ಎಂಟಿಬಿ ನಾಗರಾಜ್ ವಿರುದ್ಧ ಸಹೋದರನಿಂದ ಗಂಭೀರ ಆರೋಪ

Published : Nov 11, 2019, 12:59 PM ISTUpdated : Nov 11, 2019, 04:53 PM IST
ಎಂಟಿಬಿ ನಾಗರಾಜ್  ವಿರುದ್ಧ ಸಹೋದರನಿಂದ ಗಂಭೀರ ಆರೋಪ

ಸಾರಾಂಶ

ಹೊಸ ಕೋಟೆ ಕ್ಷೇತ್ರದ ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿರುದ್ಧ ಸಹೋದರ ಪಿಳ್ಳಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಹೊಸಕೋಟೆ (ನ.11) :  ಹೊಸಕೋಟೆ ಕ್ಷೇತ್ರದ ಅನರ್ಹ ಶಾಸಕ ಎಂಟಿಬಿ ನಾಗಾರಾಜ್ ಅವರು ಅವರ ಸಹೋದರ ಪಿಳಣ್ಣ ಅಸಮಾಧಾನ ಹೊರಹಾಕಿದ್ದಾರೆ. 

ಹೊಸಕೋಟೆಯ ಮಲ್ಲಸಂದ್ರದಲ್ಲಿ ಮಾತನಾಡಿದ ಎಂಟಿಬಿ ಸಹೋದರ ಪಿಳ್ಳಣ್ಣ, ಮೊದಲು ಸಿದ್ದರಾಮಣ್ಣನ ಎದೆಯಲ್ಲಿ ಇಟ್ಟುಕೊಂಡಿದ್ದೇನೆ ಎನ್ನುತ್ತಿದ್ದ. ಬಳಿಕ ಜನರನ್ನು ಇಟ್ಟುಕೊಂಡಿದ್ದೇನೆ ಎನ್ನುತ್ತಿದ್ದ. ಆದರೆ ಈಗ ಯಡಿಯೂರಪ್ಪ ಹೆಸರು ಹೇಳುತ್ತಿದ್ದಾನೆ ಎಂದು ವಾಗ್ದಾಳಿ ನಡೆಸಿದ್ದಾರೆ. 

ಎಂಟಿ ನಾಗರಾಜ್ ಗೆ ಯಾವುದೇ  ರೀತಿಯ ಅಂಜಿಕೆಗಳು ಇಲ್ಲ. ನಮ್ಮ ತಂದೆಯವರೇ ಹೇಳುತ್ತಿದ್ದರು. ಅವನ ಬಳಿ ಹುಷಾರಾಗಿ ನಡೆಯಬೇಕು ಎಂದಿದ್ದಾರೆ.  

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
 
ಇವನ ಗೆಲುವಿಗಾಗಿ ಏಟು ತಿಂದು ಹೋರಾಟ ಮಾಡಿ ಗೆಲ್ಲಿಸಿದ್ದೆವು. ಆದರೆ ಅನ್ನಕೊಟ್ಟ ಪಕ್ಷಕ್ಕೆ ದ್ರೋಹ ಮಾಡಿ ಬೆನ್ನಿಗೆ ಚೂರಿ ಹಾಕಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

 ಎಂಟಿಬಿ ನಾಗರಾಜ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೊಸಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಗೆದ್ದು ಬಳಿಕ ಅಸಮಾಧಾನಗೊಂಡು ರಾಜೀನಾಮೆ ನೀಡಿದ್ದರು. ಬಳಿಕ ಅಂದಿನ ಸ್ಪೀಕರದ ಆಗಿದ್ದ ರಮೇಶ್ ಕುಮಾರ್ ಇವರೊಂದಿಗೆ ಒಟ್ಟು 17 ಜನರನ್ನು ಅನರ್ಹರನ್ನಾಗಿಸಿದ್ದರು. ಈ ಪ್ರಕರಣವೀಗ ಸುಪ್ರೀಂಕೋರ್ಟ್ ನಲ್ಲಿದ್ದು, ಇನ್ನಷ್ಟೇ ತೀರ್ಪು ಹೊರ ಬೀಳಬೇಕಿದೆ. 

"

PREV
click me!

Recommended Stories

ನೆಲಮಂಗಲದಲ್ಲಿ ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದ ಕಳ್ಳರು; ಬೆಚ್ಚಿಬಿದ್ದ ಗ್ರಾಮಸ್ಥರು
ದೀಪಾಂಜಲಿ ನಗರ ಜಂಕ್ಷನ್‌ನ ಬಳಿಯ ನೈಸ್‌ ರಸ್ತೆ ಸಾರ್ವಜನಿಕರಿಗೆ ಶೀಘ್ರ ಮುಕ್ತ