ಬೆಂಗಳೂರಿನ ಕ್ರಿಕೆಟ್‌ ಕೋಚ್‌ ನಗ್ನಕಥೆ, ಪ್ರಜ್ವಲ್‌ ರೇವಣ್ಣನನ್ನೂ ಮೀರಿಸಿದ ಮ್ಯಾಥ್ಯೂ ಮೊಬೈಲ್‌ನಲ್ಲಿದೆ 2500 ವಿಡಿಯೋ!

Published : Sep 24, 2025, 11:30 AM IST
PT Teacher Matthew

ಸಾರಾಂಶ

Bengaluru Cricket Coach 2,500 Explicit Videos Found Accused on the Run ಬೆಂಗಳೂರಿನ ಕಾರ್ಮೆಲ್ ಅಕಾಡೆಮಿಯ ಕ್ರಿಕೆಟ್ ಕೋಚ್ ಎಬಿವಿ ಮ್ಯಾಥ್ಯೂ, ಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ವಂಚಿಸಿದ ಆರೋಪ ಎದುರಿಸುತ್ತಿದ್ದಾರೆ. 

ಬೆಂಗಳೂರು (ಸೆ.24): ಮನೆಯ ಕೆಲಸದಾಕೆಯನ್ನೂ ಬಿಡದೆ ಅತ್ಯಾಚಾರಗೈದಿದ್ದ ಹಾಸನ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ಮೊಬೈಲ್‌ನಲ್ಲಿ 2 ಸಾವಿರಕ್ಕೂ ಅಧಿಕ ಸೆಕ್ಸ್ ವಿಡಿಯೋಗಳು ಪತ್ತೆಯಾಗಿದ್ದು ರಾಷ್ಟ್ರಮಟ್ಟದಲ್ಲು ಸುದ್ದಿಯಾಗಿತ್ತು. ತಾನು ನಡೆಸಿದ್ದ ಲೈಂಗಿಕ ಸಂಪರ್ಕದ ವಿಡಿಯೋ ಇರಿಸಿಕೊಂಡು ಸಂತ್ರಸ್ಥೆಯರನ್ನು ಬ್ಲಾಕ್‌ಮೇಲ್‌ ಮಾಡಿ ಅವರೊಂದಿಗೆ ಮತ್ತೆ ಮತ್ತೆ ಲೈಂಗಿಕ ಕ್ರಿಯೆ ನಡೆಸಿದ್ದ. ಹಲವಾರು ಮಹಿಳೆಯರ ಜೊತೆ ದೈಹಿಕ ಸಂಪರ್ಕ ನಡೆಸಿರುವ ವಿಡಿಯೋ ಇದ್ದರೂ ಕೆಲವೊಂದು ಮಾತ್ರವೇ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಈಗ ಇದೇ ಮಾದರಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಬೆಂಗಳೂರಿನ ಪ್ರತಿಷ್ಠಿತ ಕಾರ್ಮೆಲ್‌ ಅಕಾಡೆಮಿಯ ದೈಹಿಕ ಶಿಕ್ಷಕ ಹಾಗೂ ಕ್ರಿಕೆಟ್‌ ಕೋಚ್‌ ಎಬಿವಿ ಮ್ಯಾಥ್ಯೂ ವಿರುದ್ಧ ಮಹಿಳೆಯೊಬ್ಬರು ಆರೋಪ ಮಾಡಿದ್ದಾರೆ. ಮದುವೆಯಾಗುವುದಾಗಿ ತನ್ನನ್ನು ನಂಬಿಸಿ ಲೈಂಗಿಕ ಕ್ರಿಯೆ ನಡೆಸಿ ಎಸ್ಕೇಪ್‌ ಆಗಿರುವ ಈತ ಮೊಬೈಲ್‌ನಲ್ಲಿ 2500ಕ್ಕೂ ಅಧಿಕ ಮಹಿಳೆಯರ ನಗ್ನ ವಿಡಿಯೋಗಳಿವೆ ಎಂದು ಸ್ಫೋಟಕ ಮಾಹಿತಿ ನೀಡಿದ್ದಾರೆ.

