ಬೆಂಗಳೂರಿನ ನಿವಾಸಿ ಹಂಚಿಕೊಂಡಿರುವ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈತನ ಮನೆಕೆಲಸಕ್ಕೆ ಬರುವ ವ್ಯಕ್ತಿ, ತನ್ನ ಅಡುಗೆಕೆಲಸಕ್ಕೆ ಕುಕ್ ನೇಮಿಸಿಕೊಂಡಿದ್ದಾರೆ.
ಬೆಂಗಳೂರು: ಪೀಕ್ ಬೆಂಗಳೂರು, ಬೆಂಗಳೂರು ಫುಡ್ ಹೀಗೆ ಕೆಲವು ಪದಗಳು ಸೋಶಿಯಲ್ ಮೀಡಿಯಾದಲ್ಲಿ ಸದಾ ವೈರಲ್ ಆಗುತ್ತಿರುತ್ತವೆ. ಬೆಂಗಳೂರಿನಲ್ಲಿ ಮನೆ ಕೆಲಸಕ್ಕೆ ಜನರು ಸಿಗೋದು ತುಂಬಾ ಕಷ್ಟ. 27 ವರ್ಷದ ಬೆಂಗಳೂರಿನ ನಿವಾಸಿಯೋರ್ವ ರೆಡಿಟ್ಟ್‌ನಲ್ಲಿ ತಮ್ಮ ಅಡುಗೆ ಮಾಡುವ ಕೆಲಸಕ್ಕೆ ಬರುವ ವ್ಯಕ್ತಿ ಸಹ ತನ್ನ ಮನೆಯಲ್ಲಿ ಅಡುಗೆ ಮಾಡಲು ಜನರನ್ನು ನೇಮಿಸಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅಡುಗೆ ಮಾಡೋದರ ಜೊತೆಗೆ ಕ್ಲೀನಿಂಗ್ ಕೆಲಸವನ್ನು ಸಹ ಮಾಡುತ್ತಾರೆ ಎಂದು ಹೇಳಿಕೊಂಡಿದ್ದು, ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಅಡುಗೆ ಕೆಲಸಕ್ಕೆ ಬರುವ ಮಹಿಳೆ ಬಳಿ, ನನ್ನ ಫ್ಲ್ಯಾಟ್ ಕ್ಲೀನ್ ಮಾಡಲು ಯಾರಾದ್ರೂ ಸಿಕ್ಕರೆ ನನಗೆ ಹೇಳಿ ಎಂದು ಕೇಳಿದ್ದಾರೆ. ಆಗ ಆಕೆ ನನಗೆ ಪರಿಚಯದ ಮಹಿಳೆಯಿದ್ದು, ಪಾತ್ರೆ ಮತ್ತು ಬಟ್ಟೆ ತೊಳೆಯಲು 3,000 ರೂಪಾಯಿ ಕೇಳುತ್ತಾಳೆ ಎಂದು ಹೇಳಿದ್ದಾಳೆ. ಅದಕ್ಕೆ ನಾನು ನನ್ನದು ಚಿಕ್ಕದಾದ 2BHK ಫ್ಲ್ಯಾಟ್. ಈ ಮೊದಲು ಕೆಲಸ ಮಾಡುತ್ತಿದ್ದವರು 2,000 ರೂಪಾಯಿ ಪಡೆಯುತ್ತಿದ್ದರು ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಅಡುಗೆ ಸಹಾಯಕಿ, ತನ್ನ ಮನೆ ಕೆಲಸಕ್ಕೆ ಬರುವ ವ್ಯಕ್ತಿಗೆ 2,000 ನೀಡುವದಾಗಿ ಹೇಳಿದ್ದಾರೆ. ಅಷ್ಟು ಅಲ್ಲದೇ ಅಡುಗೆ ಮಾಡೋದಕ್ಕೆ ಪ್ರತಿ ವ್ಯಕ್ತಿಗೆ 2,500 ರೂಪಾಯಿ ಚಾರ್ಜ್ ಮಾಡುತ್ತಾರೆ ಎಂಬ ವಿಷಯ ಹೇಳಿದಾಗ ವ್ಯಕ್ತಿ ಶಾಕ್ ಆಗಿದ್ದಾರೆ. ತನ್ನ ಮನೆ ಕೆಲಸಕ್ಕೆ ಬರುವ ಮಹಿಳೆ ಬಿಟಿಎಂ ಲೇಔಟ್‌ನಲ್ಲಿ ಸ್ವಂತ 1BHK ಮನೆ ಹೊಂದಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಬೆಂಗಳೂರು, ಬೆಳಗಾವಿ ಏರ್ಪೋರ್ಟ್‌ಗೆ ಬಾಂಬ್ ಬೆದರಿಕೆ
ಈ ವಿಷಯ ಕೇಳಿ ನನಗೆ ಒಂದು ಕ್ಷಣ ಶಾಕ್ ಆಯ್ತು. ನಾನು 1,000 ರೂಪಾಯಿಗಾಗಿ ಚೌಕಾಸಿ ಮಾಡುತ್ತಿದ್ದೆ. ಆದ್ರೆ ನನ್ನ ಮನೆಕೆಲಸದಾಕ್ಕೆ ತನ್ನ 1BHK ಮನೆಗೆ ಇದಕ್ಕಿಂತ ಹೆಚ್ಚು ಹಣ ಪಾವತಿ ಮಾಡುತ್ತಿದ್ದಾರೆ ಎಂದು ಬರೆದು ಕೊನೆಗೆ “Just Bangalore things” ಎಂಬ ಸಾಲು ಬರೆದಿದ್ದಾರೆ.
ಈ ರೆಡಿಟ್ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಬಹುಶಃ ಅಡುಗೆ ಮಾಡುವ ಸಿಬ್ಬಂದಿಯ ಬ್ಯುಸಿನೆಸ್ ಮಾಡುತ್ತಿರಬೇಕು. ಟ್ರೈನಿ ಕುಕ್‌ಗಳು ತನ್ನ ಮನೆಯಲ್ಲಿ ಮೂರು ತಿಂಗಳು ಕೆಲಸ ಮಾಡಿಸಿಕೊಂಡು ನಂತರ 20 ಪರ್ಸೆಂಟ್ ಕಮಿಷನ್ ಪಡೆದು ಕೆಲಸ ಕೊಡಿಸುತ್ತಿರಬಹುದು ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು, ಆತನ ಮನೆಯಲ್ಲಿರೋ ವ್ಯಕ್ತಿಯೂ ಪರ್ಸನಲ್ ಕುಕ್ ಹೊಂದಿದ್ದಾರೆಯೇ ಎಂದು ಕೇಳಿದ್ದಾರೆ. ಇನ್ನೊಬ್ಬರು ಇದೆಲ್ಲವೂ ಬೆಂಗಳೂರಿನಲ್ಲಿ ಮಾತ್ರ ಸಾಧ್ಯ ಎಂದು ತಮಾಷೆ ಮಾಡಿದ್ದಾರೆ. ನನ್ನ ಡ್ರೈವರ್ ಕೆಲಸಕ್ಕೆ ಸ್ಕೋಡಾದಲ್ಲಿ ಬರುತ್ತಿದ್ದನು ಎಂದು ಮತ್ತೊಬ್ಬರು ಹೇಳಿಕೊಂಡಿದ್ದಾರೆ.
ಬೆಂಗಳೂರು ಮಳೆ: ರಾಜಕಾಲುವೆಗಳ ಅಕ್ಕಪಕ್ಕ 50 ಅಡಿವರೆಗೂ ಕಟ್ಟಡ ನಿರ್ಮಿಸುವಂತಿಲ್ಲ!
Posts from the bangalore
community on Reddit