ತಿಲಕ ಇಟ್ಟ ಹಿಂದೂಗೆ ಊಟ ಹಾಕಲ್ಲ, ನೆಲಮಂಗಲದಲ್ಲಿ ಮದುವೆಗೆ ಆಹ್ವಾನ ನೀಡಿ ಅವಮಾನ

Published : Oct 31, 2025, 09:18 AM IST
ambur biryani

ಸಾರಾಂಶ

ತಿಲಕ ಇಟ್ಟ ಹಿಂದೂಗೆ ಊಟ ಹಾಕಲ್ಲ, ಮದುವೆಗೆ ಆಹ್ವಾನ ನೀಡಿ ಅವಮಾನ ಮಾಡಿದ ಸಮಿವುಲ್ಲಾ, ನೆಲಮಂಗದಲ್ಲಿ ಮುಸ್ಲಿಮ ಕುಟುಂಬದ ಮದುವೆಗೆ ತೆರಳಿದ ರಾಜುವಿಗೆ ಅವಮಾನ ಮಾಡಿ ಕಳುಹಿಸದ ಘಟನೆ ನಡೆದಿದೆ.

ನೆಲಮಂಗಲ (ಅ.31) ಮದುವೆಯಲ್ಲಿ ಊಟಕ್ಕೆ ಕುಳಿತ ವ್ಯಕ್ತಿಗಳನ್ನು ಎಬ್ಬಸಿ ಅವಮಾನ ಮಾಡಿ ಕಳುಹಿಸಿದ ಘಟನೆ ನೆಲಮಂಗಲದಲ್ಲಿ ನಡೆದಿದೆ. ನಿಮಗೆ ಊಟ ಹಾಕುವುದಿಲ್ಲ, ನೀವು ತಿಲಕ ಇಟ್ಟಿದ್ದೀರಿ ಎಂದು ಹಿಂದೂವಿಗೆ ಅವಮಾನ ಮಾಡಲಾಗಿದೆ. ಇದೀಗ ಈ ಘಟನೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇಸ್ಲಾಂಪುರದ ನಿವಾಸಿ ಸಮಿವುಲ್ಲಾ ಕುಟುಂಬದ ಮದುವೆ ಕಾರ್ಯಕ್ರಮಕ್ಕೆ ರಾಜು ಎಂಬುವರನ್ನು ಆಹ್ವಾನಿಸಲಾಗಿತ್ತು. ಆದರೆ ಮದುವೆ ಕಾರ್ಯಕ್ರಮದಲ್ಲಿ ಹಿಂದೂ, ತಿಲಕ ಇಟ್ಟಿದ್ದೀರಿ ಎಂದು ಊಟಕ್ಕೆ ಕುಳಿತಲ್ಲಿಂದ ಎಬ್ಬಿಸಿದ ಘಟನೆ ನಡೆದಿದೆ.

ಸಮಿವುಲ್ಲಾ ಮಗನ ಮದುವೆ ಕಾರ್ಯಕ್ರಮಕ್ಕೆ ರಾಜುವಿಗೆ ಆಹ್ವಾನ

ನೆಲಮಂಗದಲ ಸಮೀವುಲ್ಲಾ ಮಗನ ಮದುವೆ ಕಾರ್ಯಕ್ರಮಕ್ಕೆ ರಾಜುವಿಗೆ ಆಹ್ವಾನ ನೀಡಲಾಗಿತ್ತು.ನೆಲಮಂಗದಲ ಖಾಸಗಿ ಕಲ್ಯಾಣ ಮಂಟಪದಲ್ಲಿ ಮುಜಾಮಿಲ್ ಪಾಷ ಹಾಗೂ ಸಾನಿಯಾ ಜೋಡಿ ಮದುವೆ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಆಹ್ವಾನ ನೀಡಿದ್ದ ಕಾರಣ ಕ್ಷೌರಿಕ ಕೆಲಸವನ್ನು ಬೇಗನೆ ಮುಗಿಸಿ ಶಾಪ್ ಕ್ಲೋಸ್ ಮಾಡಿದ ರಾಜು ಮದುವೆಗೆ ತೆರಳಿದ್ದರು. ಮುಸ್ಲಿಮ್ ಕುಟುಂಬದ ಮದುವೆಗೆ ತೆರಳಿದಾ ರಾಜು, ಎಲ್ಲಾ ಮದುವೆಯಂದ ನವ ಜೋಡಿಗಳಿಗೆ ಶುಭ ಕೋರಿದ್ದರು. ಬಳಿಕ ಎಲ್ಲರೊಂದಿಗೆ ಊಟಕ್ಕೆ ಕುಳಿತಿದ್ದರು.

