ಮೋದಿ ಭೇಟಿ ನೀಡುತ್ತಿರುವ ಬೆಂಗಳೂರಿನ ಪ್ರಶಾಂತಿ ಕುಟೀರದ ವಿಶೇಷತೆ ಏನು? @ 50 ಸೀಕ್ರೆಟ್

Chethan Kumar   | ANI
Published : Nov 13, 2026, 10:03 AM IST
Prashanti kuteeram

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಮೆಟ್ರೋ ಉದ್ಘಾಟನೆಗೂ ಮೊದಲು ಪ್ರಶಾಂತಿ ಕುಟೀರದ ಸ್ವರ್ಣ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬೆಂಗಳೂರಿನ ಪ್ರಶಾಂತಿ ಕುಟೀರಂನ 50ರ ಸೀಕ್ರೆಟ್ ಏನು?

ಬೆಂಗಳೂರು (ನ.13) ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಪ್ರವಾಸದಲ್ಲಿ ಹಲವು ಕಾರ್ಯಕ್ರಮಗಳಿವೆ. ಮೆಟ್ರೋ ಉದ್ಘಾಟನೆಗೂ ಮೊದಲು ಮೋದಿ ಪ್ರಶಾಂತಿ ಕುಟೀರದ ಸ್ವರ್ಣ ಮಹೋತ್ಸವ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕಳೆದ ಐದು ದಶಕಗಳಿಂದ ಯೋಗ, ಆಧ್ಯಾತ್ಮ, ವೈಜ್ಞಾನಿಕ ಸಂಶೋಧನೆ ಹಾಗೂ ಆರೋಗ್ಯ ರಕ್ಷಣಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಪ್ರಶಾಂತಿ ಕುಟೀರಕ್ಕೆ 50ರ ಸಂಭ್ರಮ. ಈ ಸಂಭ್ರಮದಲ್ಲಿ ಮೋದಿ ಭಾಗವಹಿಸುತ್ತಿದ್ದಾರೆ.ಇಂದು ಬೆಳಗ್ಗೆ 10.45ರ ವೇಳೆಗೆ ಪ್ರಶಾಂತಿ ಕುಟೀರಕ್ಕೆ ಮೋದಿ ಆಗಮಿಸುತ್ತಿದ್ದಾರೆ.

NSG ಕಮಾಂಡೋ ವಶದಲ್ಲಿ ಪ್ರಶಾಂತಿ ಕುಟೀರ

ಆನೇಕಲ್ ತಾಲ್ಲೂಕಿನ ಜಿಗಣಿ ಸಮೀಪದಲ್ಲಿರುವ ಪ್ರಶಾಂತಿ ಕುಟೀರ ಸದ್ಯ ಎನ್‌ಎಸ್‌ಜಿ ಹಾಗೂ ಪೊಲೀಸ್ ಬಂದೋಬಸ್ತ್‌ನಲ್ಲಿದೆ. 4 ಎಸ್ಪಿ, 20 ಮಂದಿ ಡಿವೈಎಸ್ಪಿ, 60 ಇನ್ಸ್ಪೆಕ್ಟರ್, 100 ಪಿಎಸ್ಐ, 106 ಎಎಸ್ಐ ಸೇರಿದಂತೆ 2800 ಮಂದಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಪ್ರಶಾಂತಿ ಕುಟೀರದ ಪ್ರಮುಖ ರಸ್ತೆಗಳು ಸೇರಿದಂತೆ ಸುತ್ತಮುತ್ತ ಪೊಲೀಸ್ ಹದ್ದಿನ ಕಣ್ಣಿಡಲಾಗಿದೆ. ಪ್ರಶಾಂತಿ ಕುಟೀರದ ಸುತ್ತ ಮೂರು ಸುತ್ತು ಟೈಟ್ ಸೆಕ್ಯೂರಿಟಿ ಒದಗಿಸಲಾಗಿದೆ. ಈಗಾಗಲೇ ಪ್ರಶಾಂತಿ ಕುಟೀರದ ಒಳಾಂಗಣವನ್ನು NSG ಕಮಾಂಡೋ ವಶಕ್ಕೆ ಪಡೆದಿದೆ. ನಿನ್ನೆ ಸಂಜೆಯಿಂದಲೇ NSG ಮತ್ತು ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ಸಂಸ್ಕೃತಿ ಭವನದ ವೇದಿಕೆ ಕಾರ್ಯಕ್ರಮದಲ್ಲಿ ಸ್ವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ಒಂದು ಗಂಟೆಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಳ್ಳುತ್ತಿದ್ದಾರೆ.

