
ಬೆಂಗಳೂರು (ನ.13) ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಪಿಂಕ್ ಲೈನ್ ಮೆಟ್ರೋ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಬರೋಬ್ಬರಿ 15600 ಕೋಟಿ ರೂಪಾಯಿಗೂ ಅಧಿಕ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ ನೀಡಿದ್ದಾರೆ. ಬೀಳೆಕಹಳ್ಳಿ IIMB ಸಂಭಾಗಣದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಮೋದಿ, ಕರ್ನಾಟಕ ಜನತೆಯನ್ನುದ್ದೇಶಿಸಿ ಮಾತನಾಡಿದ್ದಾರೆ.
ಬೆಂಗಳೂರಿನ ಪಿಂಕ್ ಲೈನ್ ಮೆಟ್ರೋ ಲೈನ್ ಯೋಜನೆ ಮೂಲಕ 100 ಕಿಲೋಮೀಟರ್ ವಿಸ್ತರಣೆಗೊಂಡಿದೆ. ನಿನ್ನೆ (ನ.13) ಬೆಂಗಳೂರಿನ ಪ್ರಮುಖ ನಾಯಕ, ಮಾಜಿ ಸಂಸದ, ದಿವಂಗತ ಅನಂತ್ ಕುಮಾರ್ ಅವರ ಪುಣ್ಯತಿಥಿ ಇತ್ತು. ಬೆಂಗಳೂರಿನ ಮೆಟ್ರೋ ಸೇರಿದಂತೆ ಹಲವು ಅಭಿವೃದ್ಧಿಗಳ ಕನಸು ಕಂಡಿದ್ದ ಅನಂತ್ ಕುಮಾರ್ ಆತ್ಮ ಇಂದು ಬೆಂಗಳೂರು ಮೆಟ್ರೋ ಅಭಿವೃದ್ಧಿ ನೋಡಿ ಖುಷಿಯಾಗಿರುತ್ತದೆ ಎಂದು ಮೋದಿ ಹೇಳಿದ್ದಾರೆ. ಬೆಂಗಳೂರಿನ ತ್ಯಾಜ್ಯದಿಂದ 13 ಟನ್ ಗ್ಯಾಸ್ ತಯಾರಿಸಲು ಸಾಧ್ಯವಿದೆ. ಇದಕ್ಕಾಗಿ ಸಂಸ್ಕರಣ ಘಟನೆ, ಎನರ್ಜಿ ಕ್ಷೇತ್ರದಲ್ಲಿ ಭಾರತದ ಪ್ರಮುಖವಾಗಿ ಹೂಡಿಕೆ ಮಾಡುತ್ತಿದೆ. ಹೊಸ ತಂತ್ರಜ್ಞಾನದ ಮೂಲಕ ಭಾರತ ಮುನ್ನುಗ್ಗುತ್ತಿದೆ. ನವೀಕರಿಸುವ ಇಂಧನ ಸೇರಿದಂತೆ ಹಲವು ಇಂಧನ ಉತ್ಪಾದನೆಯಲ್ಲಿ ಭಾರತ ಮುನ್ನಗುತ್ತಿದೆ.
ಮೆಟ್ರೋ ಯೋಜನೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಶೇಕಡಾ 50, 50 ಆಧಾರದಲ್ಲಿ ಕಾಮಗಾರಿ ನಡೆಸುತ್ತಿದೆ. ಆದರೆ ಬೆಂಗಳೂರಿನಲ್ಲಿ ಭೂಮಿ ಒತ್ತುವರಿ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಹೀಗಾಗಿ ರಾಜ್ಯ ಸರ್ಕಾರ ಹೆಚ್ಚಿನ ಹಣವನ್ನು ಭರಿಸುತ್ತಿದೆ. ಹೀಗಾಗಿ ಹೆಚ್ಚಿನ ಅನುದಾನ ಕೇಂದ್ರ ನೀಡಬೇಕು ಎಂದು ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.
ಪಿಂಕ್ ಲೈನ್ ಮೆಟ್ರೋಗೆ ಚಾಲನೆ ನೀಡಿದ ಬಳಿಕ IIMB ಸಂಭಾಗಣಕ್ಕೆ ಆಗಮಿಸಿದ ಮೋದಿ 12 ಜಿಲ್ಲೆಯ 14 ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಬೆಂಗಳೂರು-ಮಂಗಳೂರು-ಗೋವಾ ವಂದೇ ಭಾರತ್ ರೈಲು ಯೋಜನೆಗೆ ಮೋದಿ ಚಾಲನೆ ನೀಡಿದ್ದಾರೆ. ಇದೇ ವೇಳೆ ಕರ್ನಾಟಕದ ನಾಲ್ಕು ಅಮೃತ್ ಭಾರತ್ ರೈಲು ನಿಲ್ದಾಣಗಳ ಉದ್ಘಾಟನೆ ಮಾಡಿದ್ದಾರೆ. ಚಾಮರಾಜನಗರ, ಚಿಕ್ಕಮಗಳೂರು, ಸಕಲೇಶಪುರ, ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಗಳ ಲೋಕಾರ್ಪಣೆಗೊಂಡಿದೆ. ಬಾಗಲಕೋಟೆ–ವಂಡಾಲ್ 45 ಕಿ.ಮೀ. ರೈಲ್ವೆ ಡಬ್ಲಿಂಗ್ ಮಾರ್ಗ ಲೋಕಾರ್ಪಣೆ ಮಾಡಲಾಗಿದೆ. ದಾವಣಗೆರೆ–ಬಳ್ಳಾರಿ ವಿದ್ಯುತ್ ಪ್ರಸರಣ ವ್ಯವಸ್ಥೆ ಬಲವರ್ಧನೆಗೆ ಶಂಕುಸ್ಥಾಪನೆ ಮಾಡಲಾಗಿದೆ.
ಮಂಗಳೂರಿನಲ್ಲಿ ಭಾರತದ ಅತಿದೊಡ್ಡ ಭೂಗತ LPG ಸಂಗ್ರಹಣಾ ಘಟಕ ಲೋಕಾರ್ಪಣೆ ಮಾಡಲಾಗಿದೆ. 80 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ LPG ಸಂಗ್ರಹಣಾ ಘಟಕಕ್ಕೆ ಚಾಲನೆ ನೀಡಲಾಗಿದೆ. MRPLನ ದೇವನಗುಂದಿ ಮಾರ್ಕೆಟಿಂಗ್ ಟರ್ಮಿನಲ್ ಲೋಕಾರ್ಪಣೆ, ಹರಳಕುಂಟೆಯಲ್ಲಿ GAILನ ಬಯೋಗ್ಯಾಸ್ ಘಟಕಕ್ಕೆ ಶಂಕುಸ್ಥಾಪನೆ, ದಿನಕ್ಕೆ 300 ಟನ್ ತ್ಯಾಜ್ಯ ಸಂಸ್ಕರಣೆ, 12.6 ಟನ್ ಬಯೋಗ್ಯಾಸ್ ಉತ್ಪಾದನೆ ಗುರಿ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ₹15,600 ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಯೋಜನೆಗಳ ಕೊಡುಗೆ ನೀಡಿದ್ದಾರೆ.