ಕ್ರಿಕೆಟ್ ಕೋಚ್ ಮ್ಯಾಥಿವ್ ಅಶ್ಲೀಲ ವಿಡಿಯೋ ಚಿತ್ರೀಕರಣ ಪ್ರಕರಣದಲ್ಲಿ ಸೂಕ್ತ ತನಿಖೆ ಮಾಡುವಂತೆ ಸಂತ್ರಸ್ಥೆ ಮೀರಾ ಆಗ್ರಹಿಸಿದ್ದಾರೆ. ಇದರಿಂದಾಗಿ ನಗ್ನ ರಹಸ್ಯ ತನಿಖೆಯಲ್ಲಿ ಹೊರಬರುತ್ತಾ ಎಂದು ಕಾದು ನೋಡಬೇಕಿದೆ. ಎಬಿವಿ ಮ್ಯಾಥ್ಯೂ, ಮೀರಾ ಅವರ ಮೊಬೈಲ್‌ ಸಮೇತ ಎಸ್ಕೇಪ್‌ ಆಗಿದ್ದಾರೆ. ಸಂತ್ರಸ್ಥೆಯ ಮೊಬೈಲ್‌ನಲ್ಲಿ ಹಲವು ಅಶ್ಲೀಲ ವಿಡಿಯೋಗಳಿದ್ದವು. ಮ್ಯಾಥ್ಯೂ ಮೊಬೈಲ್‌ನಲ್ಲಿದ್ದ ಅಶ್ಲೀಲ ವಿಡಿಯೋಗಳಲ್ಲಿ ಆತನಿಗೆ ಗೊತ್ತಾಗದಂತೆ ಸಂತ್ರಸ್ಥೆ ತನ್ನ ಮೊಬೈಲ್‌ಗೆ ಹಾಕಿಸಿಕೊಂಡಿದ್ದರು. ಇದನ್ನು ಸಾಕ್ಷಿಯಾಗಿ ಸಂತ್ರಸ್ಥೆ ಇರಿಸಿಕೊಂಡಿದ್ದರು.

ಇನ್ನು ಸಂತ್ರಸ್ತೆಯ ಮೊಬೈಲ್ ನಲ್ಲಿ ತನ್ನ 'ನಗ್ನ ರಹಸ್ಯ' ಇರೋದು ಮ್ಯಾಥ್ಯೂ ಗಮನಕಕ್ಕೆ ಬಂದಿತ್ತು. ಕೂಡಲೇ ಸಂತ್ರಸ್ತೆಯ ಮೊಬೈಲ್ ಸಮೇತ ಮ್ಯಾಥ್ಯೂ ಎಸ್ಕೇಪ್‌ ಆಗಿದ್ದಾನೆ. ಈಗಾಗಲೇ ಕೋಣನಕುಂಟೆ ಠಾಣೆಯಲ್ಲಿ ಎಫ್‌ಐಆರ್‌ ಆಗಿದ್ದು ತನಿಖೆ ನಡೆಯುತ್ತಿದೆ. ಆ‌ ಮೊಬೈಲ್ ನಲ್ಲಿರುವ ವಿಡಿಯೋಗಳ ಬಗ್ಗೆ ತನಿಖೆ ಮಾಡುವಂತೆ ಸಂತ್ರಸ್ತೆ ಆಗ್ರಹ ವ್ಯಕ್ತಪಡಿಸಿದ್ದಾರೆ.

ಮದುವೆಯಾದ ಮಹಿಳೆಯರೇ ಮ್ಯಾಥ್ಯೂನ ಟಾರ್ಗೆಟ್‌ ಆಗಿದ್ದರು. ತನ್ನ ಕ್ರಿಕೆಟ್‌ಕ್ಯಾಂಪ್‌ಗೆ ಬರೋ ಪೋಷಕರನ್ನೇ ಟಾರ್ಗೆಟ್‌ ಮಾಡಿ ಸಂಪರ್ಕ ಸಾಧಿಸುತ್ತಿದ್ದ ಎನ್ನಲಾಗಿದೆ. ಹಲವಾರು ಮಹಿಳೆಯ ‌ಜೊತೆ ಕಾಮಕೇಳಿ ಆಡಿರುವ ವಿಡಿಯೋ ಮಾಡಿಕೊಂಡಿದ್ದಾನೆ. ವಿಡಿಯೋ ,ಪೋಟೊ ತೆಗೆದುಕೊಂಡು ಅದನ್ನು ತನ್ನ ಮೊಬೈಲ್‌ನಲ್ಲಿ ಇರಿಸಿಕೊಂಡಿದ್ದ.

