ಆಟೋ, ಕಾರುಗಳ ಹಿಂದೆ ಕೆಲವರು ಕುಣಿಗಲ್ ಕುದುರೆ ಬರೆಯುವುದೇಕೆ? ಇದ್ರ ಹಿಂದಿದೆ ರೋಚಕ ಇತಿಹಾಸ

Published : Nov 26, 2026, 12:29 PM IST
Kunigal Kudure Appears Behind Some Cars and Autos

ಸಾರಾಂಶ

ಆಟೋ, ಕಾರುಗಳ ಹಿಂದೆ, ಇತೆರೆಡೆ ಕುಣಿಗಲ್ ಕುದುರೆ ಸೇರಿದಂತೆ ಹಲವು ವಾಕ್ಯಗಳನ್ನು, ಪದಗಳನ್ನು ಬರೆದಿರುತ್ತಾರೆ. ಈ ಕುಣಿಗಲ್ ಕುದರೆ ಎಂದರೇನು? ಈ ಪದಗಳ ಬಳಕೆ ಯಾಕೆ? ಇದರ ಹಿಂದಿದೆ ರೋಚಕ ಇತಿಹಾಸವಿದೆ.

ಬೆಂಗಳೂರು (ನ.26) ಆಟೋಗಳು, ಕಾರುಗಳು ಜೊತೆಗೆ ಕೆಲೆವೆಡೆ ತಮ್ಮ ತಮ್ಮ ಗ್ರಾಮ, ಊರುಗಳಿಗೆ ಹೊಂದಿಕೆಯಾಗುವ ಪದಗಳನ್ನು ಬರೆಯುತ್ತಾರೆ. ಹಾಸನ ಬಾಯ್ಸ್, ಮಂಡ್ಯದ ಗೌಡ್ರು, ಕುಣಿಗಲ್ ಕುದುರೆ ಸೇರಿದಂತೆ ಹಲವು ವಾಕ್ಯಗಳು ಜನಪ್ರಿಯವಾಗಿದೆ. ಈ ಪೈಕಿ ಕುಣಿಗಲ್ ಕುದುರೆ ಎಂಬ ವಾಕ್ಯವನ್ನು ನೀವು ನೋಡಿರುತ್ತೀರಿ. ಕುಣಿಗಲ್ ಮೊದಲ ಅಕ್ಷರ ಕು ಆಗಿರುವ ಕಾರಣ ಜೊತೆಗೆ ಕುದರೆ ವೇಗವಾಗಿ ಓಡವ ಕಾರಣಕ್ಕೆ ಕುಣಿಗಲ್ ಕುದರೆ ಎಂದು ಬಳಕೆ ಮಾಡುತಿಲ್ಲ. ಇದರ ಹಿಂದೆ ಅತ್ಯಂತ ರೋಚಕ ಇತಿಹಾಸವಿದೆ. ಇದು ಕೇವಲ ಒಂದು ವಾಕ್ಯ, ಘೋಷ ವಾಕ್ಯವಲ್ಲ. ಕುಣಿಗಲ್ ಮೂಲದ ಹಲವರು ಕುಣಿಗಲ್ ಕುದುರೆ ಎಂದು ಬರೆದಿರುತ್ತಾರೆ. ಇದರ ಹಿಂದಿನ ಇತಿಹಾಸ ಇಲ್ಲಿದೆ.

