ಬೆಂಗಳೂರಿನ ಕ್ರಿಕೆಟ್ ಮ್ಯಾಚ್ ನಡುವೆ ಮಾರಾಮಾರಿ, ಬ್ಯಾಟ್, ವಿಕೆಟ್ ಹಿಡಿದು ಅಟ್ಟಾಡಿಸಿದ ತಂಡ

Published : Nov 15, 2026, 03:26 PM IST
Bengaluru Cricket Match Sparks Fight

ಸಾರಾಂಶ

ಕ್ರಿಕೆಟ್ ಮ್ಯಾಚ್ ನಡುವೆ ಕ್ಷುಲ್ಲಕ ಕಾರಣಕ್ಕೆ ಗುಂಪುಗಳ ನಡುವೆ ಮಾರಾಮಾರಿಯಾಗಿದೆ. ಕೈಯಿಲ್ಲದ್ದ ಬ್ಯಾಟ್, ವಿಕೆಟ್‌ನಲ್ಲಿ ಬಡಿದಾಡಿಕೊಂಡಿದ್ದಾರೆ. ಯುವಕರ ಗಲಾಟೆ ವಿಡಿಯೋ ಮೊಬೈಲ್ ಕ್ಯಾಮಾರೆದಲ್ಲಿ ಸೆರೆಯಾಗಿದೆ.

ಆನೆಕಲ್ (ನ.15) ಕ್ರಿಕೆಟ್ ಪಂದ್ಯದ ನಡುವೆ ಶುರುವಾದ ಗಲಾಟೆ ಕೆಲವೇ ಕ್ಷಣದಲ್ಲಿ ವಿಕೋಪಕ್ಕೆ ತಿರುಗಿದ ಘಟನೆ ಬೆಂಗಳೂರಿನ ಹೊರವಲಯದ ಆನೇಕಲ್‌ನಲ್ಲಿ ನಡೆದಿದೆ.ಕ್ಷುಲ್ಲಕ ಕಾರಣಕ್ಕೆ ಜಗಳ ಶುರುವಾಗಿದೆ. ಆದರೆ ಅಷ್ಟೇ ವೇಗದಲ್ಲಿ ಈ ಜಗಳ ತಾರಕಕ್ಕೇರಿದೆ. ಬಳಿಕ ಕೈಯಲ್ಲಿದ್ದ ಬ್ಯಾಟ್, ವಿಕೆಟ್ ಹಿಡಿದು ಮಾರಾಮಾರಿ ಶುರುವಾಗಿದೆ. ಎರಡು ಗುಂಪುಗಳ ನಡುವೆ ಮಾರಾಮಾರಿಯಾಗದೆ. ಈ ಗಲಾಟೆಯಲ್ಲಿ ಕೆಲ ಯುವಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ವರದಿಯಾಗಿದೆ.

ಆನೇಕಲ್ ಪಟ್ಟಣದ ಎ.ಎಸ್.ಬಿ. ಆಟದ ಮೈದಾನದಲ್ಲಿ ಕ್ರಿಕೆಟ್ ಮ್ಯಾಚ್ ಆಯೋಜನೆ ಮಾಡಲಾಗಿತ್ತು. ಯುವಕ ಗುಂಪು ಈ ಕ್ರಿಕೆಟ್ ಮ್ಯಾಚ್ ಆಯೋಜನೆ ಮಾಡಲಾಗಿತ್ತು. ರೋಚಕ ಪಂದ್ಯವೂ ಆರಂಭಗೊಂಡಿತ್ತು. ಪಂದ್ಯ ನೋಡಲು ಹಲವರು ಆಗಮಿಸಿದ್ದರು. ಪಂದ್ಯ ಆರಂಭಗೊಂಡ ಕೆಲವೇ ಹೊತ್ತಲ್ಲಿ ಪಂದ್ಯಕ್ಕೆ ಸಂಬಂಧಿಸಿ ಮಾತಿನ ಚಕಮಕಿ ಶುರುವಾಗಿದೆ. ಕೆಲವೇ ಹೊತ್ತಲ್ಲಿ ಈ ಚಕಮಕಿ ಗಲಾಟೆಯಾಗಿ ಬದಲಾಗಿದೆ.

