಗಾಗಿದ್ದ ಬೆಂಗಳೂರು ಇದೀಗ ಮುಸ್ಲಿಂ ಸಂಘಟನೆಗಳಿಂದ ಬಂದ್ ಕರೆ ನೀಡಿದೆ.
 

ಬೆಂಗಳೂರು(ಜ.15): ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಯಲ್ಲಿ ಅಮಾಯಕರನ್ನು ಬಂಧಿಸಲಾಗಿದೆ ಎಂದು ಆರೋಪಿಸಿ 28 ಮುಸ್ಲಿಂ ಸಂಘಟನೆಗಳು ಬೆಂಗಳೂರಿನಲ್ಲಿ ಬಂದ್‌ಗೆ ಕರೆ ನೀಡಿದೆ. ಜನವರಿ 22 ರಂದು ಎಲ್ಲಾ ಮುಸ್ಲಿಂ ಮಾಲೀಕರು ತಮ್ಮ ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಕರೆ ನೀಡಲಾಗಿದೆ ಎಂದು ಟೈಮ್ಸ್ ಮಾಧ್ಯಮ  ವರದಿ ಮಾಡಿದೆ.

ಕಾಂಗ್ರೆಸ್‌-ಎಸ್‌ಡಿಪಿಐ ವಾಟ್ಸಪ್ ಚಾಟ್‌ನಿಂದ ಸಂಚು ಬಯಲು'

ಈ ಬಂದ್ ಬೆಂಗಳೂರು ಗಲಭೆಗೆ ಮಾತ್ರ ಸೀಮಿತವಾಗಿಲ್ಲ. ಲವ್ ಜಿಹಾದ್ ವಿರುದ್ಧ ಹಾಗೂ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆಗಾಗಿ ಈ ಬಂದ್ ಕರೆ ನೀಡಲಾಗಿದೆ ಎಂದುು ಮುಸ್ಲಿಂ ಸಂಘಟನೆಗಳು ಹೇಳಿವೆ. ಬೆಂಗಳೂರು ಗಲಭೆಯಲ್ಲಿ ಬಂಧಿಸಿರುವ ಅಮಾಯಕರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬಂದ್ ನಡೆಸಲಾಗುವುದು ಎಂದು ಸಂಘಟನೆಗಳು ಹೇಳಿವೆ ಎಂದು ಟೈಮ್ಸ್ ಮಾಧ್ಯಮ ತನ್ನ ವರದಿಯಲ್ಲಿ ಪ್ರಕಟಿಸಿದೆ.

ಬೆಳಗ್ಗೆಯಿಂದ ಸಂಜೆ 5 ಗಂಟೆ ವರೆಗೆ ಎಲ್ಲಾ ಮುಸ್ಲಿಂವರು ತಮ್ಮ ಅಂಗಡಿಗಳನ್ನು ಮುಚ್ಚಲಿದ್ದಾರೆ. ಶಾಂತಿಯುತ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದಿದೆ. ಇದುವರೆಗೆ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲೆಭೆ ಬಳಿಕ ಎಸ್‌ಡಿಪಿ ಪಕ್ಷದ ನಾಯಕ ಮುಝಮ್ಮಿಲ್ ಪಾಶಾ ಸೇರಿದಂತೆ 421 ಮಂದಿಯನ್ನು ಆರಸ್ಟ್ ಮಾಡಲಾಗಿದೆ. 

click me!