ಕುಣಿಗಲ್ ಕುದುರೆಗಿದೆ 230 ವರ್ಷಗಳ ಇತಿಹಾಸ

ಕುಣಿಗಲ್ ಕುದುರೆ ಅನ್ನೋ ಪದಕ್ಕೆ ಬರೋಬ್ಬರಿ 230 ವರ್ಷಗಳ ಇತಿಹಾಸವಿದೆ. ಕುಣಿಗಲ್‌ನಲ್ಲಿರು ಕುದುರೆ ಸ್ಟಡ್ ಫಾರ್ಮ್‌ನಿಂದ ಕುಣಿಗಲ್ ಕುದುರೆ ಹೆಸರು ಬಂತು. 1790ರಲ್ಲಿ ಟಿಪ್ಪು ಸುಲ್ತಾನ್ ತನ್ನ ಸೈನ್ಯಕ್ಕೆ ಅತ್ಯಂತ ಬಲಿಷ್ಠ ಕುದುರೆಗಳ ಅವಶ್ಯಕತೆ ಇತ್ತು. ಇದಕ್ಕಾಗಿ ಮೈಸೂರು, ಬೆಂಗಳೂರು ಸೇರಿದಂತೆ ಎಲ್ಲೆಡೆ ಕುದುರೆ ಸಾಕಾಣಿಗೆ, ಬೆಳವಣಿಗೆ ಸೂಕ್ತ ಜಾಗ ಹುಡುಕಾಟ ನಡೆಸಲಾಗಿತ್ತು. ಈ ವೇಳೆ ಕುಣಿಗಲ್ ವಾತಾವರಣ, ಇಲ್ಲಿನ ಹುಲ್ಲುಗಾವಲು ಕುದುರೆ ತಳಿ ಅಭಿವೃದ್ಧಿ ,ಸಾಕಾಣಿಕೆಗೆ ಸೂಕ್ತವಾಗಿತ್ತು. ಹೀಗಾಗಿ ಟಿಪ್ಪು ಸುಲ್ತಾನ್ ಕುದುರೆ ತಳಿ ಅಭಿವೃದ್ಧಿಗೆ ಕೇಂದ್ರ ಆರಂಭಿಸಿದ್ದರು ಎಂದು ಇತಿಹಾಸ ಹೇಳುತ್ತದೆ.

ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟ ಕುಣಿಗಲ್ ಸ್ಟಡ್ ಫಾರ್ಮ್

ಟಿಪ್ಪು ಸುಲ್ತಾನ್ ಮರಣದ ಬಳಿಕ ಈ ಕುದುರೆ ಸ್ಟಡ್ ಫಾರ್ಮ್‌ನ್ನು ಬ್ರಿಟಿಷರ ವಶಕ್ಕೆ ತೆಗೆದುಕೊಂಡಿದ್ದರು. ಬ್ರಿಟಿಷರ ಅಶ್ವದಳದ ರೆಜಿಮೆಂಟ್‌ನ ಕುದರೆಗಳ ಸಾಕಾಣಿ ಆರಂಭಗೊಂಡಿತು. ಬ್ರಿಟಿಷರ ಪ್ರಯಾಣಕ್ಕೆ ಬೇಕಾದ ಕುದುರೆಗಳನ್ನು ಇಲ್ಲೇ ಸಾಕಲಾಗುತ್ತಿತ್ತು. ಬ್ರಿಟಿಷರು ವಿದೇಶಗಳಿಂದ ಕುದುರೆಗಳನ್ನು ತಂದು ಇಲ್ಲಿ ಸಾಕಾಣಿಕೆ ಮಾಡಲಾಗುತ್ತಿತು. 1886ರಲ್ಲಿ ವಿದೇಶದಿಂದ ಮೊದಲ ಕುದರೆ ಆಮದು ಮಾಡಿಕೊಳ್ಳಲಾಯಿತು. ಪೆರು ಗೊಮೆಜ್ ಅನ್ನೋ ಕುದುರೆ ತಳಿಯನ್ನು ಆಮದು ಮಾಡಿಕೊಂಡು, ಅಭಿವೃದ್ಧಿ ಮಾಡಲಾಗಿತ್ತು.

