Bengaluru Landlord: ಮನೆ ಖಾಲಿ ಮಾಡ್ತೀನಿ ಎಂದ ಯುವತಿಗೆ ಓನರ್ ಕೊಟ್ಟ ರಿಪ್ಲೈ ವೈರಲ್! ನೀವೂ ಓದಿ

Published : Jun 23, 2026, 08:13 PM IST
Bengaluru Home rent

ಸಾರಾಂಶ

ಬೆಂಗಳೂರಿನ ಟೆಕ್ಕಿ ಕೃತಿಕಾ ಕುಮಾರಿ, ತಮ್ಮ ಬಾಡಿಗೆ ಮನೆಯನ್ನು ಖಾಲಿ ಮಾಡಲು ಸಾಧ್ಯವಾಗದಿದ್ದಾಗ, ಓನರ್‌ಗೆ ವಾಟ್ಸಾಪ್ ಮೂಲಕ ಅನುಮತಿ ಕೇಳಿದರು. ಅದಕ್ಕೆ ಓನರ್ ನೀಡಿದ ಅಚ್ಚರಿಯ ಮತ್ತು ಹೃದಯಸ್ಪರ್ಶಿ ಉತ್ತರವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಸಾಮಾನ್ಯವಾಗಿ ಮನೆ ಓನರ್‌ಗಳು ಅಂದ್ರೆ ಸಾಕು, ಬಾಡಿಗೆದಾರರಿಗೆ ಒಂದು ರೀತಿ ಭಯ. ಸಣ್ಣಪುಟ್ಟ ವಿಷಯಕ್ಕೂ ಕಿರಿಕಿರಿ ಮಾಡ್ತಾರೆ ಅನ್ನೋ ಆರೋಪ ಇದ್ದೇ ಇರುತ್ತೆ. ಆದ್ರೆ, ಇಲ್ಲೊಬ್ಬರು ಮನೆ ಓನರ್ ಮಾತ್ರ ಇದಕ್ಕೆ ತದ್ವಿರುದ್ಧ. ಇಂಥಾ ಓನರ್ ಸಿಗೋಕೆ ಅದೃಷ್ಟನೇ ಮಾಡಿರಬೇಕು ಅಂತ ಸೋಶಿಯಲ್ ಮೀಡಿಯಾದಲ್ಲಿ ಜನ ಹೇಳ್ತಿದ್ದಾರೆ. ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಡೆವಲಪರ್ ಆಗಿ ಕೆಲಸ ಮಾಡುವ ಕೃತಿಕಾ ಕುಮಾರಿ ಅನ್ನೋ ಯುವತಿ, ತಮ್ಮ ಮನೆ ಓನರ್ ಜೊತೆಗಿನ ವಾಟ್ಸಾಪ್ ಚಾಟ್ ಸ್ಕ್ರೀನ್‌ಶಾಟ್ ಶೇರ್ ಮಾಡಿಕೊಂಡಿದ್ದಾರೆ.

ಕೃತಿಕಾ, ತಾನು ಸದ್ಯ ವಾಸವಿರುವ ಮನೆಯನ್ನು ಜುಲೈ ತಿಂಗಳಲ್ಲಿ ಖಾಲಿ ಮಾಡುವುದಾಗಿ ಓನರ್‌ಗೆ ಮೊದಲೇ ತಿಳಿಸಿದ್ದರು. ಆದರೆ, ಅಂದುಕೊಂಡಂತೆ ಅವರಿಗೆ ಬೇರೆ ಬಾಡಿಗೆ ಮನೆ ಸಿಗಲಿಲ್ಲ. ಹೀಗಾಗಿ, ಇನ್ನೂ ಕೆಲವು ದಿನಗಳ ಕಾಲ ಇಲ್ಲೇ ಉಳಿದುಕೊಳ್ಳಲು ಅನುಮತಿ ಕೇಳಬೇಕಾಯಿತು. 'ಇನ್ನೂ ಸ್ವಲ್ಪ ದಿನ ಇಲ್ಲೇ ಇರಬಹುದಾ?' ಎಂದು ಕೃತಿಕಾ ಕೇಳಿದ್ದಕ್ಕೆ, ಮನೆ ಓನರ್ ಕಡೆಯಿಂದ ಬಂದ ಉತ್ತರ ಮಾತ್ರ ಸಖತ್ ಅಚ್ಚರಿ ಮತ್ತು ಖುಷಿ ಕೊಡುವಂತಿತ್ತು.

ಬೇರೆ ಮನೆ ಸಿಗಲಿಲ್ಲ, ಇಲ್ಲಿ ಉಳಿಯಬಹುದೇ?

'ಜುಲೈ ಅಂತ್ಯಕ್ಕೆ ಮನೆ ಖಾಲಿ ಮಾಡುವುದಾಗಿ ನಾನು ನಮ್ಮ ಓನರ್‌ಗೆ ತಿಳಿಸಿದ್ದೆ. ಆದರೆ ನನಗೆ ಬೇರೆ ಫ್ಲ್ಯಾಟ್ ಸಿಗಲಿಲ್ಲ. ಹಾಗಾಗಿ, ಸೆಪ್ಟೆಂಬರ್‌ವರೆಗೆ ಇಲ್ಲೇ ಇರಬಹುದಾ ಎಂದು ಅವರಿಗೆ ಮೆಸೇಜ್ ಮಾಡಿದೆ. ಅದಕ್ಕೆ ಅವರು ಹೀಗೆ ಉತ್ತರಿಸಿದರು' ಎಂಬ ಕ್ಯಾಪ್ಷನ್‌ನೊಂದಿಗೆ ಕೃತಿಕಾ ಈ ಪೋಸ್ಟ್ ಶೇರ್ ಮಾಡಿದ್ದಾರೆ.

 

 

ಹಾಗಾದ್ರೆ, ಮನೆ ಓನರ್ ಕೊಟ್ಟ ಉತ್ತರ ಏನಿತ್ತು ಅಂತೀರಾ? 'ದಯವಿಟ್ಟು ಹೋಗಬೇಡಿ. ನೀವು ಇನ್ನೂ ಹೆಚ್ಚು ಕಾಲ ನಮ್ಮ ಮನೆಯಲ್ಲೇ ಬಾಡಿಗೆಗೆ ಇರಬೇಕು ಅನ್ನೋದು ನನ್ನ ಆಸೆ' - ಇದೇ ನೋಡಿ ನೆಟ್ಟಿಗರ ಮನಗೆದ್ದ ಆ ಉತ್ತರ. ಈ ಪೋಸ್ಟ್‌ಗೆ ಸಾವಿರಾರು ಮಂದಿ ಕಾಮೆಂಟ್ ಮಾಡಿದ್ದು, 'ಇಂಥಾ ಒಳ್ಳೆ ಓನರ್ ಸಿಗೋಕೆ ಪುಣ್ಯ ಮಾಡಿರಬೇಕು, ಹಾಗಾಗಿ ನೀವು ಮನೆ ಖಾಲಿನೇ ಮಾಡಬೇಡಿ' ಎಂದು ಬಹುತೇಕರು ಸಲಹೆ ನೀಡಿದ್ದಾರೆ.

PREV
Read more Articles on
click me!

Recommended Stories

ಮೆಟ್ರೋ ಪ್ರಯಾಣಿಕರೇ ಗಮನಿಸಿ: ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ರೈಲು ತಾಂತ್ರಿಕ ದೋಷ; ನೇರಳೆ ಮಾರ್ಗದ ಸಂಚಾರ ವ್ಯತ್ಯಯ!
Bidadi Township: ಬೈರಮಂಗಲ ಸರ್ಕಲ್‌ಗೆ ಬನ್ನಿ, ರೈತರ ಮುಂದೆ ಚರ್ಚೆ ಮಾಡೋಣ: ಡಿಕೆಶಿಗೆ ನಿಖಿಲ್ ಬಹಿರಂಗ ಸವಾಲ್