ಬನ್ನೇರುಘಟ್ಟ ರಸ್ತೆಯಲ್ಲಿರುವ ಕಾರ್ಮೆಲ್ ಅಕಾಡೆಮಿ ಶಾಲೆಯಲ್ಲಿ ಪಿಟಿ ಟೀಚರ್ ಆಗಿರುವ ಕೇರಳ ಮೂಲದ ಎಬಿವಿ ಮ್ಯಾಥ್ಯೂ, ತನ್ನದೇ ಹೆಸರಿನ ಕ್ರಿಕೆಟ್‌ ಅಕಾಡೆಮಿಯನ್ನೂ ಹೊಂದಿದ್ದ ಕಾರ್ಮೆಲ್ ಶಾಲೆ ಗೊಟ್ಟಿಗೆರೆ ಸಮೀಪವಿದೆ. ಹಲವರ ಜೊತೆ ನಗ್ನವಾಗಿ ಪೋಟೊ,ವಿಡಿಯೋವನ್ನೂ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಧೈರ್ಯವಾಗಿ ಎಫ್ಐಆರ್‌ ದಾಖಲಿಸಿದ ಸಂತ್ರಸ್ಥ ಮಹಿಳೆ

ಮದುವೆಯಾಗಿ ಡಿವೋರ್ಸ್ ಆಗಿದ್ದ ಮಹಿಳೆಗೆ ವಂಚನೆ ಮಾಡಿರುವ ಆರೋಪವೂ ಮ್ಯಾಥ್ಯೂ ಮೇಲಿದೆ. ಮಗಳನ್ನ ಕ್ಯಾಂಪ್ ಗೆ ಬಿಡಲು ಬರ್ತಿದ್ದ ಮೀರಾ ಹೆಸರಿನ ಮಹಿಳೆಯನ್ನು ಪರಿಚಯ ಮಾಡಿ ಬುಟ್ಟಿಗೆ ಹಾಕಿಕೊಂಡಿದ್ದ. ಮದುವೆಯಾಗುತ್ತೆನೆಂದು ನಂಬಿಸಿ ಗರ್ಭಿಣಿ ಮಾಡಿ ಮ್ಯಾಥ್ಯೂ ಕೈಕೊಟ್ಟಿದ್ದಾನೆ.

ಶ್ಯಾನುಬೋಗನಹಳ್ಳಿ ಮಹಿಳೆಗೆ ವಂಚನೆ ಮಾಡಿದ್ದು, ಇದಕ್ಕೂ ಮೊದಲು ಹಲವು ಮಹಿಳೆಯರ, ಯುವತಿಯರ ಜೊತೆ ಲೈಂಗಿಕ ‌ಕ್ರಿಯೆ ನಡೆಸಿ ವಿಡಿಯೋ, ಪೋಟೊ ತೆಗೆಸಿಕೊಂಡಿದ್ದಾನೆ ಎನ್ನಲಾಗಿದೆ.

ಒಂದು ದಿನ ಮೀರಾ ಈ ವಿಡಿಯೋಗಳನ್ನು ಮ್ಯಾಥ್ಯೂ ಮೊಬೈಲ್‌ನಲ್ಲಿ ನೋಡಿದಾಗ ಶಾಕ್‌ ಆಗಿದ್ದಾರೆ. ಈ ಬಗ್ಗೆ ಕೇಳಿದಾಗ, 'ಹೌದು ನಾನು ಹಾಗೇ..' ಎಂದು ಧಮ್ಕಿ ಹಾಕಿದ್ದಾನೆ. ಗರ್ಭಿಣಿ ಆಗಿದ್ದರೆ ಅಬಾರ್ಷನ್‌ ಮಾಡಿಕೋ ಎಂದು ಕಿರುಕುಳ ನೀಡಿದ್ದಾನೆ. ಶನಿವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಮನೆ ಬಿಟ್ಟು ಮ್ಯಾಥ್ಯೂ ಎಸ್ಕೇಪ್ ಆಗಿದ್ದು, ನ್ಯಾಯಕ್ಕಾಗಿ ಮೀರಾ, ಕೋಣನಕುಂಟೆ ಪೊಲಿಸ್ ಠಾಣೆ ಮೆಟ್ಟಿಲೇರಿದ್ದಾರೆ.

 

PREV
Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
'63% ಭ್ರಷ್ಟಾಚಾರ' ಹೇಳಿಕೆ ವಿವಾದ: 'ನನ್ನ ಹೇಳಿಕೆ ತಿರುಚಲಾಗಿದೆ' ಉಪಲೋಕಾಯುಕ್ತ ನ್ಯಾ. ವೀರಪ್ಪ ಸ್ಪಷ್ಟನೆ