Latest Videos

ಬೆಂಗಳೂರಿಗೆ ಐಟಿ ಸಿಟಿ ಹೆಸರು ಬಂದದ್ದು ಸಾರ್ಥಕವಾಯ್ತು; ಚಪ್ಪಲಿ ಖರೀದಿಸುತ್ತಲೇ ಮೀಟಿಂಗ್ ಅಟೆಂಡ್ ಮಾಡಿದ ಟೆಕ್ಕಿ

By Sathish Kumar KHFirst Published May 22, 2024, 7:59 PM IST
Highlights

ಬೆಂಗಳೂರನ್ನು ಭಾರತದ ಸಿಲಿಕಾನ್ ಸಿಟಿ, ಐಟಿ ಸಿಟಿ ಎಂದು ಕರೆದಿದ್ದಕ್ಕೂ ಸಾರ್ಥಕವಾಯಿತು. ಇಲ್ಲೊಬ್ಬ ಮಹಿಳೆ ಚಪ್ಪಲಿ ಖರೀದಿಸುತ್ತಲೇ ಲ್ಯಾಪ್‌ಟಾಪ್‌ನಲ್ಲಿ ಅಫೀಸ್ ಮೀಟಿಂಗ್ ಅಟೆಂಡ್ ಮಾಡಿದ್ದಾಳೆ. 

ಬೆಂಗಳೂರು (ಮೇ 22): ಭಾರತದಲ್ಲಿ ಬೆಂಗಳೂರನ್ನು ಸಿಲಿಕಾನ್ ಸಿಟಿ, ಐಟಿ ಸಿಟಿ ಎಂದು ಕರೆದಿದ್ದಕ್ಕೂ ಸಾರ್ಥಕವಾಯ್ತು ನೋಡಿ. ಇಲ್ಲೊಬ್ಬ ಮಹಿಳೆ ಲ್ಯಾಪ್‌ಟಾಪ್ ಹಿಡಿದುಕೊಂಡು ಅದರಲ್ಲಿ ಆಫೀಸ್ ಮೀಟಿಂಗ್ ಅಟೆಂಡ್ ಮಾಡುತ್ತಲೇ ಚಪ್ಪಲಿ ಖರೀದಿ ಮಾಡಿದ ಫೋಟೋ ಮಾತ್ರ ವೈರಲ್ ಆಗುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಬೆಂಗಳೂರಿಗೆ ಸಿಲಿಕಾನ್ ಸಿಟಿ ಎಂದಿದ್ದಕ್ಕೂ ಸಾರ್ಥಕವಾಯ್ತು ಎಂದು ಕಾಮೆಂಟ್ ಮಾಡಿದ್ದಾರೆ.

ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ಬೆಂಗಳೂರು ಜಗತ್ತಿನಲ್ಲಿ ತನ್ನ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ಬೆಂಗಳೂರಿನಲ್ಲಿ ಅತಿಹೆಚ್ಚು ಐಟಿಬಿಟಿ ಕಂಪನಿಗಳಿದ್ದು ವಾರದ 5 ದಿನಗಳು ಟೆಕ್ಕಿಗಳು ಎಲ್ಲೆಂದರಲ್ಲಿ ಲ್ಯಾಪ್‌ಟಾಪ್ ಹಿಡಿದುಕೊಂಡು ಕೆಲಸ ಮಾಡುವುದನ್ನು ನಾವು ಸಾಮಾನ್ಯವಾಗಿ ನೋಡಿರುತ್ತೇವೆ. ಬಸ್ ನಿಲ್ದಾಣ, ಮೆಟ್ರೋ ನಿಲ್ದಾಣ, ಮೆಟ್ರೋ ರೈಲು, ಕಾರುಗಳು, ಟ್ಯಾಕ್ಸಿಗಳು, ಐಷಾರಾಮಿ ಹೋಟೆಲ್‌ಗಳು ಹಾಗೂ ಕೆಲವೊಮ್ಮೆ ಪಾರ್ಕ್‌ಗಳಲ್ಲಿಯೂ ಟೆಕ್ಕಿಗಳು ಕೆಲಸ ಮಾಡುವುದನ್ನು ನೋಡಿದ್ದೇವೆ. ಇದು ಬೆಂಗಳೂರಿನಲ್ಲಿ ಸರ್ವೇ ಸಾಮಾನ್ಯ ಎಂದು ನಾವು ಹೇಳುತ್ತೇವೆ.

ಶಕ್ತಿ ಯೋಜನೆಯಡಿ ಫ್ರೀಯಾಗಿ ಬಸ್‌ನಲ್ಲಿ ಹೋಗುವ ಮಹಿಳೆಯರೇ ಎಚ್ಚರ; ದರೋಡೆಗಾಗಿ ಕಾಯ್ತಿದೆ ಜ್ಯೂಸ್ ಗ್ಯಾಂಗ್