ನಿಮ್ಮನ್ನು ಕರೆದಿದ್ದು ಯಾರು? ತಿಲಕ ಇಟ್ಟವರಿಗೆ ಊಟ ಹಾಕಲ್ಲ

ಊಟಕ್ಕೆ ಪಂಕ್ತಿಯಲ್ಲಿ ಕುಳಿತ ಎಲ್ಲರಿಗೂ ಬಡಿಸುತ್ತಾ ಬಂದಿದ್ದಾರೆ. ಮುಸ್ಲಿಂ ಬಾಂಧವರ ನಡುವೆ ಕುಳಿತಿದ್ದ ರಾಜು ನೋಡಿದ ಮದುವೆ ಕುಟುಂಬಸ್ಥರು, ತಿಲಕ ಇಟ್ಟವರಿಗೆ ಊಟ ಹಾಕುವುದಿಲ್ಲ. ನಿಮ್ಮನ್ನು ಯಾರು ಕರೆದಿದ್ದು, ಹಿಂದೂ ಗಳಿಗೆ ನಾವು ಊಟ ಹಾಕುವುದಿಲ್ಲ ಇಲ್ಲಿಂದ ಎದ್ದು ಹೋಗಿ‌ ಎಂದು ರಾಜುವಿಗೆ ಅವಮಾನ ಮಾಡಲಾಗಿದೆ ಎಂದು ವರದಿಯಾಗಿದೆ.

ಕಾರ್ಯಕ್ರಮದಲ್ಲೇ ರಾಜುವಿಗೆ ಅವಮಾನ ವಿರೋಧಿಸಿದ ಕೆಲವರು

ಊಟಕ್ಕೆ ಕುಳಿತಲ್ಲಿಂದ ರಾಜುವನ್ನು ಎಬ್ಬಿಸಿದ ಘಟನೆಗೆ ಮದುವೆ ಕಾರ್ಯಕ್ರಮದಲ್ಲಿದ್ದ ಹಲವರು ವಿರೋಧಿಸಿದ್ದಾರೆ. ಊಟಕ್ಕೆ ಕುಳಿತಲ್ಲಿಂದ ಎಬ್ಬಿಸಿದ್ದು ತಪ್ಪು, ಯಾರೇ ಆಗಲಿ ಊಟ ಹಾಕಿ ಈ ರೀತಿ ಮಾಡಬಾರದು. ನೀವು ಮಾಡುತ್ತಿರುವುದು ತಪ್ಪು ಎಂದು ವಿರೋದ ವ್ಯಕ್ತಪಡಿಸಿದ್ದಾರೆ. ಅಕ್ಟೋಬರ್ 26ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಕುರಿತು ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಪರ ವಿರೋಧಗಳು ಕೇಳಿಬರುತ್ತಿದೆ. ಆಹ್ವಾನ ನೀಡದೇ ಬಂದಿದ್ದಾರೆ ಎಂದು ಕೆಲವರ ಪರವಾಗಿ ಮಾತನಾಡಿದ್ದರೆ, ಕರೆಸಿ ಅವಮಾನ ಮಾಡಿದ್ದೇಕೆ ಎಂದು ಹಲವರು ಪ್ರಶ್ನಿಸಿದ್ದಾರೆ. 

 

PREV
Read more Articles on
click me!

Recommended Stories

ರೇಣುಕಾಸ್ವಾಮಿ ತಂದೆ-ತಾಯಿಗೆ ಸಮನ್ಸ್, ದರ್ಶನ್‌ಗೆ ಜೈಲಲ್ಲೊಂದು ಶಾಕ್, ಕೋರ್ಟ್‌ನಲ್ಲೊಂದು ಆಘಾತ!
ಬೆಂಗಳೂರು ಏರ್‌ಪೋರ್ಟ್‌ನಲ್ಲಿ 200ಕ್ಕೂ ಹೆಚ್ಚು ಇಂಡಿಗೋ ವಿಮಾನ ರದ್ದು, ಕೆಂಡಾಮಂಡಲವಾದ ಪ್ರಯಾಣಿಕರಿಂದ ಪ್ರತಿಭಟನೆ