
ಬೆಂಗಳೂರು (ಸೆ.26) ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. ಪ್ರಕರಣದಲ್ಲಿ ಅರೆಸ್ಟ್ ಆಗಿ ಜೈಲಿನಲ್ಲಿರುವ ಪ್ರದೋಷ್ ಮಾಫಿ ಸಾಕ್ಷಿಯಾಗಿ ಬದಲಾಗಿದ್ದಾರೆ. ಆದರೆ ಪ್ರದೋಷ್ ಮಾಫಿ ಸಾಕ್ಷಿ ಪ್ರಕ್ರಿಯೆಯನ್ನೇ ಪ್ರಶ್ನಿಸಿ ದರ್ಶನ್ ಸಲ್ಲಿಸಿದ್ದ ಒಂದೊಂದೆ ಅರ್ಜಿಗಳು ವಜಾಗೊಳ್ಳುತ್ತಿದೆ. ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ಪ್ರದೋಷ್ ಮಾಫಿ ಸಾಕ್ಷಿ ಪ್ರಶ್ನಿಸುವ ಸಲುವಾಗಿ ಹೇಳಿಕೆ ದಾಖಲು ಮುಂದೂಡಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು 59ನೇ ಸಿಸಿಹೆಚ್ ನ್ಯಾಯಾಲಯ ವಜಾ ಮಾಡಿದೆ.
ತನ್ನ ಜೊತೆಗಿದ್ದ ಪ್ರದೋಷ್ ಇದೀಗ ಮಾಫಿ ಸಾಕ್ಷಿಯಾಗಿ ಬದಲಾಗಿರುವ ಕಾರಣ ಶಿಕ್ಷೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಪ್ರದೋಷ್ ಮಾಫಿ ಸಾಕ್ಷಿಯಾಗಿ ಪರಿಗಣಿಸಬಾರದು ಎಂದು ಸಲ್ಲಿಸಿದ್ದ ಅರ್ಜಿಗಳು ವಜಾಗೊಂಡಿತ್ತು. ಇದೀಗ ಹೇಳಿಕೆ ಮುಂದೂಡುವಂತೆ ಸಲ್ಲಿಸಿದ್ದ ಅರ್ಜಿಯೂ ವಜಾಗೊಂಡಿದೆ. ಹೀಗಾಗಿ ದರ್ಶನ್ ಹಾಗೂ ಪವಿತ್ರಾ ಗೌಡ ಪ್ರಯತ್ನಕ್ಕೆ ಭಾರಿ ಹಿನ್ನಡೆಯಾಗಿದೆ.
ಪ್ರದೋಷ್ ಮಾಫಿ ಸಾಕ್ಷಿಯಾಗಿ ಹೇಳಿಕೆ ನೀಡಲು 59ನೇ ಸಿಸಿಹೆಚ್ ಕೋರ್ಟ್ ದಿನಾಂಕ ಫಿಕ್ಸ್ ಮಾಡಿದೆ. ಸೆಪ್ಟೆಂಬರ್ 28ರಂದು ಹೇಳಿಕೆ ದಾಖಲು ಮಾಡಲು ಕೋರ್ಟ್ ದಿನಾಂಕ ನಿಗದಿ ಮಾಡಿದೆ. ನ್ಯಾ.ಸುಜಾತ ಎಂ.ಸಾಂಬ್ರಾಣಿ ಆದೇಶ ನೀಡಿದ್ದಾರೆ. ಹೀಗಾಗಿ ಸೋಮವಾರ ಪ್ರದೋಷ್ ಹೇಳಿಕೆ ದಾಖಲಾಗಲಿದೆ. ಇದು ನಟ ದರ್ಶನ್ ಹಾಗೂ ಪವಿತ್ರಾ ಗೌಡಗೆ ಮತ್ತಷ್ಟು ಸಮಸ್ಸೆಯ ತಂದೊಡ್ಡಲಿದೆ.