ಆದರೆ, ಈಗ ಬೆಂಗಳೂರಿನಲ್ಲಿ ಟೆಕ್ಕಿ ಮಹಿಳೆಯೊಬ್ಬರು ಚಪ್ಪಲಿ ಖರೀದಿ ಮಾಡಲು ಅಂಗಡಿಗೆ ಹೋಗಿದ್ದಾರೆ. ಅಲ್ಲಿ ತಮ್ಮ ಲ್ಯಾಪ್‌ಟಾಪ್ ಅನ್ನು ತೆರೆದು ಅದರಲ್ಲಿ ಆಫೀಸ್ ಮೀಟಿಂಗ್ ಅಟೆಂಡ್ ಮಾಡುತ್ತಲೇ ಚಪ್ಪಲಿ ಖರೀದಿ ಮಾಡಿದ್ದಾರೆ. ಈ ಸಂಬಂಧಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಈಗ ಭಾರಿ ವೈರಲ್ ಆಗುತ್ತಿದೆ. ಈ ಬಗ್ಗೆ ಕಾರ್ತಿಕ್ ಭಾಸ್ಕರ್ ಎನ್ನುವವರು 'ಎಕ್ಸ್' ಖಾತೆಯಲ್ಲಿ @ಪೀಕ್ ಬೆಂಗಳೂರು (@peakbengaluru) ಎಂಬುದಕ್ಕೆ ಟ್ಯಾಗ್ ಮಾಡಿ 'ಒಬ್ಬ ಮಹಿಳೆ ತನ್ನ ಲ್ಯಾಪ್‌ಟಾಪ್‌ನಲ್ಲಿ ಟೀಮ್ ಮೀಟಿಂಗ್‌ನಲ್ಲಿ ಭಾಗವಹಿಸುತ್ತಿರುವಾಗ ಶೂ ಶಾಪಿಂಗ್ ಮಾಡುವುದನ್ನು ನಾನು ನೋಡಿದೆ' ಎಂದು ಬರೆದುಕೊಂಡಿದ್ದಾರೆ.

ಈ ಫೋಟೋದ ಬಗ್ಗೆ ತರಹೇವಾರಿ ಕಾಮೆಂಟ್‌ಗಳು ಕೂಡ ಬಂದಿದೆ. ಅದರಲ್ಲಿ ಕೆಲವು ಐಟಿ ಕಂಪನಿಗಳು ವರ್ಕ್ ಫ್ರಮ್ ಹೋಮ್ ಪಾಲಿಸಿಯನ್ನು ರದ್ದುಗೊಳಿಸುವುದಕ್ಕೆ ಇಂಥವರೇ ನೇರವಾಗಿ ಕಾರಣರಾಗಿದ್ದಾರೆ. ಕೆಲಸ ಮಾಡುವಾಗ ಶಾಪಿಂಗ್ ಮಾಡುತ್ತಿರುವುದು ದುಃಖದ ಸಂಗತಿಯಾಗಿದೆ. ಇದು ಭಾರತದಲ್ಲಿನ ಜನರಿಗೆ ಕೆಲಸದ ನೀತಿಗಳಿಲ್ಲ ಎಂಬ ಅನಿಸಿಕೆಯನ್ನು ಸೃಷ್ಟಿಸುತ್ತದೆ ಎಂದು ಅಮಿತ್ ಗೋಯೆಲ್ ಎನ್ನುವವರು ಕಾಮೆಂಟ್ ಮೂಲಕ ಹೇಳಿದ್ದಾರೆ. 

ಬೆಂಗಳೂರು ರೇವ್ ಪಾರ್ಟೀಲಿ ಸಿಕ್ಕಿಬಿದ್ದ ಮತ್ತೊಬ್ಬ ನಟಿ; ರಕ್ಷಣೆಗಾಗಿ ಕೈ ಮುಗಿದು ಸಹಾಯ ಕೇಳಿದ ಸುಂದರಿ

ಮತ್ತೊಬ್ಬ ಮಹಿಳೆ ಐಟಿ ಕಂಪನಿಗಳು ಉದ್ಯೋಗಿಗಳಿಗೆ ವರ್ಕ್‌ ಫ್ರಮ್ ಹೋಮ್ ನೀತಿ ರದ್ದುಗೊಳಿಸಿ  ಕಚೇರಿಗೆ ಹಿಂತಿರುಗುವಂತೆ ಹೇಳುವುದಕ್ಕೆ ಈ ಮಹಿಳೆ ಸ್ಪಷ್ಟವಾಗಿ ಕಾರಣವಾಗಿದ್ದಾಳೆ. ಇನ್ನು ಎಲ್ಲ ಮೀಟಿಂಗ್‌ಗಳಿಗೆ ಶೇ.100 ನೇರವಾಗಿ (ಭೌತಿಕವಾಗಿ) ಹಾಜರಾಗುವಂತೆ ಹೇಳುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಫೋಟೋವನ್ನು ನೋಡಿ ಖುಷಿ ಪಡಬೇಕೋ ಅಥವಾ ಹೆಮ್ಮೆ ಪಡಬೇಕೋ ಎಂಬುದು ತಿಳಿಯುತ್ತಿಲ್ಲ. ಇದನ್ನು ಸಮರ್ಥಿಸಿಕೊಳ್ಳುವುದಾದರೆ ಕೆಲವು ಉದ್ಯೋಗಿಗಳು ಕೆಲಸ-ಜೀವನದ ಸಮತೋಲನ ಮಾಡುತ್ತಿದ್ದಾರೆ ಎಂದು ಹೇಳಬಹುದು. ಆದರೆ, ಕಂಪನಿಗಳು ವಿಧಿಸುವ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡಬೇಕು ನೀತಿಯನ್ನು ನಿಲ್ಲಿಸಿದರೆ ಉದ್ಯೋಗಿಗಳು ಇಂಥದ್ದನ್ನು ನಿಲ್ಲಿಸುತ್ತಾರೆ. ಇದು ಮನುಷ್ಯರು ಎಂದಿಗೂ ಮನುಷ್ಯರೇ ಯಂತ್ರಗಳಂತೆ ಕೆಲಸ ಮಾಡಲು ಆಗೊಲ್ಲ ಎಂದು ಸಿಂಗ್‌ ಎನ್ನುವವರು ಕಾಮೆಂಟ್ ಮೂಲಕ ಸಮರ್ಥನೆ ಮಾಡಿಕೊಂಡಿದ್ದಾರೆ.

click me!