‘ನನ್ನ ಜತೆ ಬಿಜೆಪಿಯೂ ಇಲ್ಲ, ಬಚ್ಚೇಗೌಡರೂ ಇಲ್ಲ’

By Kannadaprabha NewsFirst Published Nov 6, 2019, 10:14 AM IST
Highlights

ನನ್ನ ಜೊತೆಗೆ ಬಚ್ಚೇಗೌಡರು ಇಲ್ಲ. ಬಿಜೆಪಿಯೂ ಇಲ್ಲ ಎಂದು ತಮ್ಮ ತಂದೆಯ ವಿರುದ್ಧ ಹಾಗೂ ಬಿಜೆಪಿ ವಿರುದ್ದ ಅಸಮಾಧಾನ ಹೊರ ಹಾಕಿದ್ದಾರೆ. 

ಸೂಲಿಬೆಲೆ [ನ.06]:  ಬಿಜೆಪಿ ನನ್ನ ತಾಯಿ ಹಾಗೂ ಸಂಸದ ಬಿ.ಎನ್‌.ಬಚ್ಚೇಗೌಡ ನನ್ನ ತಂದೆ. ಆದರೆ, ಯಾರೋ ಮಾಡಿದ ಕುತಂತ್ರದಿಂದ ಇಬ್ಬರೂ ನನ್ನಿಂದ ದೂರವಾಗಿ, ತಂದೆ-ತಾಯಿ ಇಲ್ಲದೇ ರಾಜಕೀಯವಾಗಿ ತಬ್ಬಲಿಯಾಗಿದ್ದೇನೆ ಎಂದು ಹೊಸಕೋಟೆ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಶರತ್‌ ಬಚ್ಚೇಗೌಡ ಹೇಳಿದ್ದಾರೆ.

ಹೊಸಕೋಟೆ ತಾಲೂಕಿನ ಮಂಚಪ್ಪನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ಇಂದು ನನಗೆ ಅತ್ಯಂತ ದುಃಖದ ದಿನವಾಗಿದೆ. ರಾಜಕೀಯದಲ್ಲಿರುವ ನಮಗೆ ಇಬ್ಬರು ತಂದೆ-ತಾಯಿ ಇರುತ್ತಾರೆ. ಒಬ್ಬರು ಜನ್ಮ ನೀಡಿದವರಾದರೇ, ಪಕ್ಷ ಎರಡನೇ ತಾಯಿ. ಆದರೆ, ಯಾರೋ ಒಬ್ಬರ ರಾಜಕೀಯ ಷಡ್ಯಂತ್ರದಿಂದಾಗಿ ಯಾವ ತಾಯಿ ಮಕ್ಕಳಾಗಿ ಬೆಳೆದವೋ, ಆ ತಾಯಿಯೇ ನಮ್ಮನ್ನು ದೂರ ತಳ್ಳುತ್ತಿದ್ದಾರೆ ಎಂದು ಭಾವುಕರಾದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸ್ವಚ್ಛ ಭಾರತ, ಬಿಜೆಪಿ ಸದಸ್ಯತ್ವ ಅಭಿಯಾನ ಸೇರಿದಂತೆ ಪಕ್ಷ ಕಾಲಲ್ಲಿ ತೋರಿಸಿದ ಪ್ರತಿಯೊಂದು ಕೆಲಸವನ್ನು ಕೈಯಲ್ಲಿ ಎತ್ತಿ ಮಾಡಿದ ನಮಗೆ ಅನ್ಯಾಯವಾಗುತ್ತಿದೆ. ಯಡಿಯೂರಪ್ಪನವರು ಹೊಸಕೋಟೆಯಲ್ಲಿ ನೀಡಿದ ಆಶ್ವಾಸನೆಗಳನ್ನು ನೋಡಿ ಮನಸ್ಸಿಗೆ ಬಹಳ ನೋವಾಗಿದೆ. 2008ರಿಂದ ಸತತವಾಗಿ ಬಿಜೆಪಿಗಾಗಿ ದುಡಿದು ಬಂದ ಕಾರ್ಯಕರ್ತರನ್ನು ಮೂಲೆ ಗುಂಪು ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರಿಗೆ ತೊಂದರೆ ಕೊಟ್ಟವರಿಗೆ ಇಂದು ವೇದಿಕೆಯಲ್ಲಿ ಸನ್ಮಾನ ಮಾಡಿರುವ ಪರಿಸ್ಥಿತಿ ಎದುರಾಗಿದೆ. 15 ವರ್ಷ ಪಕ್ಷಕ್ಕಾಗಿ ದುಡಿದ ನನಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಹ ಇಲ್ಲದಂತಾಗಿದೆ ಎಂದರು.

click me!