ಬ್ಯಾಟ್, ವಿಕೆಟ್ ಹಿಡಿದು ಅಟ್ಟಾಡಿಸಿದ ಯುವಕರ ಗುಂಪು

ಎರಡು ಗುಂಪುಗಳ ನಡುವೆ ಜಗಳ ಆರಂಭಗೊಂಡಿದೆ. ಮೈದಾನದಲ್ಲೇ ಶುರುವಾದ ಜಗಳಕ್ಕೆ ಕ್ರಿಕೆಟ್ ಪಂದ್ಯ ವೀಕ್ಷಿಸಲು ನಿಂತ ಹಲವರು ಸೇರಿಕೊಂಡಿದ್ದಾರೆ. ಮಾತಿಗೆ ಮಾತು ಬೆಳೆದು ಬ್ಯಾಟ್‌ನಲ್ಲಿ ಹಲ್ಲೆಗೆ ಮುಂದಾಗಿದ್ದಾರೆ. ಇತ್ತ ವಿಕೆಟ್ ಹಿಡಿದು ಗಲಾಟೆ ಜೋರಾಗಿದೆ. ಕೆಲ ಯುವಕರನ್ನು ಅಟ್ಟಾಡಿಸಿಕೊಂಡು ಹೋಗಿ ಬ್ಯಾಟ್ ಎಸೆದು ಹಲ್ಲೆ ಮಾಡಲಾಗಿದೆ.ಯುವಕರ ಅಟ್ಟಹಾಸ ವಿಡಿಯೋ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಶನಿವಾರ ಈ ಗಲಾಟೆ ನಡೆದಿದೆ. ತಡವಾಗಿ ಬೆಳಕಿಗೆ ಬಂದಿದೆ. ಇಂದು ಸೋಶಿಯಲ್ ಮೀಡಿಯಾದಲ್ಲಿ ಈ ಗಲಾಟೆ ವಿಡಿಯೋಗಳು ಪೋಸ್ಟ್ ಆಗಿದೆ. ಘಟನೆ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಮೈದಾನದಿಂದ ಹೊರಗೆ ಹೋಗಿಯೂ ಗಲಾಟೆ ಮಾಡಲಾಗಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಘಟನೆಯಲ್ಲಿ ಗಂಭೀರ ಗಾಯಗಳಾಗಿರುವ ಕುರಿತು ಯಾವುದೇ ವರದಿ ಇಲ್ಲ. ಆದರೆ ಇದೇ ಗಲಾಟೆ ಮತ್ತೆ ಭುಗಿಲೇಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕ್ರಿಕೆಟ್ ಪಂದ್ಯದ ನಡುವೆ ಎರಡು ಯುವಕರ ಗುಂಪುಗಳ ಈ ಮಾರಾಮಾರಿಗೆ ಕಾರಣವೇನು? ಯಾರು ಈ ಗಲಾಟೆ ಮಾಡಿದ್ದಾರೆ ಅನ್ನೋ ಕುರಿತು ಸ್ಪಷ್ಟ ಮಾಹಿತಿ ಹೊರಬಂದಿಲ್ಲ. ಸದ್ಯ ವಿಡಿಯೋ ಬಾರಿ ವೈರಲ್ ಆಗುತ್ತಿದೆ. ಈ ಕುರಿತು ಯಾವುದೇ ದೂರುಗಳು ದಾಖಲಾಗಿಲ್ಲ ಎಂದು ವರದಿಯಾಗಿದೆ.

PREV
Read more Articles on
click me!

Recommended Stories

ನಿವೇಶನ ಹಂಚಿಕೆಗೆ ಬೆಂಗಳೂರು ಗ್ರಾಮಾಂತರದಲ್ಲಿ 1175 ಎಕರೆ ಭೂಮಿ ಗುರುತು: ಮುನಿಯಪ್ಪ
ನಮ್ಮ ಮೆಟ್ರೋ ಪಿಂಕ್ ಮಾರ್ಗದಲ್ಲಿ ಎಷ್ಟು ನಿಮಿಷಕ್ಕೊಂದು ಮೆಟ್ರೋ ಸಂಚರಿಸಲಿದೆ? ಒಟ್ಟು ಎಷ್ಟು ರೈಲು ಓಡಾಡಲಿದೆ?