ಮೈಸೂರು ಸಂಸ್ಥಾನಕ್ಕೆ ಒಳಪಟ್ಟ ಸ್ಟಡ್ ಫಾರ್ಮ್

ಬ್ರಿಟಿಷರಿಗೆ ಈ ಕುದುರೆ ಫಾರ್ಮ್ ನಿರ್ವಹಣೆ ಮಾಡುವುದು ಕಷ್ಟವಾಯಿತು. ಈ ವೇಳೆ ಮೈಸೂರು ಸಂಸ್ಥಾನಕ್ಕೆ ಈ ಕುದರೆ ಫಾರ್ಮ್ ಒಳಪಟ್ಟಿತು. ಮೈಸೂರು ಮಹಾರಾಜರು ಈ ಕುದುರೆ ಫಾರ್ಮ್ ನಿರ್ವಹಣೆ ಹಾಗೂ ತಮ್ಮ ಆರಮನೆಗೆ ಬೇಕಾದ ಕುದರಗಳಿಗಾಗಿ ಕುಣಿಗಲು ಕುದರೆ ಸ್ಟಡ್ ಫಾರ್ಮ್‌‌ಗೆ ಹೊಸ ಟಚ್ ನೀಡಿದರು. ಇದೇ ವೇಳೆ ಕುದುರೆ ರೇಸ್ ಆರಂಭಿಸಲು ಮಹಾರಾಜರು ಮಹತ್ವದ ಹೆಜ್ಜೆ ಇಟ್ಟಿದ್ದರು. ಈ ಮೂಲಕ ಕುಣಿಗಲ್ ಕುದುರೆ ಕುದರೆ ರೇಸ್‌ನಲ್ಲಿ ಕಾಣಿಸಿಕೊಂಡಿತು. ಜೊತೆಗೆ ಯೆವೆಟ್ಟಿ ಅನ್ನೋ ಭಾರತದ ತಳಿಯ ಹೆಣ್ಣು ಕುದುರೆ ರೇಸ್‌ನಲ್ಲಿ ಗೆದ್ದು ಇತಿಹಾಸ ಬರೆದಿತ್ತು. ಕುಣಿಗಲ್‌ನಲ್ಲಿ ಜನಿಸಿದ ಈ ಯೆವಟ್ಟಿ ಕುದುರೆ ರೇಸ್ ಗೆದ್ದು ದಾಖಲೆ ಬರೆದಿತ್ತು.

ಸ್ವಾತಂತ್ರ ಬಳಿಕ ಈ ಕುದುರೆ ಫಾರ್ಮ್ ಸರ್ಕಾರದ ಆಡಳಿತಕ್ಕೆ ಒಳಪಟ್ಟಿತು. 1992ರಲ್ಲಿ ನಿರ್ವಹಣೆ ಮಾಡಲು ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಲಾಯಿತು. ಇದೀಗ ಬೆಂಗಳೂರಿನಲ್ಲಿರುವ ಕುದುರೆ ಟರ್ಪ್ ಕ್ಲಬ್‌ನ್ನು ಕುಣಿಗಲ್‌ಗೆ ಸ್ಥಳಾಂತರಿಸುವ ಕುರಿತು ಮಹತ್ವದ ಮಾತುಕತೆಗಳು ನಡೆದಿದೆ. 400 ರಿಂದ 500 ಎಕರೆ ಪ್ರದೇಶದಲ್ಲಿ ಈ ಕುದುರೆ ಫಾರ್ಮ್ ತಲೆ ಎತ್ತಿ ನಿಂತಿದೆ.

ಕುಣಿಗಲ್ ಕುದರೆ ಯುದ್ಧದಲ್ಲಿ ಮುಂಚೂಣಿಯಲ್ಲಿರುತ್ತಿತ್ತು, ರೇಸ್‌ನಲ್ಲಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಹೀಗಾಗಿ ಕುಣಿಗಲ್ ಕುದರೆ ಇದೆ ಎಂದರೆ ಗೆಲುವು ಖಚಿತ ಅನ್ನೋ ಮಾತುಗಳಿತ್ತು. ಇದೇ ಕಾರಣದಿಂದ ಕುಣಿಗಲ್ ಕುದರೆ ಅನ್ನೋ ಮಾತು ಜನಜನಿತವಾಗಿತ್ತು. ಇದೀಗ ಹಲವೆಡೆ ಈ ಮಾತು, ವಾಕ್ಯ ಕಾಣಸಿಗುತ್ತದೆ.

PREV
Read more Articles on
click me!

Recommended Stories

ಬೆಂಗಳೂರಿಗರೇ ಎಚ್ಚರ... ನಗರದಲ್ಲಿ ಗಡಾರಿ ಕಳ್ಳನ ಹಾವಳಿ, ಒಬ್ಬನೇ ಬರ್ತಾನೆ ಶಟರ್ ಮುರಿದು ಎಲ್ಲವೂ ಹೊತ್ತೊಯ್ತಾನೆ!
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗು ವೈಜ್ಞಾನಿಕವಲ್ಲ; ಅನುದಾನದ ರಹಸ್ಯ ಬಿಚ್ಚಿಟ್ಟ ಸಂಸದ ಡಾ.ಸಿ.ಎನ್. ಮಂಜುನಾಥ್