ಪ್ರದೋಷ್ ಮಾಫಿ ಸಾಕ್ಷಿ ಕುರಿತು ಹೈಕೋರ್ಟ್ ಆದೇಶದ ದೃಢೀಕೃತ ಪ್ರತಿ ಇನ್ನೂ ಸಿಕ್ಕಿಲ್ಲ. ಇತ್ತ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಲು ಸಮಯ ಬೇಕಿದೆ. ಇದರ ನಡುವೆ ಪ್ರಾಸಿಕ್ಯೂಷನ್ ಬೇರೆ ಸಾಕ್ಷಿಗಳ ಹೇಳಿಕೆ ನಡೆಸಲಿ, ಆದರೆ ಪ್ರದೋಷ್ ಹೇಳಿಕೆ ಮುಂದೂಡಬೇಕು. ಹೈಕೋರ್ಟ್ ಸೂಚಿಸಿರುವ 7 ಸಾಕ್ಷಿಗಳ ಪೈಕಿ ಪ್ರದೂಷ್ ಕೂಡ ಒಬ್ಬರಾಗಿದ್ದಾರೆ. ಉಳಿದ ಸಾಕ್ಷಿಗಳ ಹೇಳಿಕೆ ದಾಖಲು ಪ್ರಕ್ರಿಯೆ ಮಾಡಲಿ. ಆದ್ರೆ, ಪ್ರದೂಷ್ ಹೇಳಿಕೆಯನ್ನ 7ನೇ ಸಾಕ್ಷಿಯಾಗಿ ತೆಗೆದುಕೊಳ್ಳಲಿ ಎಂದು ದರ್ಶನ್ ಪರ ವಕೀಲರು ವಾದ ಮಂಡಿಸಿದ್ದರು. ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಕೆಕೆ ಕನಿಷ್ಠ 10ದಿನಗಳ ಸಮಯ ಬೇಕಿದೆ. ಹೀಗಾಗಿ ಮಾಫಿ ಸಾಕ್ಷಿಯಾಗಿ ಪ್ರದೋಷ್ ಹೇಳಿಕೆ ದಾಖಲು ಮಂದೂಡಬೇಕು ಎಂದು ಮನವಿ ಮಾಡಿದ್ದರು.
ಸರ್ಕಾರದ ಪರ ವಕೀಲರು ಈ ಕುರಿತು ಸಮರ್ಥ ವಾದ ಮಂಡಿಸಿದ್ದಾರೆ. 23.09ರಂದು ಹೈಕೋರ್ಟ್ ಅರ್ಜಿ ವಜಾ ಮಾಡುವಾಗ ಎಲ್ಲಾ ವಕೀಲರ ಇದ್ದರು. ಹೀಗಾಗಿ ಆದೇಶದ ದೃಢೀಕೃತ ಪ್ರತಿ ಸಲ್ಲಿಕೆಯ ಅಗತ್ಯತೆ ಇಲ್ಲ. ಇಂತಹ ಸಾಕ್ಷಿಗಳನ್ನ ಕರೆಸಿ ಎಂದು ಕೇಳುವ ಅಧಿಕಾರ ಆರೋಪಿ ವಕೀಲರಿಗಿಲ್ಲ. ಈಗ ಸುಪ್ರೀಂ ಕೋರ್ಟ್ ಗೆ ಹೋಗ್ತೇವೆ ಎನ್ನುತ್ತಿದ್ದಾರೆ. ಒಂದು ವೇಳೆ ಅಲ್ಲಿಯೂ ಅರ್ಜಿ ವಜಾ ಆದ್ರೆ, ಪರಿಶೀಲನೆ ಅರ್ಜಿ ಹಾಕುತ್ತೇವೆ ಎನ್ನುತ್ತಾರೆ. ಆ ಅರ್ಜಿಗಳು ಒಂದು ವರ್ಷವಾದ್ರೂ ವಿಚಾರಣೆ ಗೆ ಬರದೇ ಇರಬಹುದು. ಹೀಗಾಗಿ ದರ್ಶನ್ ಅರ್ಜಿಗೆ ಮನ್ನಣೆ ನೀಡದೆ ವಜಾ ಮಾಡುವಂತೆ ಎಎಸ್ಪಿಪಿ ಸಚಿನ್ ಕೋರ್ಟ್ ಗೆ ಮನವಿ ಮಾಡಿದ್ದರು.
ರೇಣುಕಾಸ್ವಾಮಿ ಪ್ರಕರಣದಲ್ಲಿ ಟ್ರಯಲ್ ನಡೆಯುತ್ತಿದೆ. ಪ್ರದೂಷ್ ಒಬ್ಬ ಪ್ರಮುಖ ಸಾಕ್ಷಿಯಾಗಿದ್ದಾನೆ. ದರ್ಶನ್ ಪರ ವಕೀಲರು ನೀಡಿರುವ ಸಾಕ್ಷಿಗಳ ಪಟ್ಟಿಯಲ್ಲಿ ಯಾವ ಕ್ರಮಾಂಕದಲ್ಲಿ ವಿಚಾರೇ ನಡೆಸಬೇಕು ಎಂದೇನಿಲ್ಲ ಎಂದು ವಕೀಲರು ವಾದ ಮಂಡಿಸಿದ್ದರು.