ದೇಶದ ಮೊದಲ ಯೋಗ ವಿಶ್ವವಿದ್ಯಾಲದ ಮೊದಲ ಕ್ಯಾಂಪಸ್

ಭಾರತದ ಮೊದಲ ಯೋಗ ವಿಶ್ವವಿದ್ಯಾಲಯವಾಗಿರುವ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ (S-VYASA) ವಿಶ್ವವಿದ್ಯಾಲಯದ ಮೊದಲ ಕ್ಯಾಂಪಸ್ ಇದೇ ಪ್ರಶಾಂತಿ ಕುಟೀರ. 100 ಏಕರೆ ಪ್ರದೇಶದಲ್ಲಿ ಈ ಕ್ಯಾಂಪಸ್ ಹರಡಿಕೊಂಡಿದೆ. ಆಧುನಿಕ ವಿಜ್ಞಾನದೊಂದಿಗೆ ಯೋಗ ಸಂಯೋಜಿಸಲಾಗಿದೆ. ಈ ಮೂಲಕ ಪದವಿ,ಸ್ನಾತಕೋತ್ತರ ಕೋರ್ಸ್ ಭೋದಿಸಲಾಗುತ್ತಿದೆ. ಇದೇ ಕ್ಯಾಂಪಸ್‌ನಲ್ಲಿ 600 ಹಾಸಿಗೆಗಳ ಆರೋಗ್ಯಧ್ಯಾಮ ಆಸ್ಪತ್ರೆಯಿದೆ. ಯೋಗ ಚಿಕಿತ್ಸೆ, ಆಯುರ್ವೇದ, ಪ್ರಕೃತಿ ಚಿಕಿತ್ಸೆ ಸೇರಿದಂತೆ ಭಾರತೀಯ ಸಾಂಪ್ರದಾಯಿಕ ಚಿಕಿತ್ಸೆಗೆ ಆಧುನಿಕ ವೈದ್ಯಕೀಯ ಚಿಕಿತ್ಸೆ ಸ್ಪರ್ಶ ನೀಡಲಾಗಿದೆ.

ಹೆಸರಿಗೆ ತಕ್ಕಂತ ಇದು ಅತ್ಯಂತ ಪ್ರಶಾಂತ ವಾತಾವರಣ ಹೊಂದಿದೆ ಪ್ರದೇಶ. ಇಲ್ಲಿ ಸದ್ದು ಗದ್ದಲವಿಲ್ಲ. ಯೋಗ, ಧ್ಯಾನಕ್ಕೆ ಸೂಕ್ತ ಸ್ಥಳವಾಗಿದೆ. ಇಲ್ಲಿ ಒಮ್ಮೆ ಭೇಟಿ ನೀಡಿದರೆ ಮಾನಸಿಕವಾಗಿ ಚೈತನ್ಯ ಸಿಗಲಿದೆ. ಇನ್ನು ಅತ್ಯುತ್ತಮ ಗುಣಮಟ್ದ ಚಿಕಿತ್ಸೆ, ಉತ್ಕೃಷ್ಠ ಸೇವೆ ಇಲ್ಲಿ ಲಭ್ಯವಿದೆ. ಕಳೆದ 50 ವರ್ಷಗಳಿಂದ ಯೋಗ, ಆಧ್ಯಾತ್ಮ, ಪ್ರಕೃತಿ ಚಿಕಿತ್ಸೆ, ಆಧ್ಯಾತ್ಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಶಾಂತಿ ಕುಟೀರ ಮೊಲ ಸಂಸ್ಥೆ ಎಸ್ ವ್ಯಾಸ ಇದೀಗ ವಿಸ್ತರಣೆಗೊಳ್ಳುತ್ತಿದೆ. ಕೇರಳದ ತಿರುವನಂತಪುರಂನಲ್ಲಿ ನಿರ್ಮಾಣಗೊಂಡಿರುವ ನೂತನ ಕ್ಯಾಂಪಸ್‌ನ್ನು ಪ್ರಧಾನಿ ಮೋದಿ ಇಲ್ಲಿಂದರೆ ವರ್ಚುವಲ್ ಆಗಿ ಉದ್ಘಾಟನೆ ಮಾಡಲಿದ್ದಾರೆ.

ಪ್ರಶಾಂತಿ ಕುಟೀರದ ಸ್ವರ್ಣ ಮಹೋತ್ಸವ ಆಡಳಿತ ಬ್ಲಾಕ್‌ಗೆ ಪ್ರಧಾನಿ ಮೋದಿ ಶಿಲನ್ಯಾಸ ನೆರವೇರಿಸಲಿದ್ದಾರೆ. ಇದೇ ವೇಳೆ ಚಿಂತಕರು ಹಾಗೂ ಆರ್‌ಎಸ್‌ಎಸ್ ಮಾಜಿ ಪ್ರಧಾನ ಕಾರ್ಯದರ್ಶಿ ದಿವಂಗತ ಎಚ್.ವಿ. ಶೇಷಾದ್ರಿ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮಕ್ಕೂ ಚಾಲನೆ ನೀಡಲಿದ್ದಾರೆ. ಇದೇ ವೇಳೆ ₹160 ಕೋಟಿ ವೆಚ್ಚದ ಬಯೋ ಗ್ಯಾಸ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

PREV
Read more Articles on
click me!

Recommended Stories

VAO ಪರೀಕ್ಷೆಯಲ್ಲಿ ಅಕ್ರಮ; ಯಾವುದು ಸತ್ಯ? ಯಾವುದು ಸುಳ್ಳು? ದಿನಕ್ಕೊಂದು ಆರೋಪ; ಅತಂತ್ರ ಸ್ಥಿತಿಯಲ್ಲಿ ಅಭ್ಯರ್ಥಿಗಳು
ಬೆಂಗಳೂರು ಗಡಿಯಲ್ಲಿರುವ ಟಾಟಾ ಮಾಲೀಕತ್ವದ ಐಫೋನ್ ಕಾರ್ಖಾನೆಯಲ್ಲಿ ಅನಿಲ ಸೋರಿಕೆ: ಮೂವರ ದುರ್ಮರಣ