ಬೆಂಗಳೂರಿಗರೇ ಹುಷಾರ್! ರೇಷನ್ ಕೊಡಿಸಿ ಅನ್ನೋ ಗ್ಯಾಂಗ್ ಮುಖ ಬಯಲು; ದಿನಕ್ಕೆ ಇಷ್ಟೊಂದಾ?

Published : Oct 13, 2026, 12:35 PM IST
Bengaluru Video

ಸಾರಾಂಶ

ಬೆಂಗಳೂರಿನಲ್ಲಿ ರೇಷನ್ ಕೊಡಿಸುವಂತೆ ಕೇಳುವ ಭಿಕ್ಷುಕರ ಅಸಲಿ ಮುಖವನ್ನು ವ್ಯಕ್ತಿಯೊಬ್ಬರು ವಿಡಿಯೋ ಮೂಲಕ ಬಯಲು ಮಾಡಿದ್ದಾರೆ. ದೈಹಿಕವಾಗಿ ಸದೃಢರಾಗಿರುವ ಇವರೆಲ್ಲರೂ ಗುಂಪು ಗುಂಪಾಗಿ ದಿನಸಿ ಪದಾರ್ಥಗಳನ್ನು ಸಂಗ್ರಹಿಸುತ್ತಿರುವ ದೃಶ್ಯ ವೈರಲ್ ಆಗಿದೆ.

ಬೆಂಗಳೂರು: ರಾಜಧಾನಿಯಲ್ಲಿ ನಿಮಗೆ ಬೇರೆ ಬೇರೆ ರೀತಿಯ ಭಿಕ್ಷುಕರು ಕಾಣಿಸುತ್ತಾರೆ. ಹೋಟೆಲ್‌ಗಳ ಮುಂದೆ ನಿಲ್ಲೋ ಕೆಲ ಜನರು ತಿಂಡಿ, ಊಟ ಕೊಡಿಸುವಂತೆ ಕೇಳಿಕೊಳ್ಳುತ್ತಾರೆ. ಇನ್ನು ಮಾಲ್, ಪ್ರಾವಿಸನ್ ಸ್ಟೋರ್ ಬಳಿಯಲ್ಲಿ ನಿಲ್ಲೋ ಜನರು ರೇಷನ್ ಕೊಡಿಸುವಂತೆ ಕೇಳಿಕೊಳ್ಳುತ್ತಾರೆ. ಬಸ್ ಮತ್ತು ರೈಲು ನಿಲ್ದಾಣಗಳ ಬಳಿಯಲ್ಲಿ ಜನರು, ಬ್ಯಾಗ್ ಕಳೆದುಕೊಂಡಿದ್ದು, ಊರಿಗೆ ತೆರಳಲು ಧನಸಹಾಯ ಕೇಳುವ ಗುಂಪುಗಳು ಕಾಣಿಸುತ್ತವೆ. ಇಂದು ನಾವು ನಿಮಗೆ ರೇಷನ್ ಕೊಡಿಸುವಂತೆ ಮನವಿ ಮಾಡಿಕೊಳ್ಳುವ ಜನರ ಅಸಲಿ ಮುಖವನ್ನು ವ್ಯಕ್ತಿಯೊಬ್ಬರು ರಿವೀಲ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿದೆ.

ಹೌದು, ನಾಲ್ಕೈದು ಮಹಿಳೆಯರು ತಮ್ಮೊಂದಿಗೆ ಮೂರ್ನಾಲ್ಕು ಮಕ್ಕಳನ್ನು ಜೊತೆಯಲ್ಲಿಟ್ಟುಕೊಂಡು ಭಿಕ್ಷೆ ಬೇಡುತ್ತಿರುತ್ತಾರೆ. ದೈಹಿಕವಾಗಿ ಸದೃಢರಾಗಿರುವ ಇವರೆಲ್ಲರೂ, ಮನೆಯಲ್ಲಿ ರೇಷನ್ ಇಲ್ಲ ಅಂತಾನೇ ಮಾತುಗಳನ್ನು ಆರಂಭಿಸುತ್ತಾರೆ. ಅಕ್ಕಿ, ಸಕ್ಕರೆ, ಬೇಳೆ ಸೇರಿದಂತೆ ದಿನಸಿ ಪದಾರ್ಥಗಳನ್ನು ಕೊಡಿಸುವಂತೆ ಕೇಳಿಕೊಳ್ಳುತ್ತಾರೆ. ಇದೇ ರೀತಿಯಾಗಿ ಇಡೀ ದಿನ ಭಿಕ್ಷೆ ಕೇಳುತ್ತಿರುತ್ತಾರೆ. ಇದು ಕೇವಲ ಒಂದು ದಿನದ ಕೆಲಸವಲ್ಲ. ಪ್ರತಿದಿನವೂ ಗುಂಪು ಗುಂಪಾಗಿ ಈ ಕೆಲಸದಲ್ಲಿ ತೊಡಗಿಕೊಂಡಿರುತ್ತದೆ.

ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ

ವ್ಯಕ್ತಿಯೊಬ್ಬರು ಇಂತಹ ಗುಂಪುಗಳು ಸಂಗ್ರಹಿಸಿರುವ ಆಹಾರದ ಪ್ರಮಾಣವನ್ನು ತೋರಿಸಿದ್ದಾರೆ. MV Rashii ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ವೈರಲ್ ಆಗುತ್ತಿದೆ. ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಈ ವಿಡಿಯೋವನ್ನು ಸಚಿವ ಕೃಷ್ಣಬೈರೇಗೌಡ, ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಟ್ಯಾಗ್ ಮಾಡಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

ವಿಡಿಯೋ ಬಗ್ಗೆ ಜನರು ಹೇಳಿದ್ದೇನು?

ಈ ವಿಡಿಯೋವನ್ನು ಬೆಂಗಳೂರಿನ ತಾವರೆಕರೆ ಭಾಗದಲ್ಲಿ ಸೆರೆ ಹಿಡಿಯಲಾಗಿದೆ. ಇವರು ಭಿಕ್ಷಾಟನೆಯಿಂದ ಸಂಗ್ರಹಿಸಿದ ರೇಷನ್ ನೋಡಿದ್ರೆ ಒಂದು ಕುಟುಂಬದ ತಿಂಗಳ ಆಹಾರವಾಗಿದೆ. ಪ್ರತಿದಿನವೂ ಇಷ್ಟೊಂದು ಪಡಿತರ ಸಂಗ್ರಹಿಸೋ ಇವರು, ಇದನ್ನೆಲ್ಲಾ ಏನು ಮಾಡ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಒಂದಿಷ್ಟು ಜನರು ಈ ಎಲ್ಲಾ ವಸ್ತುಗಳು ಕಡಿಮೆ ಬೆಲೆಗೆ ಮಾರಾಟ ಮಾಡಬಹುದು ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ರೀತಿಯ ಗುಂಪುಗಳು ಕೇವಲ ತಾವರೆಕೆರೆ ಮಾತ್ರವಲ್ಲ ಬೆಂಗಳೂರಿನ ಬಹುತೇಕ ಏರಿಯಾಗಳಲ್ಲಿ ಕಾಣಸಿಗುತ್ತವೆ. ಕೆಲವು ಭಾಗಗಳಲ್ಲಿ ಪುಟ್ಟ ಮಕ್ಕಳು ಪೆನ್, ಹ್ಯಾಂಡ್‌ ಟವೆಲ್ ಮಾರಾಟ ಮಾಡುತ್ತಿರುತ್ತಾರೆ. ಈ ಮಕ್ಕಳು ವ್ಯಾಪಾರದ ರೂಪದಲ್ಲಿ ಊಟಕ್ಕೆ ಸಹಾಯ ಮಾಡುವಂತೆಯೇ ಕೇಳುತ್ತಿರುತ್ತಾರೆ. ಈ ವಿಡಿಯೋಗೆ ಕಮೆಂಟ್ ಮಾಡಿರುವ ಕೆಲವರು, ಇವರೆಲ್ಲಾ ಯಾರು? ಬಾಂಗ್ಲಾದೇಶದ ನಿವಾಸಿಗಳಾ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: 300 ವರ್ಷದ ಹಳೆ ಮನೆಯಲ್ಲಿರುವ ಅಜ್ಜಿ ಬಚ್ಚಿಟ್ಟಿದ್ದ ಪೆಟ್ಟಿಗೆ ಓಪನ್ ಮಾಡಿದ ಮೊಮ್ಮಗ

PREV
Read more Articles on
click me!

Recommended Stories

ಕೆಎಎಸ್‌ ಸೇರಿದಂತೆ ಸಾವಿರಾರು ಹುದ್ದೆಗಳ ಆಯ್ಕೆ ಪಟ್ಟಿಗೆ ಕಂಟಕ, ಶೇ. 56 ರ ಮೀಸಲಾತಿ ರದ್ದಿನ ಬೆನ್ನಲ್ಲೇ ಆತಂಕದಲ್ಲಿ ಅಭ್ಯರ್ಥಿಗಳು!
ದಸರಾ ಹಬ್ಬದ ವೇಳೆ 25 ಸಾವಿರ ರಾಗಿ ಬೆಳೆಗಾರರಿಗೆ ಗುಡ್‌ನ್ಯೂಸ್, 14 ಜಿಲ್ಲೆ ರೈತರ ಖಾತೆಗೆ ಬಂತು ₹265 ಕೋಟಿ